ಪ್ರಾಜೆಕ್ಟ್ ಚೀತಾ ಅಡಿಯಲ್ಲಿನ ಐತಿಹಾಸಿಕ ಬೆಳವಣಿಗೆಯ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಪ್ರಕಟಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ನ ಪೋಸ್ಟ್ ನಲ್ಲಿ, ಶ್ರೀ ಯಾದವ್ ಅವರು ಹೀಗೆ ಹೇಳಿದ್ದಾರೆ – ಭಾರತ ಸಂಜಾತ ಪ್ರಥಮ ಹೆಣ್ಣು ಚೀತಾ ‘ಮುಖಿ’, ಈಗ 33 ತಿಂಗಳ ವಯೋಮಾನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದೆ. ಇದು ಭಾರತದ ಚೀತಾ ಮರುಪರಿಚಯ ಉಪಕ್ರಮಕ್ಕೆ ಹೆಗ್ಗುರುತಿನ ಕ್ಷಣವಾಗಿದೆ.
ಇತ್ತೀಚಿನ ಇತಿಹಾಸದಲ್ಲಿ ಭಾರತ ಮೂಲದ ಚೀತಾ ಯಶಸ್ವಿಯಾಗಿ ಸಂತಾನೋತ್ಪತ್ತಿ ಮಾಡಿರುವ ಬಗ್ಗೆ ಮೊದಲ ನಿದರ್ಶನ ಇದಾಗಿದೆ ಎಂದು ಶ್ರೀ ಯಾದವ್ ಅವರು ತಿಳಿಸಿದ್ದಾರೆ. ಇದು ಭಾರತೀಯ ಆವಾಸಸ್ಥಾನಗಳಲ್ಲಿ ಪ್ರಭೇದಗಳ ದೀರ್ಘಕಾಲೀನ ಹೊಂದಾಣಿಕೆ, ಆರೋಗ್ಯ ಮತ್ತು ಜೀವನಕ್ಕೆ ಸೂಕ್ತ ಪರಿಸರದ ಸಂಕೇತಗಳನ್ನು ಪ್ರತಿಬಿಂಬಿಸಿದೆ ಎಂದು ಅವರು ಹೇಳಿದ್ದಾರೆ.
“ಈ ಮಹತ್ವದ ಬೆಳವಣಿಗೆಯು ಭಾರತದಲ್ಲಿ ಸ್ವ-ಸುಸ್ಥಿರ ಮತ್ತು ವೈವಿಧ್ಯಮಯ ತಳಿಗಳ ಚೀತಾಗಳ ಸಂಖ್ಯೆಯನ್ನು ಪೋಷಿಸುವ ಬಗೆಗಿನ ಆಶಾವಾದವನ್ನು ಬಲಪಡಿಸಿದೆ” ಎಂದು ಹೇಳಿದ ಸಚಿವರು, ತಾಯಿ ಮತ್ತು ಮರಿಗಳು ಆರೋಗ್ಯದಿಂದಿವೆ ಎಂದಿದ್ದಾರೆ.
ಈ ಸನ್ನಿವೇಶವು ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಸಂರಕ್ಷಣಾ ಪ್ರಯತ್ನಗಳು ಮತ್ತು ಪ್ರಾಜೆಕ್ಟ್ ಚೀತಾದ ಭವಿಷ್ಯದ ನಿರೀಕ್ಷೆಗಳಿಗೆ ವಿಶ್ವಾಸ ತುಂಬಿದೆ ಎಂದು ಶ್ರೀ ಯಾದವ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
Matribhumi Samachar Kannad

