Monday, December 08 2025 | 01:28:20 PM
Breaking News

ದೇಶದಲ್ಲಿ ಪ್ರಸಾರ ಮೂಲಸೌಕರ್ಯಗಳ ಉನ್ನತೀಕರಣಕ್ಕೆ ಭಾರತ ಸರ್ಕಾರ ಬದ್ಧವಾಗಿದೆ: ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್ ಮುರುಗನ್

Connect us on:

ಶಿವಮೊಗ್ಗ ದೂರದರ್ಶನ ಕೇಂದ್ರದ ಆವರಣದಲ್ಲಿಂದು ನಡೆದ ಭದ್ರಾವತಿ ಆಕಾಶವಾಣಿ ಕೇಂದ್ರದ ಉನ್ನತೀಕರಿಸಿದ 10 KW ಟ್ರಾನ್ಸ್‌ಮಿಟರ್ ಮತ್ತು ಇತರ ಸಲಕರಣೆಗಳ ಪೂಜಾ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ.ಎಲ್.ಮುರುಗನ್ ಅವರು ಭಾಗವಹಿಸಿದ್ದರು.

ಪೂಜಾ ಕಾರ್ಯಕ್ರಮದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಎಲ್. ಮುರುಗನ್ ಅವರು, “ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಪ್ರಸಾರ ಮೂಲಸೌಕರ್ಯಗಳನ್ನು ಉನ್ನತೀಕರಿಸಲು ಮತ್ತು ಬಲಪಡಿಸಲು ಬದ್ಧವಾಗಿದೆ” ಎಂದು ಹೇಳಿದರು.

“ದೇಶಾದ್ಯಂತ ಆಕಾಶವಾಣಿ ಮತ್ತು ದೂರದರ್ಶನದ ಪ್ರಸಾರ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಪ್ರಸಾರ ಮೂಲಸೌಕರ್ಯ ಮತ್ತು ನೆಟ್ವರ್ಕ್ ಅಭಿವೃದ್ಧಿ ಯೋಜನೆಗೆ ಕಳೆದ ವರ್ಷ 2,500 ಕೋಟಿ ರೂಪಾಯಿಗಳ ನಿಧಿಯನ್ನು ಅನುಮೋದಿಸಲಾಗಿದೆ” ಎಂದು ಅವರು ಹೇಳಿದರು.

ಪ್ರಾಚೀನ ಸಂಸ್ಕೃತಿ, ಸ್ಥಳೀಯ ಸಂಪ್ರದಾಯಗಳು ಮತ್ತು ಸ್ಥಳೀಯ ಆಡುಭಾಷೆಯನ್ನು ಉಳಿಸುವಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಚಿವರು ಹೇಳಿದರು. ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವಲ್ಲಿ ಈ ಮಾಧ್ಯಮವು ಮುಖ್ಯವಾಗಿದೆ ಎಂದು ಅವರು ಹೇಳಿದರು.
ಭದ್ರಾವತಿ ಆಕಾಶವಾಣಿಯ ಮೇಲ್ದರ್ಜೆಗೇರಿಸಿದ ಟ್ರಾನ್ಸ್ಮಿಟರ್ ಸೌಲಭ್ಯವು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಇತರ ನೆರೆಯ ಜಿಲ್ಲೆಗಳನ್ನು ಒಳಗೊಂಡ 60 ಕಿಲೋಮೀಟರ್ ವ್ಯಾಪ್ತಿಯ ದೂರವನ್ನು ಕ್ರಮಿಸುತ್ತದೆ ಎಂದು ಸಚಿವರು ಹೇಳಿದರು. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಸ್ಟುಡಿಯೋ ಆರಂಭಿಸುವುದಾಗಿ ಸಚಿವರು ಭರವಸೆ ನೀಡಿದರು.

ಶಿವಮೊಗ್ಗ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಮಾತನಾಡಿ, ಮಲೆನಾಡು ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭದ್ರಾವತಿ ಆಕಾಶವಾಣಿ ನಿರಂತರ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಹೊಸ ಎಫ್ ಎಂ ಟ್ರಾನ್ಸ್ಮಿಟರ್ ನ ಕಾರ್ಯಾರಂಭದೊಂದಿಗೆ, ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳು ಹೆಚ್ಚಿನ ಪ್ರೇಕ್ಷಕರನ್ನು ತಲುಪುತ್ತವೆ, ಸ್ಥಳೀಯ ಕೇಳುಗರು ಮತ್ತು ಕಲಾವಿದರ ಅಗತ್ಯಗಳನ್ನು ಪೂರೈಸುತ್ತವೆ. ರೇಡಿಯೋ ಈಗಲೂ ಜನಪ್ರಿಯವಾಗಿದೆ ಮತ್ತು ದೇಶದ ಒಳಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಆದ್ಯತೆಯ ಮಾಧ್ಯಮವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ಆಕಾಶವಾಣಿಯ ತಂತ್ರಜ್ಞಾನ ಉನ್ನತೀಕರಣದ ಕುರಿತು ಮಾತನಾಡಿದ ಶ್ರೀ ಬಿ.ವೈ. ರಾಘವೇಂದ್ರ, ಆಕಾಶವಾಣಿ ಮೊಬೈಲ್ ಆ್ಯಪ್ ಆಕಾಶವಾಣಿ ಮತ್ತು ದೂರದರ್ಶನದ ಕಾರ್ಯಕ್ರಮಗಳು ಮತ್ತು ವಾರ್ತೆಗಳನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ ಎಂದು ಹೇಳಿದರು.

ಮಾಜಿ ಗೃಹ ಸಚಿವರಾದ ಮತ್ತು ತೀರ್ಥಹಳ್ಳಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ, ಶಿವಮೊಗ್ಗ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್ ಮತ್ತು ಶ್ರೀ ಧನಂಜಯ್ ಸರ್ಜಿ, ಆಕಾಶವಾಣಿ ಮತ್ತು ದೂರದರ್ಶನದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಹೊಸ ಎಫ್ ಎಂ ಟ್ರಾನ್ಸ್ಮಿಟರ್ ನ ಫ್ರೀಕ್ವೆನ್ಸಿ 101.4 MHz ಆಗಿದ್ದು, ಯೋಜನೆಯ ವೆಚ್ಚ 935 ಲಕ್ಷ ರೂ. ಹೊಸ ಟ್ರಾನ್ಸ್ಮಿಟರ್ ಕಾರ್ಯಾರಂಭದಿಂದ ಭದ್ರಾವತಿ ಆಕಾಶವಾಣಿಯ ವ್ಯಾಪ್ತಿ ಪ್ರದೇಶ ಶೇ.64ಕ್ಕೆ ಏರಿಕೆಯಾಗಲಿದೆ.

About Matribhumi Samachar

Check Also

ಉಮೀದ್ ಕೇಂದ್ರೀಯ ಪೋರ್ಟಲ್ ಗಡುವು ಪೂರ್ಣಗೊಂಡಿದೆ

ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ಉಮೀದ್ ಕೇಂದ್ರೀಯ ಜಾಲತಾಣವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು …