Saturday, January 24 2026 | 04:01:57 AM
Breaking News

ಕೇಂದ್ರ ಹಣಕಾಸು ಸಚಿವರು ವಿಶ್ವಸಂಸ್ಥೆ ಆಯೋಜಿಸಿರುವ ಅಭಿವೃದ್ಧಿಗಾಗಿ ಹಣಕಾಸು ಕುರಿತ 4ನೇ ಅಂತಾರಾಷ್ಟ್ರೀಯ ಸಮ್ಮೇಳನ (FFD4) ವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

Connect us on:

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಜೂನ್ 30 ರಿಂದ ಜುಲೈ 5, 2025 ರವರೆಗೆ ಸ್ಪೇನ್, ಪೋರ್ಚುಗಲ್ ಮತ್ತು ಬ್ರೆಜಿಲ್‌ ಗೆ ಅಧಿಕೃತ ಭೇಟಿ ನೀಡಲಿರುವ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ.

ಸ್ಪೇನ್‌ ನ ಸೆವಿಲ್ಲೆಗೆ ಭೇಟಿ ನೀಡುವ ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವರು ವಿಶ್ವಸಂಸ್ಥೆಯು ಆಯೋಜಿಸಿರುವ ಅಭಿವೃದ್ಧಿಗಾಗಿ ಹಣಕಾಸು ಕುರಿತ ನಾಲ್ಕನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ (FFD4) ಭಾಗವಹಿಸಲಿದ್ದಾರೆ ಮತ್ತು ಭಾರತದ ಪರವಾಗಿ ಹೇಳಿಕೆ ನೀಡಲಿದ್ದಾರೆ.

ಕೇಂದ್ರ ಹಣಕಾಸು ಸಚಿವರು ಸೆವಿಲ್ಲೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವ್ಯಾಪಾರ ವೇದಿಕೆಯ ನಾಯಕತ್ವ ಶೃಂಗಸಭೆಯಲ್ಲಿ “FFD4 ಫಲಿತಾಂಶದಿಂದ ಅನುಷ್ಠಾನದವರೆಗೆ: ಸುಸ್ಥಿರ ಅಭಿವೃದ್ಧಿಗಾಗಿ ಖಾಸಗಿ ಬಂಡವಾಳದ ಸಾಮರ್ಥ್ಯವನ್ನು ಬಳಸಿಕೊಳ್ಳುವುದು” ಎಂಬ ವಿಷಯ ಕುರಿತು ಪ್ರಮುಖ ಭಾಷಣ ಮಾಡಲಿದ್ದಾರೆ. FFD4 ಸಂದರ್ಭದಲ್ಲಿ, ಶ್ರೀಮತಿ ಸೀತಾರಾಮನ್ ಅವರು ಜರ್ಮನಿ, ಪೆರು ಮತ್ತು ನ್ಯೂಜಿಲೆಂಡ್‌ ನ ಹಿರಿಯ ಸಚಿವರು ಮತ್ತು ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ.

ಪೋರ್ಚುಗಲ್‌ ನ ಲಿಸ್ಬನ್‌ ಗೆ ಭೇಟಿಯ ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವರು ಪೋರ್ಚುಗಲ್‌ ನ ಹಣಕಾಸು ಸಚಿವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ; ಅವರು ಪ್ರಮುಖ ಹೂಡಿಕೆದಾರರು ಮತ್ತು ಭಾರತೀಯ ವಲಸೆಗಾರರೊಂದಿಗೆ ಸಹ ಸಂವಾದ ನಡೆಸಲಿದ್ದಾರೆ.

ಕೇಂದ್ರ ಹಣಕಾಸು ಸಚಿವರು ರಿಯೊ ಡಿ ಜನೈರೊದಲ್ಲಿ ಭಾರತದ ಗವರ್ನರ್ ಆಗಿ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (ಎನ್‌ ಡಿ ಬಿ) ನ 10 ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ ಗಳ ಸಭೆಯಲ್ಲಿ (ಎಫ್‌ ಎಂ ಸಿ ಬಿ ಜಿ) ಸಹ ಭಾಗವಹಿಸಲಿದ್ದಾರೆ.

ಎನ್‌ ಡಿ ಬಿ ಸಭೆಗಳ ಭಾಗವಾಗಿ, ಶ್ರೀಮತಿ ಸೀತಾರಾಮನ್ ಅವರು ಎನ್‌ ಡಿ ಬಿ ಪ್ರಮುಖ ಗವರ್ನರ್‌ ಗಳ ವಿಚಾರ ಸಂಕಿರಣದಲ್ಲಿ “ಜಾಗತಿಕ ದಕ್ಷಿಣಕ್ಕಾಗಿ ಪ್ರಮುಖ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಅನ್ನು ನಿರ್ಮಿಸುವುದು” ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.

ಎನ್‌ ಡಿ ಬಿ ಸಭೆಗಳ ಹೊರತಾಗಿ, ಕೇಂದ್ರ ಹಣಕಾಸು ಸಚಿವರು ಬ್ರೆಜಿಲ್, ಚೀನಾ, ಇಂಡೋನೇಷ್ಯಾ ಮತ್ತು ರಷ್ಯಾದ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

About Matribhumi Samachar

Check Also

ಬಿ.ಎಸ್.ಎನ್.ಎಲ್ ನಿಂದ ದೇಶಾದ್ಯಂತ ಎಲ್ಲಾ ವಲಯಗಳಲ್ಲಿ ವಾಯ್ಸ್ ಓವರ್ ವೈಫೈ (VoWiFi) ಸೇವೆ ಪ್ರಾರಂಭ

ಭಾರತದ ಪ್ರಮುಖ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾದಾತ ಸಂಸ್ಥೆಯಾದ ಭಾರತ್ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್), ಹೊಸ ವರ್ಷದಂದು ವೈ-ಫೈ …