ಹಿಮಾಚಲ ಪ್ರದೇಶದಲ್ಲಿ ನೈಸರ್ಗಿಕ ವಿಪತ್ತುಗಳ ಆವರ್ತನ ಮತ್ತು ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಬಹು-ವಲಯ ಕೇಂದ್ರ ತಂಡವನ್ನು ರಚಿಸುವಂತೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ನಿರ್ದೇಶನ ನೀಡಿದರು.
ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿಇತ್ತೀಚೆಗೆ ನಡೆದ ಸಭೆಯಲ್ಲಿ, ಮೇಘಸ್ಫೋಟ, ಪ್ರವಾಹ, ಭೂಕುಸಿತ ಮತ್ತು ಧಾರಾಕಾರ ಮಳೆಯ ಆವರ್ತನ ಮತ್ತು ತೀವ್ರತೆಯಲ್ಲಿ ರಾಜ್ಯವು ಹೆಚ್ಚಳವನ್ನು ಕಂಡಿದೆ, ಇದು ರಾಜ್ಯದಲ್ಲಿ ವ್ಯಾಪಕ ಜೀವಹಾನಿ, ಮೂಲಸೌಕರ್ಯ, ಜೀವನೋಪಾಯಕ್ಕೆ ಹಾನಿ ಮತ್ತು ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಗಮನಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ), ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ), ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟರಾಲಜಿ (ಐಐಟಿಎಂ), ಭೂವಿಜ್ಞಾನಿ ಮತ್ತು ಇಂದೋರ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಇಂದೋರ್‌ನ ತಜ್ಞರನ್ನು ಒಳಗೊಂಡ ಬಹು-ವಲಯ ಕೇಂದ್ರ ತಂಡವನ್ನು ರಚಿಸಲು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ತಕ್ಷಣ ಆದೇಶಿಸಿದ್ದಾರೆ.
ಇದಲ್ಲದೆ, ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ನೈಋುತ್ಯ ಮಾನ್ಸೂನ್ 2025ರ ಸಮಯದಲ್ಲಿ ಪ್ರವಾಹ, ಹಠಾತ್ ಪ್ರವಾಹ ಮತ್ತು ಭೂಕುಸಿತಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಈಗಾಗಲೇ ಅಂತರ ಸಚಿವಾಲಯದ ಕೇಂದ್ರ ತಂಡವನ್ನು (ಐಎಂಸಿಟಿ) ಅವರ ಜ್ಞಾಪಕ ಪತ್ರಕ್ಕಾಗಿ ಕಾಯದೆ, ಹಾನಿಯ ಸ್ಥಳದಲ್ಲೇ ಮೊದಲ ಮೌಲ್ಯಮಾಪನಕ್ಕಾಗಿ ನಿಯೋಜಿಸಿದೆ. ಐಎಂಸಿಟಿ 2025 ರ ಜುಲೈ 18-21 ರವರೆಗೆ ರಾಜ್ಯದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ವಿಪತ್ತುಗಳ ಸಮಯದಲ್ಲಿ ಕೇಂದ್ರ ಸರ್ಕಾರವು ಯಾವುದೇ ತಾರತಮ್ಯವಿಲ್ಲದೆ ರಾಜ್ಯಗಳೊಂದಿಗೆ ದೃಢವಾಗಿ ನಿಲ್ಲುತ್ತದೆ. ಈ ನಿಟ್ಟಿನಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷ ತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯು ಈಗಾಗಲೇ 2023ನೇ ವರ್ಷಕ್ಕೆ ಪ್ರವಾಹ, ಭೂಕುಸಿತ ಮತ್ತು ಮೇಘಸ್ಫೋಟದಂತಹ ವಿಪತ್ತುಗಳಿಂದ ಬಾಧಿತವಾದ ಪ್ರದೇಶಗಳಲ್ಲಿ ಚೇತರಿಕೆ ಮತ್ತು ಪುನರ್ನಿರ್ಮಾಣಕ್ಕಾಗಿ ಹಿಮಾಚಲ ಪ್ರದೇಶಕ್ಕೆ 2006.40 ಕೋಟಿ ರೂ.ಗಳ ವೆಚ್ಚವನ್ನು ಅನುಮೋದಿಸಿದೆ ಮತ್ತು 2025ರ ಜುಲೈ 7ರಂದು ಮೊದಲ ಕಂತಿನ 451.44 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಇದಲ್ಲದೆ, ರಾಜ್ಯದ ಪೀಡಿತ ಜನರನ್ನು ಬೆಂಬಲಿಸುವ ಸಲುವಾಗಿ, ಕೇಂದ್ರ ಸರ್ಕಾರವು ಈಗಾಗಲೇ ಹಿಮಾಚಲ ಪ್ರದೇಶಕ್ಕೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎಸ್‌ಡಿಆರ್‌ಎಫ್) 198.80 ಕೋಟಿ ರೂ.ಗಳ ಮೊದಲ ಕಂತಿನ 198.80 ಕೋಟಿ ರೂ.ಗಳನ್ನು ತಕ್ಷಣದ ಸ್ವರೂಪದ ಪರಿಹಾರ ಕ್ರಮಗಳಿಗಾಗಿ 2025 ರ ಜೂನ್ 18ರಂದು ಬಿಡುಗಡೆ ಮಾಡಿದೆ. ಅಗತ್ಯ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳು, ಸೇನಾ ತಂಡಗಳು ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಹಿಮಾಚಲ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಲ್ಲಾ ಲಾಜಿಸ್ಟಿಕ್ ಸಹಾಯವನ್ನು ಒದಗಿಸಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್‌ನ ಒಟ್ಟು 13 ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ.
Matribhumi Samachar Kannad

