Wednesday, December 17 2025 | 06:54:19 PM
Breaking News

ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಕ್ರೀಡಾಕೂಟ ಮೂಲಕ ಕ್ರೀಡಾ ಶ್ರೇಷ್ಠತೆಯನ್ನು ಹೊಸ ಮಟ್ಟಕ್ಕೆ ಏರಿಸಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ

Connect us on:

ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ಕ್ರೀಡಾಕೂಟ ಇಂದು ಲಡಾಖ್‌ ನ ಲೇಹ್‌ ನಲ್ಲಿರುವ ಪ್ರಸಿದ್ಧ ಎನ್‌ಡಿಎಸ್ ಸ್ಟೇಡಿಯಂನಲ್ಲಿ ಬಹಳ ಉತ್ಸಾಹದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಮೊದಲ ಹಂತವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶವು ಆಯೋಜಿಸುತ್ತಿದೆ ಮತ್ತು ಇದು ಜನವರಿ 27, 2025 ರವರೆಗೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಫೆಬ್ರವರಿ 22 ರಿಂದ 25 ರವರೆಗೆ ಹಿಮದ ಹಿನ್ನೆಲೆಯ ಆಟಗಳನ್ನು ಆಯೋಜಿಸುತ್ತದೆ.

5000 ಸಾಮರ್ಥ್ಯದ ಎನ್‌ಡಿಎಸ್ ಕ್ರೀಡಾಂಗಣವು ಉದ್ಘಾಟನಾ ದಿನದಂದು ಸಾಹಸ ಕ್ರೀಡೆಗಳ ಉತ್ಸಾಹ ಮತ್ತು ಭಾವಪ್ರಧಾನತೆಯನ್ನು ತೋರಿಸಿತು. ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ರಾಷ್ಟ್ರೀಯ ಮಟ್ಟದ ಮೊದಲ ಪ್ರಮುಖ ಕ್ರೀಡಾಕೂಟವನ್ನು ಆಯೋಜಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಯೋಜಕರನ್ನು ಅಭಿನಂದಿಸಿದರು ಮತ್ತು ಅವು ಚಳಿಗಾಲದ ಕ್ರೀಡೆಗಳಿಗೆ ಏಕೆ ಆಕರ್ಷಣೆಗಳಾಗಿವೆ ಎಂಬುದನ್ನು ಜಗತ್ತಿಗೆ ವಿವರಿಸಿದರು

ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ಕ್ರೀಡಾಕೂಟವನ್ನು ಉದ್ಘಾಟಿಸಬೇಕಿದ್ದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಪ್ರತಿಕೂಲ ಹವಾಮಾನದ ಕಾರಣದಿಂದ ಲೇಹ್‌ ನ ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಈ ಹಿನ್ನಡೆಯ ನಡುವೆಯೂ ಡಾ.ಮಾಂಡವೀಯ ಅವರು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿ ಹೃದಯಸ್ಪರ್ಶಿ ಸಂದೇಶ ನೀಡಿದರು.

ಲಡಾಖ್‌ ನ ಲೆಫ್ಟಿನೆಂಟ್ ಗವರ್ನರ್, ಬ್ರಿಗೇಡಿಯರ್ ಡಾ.ಬಿ.ಡಿ.ಮಿಶ್ರಾ ಸೇರಿದಂತೆ ಹಲವಾರು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದು ತಂಡಗಳು ತಮ್ಮ ಸ್ಕೇಟ್‌ ಗಳಲ್ಲಿ ವಿಐಪಿ ವೇದಿಕೆಯನ್ನು ದಾಟಿ ಮುನ್ನೆಲೆಗೆ ಬರುವಂತೆ ಮಾಡಿತು. ಉದ್ಘಾಟನಾ ಸಮಾರಂಭದ ಭಾಗವಾಗಿ ಸಾಂಸ್ಕೃತಿಕ ಪ್ರದರ್ಶನ ಮತ್ತು ಐಸ್ ಹಾಕಿ ಪ್ರದರ್ಶನ ಕೂಡ ನಡೆಯಿತು.

ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ಗೆ ನೀಡಿದ ಸಂದೇಶದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಾದ್ಯಂತ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರದ ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಹೇಗೆ “ನಮ್ಮ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉನ್ನತೀಕರಿಸಿದೆ, ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಿದೆ, ರಾಷ್ಟ್ರದ ಸೌಂದರ್ಯ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ.” ಎಂದು ಅವರು ವಿವರಿಸಿದರು.

“ನಮ್ಮ ಸರ್ಕಾರವು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 100 ಖೇಲೋ ಇಂಡಿಯಾ ಕೇಂದ್ರಗಳು ಮತ್ತು ಲಡಾಖ್‌ ನಲ್ಲಿ ಮೂರು, ಅಥ್ಲೆಟಿಕ್ಸ್, ಬಿಲ್ಲುಗಾರಿಕೆ ಮತ್ತು ಬಾಕ್ಸಿಂಗ್‌ ಗಾಗಿ ಲೇಹ್‌ ನಲ್ಲಿರುವ ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್ ಸೇರಿದಂತೆ, ನಮ್ಮ ಪ್ರಯತ್ನಗಳು ಈ ಪ್ರದೇಶವನ್ನು ಕ್ರೀಡಾ ಉತ್ಕೃಷ್ಟತೆಯ ಕೇಂದ್ರವಾಗಿ ರೂಪಿಸುತ್ತಿವೆ. ನಮ್ಮ ಕ್ರೀಡಾ ಉತ್ಕೃಷ್ಟತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ಒಂದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಡಾ. ಮಾಂಡವಿಯ ಅವರು ಉದ್ಘಾಟನಾ ಸಮಾರಂಭವನ್ನು ತಲುಪುವಾಗ ಕುರಿತು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು ಜೊತೆಗೆ ಭಾರತವು ನಿಜವಾಗಿಯೂ “4ಡಿ ಕ್ರೀಡಾ ತಾಣವಾಗಿದೆ” ಎಂದು ಹೇಳಿ ಎಲ್ಲಾ ಮಧ್ಯಸ್ಥಗಾರರನ್ನು ಹುರಿದುಂಬಿಸಿದರು.

“ನಾನು ಒಂದು ಮತ್ತು ಶ್ರೇಷ್ಠ ಅಖಂಡ ಭಾರತದ ಬಗ್ಗೆ ಮಾತನಾಡಿದರೆ, ಅದರಲ್ಲಿ ಅಡಗಿರುವ ವೈವಿಧ್ಯತೆ ಮತ್ತು ಅದರಿಂದ ಆಗುವ ಪ್ರಯೋಜನಗಳನ್ನು ನಾನು ನೋಡುತ್ತೇನೆ. ಪ್ರಸ್ತುತ, ನಾವು ಲೇಹ್‌ ನಲ್ಲಿದ್ದೇವೆ, ಪ್ರಚಲಿತ ಹವಾಮಾನದ ಕಾರಣದಿಂದ ನಾವು ಚಳಿಗಾಲದ ಆಟಗಳನ್ನು ಇಲ್ಲಿ ನಡೆಸಬಹುದು. ನಾವು ಈಶಾನ್ಯದ ಕಡೆಗೆ ಹೋದರೆ, ಇದು ಸಾಹಸ ಕ್ರೀಡೆಗಳ ಅಭಿವೃದ್ಧಿಗೆ ಉತ್ತಮ ಪ್ರದೇಶವಾಗಿದೆ” ಎಂದು ಕೇಂದ್ರ ಸಚಿವರು ಹೇಳಿದರು.

“ಮುಂದಕ್ಕೆ, ನಾವು ದಕ್ಷಿಣ ಭಾರತದಲ್ಲಿ ಬೀಚ್ ಆಟಗಳ ಅಪಾರ ಸಾಧ್ಯತೆಗಳನ್ನು ಅನ್ವೇಷಿಸುತ್ತೇವೆ, ನಮ್ಮ ಎಲ್ಲಾ ಜನಪ್ರಿಯ ಆಟಗಳನ್ನು ಪಶ್ಚಿಮ ಕರಾವಳಿಯಲ್ಲಿ ಆಯೋಜಿಸುವುದನ್ನು ನಾವು ನೋಡುತ್ತೇವೆ.  ಕ್ರೀಡೆಯಲ್ಲಿ ನಾವು 4ಡಿ ರಾಷ್ಟ್ರವಾಗಿದ್ದೇವೆ ಎಂದು ಈಗ ನಮಗೆ ತಿಳಿಸುತ್ತದೆ” ಎಂದು ಡಾ ಮಾಂಡವಿಯಾ ಹೇಳಿದರು.

“2024ರ ಯಶಸ್ವಿ ವರ್ಷದ ನಂತರ ಭಾರತವು ಚೆಸ್, ಕ್ರಿಕೆಟ್, ಒಲಿಂಪಿಕ್ಸ್ ಮತ್ತು ಪ್ಯಾರಿಸ್‌ ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಭವಿಷ್ಯವು ಉತ್ತಮವಾಗಿ ಕಾಣುತ್ತದೆ” ಎಂದು ಡಾ ಮಾಂಡವಿಯಾ ಹೇಳಿದರು. ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ ಗೆ ಅಡಿಪಾಯ ಹಾಕುವಾಗ, ಈ ಅದ್ಭುತ ಕ್ರೀಡಾಕೂಟದ ಬಗ್ಗೆ ನಾವು ಕನಸು ಕಂಡೆವು. ಕ್ರೀಡೆಯ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಪರವಾಗಿ ಜಗತ್ತಿಗೆ ಕಠಿಣ ಸವಾಲನ್ನು ಪ್ರಸ್ತುತಪಡಿಸುವುದು ಮತ್ತು ಚಳಿಗಾಲದ ಒಲಿಂಪಿಕ್ಸ್ ವೇದಿಕೆಯ ಮೇಲೆ ನಿಂತು ‘ಜನ ಗಣ ಮನ’ ನಮ್ಮ ರಾಷ್ಟ್ರಗೀತೆಯನ್ನು ಹಾಡುವುದು ಒಂದು ಕನಸಾಗಿತ್ತು, ಆ ಕನಸು ಇಂದು ನನಸಾಗಿದೆ” ಎಂದು ಹೇಳಿದರು

“ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಶಾಲೆಯಾಗಿದ್ದು, ಮುಂಬರುವ ವರ್ಷಗಳಲ್ಲಿ ನಾವು ಚಳಿಗಾಲದ ಒಲಿಂಪಿಕ್ಸ್‌ ನ ತಾರೆಗಳನ್ನು ಸಿದ್ಧಪಡಿಸುತ್ತಿದ್ದೇವೆ.  ಆದ್ದರಿಂದ ನಾವು ಈ ಶ್ರಮದ ಫಲವನ್ನು ಸರಿಯಾದ ಸಮಯದಲ್ಲಿ ನಿರೀಕ್ಷಿಸಬಹುದು, ”ಎಂದು ಅವರು ಹೇಳಿದರು.

ಎನ್.ಡಿ.ಎಸ್. ಸಂಕೀರ್ಣ ಮತ್ತು ಲಡಾಖ್ ಸ್ಕೌಟ್ಸ್ ರೆಜಿಮೆಂಟಲ್ ಸೆಂಟರ್‌ನಲ್ಲಿ ಐಸ್ ಹಾಕಿ ಪಂದ್ಯಗಳೊಂದಿಗೆ ಗುರುವಾರ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ಕ್ರೀಡಾಕೂಟಗಳು ಪ್ರಾರಂಭವಾದವು.  ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸೇನೆ ಮತ್ತು ಐಟಿಬಿಪಿಯಂತಹ ಸಾಂಸ್ಥಿಕ ಸಂಘಟನೆಗಳನ್ನು ಒಳಗೊಂಡಿರುವ ಹತ್ತೊಂಬತ್ತು ತಂಡಗಳು ಕ್ರೀಡೆಗಳನ್ನು ಸ್ಪರ್ಧಿಸುತ್ತಿವೆ. ಒಟ್ಟು 594 ಮಂದಿ ಕ್ರೀಡಾಪಟುಗಳು ಭಾಗವಹಿಸುವವರು, ಅದರಲ್ಲಿ 428 ಕ್ರೀಡಾಪಟುಗಳು, ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025ರ ಲಡಾಖ್ ಕೂಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಎರಡನೇ ಬಾರಿಗೆ ಲಡಾಖ್ ವಿಂಟರ್ ಗೇಮ್ಸ್ ಅನ್ನು ಅದರ ಐದನೇ ಆವೃತ್ತಿಯಲ್ಲಿ ಆಯೋಜಿಸುತ್ತಿದೆ.

 ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025ರ ವೆಬ್‌ ಸೈಟ್‌ ಗಾಗಿ, ಕ್ಲಿಕ್ ಮಾಡಿ: https://winter.kheloindia.gov.in/

 ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025ರ ಪದಕದ ಸ್ಥಾನಗಳನ್ನು ಅರಿಯಲು, ಕ್ಲಿಕ್ ಮಾಡಿ:  https://winter.kheloindia.gov.in/medal-tally

ಖೇಲೋ ಇಂಡಿಯಾ ವಿಂಟರ್ ಗೇಮ್‌ ಕ್ರೀಡಾಕೂಟದ ಬಗ್ಗೆ

ಖೇಲೋ ಇಂಡಿಯಾ ಯೋಜನೆಯಡಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಅವುಗಳೆಂದರೆ, ಖೇಲೋ ಇಂಡಿಯಾ ಯೂತ್ ಗೇಮ್ಸ್, ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್, ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಮತ್ತು ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಗಳಾಗಿವೆ – ಹಾಗೂ ಈ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೇದಿಕೆಯನ್ನು ಒದಗಿಸುತ್ತದೆ. ಅವರ ಕ್ರೀಡಾ ಮತ್ತು ಸ್ಪರ್ಧಾತ್ಮಕ ಕೌಶಲ್ಯಗಳನ್ನು ಪ್ರದರ್ಶಿಸಲು. 2020 ರಿಂದ ಆರಂಭಗೊಂಡು, ಇಲ್ಲಿಯವರೆಗೆ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ ನ ನಾಲ್ಕು ಕ್ರೀಡಾಕೂಟದ ಆವೃತ್ತಿಗಳನ್ನು 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ನಡೆಸಲಾಗಿದೆ.  ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ರ ಐದನೇ ಆವೃತ್ತಿಯು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ರಮವಾಗಿ ಜನವರಿ 23-27 ಮತ್ತು ಫೆಬ್ರವರಿ 22-25 ರವರೆಗೆ ಎರಡು ಮಂಜು ಮತ್ತು ನಾಲ್ಕು ಹಿಮ ವಿಭಾಗಗಳಲ್ಲಿ ನಡೆಯಲಿದೆ. ಟ್ಯಾಪಿಂಗ್ ಪ್ರತಿಭೆಯ ಹೊರತಾಗಿ, ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಒಂದು ಪ್ರದೇಶದ ಕಲೆ, ಸಂಸ್ಕೃತಿ, ಪರಂಪರೆಯನ್ನು ಪ್ರದರ್ಶಿಸುತ್ತದೆ ಮತ್ತು ಕ್ರೀಡೆಗಳ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

About Matribhumi Samachar

Check Also

ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ 2025ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬಿಲ್ಲುಗಾರಿಕಾ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ

2025ರ ಏಷ್ಯನ್ ಬಿಲ್ಲುಗಾರಿಕಾ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬಿಲ್ಲುಗಾರಿಕೆ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ …