Monday, December 08 2025 | 08:51:42 PM
Breaking News

2025ರ ಜೂನ್ 27ರಂದು ‘ಎಂಎಸ್ ಎಂಇ’ ದಿನದ ಅಧ್ಯಕ್ಷತೆ ವಹಿಸಲಿರುವ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

Connect us on:

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2025ರ ಜೂನ್ 27ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ‘ಎಂಎಸ್ಎಂಇ ದಿನ 2025- ಉದ್ಯಮಿ ಭಾರತ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಶ್ರೀ ಮನೋಜ್ ಕುಮಾರ್ ಮತ್ತು ಸಚಿವಾಲಯ ಮತ್ತು ಅದರ ಅಧೀನ ಸಂಸ್ಥೆಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

2025ರ ಎಂಎಸ್ಎಂಇ ದಿನವು ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಎಂಎಸ್ಎಂಇ ವಲಯದ ಪ್ರಮುಖ ಕೊಡುಗೆಯನ್ನು ಗುರುತಿಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ಇದು ಹೆಚ್ಚು ಸ್ಥಿತಿಸ್ಥಾಪಕ, ಸ್ಪರ್ಧಾತ್ಮಕ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಎಂಎಸ್ಎಂಇ ವಲಯಕ್ಕಾಗಿ ವಿವಿಧ ಉಪಕ್ರಮಗಳ ಆರಂಭಕ್ಕೆ  ವೇದಿಕೆಯಾಗಿಯೂ ಕಾರ್ಯನಿರ್ವಹಿಸಲಿದೆ.

 ಕಾರ್ಯಕ್ರಮದ ಪ್ರಮುಖಾಂಶಗಳು: 

  • ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು, ಅತಿಸಣ್ಣ ಮತ್ತು ಸಣ್ಣ ಉದ್ಯಮ (ಎಂಎಸ್ ಇ)ಗಳಿಗೆ ಸಾಲದ ನೆರವನ್ನು ಒದಗಿಸುವಲ್ಲಿ ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ನಿಧಿ ಟ್ರಸ್ಟ್ (ಸಿಜಿಟಿಎಂಎಸ್ಇ) 25 ವರ್ಷಗಳನ್ನು ಪೂರ್ಣಗೊಳಿಸಿದ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಸಿಜಿಟಿಎಂಎಸ್ಇ ಆರಂಭವಾದಾಗಿನಿಂದ ಸಾಲ ಖಾತ್ರಿ ಯೋಜನೆ (ಕ್ರೆಡಿಟ್ ಗ್ಯಾರಂಟಿ ಸ್ಕೀಮ್-ಸಿಜಿಎಸ್) ಅಡಿಯಲ್ಲಿ 9.80 ಲಕ್ಷ ಕೋಟಿ ರೂ. ಮೌಲ್ಯದ 1.18 ಕೋಟಿಗೂ ಅಧಿಕ ಸಾಲ ಖಾತ್ರಿಗಳನ್ನು ಅನುಮೋದಿಸಿದೆ. ಕಳೆದ ಹಣಕಾಸು ವರ್ಷ 2024-25ರಲ್ಲಿಯೇ ದಾಖಲೆಯ 3 ಲಕ್ಷ ಕೋಟಿ ರೂ. ಮೌಲ್ಯದ ಕ್ರೆಡಿಟ್ ಗ್ಯಾರಂಟಿಗಳನ್ನು ವಿಸ್ತರಿಸಲಾಗಿದೆ.
  • ಗೌರವಾನ್ವಿತ ರಾಷ್ಟ್ರಪತಿಗಳು ಸಚಿವಾಲಯ ಹೊಸದಾಗಿ ಅಭಿವೃದ್ಧಿಪಡಿಸಿದ ಆನ್‌ಲೈನ್ ವಿವಾದ ಪರಿಹಾರ (ಒಡಿಆರ್) ಪೋರ್ಟಲ್ ಅನ್ನು ಅನಾವರಣಗೊಳಿಸಲಿದ್ದಾರೆ. ಅತಿಸಣ್ಣ ಮತ್ತು ಸಣ್ಣ ಉದ್ಯಮ (ಎಂಎಸ್ಇ) ಮಾರಾಟಗಾರರ ಪಾವತಿ ವಿಳಂಬಕ್ಕೆ ಸಂಬಂಧಿಸಿದ ವಿವಾದಗಳಿಂದಾಗಿ ಗಣನೀಯ ಬಂಡವಾಳವು ಸಿಲುಕಿಕೊಂಡಿರುವುದರಿಂದ(ಲಾಕ್ ಆಗಿರುವುದರಿಂದ) ಅವರ ವ್ಯವಹಾರ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯನ್ನು ನಿರ್ಬಂಧಿಸುತ್ತದೆ. ವ್ಯಾಪಾರ ಮಾಡಲು ಸುಗಮ ವಾತಾವರಣವನ್ನು ನಿರ್ಮಿಸಲು ಮತ್ತು ಎಂಎಸ್ಇ ಗಳಿಗೆ ನ್ಯಾಯವನ್ನು ಒದಗಿಸಲು, ಎಂಎಸ್ಎಂಇ ಸಚಿವಾಲಯವು ಎಂಡ್-ಟು-ಎಂಡ್ ಒಡಿಆರ್‌ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ, ಸಂಸ್ಥೆಗಳು ತಮ್ಮ ಸ್ಥಳದ ಅನುಕೂಲದಿಂದ ಪ್ರಕರಣಗಳನ್ನು ತ್ವರಿತ ಮತ್ತು ಕಡಿಮೆ ವೆಚ್ಚದಲ್ಲಿ ಪರಿಹರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
  • ಗೌರವಾನ್ವಿತ ರಾಷ್ಟ್ರಪತಿ ಅವರು ಎಂಎಸ್ಎಂಇ ಹ್ಯಾಕಥಾನ್ 5.0ಗೂ ಸಹ ಚಾಲನೆ ನೀಡಲಿದ್ದಾರೆ.  ನಂತರ ಹ್ಯಾಕಥಾನ್ 4.0ರ ಫಲಿತಾಂಶ ಘೋಷಣೆ ಮಾಡಲಾಗುವುದು. ಎಂಎಸ್ಎಂಇ ಚಾಂಪಿಯನ್ಸ್ ಯೋಜನೆಯಡಿಯಲ್ಲಿ ಎಂಎಸ್ಎಂಇ ಇನ್ನೋವೇಟಿವ್‌ನ ಇನ್ಕ್ಯುಬೇಷನ್ ಘಟಕವು ಎಂಎಸ್ಎಂಇ ಗಳಲ್ಲಿ ನಾವೀನ್ಯತೆ ಮತ್ತು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ನೋಂದಾಯಿತ ಆತಿಥ್ಯ ಸಂಸ್ಥೆಗಳ (ಹೋಸ್ಟ್ ಇನ್‌ಸ್ಟಿಟ್ಯೂಟ್‌ಗಳ-ಎಚ್ಐ ಗಳು) ಮೂಲಕ ಪ್ರತಿ ಕಲ್ಪನೆಗೆ 15 ಲಕ್ಷ ರೂ.ಗಳವರೆಗೆ ಹಣಕಾಸಿನ ಬೆಂಬಲವನ್ನು ನೀಡುವ ನಿಬಂಧನೆಯೊಂದಿಗೆ ಬಹು ವಲಯಗಳು ಮತ್ತು ಥೀಮ್‌ಗಳಲ್ಲಿ ತಮ್ಮ ಆಲೋಚನೆಗಳನ್ನು ಸಲ್ಲಿಸಲು ನಾವೀನ್ಯಕಾರರನ್ನು ಆಹ್ವಾನಿಸಲಾಗಿತ್ತು. ಹ್ಯಾಕಥಾನ್ ಆತ್ಮನಿರ್ಭರ ಭಾರತ ದೂರದೃಷ್ಟಿಗೆ ಅನುಗುಣವಾಗಿ ಹೊಸ ಆಲೋಚನೆಗಳನ್ನು ಹುಟ್ಟುಹಾಕುವುದು, ಮಾರ್ಗದರ್ಶನಕ್ಕೆ ಬೆಂಬಲ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ.
  • ಗೌರವಾನ್ವಿತ ರಾಷ್ಟ್ರಪತಿಗಳು ‘ಎಂಎಸ್ ಎಂಇ ಪತ್ರಿಕೆ’ ಎಂಬ ಇನ್ ಹೌಸ್ ಜರ್ನಲ್  ಅನ್ನು ಬಿಡುಗಡೆ ಮಾಡಲಿದ್ದಾರೆ, ಇದು ಎಂಎಸ್ಎಂಇ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಅವಕಾಶಗಳ ಕುರಿತು ಉಪಯುಕ್ತ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುತ್ತದೆ ಮತ್ತು ಎಂಎಸ್ ಎಂಇ ನಡುವೆ ಅನುಭವ ಹಂಚಿಕೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ, ‘ನಿಮ್ಮ ಸಾಲದಾತರನ್ನು ತಿಳಿದುಕೊಳ್ಳಿ’ ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಗುವುದು, ಇದು ಎಂಎಸ್ಎಂಇ ಗಳಿಗೆ ಸಾಲದ ಕುರಿತು ಮಾರ್ಗದರ್ಶನ ನೀಡುತ್ತದೆ ಮತ್ತು ಎಂಎಸ್ಎಂಇ ಗಳು ಸಾಲ ಪಡೆಯುವ ಹಕ್ಕುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

About Matribhumi Samachar

Check Also

ವಿಮಾನಯಾನ ಕಾರ್ಯಾಚರಣೆಗಳ ತ್ವರಿತ ಪುನಃಸ್ಥಾಪನೆ ಮತ್ತು ಪ್ರಯಾಣಿಕರ ಸೌಲಭ್ಯಕ್ಕಾಗಿ ಕೈಗೊಂಡ ಕ್ರಮಗಳು

ಪ್ರಸ್ತುತ ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ ಇತ್ತೀಚಿನ ‘ಇಂಡಿಗೋ’ (IndiGo) ಕಾರ್ಯಾಚರಣೆಯ ಬಿಕ್ಕಟ್ಟಿನಿಂದ ಉಂಟಾದ ವ್ಯತ್ಯಯವನ್ನು ಸರಿಪಡಿಸಲು ಮತ್ತು ಪ್ರಯಾಣಿಕರಿಗೆ ನಿರಂತರ …