Monday, September 14 2026 | 03:09:48 PM
Breaking News

ಸಾಫ್ಟ್‌ವೇರ್ ಅಪ್ಲಿಕೇಶನ್‌ನ ಉನ್ನತೀಕರಣಕ್ಕಾಗಿ (ಸುಧಾರಿತ ಅಂಚೆ ತಂತ್ರಜ್ಞಾನ 2.O) 24 ಮತ್ತು 25 ಜೂನ್ 2025 (ಮಂಗಳವಾರ ಮತ್ತು ಬುಧವಾರ) ಅಂಚೆ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ

Connect us on:

ದಿನಾಂಕ 26.06.2025 ರಂದು ನಿಗದಿಪಡಿಸಲಾದ ಸಾಫ್ಟ್‌ವೇರ್ ಅನುಷ್ಠಾನಕ್ಕಾಗಿ ಈ ಕೆಳಗೆ ತಿಳಿಸಲಾದ ಅಂಚೆ ಕಚೇರಿಗಳಲ್ಲಿ ಮತ್ತು ಸಂಬಂಧಿತ ಉಪ/ಶಾಖೆ ಅಂಚೆ ಕಚೇರಿಗಳಲ್ಲಿ ದಿನಾಂಕ 24 ಮತ್ತು 25 ಜೂನ್ 2025 (ಮಂಗಳವಾರ ಮತ್ತು ಬುಧವಾರ) ರಂದು ಸಾರ್ವಜನಿಕರಿಗೆ ಅಂಚೆ ಸೇವೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ.

  • ಎಚ್‌ಎಎಲ್ ಮುಖ್ಯ ಅಂಚೆ ಕಚೇರಿ
  • ಜಾಲಹಳ್ಳಿ ಮುಖ್ಯ ಅಂಚೆ ಕಚೇರಿ
  • ಬಸವನಗುಡಿ ಮುಖ್ಯ ಅಂಚೆ ಕಚೇರಿ

ಗ್ರಾಹಕರಿಗೆ ಸೇವೆಯ ದಕ್ಷತೆ, ರಕ್ಷಣೆ ಹಾಗೂ ಗುಣಮಟ್ಟ ಹೆಚ್ಚಿಸಲು ಈ ಉನ್ನತೀಕರಣ ಅವಶ್ಯಕವಾಗಿದೆ. ಗ್ರಾಹಕರು ಈ ಮೇಲಿನ ಅಂಚೆ ಕಚೇರಿಗಳಿಗೆ ಭೇಟಿ ನೀಡುವುದನ್ನು ಯೋಜಿಸಿಕೊಳ್ಳಲು ಅಥವಾ  ಅಂಚೆ ಸೇವೆ ಪಡೆಯಲು ಈ ಕೆಳಗೆ ತಿಳಿಸಲಾದ ಅಂಚೆ ಕಚೇರಿಗಳು ಮತ್ತು ಅವುಗಳ ಸಂಬಂಧಿತ ಉಪ/ ಶಾಖೆ ಅಂಚೆ ಕಚೇರಿಗಳಿಗೆ ಭೇಟಿ ನೀಡಲು ತಿಳಿಸಲಾಗಿದೆ.

  • ಬೆಂಗಳೂರು ಜನರಲ್ ಪೋಸ್ಟ್ ಆಫೀಸ್ (GPO)
  • ಆರ್ ಟಿ ನಗರ ಮುಖ್ಯ ಅಂಚೆ ಕಚೇರಿ
  • ಜಯನಗರ ಮುಖ್ಯ ಅಂಚೆ ಕಚೇರಿ
  • ರಾಜಾಜಿನಗರ ಮುಖ್ಯ ಅಂಚೆ ಕಚೇರಿ
  • ಚನ್ನಪಟ್ಟಣ ಮುಖ್ಯ ಅಂಚೆ ಕಚೇರಿ

About Matribhumi Samachar

Check Also

NCPCR ರಕ್ಷಣಾ ಅಭಿಯಾನದಡಿಯಲ್ಲಿ ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಮಕ್ಕಳು ಮತ್ತು ಅಧಿಕಾರಿಗಳ ಪರಿಶೀಲನೆ

ಬಾಲ ಕಾರ್ಮಿಕ ಪದ್ಧತಿ ವಿರುದ್ಧ NCPCR ಸಮರ: ದೇಶದಾದ್ಯಂತ 3,800ಕ್ಕೂ ಹೆಚ್ಚು ಮಕ್ಕಳ ರಕ್ಷಣೆ, 575ಕ್ಕೂ ಅಧಿಕ FIR ದಾಖಲು!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾದ ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗ (NCPCR), …