Monday, December 08 2025 | 04:24:19 AM
Breaking News

ಸೈಬರ್ ಭದ್ರತೆ ಸಹಕಾರದ ಕುರಿತು ಬಿಮ್‌ ಸ್ಟೆಕ್ ತಜ್ಞರ ಗುಂಪಿನ ಎರಡನೇ ಸಭೆ

Connect us on:

ಭಾರತ ಸರ್ಕಾರದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ನವದೆಹಲಿಯಲ್ಲಿ 2025ರ ಜನವರಿ 21ರಂದು ಸೈಬರ್ ಭದ್ರತೆ ಸಹಕಾರದ ಕುರಿತು ಬಿಮ್ ಸ್ಟೆಕ್ ತಜ್ಞರ ಗುಂಪಿನ ಎರಡನೇ ಸಭೆಯನ್ನು ಆಯೋಜಿಸಿತ್ತು. ಭಾರತ ಸೈಬರ್ ಭದ್ರತೆ ಕುರಿತ ಬಿಮ್‌ ಸ್ಟೆಕ್ ಗುಂಪಿನ ಮೊದಲ ತಜ್ಞರ ಸಮಿತಿ ಸಭೆಯನ್ನು ನವದೆಹಲಿಯಲ್ಲಿ 2022ರಲ್ಲಿ ಆಯೋಜಿಸಿತ್ತು.

ಈ ಬಿಮ್ ಸ್ಟೆಕ್ ತಜ್ಞರ ಗುಂಪಿನ ಸಭೆಯ ಪ್ರಮುಖ ಉದ್ದೇಶವೆಂದರೆ, ಐಸಿಟಿ ಗಳ ಬಳಕೆಯಲ್ಲಿ ಸೈಬರ್ ಭದ್ರತೆಯನ್ನು ಬಲಪಡಿಸಲು ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳ ನಡುವೆ ಸಮನ್ವಯ ಮತ್ತು ಸಹಯೋಗ ವೃದ್ಧಿಸುವ ಕ್ರಿಯಾ ಯೋಜನೆಯನ್ನು ರೂಪಿಸುವುದಾಗಿದೆ. ಈ ಕ್ರಿಯಾ ಯೋಜನೆಯು ಸೈಬರ್ ಸಂಬಂಧಿತ ಮಾಹಿತಿಯ ವಿನಿಮಯ, ಸೈಬರ್ ಅಪರಾಧ, ನಿರ್ಣಾಯಕ ಮಾಹಿತಿ ಮೂಲಸೌಕರ್ಯಗಳ ರಕ್ಷಣೆ, ಸೈಬರ್ ಪ್ರಕರಣಗಳಿಗೆ ಸ್ಪಂದನೆ ಮತ್ತು ಸೈಬರ್ ಮಾನದಂಡಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಬೆಳವಣಿಗೆಗಳ ಕಾರ್ಯವಿಧಾನಗಳನ್ನು ಒಳಗೊಂಡಿದೆ. ಈ ಕ್ರಿಯಾ ಯೋಜನೆಯನ್ನು 5 ವರ್ಷಗಳ ಕಾಲಮಿತಿಯೊಳಗೆ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಎರಡನೇ ಸಭೆಯಲ್ಲಿ ಕೆಲವು ಮಹತ್ವದ ವಿನಿಮಯಗಳು ನಡೆದಿದ್ದು, ಅವುಗಳು ಬಿಮ್ ಸ್ಟೆಕ್ ಸಿಇಆರ್ ಟಿ ದಿಂದ ಸಿಇಆರ್ ಟಿ ಸಹಕಾರ ಕಾರ್ಯವಿಧಾನ, ಕಾನೂನು ಜಾರಿ ಸಂಸ್ಥೆಗಳ ನಡುವೆ ಸೈಬರ್ ಅಪರಾಧ ಸಹಕಾರ ಚೌಕಟ್ಟು ಮತ್ತು ಈ ಪ್ರದೇಶದಲ್ಲಿ ಸೈಬರ್ ಭದ್ರತೆಯ ಕುರಿತು ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಿವೆ. ನಾನಾ ಪ್ರಾತ್ಯಕ್ಷಿಕೆಗಳಲ್ಲಿ, ಭಾರತವು “ಶಾಲಾ ಮಕ್ಕಳಿಗಾಗಿ ಸೈಬರ್ ನೈರ್ಮಲ್ಯ” ಕುರಿತು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಉಪಕ್ರಮಗಳ ಬಗ್ಗೆಯೂ ಪ್ರಸ್ತುತಪಡಿಸಿತು.

ಕ್ರಿಯಾ ಯೋಜನೆಯ ಅನುಷ್ಠಾನವು ಬಿಮ್ ಸ್ಟೆಕ್  ನಲ್ಲಿ ಸೈಬರ್ ಭದ್ರತಾ ಸಹಕಾರವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂಬುದನ್ನು ಸಭೆ ಒಪ್ಪಿಕೊಂಡಿತು. ಈ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಬಿಮ್ ಸ್ಟೆಕ್ ದೇಶಗಳು ಈ ಪ್ರದೇಶದಲ್ಲಿ ಹೆಚ್ಚು ಸುರಕ್ಷಿತ ಮತ್ತು ಸ್ಥಿತಿಸ್ಥಾಪಕ ಸೈಬರ್ ಸ್ಥಳಾವಕಾಶವನ್ನು ಸೃಷ್ಟಿಸಲು ಒಗ್ಗೂಡಿ ಕಾರ್ಯನಿರ್ವಹಿಸಬಹುದಾಗಿದೆ.

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

 

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ಉಮೀದ್ ಕೇಂದ್ರೀಯ ಪೋರ್ಟಲ್ ಗಡುವು ಪೂರ್ಣಗೊಂಡಿದೆ

ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ಉಮೀದ್ ಕೇಂದ್ರೀಯ ಜಾಲತಾಣವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು …