ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಮರ್ಪಣೆ ಮಾಡಿದರು.
ಈ ಸಂಬಂಧ ಪ್ರಧಾನಮಂತ್ರಿಗಳು ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿದ್ದು:
“ಭಾರತ ಮಾತೆಯ ಶ್ರಮಜೀವಿ ಸುಪುತ್ರ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಜಯಂತಿ ಸಂದರ್ಭದಲ್ಲಿ ದೇಶದ ಕೋಟಿ ಕೋಟಿ ಜನರ ಪರವಾಗಿ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯ ಚಳವಳಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದ ಈ ಮಹಾನ್ ನಾಯಕ ವಿದೇಶಿ ಆಳ್ವಿಕೆಯ ವಿರುದ್ಧ ಹೋರಾಡುತ್ತಾ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರು. ಮಾತೃಭೂಮಿಗಾಗಿ ಅವರು ಮಾಡಿದ ಸಮರ್ಪಣೆ ಮತ್ತು ಸೇವೆಯನ್ನು ಯಾವಾಗಲೂ ಶ್ರದ್ಧಾಪೂರ್ವಕವಾಗಿ ಗೌರವದಿಂದ ಸ್ಮರಿಸಲಾಗುತ್ತದೆ.” ಎಂದು ಬಣ್ಣಿಸಿದ್ದಾರೆ.
Matribhumi Samachar Kannad

