Sunday, December 07 2025 | 01:20:54 AM
Breaking News

ಎಸ್ ಪಿ ಎಂ ಇ ಪಿ ಸಿ ಐ ಅಡಿಯಲ್ಲಿ ಪೋರ್ಟಲ್ ಪ್ರಾರಂಭಿಸುವ ಮೂಲಕ ಭಾರತ ಜಾಗತಿಕ ಇವಿ ದಿಗ್ಗಜರಿಗೆ ಬಾಗಿಲು ತೆರೆದಿದೆ

Connect us on:

ಭಾರತದಲ್ಲಿ ವಿದ್ಯುತ್ ಚಾಲಿತ ಪ್ರಯಾಣಿಕ ಕಾರುಗಳ ತಯಾರಿಕೆ ಉತ್ತೇಜನಾ ಯೋಜನೆ (ಎಸ್ ಪಿ ಎಂ ಇ ಪಿ ಸಿ ಐ) ಅಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಾಗಿ ಪೋರ್ಟಲ್ ಪ್ರಾರಂಭಿಸುತ್ತಿರುವುದನ್ನು ಘೋಷಿಸಲು ಬೃಹತ್ ಕೈಗಾರಿಕಾ ಸಚಿವಾಲಯ ಹರ್ಷಪಡುತ್ತದೆ.

ಈ ಯೋಜನೆಯನ್ನು ಮಾರ್ಚ್ 15, 2024ರಂದು ಅಧಿಸೂಚಿಸಲಾಗಿತ್ತು ಮತ್ತು ನಂತರ 02.06.2025ರ ಅಧಿಸೂಚನೆ ಸಂಖ್ಯೆ S.O. 2450(E) ಮೂಲಕ ವಿವರವಾದ ಯೋಜನಾ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು. ಅಧಿಸೂಚನೆ ಮತ್ತು ಮಾರ್ಗಸೂಚಿಗಳು ಸಚಿವಾಲಯದ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ: https://heavyindustries.gov.in/scheme-promote-manufacturing-electric-passenger-cars-india-0

ಈ ನಿಟ್ಟಿನಲ್ಲಿ, ಯೋಜನೆಯಡಿ ಅರ್ಹ ಅರ್ಜಿದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿದಾರರು http://spmepci.heavyindustries.gov.in ನಲ್ಲಿ ಅರ್ಜಿ ಮಾಡ್ಯೂಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅರ್ಜಿ ಪೋರ್ಟಲ್ ಜೂನ್ 24, 2025ರ ಬೆಳಗ್ಗೆ 10.30 ರಿಂದ ಅಕ್ಟೋಬರ್ 21, 2025ರ ಸಂಜೆ 6:00 ಗಂಟೆಯವರೆಗೆ ತೆರೆದಿರುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ ಭಾರತ ಸರ್ಕಾರ, ವಿದ್ಯುತ್ ಚಾಲಿತ ವಾಹನಗಳ (ಇವಿ) ಮೇಲೆ ವಿಶೇಷ ಗಮನ ಹರಿಸಿ, ದೇಶೀಯ ಪ್ರಯಾಣಿಕ ಕಾರುಗಳ ಉತ್ಪಾದನೆ ಉತ್ತೇಜಿಸುವ ದೂರದೃಷ್ಟಿಯ ಯೋಜನೆಯನ್ನು ಅನುಮೋದಿಸಿದೆ. ವಾಹನ ತಯಾರಿಕೆ ಮತ್ತು ನಾವೀನ್ಯತೆಯಲ್ಲಿ ಭಾರತವನ್ನು ಪ್ರಮುಖ ಜಾಗತಿಕ ತಾಣವಾಗಿ ಸ್ಥಾಪಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಪೋರ್ಟಲ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವದ ಮಾರ್ಗದರ್ಶನದಲ್ಲಿ, ಈ ಉಪಕ್ರಮವು ಸ್ವಚ್ಛ, ಸ್ವಾವಲಂಬಿ ಮತ್ತು ಭವಿಷ್ಯಕ್ಕೆ ಸಿದ್ಧವಾದ ಚಲನಶೀಲತೆಯತ್ತ ಭಾರತದ ಪ್ರಯಾಣದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ” ಎಂದು ಹೇಳಿದರು. ಎಸ್ ಪಿ ಎಂ ಇ ಪಿ ಸಿ ಐ ಯೋಜನೆಯಡಿ ಈ ಪೋರ್ಟಲ್ ಪ್ರಾರಂಭಿಸುವುದರಿಂದ ಜಾಗತಿಕ ವಿದ್ಯುತ್ ಚಾಲಿತ ವಾಹನ ತಯಾರಕರು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಆಟೋಮೋಟಿವ್ ವಲಯದಲ್ಲಿ ಹೂಡಿಕೆ ಮಾಡಲು ಹೊಸ ಮಾರ್ಗಗಳನ್ನು ತೆರೆಯುತ್ತದೆ. ಈ ಯೋಜನೆಯು 2070ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸುವ ನಮ್ಮ ರಾಷ್ಟ್ರೀಯ ಬದ್ಧತೆಯನ್ನು ಬೆಂಬಲಿಸುವುದಲ್ಲದೇ, ಸುಸ್ಥಿರ, ನಾವೀನ್ಯತೆ-ಚಾಲಿತ ಆರ್ಥಿಕತೆ ನಿರ್ಮಿಸುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದ ಸ್ತಂಭಗಳನ್ನು ಬಲಪಡಿಸುತ್ತದೆ ಮತ್ತು ಮುಂದಿನ ಪೀಳಿಗೆಯ ಆಟೋಮೋಟಿವ್ ಉತ್ಪಾದನೆ ಮತ್ತು ತಂತ್ರಜ್ಞಾನ ನಾಯಕತ್ವಕ್ಕಾಗಿ ಭಾರತವನ್ನು ವಿಶ್ವಾಸಾರ್ಹ ಜಾಗತಿಕ ಕೇಂದ್ರವಾಗಿ ಸ್ಥಾಪಿಸುತ್ತದೆ.”

ಈ ಯೋಜನೆ ಜಾಗತಿಕ ವಿದ್ಯುತ್ ಚಾಲಿತ ವಾಹನ ತಯಾರಕರಿಂದ ಹೂಡಿಕೆ ಆಕರ್ಷಿಸಲು ಮತ್ತು ಭಾರತವನ್ನು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನಾ ತಾಣವಾಗಿ ಉತ್ತೇಜಿಸಲು ಸಹಾಯ ಮಾಡುತ್ತದೆ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಕ್ಷೆಯಲ್ಲಿರಿಸಲು, ಉದ್ಯೋಗ ಸೃಷ್ಟಿಸಲು ಮತ್ತು “ಮೇಕ್ ಇನ್ ಇಂಡಿಯಾ” ಗುರಿ ಸಾಧಿಸಲು ಈ ಯೋಜನೆ ಸಹಾಯ ಮಾಡುತ್ತದೆ.

ಈ ಯೋಜನೆಯಡಿ ಜಾಗತಿಕ ತಯಾರಕರು ಹೂಡಿಕೆ ಮಾಡುವುದನ್ನು ಉತ್ತೇಜಿಸಲು, ಅನುಮೋದಿತ ಅರ್ಜಿದಾರರು ಅರ್ಜಿ ಅನುಮೋದನೆಯಾದ ದಿನಾಂಕದಿಂದ 5 ವರ್ಷಗಳ ಅವಧಿಗೆ ಶೇಕಡಾ 15ರಷ್ಟು ಕಡಿಮೆ ಕಸ್ಟಮ್ಸ್ ಸುಂಕದಲ್ಲಿ ಕನಿಷ್ಠ 35,000 ಡಾಲರ್ ಸಿಐಎಫ್ ಮೌಲ್ಯದೊಂದಿಗೆ E-4W ನ ಸಂಪೂರ್ಣವಾಗಿ ನಿರ್ಮಿಸಲಾದ ಘಟಕಗಳನ್ನು (ಸಿಬಿಯು) ಆಮದು ಮಾಡಿಕೊಳ್ಳಲು ಅನುಮತಿಸಲಾಗುತ್ತದೆ.

ಯೋಜನೆಯ ನಿಬಂಧನೆಗಳ ಪ್ರಕಾರ ಅನುಮೋದಿತ ಅರ್ಜಿದಾರರು ಕನಿಷ್ಠ 4,150 ಕೋಟಿ ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಭಾರತವನ್ನು ವಿದ್ಯುತ್ ಚಾಲಿತ ವಾಹನ ತಯಾರಿಕೆಯಲ್ಲಿ ಜಾಗತಿಕ ಕೇಂದ್ರವಾಗಿ ಸ್ಥಾಪಿಸಲು ಈ ಯೋಜನೆಯನ್ನು ಕಾರ್ಯತಂತ್ರವಾಗಿ ವಿನ್ಯಾಸಗೊಳಿಸಲಾಗಿದೆ. ಕನಿಷ್ಠ 4,150 ಕೋಟಿ ರೂ. ಹೂಡಿಕೆ ಮಿತಿಯೊಂದಿಗೆ, ಇದು ಪ್ರಮುಖ ಜಾಗತಿಕ ಮತ್ತು ದೇಶೀಯ ಉದ್ಯಮಗಳಿಗೆ ದೇಶದಲ್ಲಿ ದೀರ್ಘಕಾಲೀನ ಉತ್ಪಾದನೆ ಸ್ಥಾಪಿಸಲು ಅನುವು ಮಾಡಿಕೊಡುವ ನೀತಿ ವಾತಾವರಣ ಒದಗಿಸುತ್ತದೆ. ಉತ್ತಮವಾಗಿ ಯೋಜಿತ ಕಸ್ಟಮ್ಸ್ ಸುಂಕ ರಿಯಾಯಿತಿಗಳು ಮತ್ತು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ದೇಶೀಯ ಮೌಲ್ಯವರ್ಧನೆ (ಡಿವಿಎ) ಗುರಿಗಳ ಮೂಲಕ, ಈ ಯೋಜನೆಯು ಅತ್ಯಾಧುನಿಕ ಇವಿ ತಂತ್ರಜ್ಞಾನಗಳನ್ನು ಪರಿಚಯಿಸುವುದು ಮತ್ತು ದೇಶೀಯ ಸಾಮರ್ಥ್ಯಗಳನ್ನು ಉತ್ತೇಜಿಸುವುದರ ನಡುವಿನ ಸಮತೋಲನವನ್ನು ಸಾಧಿಸುತ್ತದೆ.

ದೇಶೀಯ ಮೌಲ್ಯವರ್ಧನೆ ಗುರಿಗಳನ್ನು ಕಡ್ಡಾಯಗೊಳಿಸುವ ಮೂಲಕ, ಈ ಯೋಜನೆ, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಉಪಕ್ರಮಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ, ಜೊತೆಗೆ ಜಾಗತಿಕ ಮತ್ತು ದೇಶೀಯ ಕಂಪನಿಗಳು ಭಾರತದ ಗ್ರೀನ್ ಮೊಬಿಲಿಟಿ ಕ್ರಾಂತಿಯಲ್ಲಿ ಸಕ್ರಿಯ ಪಾಲುದಾರರಾಗಲು ಅನುವು ಮಾಡಿಕೊಡುತ್ತದೆ.

About Matribhumi Samachar

Check Also

ಕರ್ನಾಟಕದಲ್ಲಿ ನವೋದ್ಯಮಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರದಿಂದ ಹಲವು ಉಪಕ್ರಮ

ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನೇತರ ಹಾಗೂ ನವೋದ್ಯಮಗಳ ಉತ್ತೇಜನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಹಲವು ಉಪ …