ಗೌರವಾನ್ವಿತ ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ರಾಷ್ಟ್ರಪತಿಗಳಿಗೆ ಶುಭ ಹಾರೈಸುತ್ತಾ ಅವರು ಹೀಗೆ ಹೇಳಿದ್ದಾರೆ:
ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ವಿನಮ್ರ ಹಿನ್ನೆಲೆಯಿಂದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಅವರ ಅಸಾಧಾರಣ ಪಯಣವು ಅವರ ವಿನಮ್ರತೆ, ಸರಳತೆ ಮತ್ತು ಉದಾತ್ತತೆಯ ಸಂಕೇತವಾಗಿದೆ, ಇದು ನಮ್ಮ ಪ್ರಜಾಪ್ರಭುತ್ವದ ನಿಜವಾದ ಚೈತನ್ಯ ಬಿಂಬಿಸುತ್ತದೆ. ಶಾಸಕರಾಗಿ, ರಾಜ್ಯಪಾಲರಾಗಿ ಮತ್ತು ಈಗ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಪತಿಯಾಗಿ ಸಾರ್ವಜನಿಕ ಸೇವೆಯ ತಮ್ಮ ಪಯಣದಲ್ಲಿ ಅವರು ನಿರಂತರವಾಗಿ ಅತ್ಯುನ್ನತ ಆದರ್ಶಗಳನ್ನು ಹೊಂದಿದ್ದಾರೆ, ಇದು ಅನುಕರಣೀಯ ಪರಂಪರೆಯಾಗಿದೆ.
ಅವರಿಗೆ ಶುಭಕೋರಲು ನಿನ್ನೆ ರಾಷ್ಟ್ರಪತಿ ಭವನದಲ್ಲಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಗೌರವ ನನಗೆ ಸಿಕ್ಕಿತು. ಈ ಜನ್ಮದಿನವು ಅವರಿಗೆ ಉತ್ತಮ ಆರೋಗ್ಯ, ಸಂತಸ ಮತ್ತು ಸಂತೋಷ ತರಲಿ ಮತ್ತು ದೇವರು ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಅವರಿಗೆ ನಿರಂತರ ಶಕ್ತಿ ನೀಡಲಿ.”
Matribhumi Samachar Kannad

