Tuesday, December 23 2025 | 09:25:38 AM
Breaking News

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ 2025 ಜನವರಿ 27-28ರ ವರೆಗೆ ಓಮನ್‌ಗೆ ಭೇಟಿ ನೀಡಲಿದ್ದಾರೆ

Connect us on:

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು 11ನೇ ಜಂಟಿ ಆಯೋಗದ ಸಭೆ(ಜೆಸಿಎಂ)ಯಲ್ಲಿ ಭಾಗವಹಿಸಲು ಓಮನ್‌ನ ಮಸ್ಕತ್‌ಗೆ ಭೇಟಿ ನೀಡಲಿದ್ದಾರೆ. 2025 ಜನವರಿ 27-28ರ ವರೆಗೆ ನಡೆಯಲಿರುವ ಈ ಸಭೆಯಲ್ಲಿ ಓಮನ್ ಸುಲ್ತಾನ ಮತ್ತು ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ ಖಾತೆ ಸಚಿವರಾದ ಕೈಸ್ ಬಿನ್ ಮೊಹಮ್ಮದ್ ಬಿನ್ ಮೂಸಾ ಅಲ್-ಯೂಸೆಫ್  ಅವರೊಂದಿಗೆ ಗೋಯಲ್ ಭಾಗವಹಿಸಲಿದ್ದಾರೆ. ನಮ್ಮ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾದ ಓಮನ್ ಜೊತೆಗಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಿಗೆ ಭಾರತವು ನೀಡಿರುವ ಪ್ರಾಮುಖ್ಯತೆಯನ್ನು ಈ ಭೇಟಿಯು ಒತ್ತು ನೀಡುತ್ತಿದೆ. ಗಲ್ಫ್ ಸಹಕಾರ ಮಂಡಳಿ(ಜಿಸಿಸಿ)ಯ ಪ್ರಮುಖ ಪಾಲುದಾರರಲ್ಲಿ ಒಂದಾಗಿರುವ ಓಮನ್ ಜತೆ 2023-2024ರಲ್ಲಿ ಭಾರತವು 8.94 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಿನ ಮೊತ್ತದ ದ್ವಿಪಕ್ಷೀಯ ವ್ಯಾಪಾರ ಪಾಲುದಾರಿಕೆ ಹೊಂದಿದೆ.

ಭೇಟಿಯ ಸಮಯದಲ್ಲಿ, ಇಬ್ಬರು ನಾಯಕರು ವ್ಯಾಪಾರ, ಹೂಡಿಕೆ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಕುರಿತು ವ್ಯಾಪಕ ಚರ್ಚೆ ನಡೆಸುವ ನಿರೀಕ್ಷೆಯಿದೆ. ಭಾರತ-ಓಮನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಕುರಿತ ಮಾತುಕತೆಗಳು ಮುಂದುವರಿದ (ಅಡ್ವಾನ್ಸ್ಡ್) ಹಂತದಲ್ಲಿರುವುದರಿಂದ ಈ ಭೇಟಿಯ ಸಮಯದಲ್ಲಿ ಅವುಗಳಿಗೆ ಮತ್ತಷ್ಟು ವೇಗ ದೊರೆಯುವ ಸಾಧ್ಯತೆಯಿದೆ. ಎರಡೂ ಕಡೆಯವರು ವಾಣಿಜ್ಯಿಕವಾಗಿ ಮಹತ್ವದ, ಸಮತೋಲಿತ, ಸಮಾನ, ಮಹತ್ವಾಕಾಂಕ್ಷೆಯ ಮತ್ತು ಪರಸ್ಪರ ಪ್ರಯೋಜನಕಾರಿ ಸಿಇಪಿಎ ಕುರಿತು ಮಾತುಕತೆ ನಡೆಸಲಿದ್ದಾರೆ ಮತ್ತು ಅನ್ವೇಷಿಸಲಿದ್ದಾರೆ.

ಫಿಕ್ಕಿ ಮತ್ತು ಓಮನ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ನಡುವೆ ಜರುಗಲಿರುವ ಜಂಟಿ ವ್ಯಾಪಾರ ಮಂಡಳಿ ಸಭೆಯಲ್ಲಿ ಭಾಗವಹಿಸಲು ಸಚಿವರೊಂದಿಗೆ ಉದ್ಯಮ ನಿಯೋಗವೊಂದು ತೆರಳುತ್ತಿದೆ.

ಇದೇ ವೇಳೆ ಸಚಿವರಾದ ಪಿಯೂಷ್ ಗೋಯಲ್ ಅವರು ಓಮನ್ ಹಣಕಾಸು ಸಚಿವ ಹಾಗೂ ಸಿಇಪಿಎ ಸಚಿವರ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ  ಸುಲ್ತಾನ್ ಬಿನ್ ಸಲೀಂ ಅಲ್ ಹಬ್ಸಿ ಅವರನ್ನು ಮತ್ತು ವಿಶೇಷ ಆರ್ಥಿಕ ವಲಯಗಳು ಮತ್ತು ಮುಕ್ತ ವಲಯಗಳ ಸಾರ್ವಜನಿಕ ಪ್ರಾಧಿಕಾರದ ಅಧ್ಯಕ್ಷ ಶ್ರೀ. ಡಾ. ಶೇಖ್ ಅಲಿ ಬಿನ್ ಮಸೂದ್ ಅಲ್ ಸುನೈದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಜತೆಗೆ, ಓಮನ್ ಉದ್ಯಮ ಮತ್ತು ಭಾರತೀಯ ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

About Matribhumi Samachar

Check Also

ಒಮಾನ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಪ್ರಧಾನಮಂತ್ರಿ ಅವರು ಇಂದು ಮಸ್ಕತ್‌ನಲ್ಲಿ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ವಿವಿಧ ಭಾರತೀಯ ಶಾಲೆಗಳ 700ಕ್ಕೂ …