ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಝರಿಯಾ ಕಲ್ಲಿದ್ದಲು ಕ್ಷೇತ್ರದಲ್ಲಿ ಬೆಂಕಿ ಅವಘಡ, ಭೂ ಕುಸಿತ ಮತ್ತು ಬಾಧಿತ ಕುಟುಂಬಗಳ ಪುನರ್ವಸತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪರಿಷ್ಕೃತ ಝರಿಯಾ ಮಾಸ್ಟರ್ ಪ್ಲಾನ್ (ಜೆಎಂಪಿ) ಅನ್ನು ಅನುಮೋದಿಸಿದೆ. ಪರಿಷ್ಕೃತ ಯೋಜನೆಯ ಅನುಷ್ಠಾನಕ್ಕೆ ಒಟ್ಟು ಹಣಕಾಸು ವೆಚ್ಚ 5,940.47 ಕೋಟಿ ರೂ. ಆಗಿದೆ. ಹಂತವಾರು ವಿಧಾನವು ಬೆಂಕಿ ಮತ್ತು ಭೂಕುಸಿತ ನಿರ್ವಹಣೆ ಮತ್ತು ಬಾಧಿತ ಕುಟುಂಬಗಳ ಪುನರ್ವಸತಿಯನ್ನು ಅತ್ಯಂತ ದುರ್ಬಲ ಸ್ಥಳಗಳಿಂದ ಆದ್ಯತೆಯ ಆಧಾರದ ಮೇಲೆ ಕೈಗೊಳ್ಳುವುದನ್ನು ಖಚಿತಪಡಿಸುತ್ತದೆ.
ಪರಿಷ್ಕೃತ ಜೆಎಂಪಿ ಯೋಜನೆಯಡಿಯಲ್ಲಿ ಪುನರ್ವಸತಿ ಪಡೆಯುತ್ತಿರುವ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪುನರ್ವಸತಿ ಪಡೆದ ಕುಟುಂಬಗಳ ಆರ್ಥಿಕ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ ಮತ್ತು ಆದಾಯ ಗಳಿಕೆಯ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ.
ಇದಲ್ಲದೆ, ಕಾನೂನುಬದ್ಧ ಮಾಲೀಕತ್ವ ಹೊಂದಿರುವ (ಎಲ್ ಟಿ ಎಚ್) ಕುಟುಂಬಗಳು ಮತ್ತು ಕಾನೂನುಬದ್ಧವಲ್ಲದ ಮಾಲೀಕತ್ವ ಹೊಂದಿರುವ (ನಾನ್ ಎಲ್ ಟಿ ಎಚ್) ಕುಟುಂಬಗಳಿಗೆ ಸಾಂಸ್ಥಿಕ ಕ್ರೆಡಿಟ್ ಪೈಪ್ಲೈನ್ ಮೂಲಕ ಒಂದು ಲಕ್ಷ ರೂ. ಜೀವನೋಪಾಯ ಅನುದಾನ ಮತ್ತು ಮೂರು ಲಕ್ಷ ರೂ.ಗಳವರೆಗೆ ಸಾಲ ಬೆಂಬಲವನ್ನು ಒದಗಿಸಲಾಗುವುದು.
ಇದರ ಜೊತೆಗೆ, ಪುನರ್ವಸತಿ ಸ್ಥಳಗಳಲ್ಲಿ ರಸ್ತೆಗಳು, ವಿದ್ಯುತ್, ನೀರು ಸರಬರಾಜು, ಒಳಚರಂಡಿ, ಶಾಲೆಗಳು, ಆಸ್ಪತ್ರೆಗಳು, ಕೌಶಲ್ಯ ಅಭಿವೃದ್ಧಿ ಕೇಂದ್ರಗಳು, ಸಮುದಾಯ ಭವನಗಳು ಮತ್ತಿತರ ಸಾಮಾನ್ಯ ಸೌಲಭ್ಯಗಳಂತಹ ಸಮಗ್ರ ಮೂಲಸೌಕರ್ಯ ಮತ್ತು ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ನಿಬಂಧನೆಗಳನ್ನು ಪರಿಷ್ಕೃತ ಝರಿಯಾ ಮಾಸ್ಟರ್ ಪ್ಲಾನ್ ಅನುಷ್ಠಾನ ಸಮಿತಿಯ ಶಿಫಾರಸುಗಳ ಪ್ರಕಾರ ಜಾರಿಗೆ ತರಲಾಗುವುದು, ಇದು ಸಮಗ್ರ ಮತ್ತು ಮಾನವೀಯ ಪುನರ್ವಸತಿ ವಿಧಾನವನ್ನು ಖಚಿತಪಡಿಸುತ್ತದೆ.
ಜೀವನೋಪಾಯ ಬೆಂಬಲ ಕ್ರಮಗಳ ಭಾಗವಾಗಿ, ಜೀವನೋಪಾಯ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸಲು ಅದಕ್ಕೆ ಮೀಸಲಾದ ಝರಿಯಾ ಪರ್ಯಾಯ ಜೀವನೋಪಾಯ ಪುನರ್ವಸತಿ ನಿಧಿಯನ್ನು ಸ್ಥಾಪಿಸಲಾಗುವುದು. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಸಹ ಕೈಗೊಳ್ಳಲಾಗುವುದು.
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
ऑडियो बुक : भारत 1885 से 1950 (इतिहास पर एक दृष्टि)
Matribhumi Samachar Kannad

