Thursday, December 11 2025 | 10:10:54 PM
Breaking News

ಜೀವನ ರಕ್ಷಾಪದಕ ಸರಣಿ ಪ್ರಶಸ್ತಿಗಳು-2024 ರನ್ನು ಪ್ರದಾನ ಮಾಡಲು ಮಾಡಿರುವ ಆಯ್ಕೆಯನ್ನು ಅನುಮೋದಿಸಿದ ರಾಷ್ಟ್ರಪತಿ

Connect us on:

ಸರ್ವೋತ್ತಮ ಜೀವನ ರಕ್ಷಾಪದಕ 17 ಮಂದಿಗೆ, ಉತ್ತಮ ಜೀವನ ರಕ್ಷಾ ಪದಕ 09 ಮಂದಿಗೆ ಮತ್ತು 23 ಜನರಿಗೆ ಜೀವನ ರಕ್ಷಾ ಪದಕ ಸೇರಿದಂತೆ ಒಟ್ಟಾರೆ 49 ವ್ಯಕ್ತಿಗಳಿಗೆ 2024 ರ ಜೀವನ ರಕ್ಷಾ ಪದಕ ಸರಣಿ ಪ್ರಶಸ್ತಿಗಳನ್ನು ( ಹಾಗೂ ಇವುಗಳಲ್ಲಿ ಆರು ಪ್ರಶಸ್ತಿ ಪುರಸ್ಕೃತರಿಗೆ ಮರಣೋತ್ತರ ಪ್ರಶಸ್ತಿ ) ಪ್ರದಾನ ಮಾಡಲು ಭಾರತದ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.

ವಿವಿಧ ಜೀವನ ರಕ್ಷಾ ಪದಕ ಪುರಸ್ಕೃತರ ವಿವರಗಳು ಕೆಳಕಂಡಂತಿವೆ:-

ಸರ್ವೋತ್ತಮ ಜೀವನ ರಕ್ಷಾ ಪದಕ

1. ಶ್ರೀ ಪಿಂಟು ಕುಮಾರ್ ಸಾಹ್ನಿ (ಮರಣೋತ್ತರ), ಬಿಹಾರ
2. ಶ್ರೀ ಮನೇಶ್ ಕೆ ಎಂ (ಮರಣೋತ್ತರ), ಕೇರಳ
3. ಶ್ರೀ ದಾವತ್ಶೆರಿಂಗ್ ಲೆಪ್ಚಾ (ಮರಣೋತ್ತರ), ಸಿಕ್ಕಿಂ
4. ಡಾ. ಪೆಮಾ ತೇನ್‌ ಸಿಂಗ್‌ ಲಚುಂಗ್‌ ಪಾ (ಮರಣೋತ್ತರ), ಸಿಕ್ಕಿಂ
5. ಗನ್ನರ್ ಅನಿಸ್ ಕುಮಾರ್ ಗುಪ್ತಾ (ಮರಣೋತ್ತರ), ಕೇಂದ್ರ ರಕ್ಷಣಾ ಸಚಿವಾಲಯ
6. ಶ್ರೀ ವಖೀಲ್ ಹಸ್ಸನ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
7. ಶ್ರೀ ಮುನ್ನಾ ಖುರೇಷಿ, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
8. ಶ್ರೀ ಅಂಕುರ್ ಕುಮಾರ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
9. ಶ್ರೀ ಮೋನು ಕುಮಾರ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
10. ಶ್ರೀ ದೇವೇಂದ್ರ, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
11. ಶ್ರೀ ಮೊಹಮ್ಮದ್ ರಶೀದ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
12. ಶ್ರೀ ಫಿರೋಜ್ ಖುರೇಷಿ, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
13. ಶ್ರೀ ಜತಿನ್ ಕಶ್ಯಪ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
14. ಶ್ರೀ ಸೌರಭ್ ಕಶ್ಯಪ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
15. ಶ್ರೀ ಮೊಹಮ್ಮದ್ ಇರ್ಷಾದ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
16. ಶ್ರೀ ನಸ್ರುದ್ದೀನ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
17. ಶ್ರೀ ನಸೀಮ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ

ಉತ್ತಮ ಜೀವನ ರಕ್ಷಾ ಪದಕ

1. ಶ್ರೀ ರಿತಿಕ್ ಚೌಹಾಣ್, ಹಿಮಾಚಲ ಪ್ರದೇಶ
2. ಶ್ರೀ ಶಶಿಕಾಂತ ರಾಮಕೃಷ್ಣ ಗಜಬೆ, ಮಹಾರಾಷ್ಟ್ರ
3. ಎನ್. ಕೆ. ಶಂಕರ್ ಸಿಂಗ್ ಖರಾಯತ್, ಗಡಿ ರಸ್ತೆಗಳ ಸಂಸ್ಥೆ
4. ಹವಾಲ್ದಾರ್ ಲೇಕಿಪಾಸಾಂಗ್, ಕೇಂದ್ರ ರಕ್ಷಣಾ ಸಚಿವಾಲಯ
5. ಸೆಫ್ ರಾಜೇಶ್ ರಂಜನ್ ಕುಜೂರ್ (ಮರಣೋತ್ತರ), ಕೇಂದ್ರ ರಕ್ಷಣಾ ಸಚಿವಾಲಯ
6. ಶ್ರೀ ರಾಕೇಶ್ ಸಿಂಗ್ ರಾಣಾ, ಕೇಂದ್ರ ರಕ್ಷಣಾ ಸಚಿವಾಲಯ
7. ಶ್ರೀ ಮನಮೋಹನ್ ಸಿಂಗ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ
8. ಶ್ರೀ ಪ್ರದೀಪ್ ಕುಮಾರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ
9. ಶ್ರೀ ಸಚಿನ್ ಕುಮಾರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ

ಜೀವನ್ ರಕ್ಷಾ ಪದಕ

1. ಶ್ರೀ ನೆಲ್ಲಿ ಶ್ರೀನಿವಾಸ ರಾವ್, ಆಂಧ್ರಪ್ರದೇಶ
2. ಶ್ರೀ ವಿಕಾಸ್ ಯಾದವ್, ಬಿಹಾರ
3. ಸುಶ್ರೀ ಮನಿಶಾಬೆನ್ ಅಮರ್ಷಿಭಾಯಿ ಮಲಕಿಯಾ, ಗುಜರಾತ್
4. ಕುಮಾರಿ ದಿಯಾ ಫಾತಿಮಾ, ಕೇರಳ
5. ಶ್ರೀ ಮುಹಮ್ಮದ್ ಹಾಶಿರ್ ಎನ್ ಕೆ, ಕೇರಳ
6. ಶ್ರೀ ಕಿಶೋರ್ ಕುಮಾರ್ ಅರ್ನಿ, ಮಧ್ಯಪ್ರದೇಶ
7. ಶ್ರೀ ದಾದಾರಾವ್ ಗೋವಿಂದರಾವ್ ಪವಾರ್, ಮಹಾರಾಷ್ಟ್ರ
8. ಶ್ರೀ ಜ್ಞಾನೇಶ್ವರ ಮುಕುಂದರಾವ್ ಭೇದೋದ್ಕರ್, ಮಹಾರಾಷ್ಟ್ರ
9. ಶ್ರೀ ಕೆ. ಶಿಮ್ರೀಂಗಂ ಶಿಮ್ರೇ, ಮಣಿಪುರ
10.  ಮಾಸ್ಟರ್ ಎಲಾಂಬೋಕ್ ದಖರ್, ಮೇಘಾಲಯ
11. ಮಾಸ್ಟರ್ ಕಿಸೆನ್ ವನ್ನಿಯಾಂಗ್, ಮೇಘಾಲಯ
12. ಶ್ರೀ ಲಾಲ್ಟ್ಲಾಂನ್ ಜೋವಾ, ಮಿಜೋರಾಂ
13. ಶ್ರೀ ವೈ ಪೊಂಗ್ಬಾ, ನಾಗಾಲ್ಯಾಂಡ್
14. ಡಾ.ರಂಜನಾ ಭಂಡಾರಿ, ಒಡಿಶಾ
15. ಶ್ರೀ ಸಿ. ಅನ್ಬರಸನ್, ಪುದುಚೇರಿ
16. ಶ್ರೀ ಬಂದಕಿಂಡಿ ಶ್ರವಣ್ ಕುಮಾರ್, ತೆಲಂಗಾಣ
17. ಶ್ರೀ ಆಕಾಶ್ ಪ್ರಧಾನ್, ಪಶ್ಚಿಮ ಬಂಗಾಳ
18. ಶ್ರೀ ಕಾಳಿ ಕಿಂಕರ ಮನ್ನಾ, ಪಶ್ಚಿಮ ಬಂಗಾಳ
19. ನಾಯಕ್ ಅಜಿತ್ ಆರ್ ನಾಯರ್, ಕೇಂದ್ರ ರಕ್ಷಣಾ ಸಚಿವಾಲಯ
20. ಶ್ರೀ ಧನ್ಬೀರ್ ಸಿಂಗ್ ನೇಗಿ, ಕೇಂದ್ರ ರಕ್ಷಣಾ ಸಚಿವಾಲಯ
21. ಶ್ರೀ ಧನೇಶ್ ಚಂದ್ ಯಾದವ್, ಕೇಂದ್ರ ರಕ್ಷಣಾ ಸಚಿವಾಲಯ
22. ಸಾರ್ಜೆಂಟ್ ರಾಮ್ ಕುಮಾರ್ ಜೈಸ್ವಾಲ್, ಕೇಂದ್ರ ರಕ್ಷಣಾ ಸಚಿವಾಲಯ
23. ಶ್ರೀಮತಿ ಪಲ್ಲಬಿ ಬಿಸ್ವಾಸ್, ಕೇಂದ್ರ ರೈಲ್ವೇಸ್  ಸಚಿವಾಲಯ (ಆರ್.ಪಿ.ಎಫ್)

ಜೀವನ ರಕ್ಷಾ ಪದಕ ಸರಣಿಯ ಪ್ರಶಸ್ತಿಗಳನ್ನು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವಲ್ಲಿ ಮಾನವ ಸ್ವಭಾವದ ಯೋಗ್ಯ ಕಾರ್ಯಕ್ಕಾಗಿ ವ್ಯಕ್ತಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಸರ್ವೋತ್ತಮ ಜೀವನ ರಕ್ಷಾ ಪದಕ, ಉತ್ತಮ ಜೀವನ ರಕ್ಷಾ ಪದಕ ಮತ್ತು ಜೀವನ ರಕ್ಷಾ ಪದಕ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಪ್ರಶಸ್ತಿಯನ್ನು ಮರಣೋತ್ತರವಾಗಿಯೂ ನೀಡಬಹುದಾಗಿದೆ. ಸಮಾಜದ ಎಲ್ಲಾ ವರ್ಗದ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರು.

ಜೀವನ ರಕ್ಷಾ ಪದಕ ಪ್ರಶಸ್ತಿಯು ಒಟ್ಟಾರೆ ಪದಕ, ಕೇಂದ್ರ ಗೃಹ ಸಚಿವರು ಸಹಿ ಮಾಡಿದ ಪ್ರಮಾಣಪತ್ರ ಮತ್ತು ಒಟ್ಟು ಮೊತ್ತದ ವಿತ್ತೀಯ ಭತ್ಯೆಯ ಜೊತೆಗೆ ಅಲಂಕಾರಿಕವಾಗಿ ಅತ್ಯುತ್ತಮ ಶೃಂಗಾರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರು ಸೇರಿರುವ ಆಯಾ ಕೇಂದ್ರ ಸಚಿವಾಲಯಗಳು / ಸಂಸ್ಥೆಗಳು / ರಾಜ್ಯ ಸರ್ಕಾರದಿಂದ ಇದನ್ನು ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುತ್ತದೆ.

About Matribhumi Samachar

Check Also

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಸಭೆಯಲ್ಲಿ ವಿಶೇಷ ಚರ್ಚೆ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ …