Tuesday, January 13 2026 | 02:02:24 PM
Breaking News

ಬಿ.ಎಸ್.ಎನ್.ಎಲ್ ನಿಂದ ದೇಶಾದ್ಯಂತ ಎಲ್ಲಾ ವಲಯಗಳಲ್ಲಿ ವಾಯ್ಸ್ ಓವರ್ ವೈಫೈ (VoWiFi) ಸೇವೆ ಪ್ರಾರಂಭ

Connect us on:

ಭಾರತದ ಪ್ರಮುಖ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾದಾತ ಸಂಸ್ಥೆಯಾದ ಭಾರತ್ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್), ಹೊಸ ವರ್ಷದಂದು ವೈ-ಫೈ ಕಾಲಿಂಗ್ ಎಂದೂ ಕರೆಯಲ್ಪಡುವ ವಾಯ್ಸ್ ಓವರ್ ವೈಫೈ (VoWiFi) ಅನ್ನು ದೇಶಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಲು ಹರ್ಷಿಸಿದೆ. ಈ ಸುಧಾರಿತ ಸೇವೆಯು ಈಗ ದೇಶದ ಪ್ರತಿ ಟೆಲಿಕಾಂ ವಲಯದಲ್ಲಿರುವ ಎಲ್ಲಾ ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಲಭ್ಯವಿದ್ದು ಸವಾಲಿನ ವಾತಾವರಣದಲ್ಲಿಯೂ ಸಹ ತಡೆರಹಿತ ಮತ್ತು ಉತ್ತಮ ಗುಣಮಟ್ಟದ ಸಂಪರ್ಕವನ್ನು ಖಚಿತಪಡಿಸಲಿದೆ.

ಈಗ ಈ ಸೇವೆಯು ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರು Wi-Fi ನೆಟ್‌ವರ್ಕ್ ಮೂಲಕ ಕರೆ ಮಾಡಬಹುದಾಗಿದೆ ಅಥವಾ ಸ್ವೀಕರಿಸಬಹುದಾಗಿದೆ ಮತ್ತು  ಸಂದೇಶಗಳನ್ನು ಕಳುಹಿಸಬಹುದಾಗಿದೆ ಅಥವಾ ಸ್ವೀಕರಿಸಬಹುದಾಗಿದ್ದು ಮನೆಗಳಲ್ಲಿ, ಕಚೇರಿಗಳಲ್ಲಿ, ನೆಲಮಾಳಿಗೆಯಲ್ಲಿ ಮತ್ತು ದೂರದ ಸ್ಥಳಗಳಂತಹ ದುರ್ಬಲ ಮೊಬೈಲ್ ಸಿಗ್ನಲ್ ಇರುವ ಪ್ರದೇಶಗಳಲ್ಲಿ ಸ್ಪಷ್ಟ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು VoWiFi ಖಚಿತಪಡಿಸುತ್ತದೆ.

VoWiFi ಎನ್ನುವುದು ಐ.ಎಂ.ಎಸ್ ಆಧಾರಿತ ಸೇವೆಯಾಗಿದ್ದು, ಇದು Wi-Fi ಮತ್ತು ಮೊಬೈಲ್ ಜಾಲಗಳ ನಡುವೆ ಸರಾಗ ವರ್ಗಾವಣೆ ಸಾಧ್ಯವಾಗಿಸಲಿದೆ. ಥರ್ಡ್ ಪಾರ್ಟಿ ಅಪ್ಲಿಕೇಶನ್‌ ಗಳ ಅಗತ್ಯವಿಲ್ಲದೆ, ಗ್ರಾಹಕರ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಫೋನ್ ಡಯಲರ್ ಬಳಸಿ ಕರೆಗಳನ್ನು ಮಾಡಬಹುದಾಗಿದೆ.

ಬಿ.ಎಸ್.ಎನ್.ಎಲ್ ಭಾರತ್ ಫೈಬರ್ ಅಥವಾ ಇತರ ಬ್ರಾಡ್‌ ಬ್ಯಾಂಡ್ ಸೇವೆಗಳು ಸೇರಿದಂತೆ ಸ್ಥಿರವಾದ ವೈ-ಫೈ ಸಂಪರ್ಕ ಲಭ್ಯವಿದ್ದರೆ, ವಿಶೇಷವಾಗಿ ಸೀಮಿತ ಮೊಬೈಲ್ ವ್ಯಾಪ್ತಿ ಇರುವ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಈ ಸೇವೆ ಅನುಕೂಲಕರವಾಗಿರಲಿದೆ. ನೆಟ್‌ವರ್ಕ್ ದಟ್ಟಣೆಯನ್ನು ಕಡಿಮೆ ಮಾಡಲು ಪೂರಕವಾಗುವ ಜೊತೆಗೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ವೈ-ಫೈ ಕರೆ ಮಾಡಲು VoWiFi ಸಹಕಾರಿಯಾಗಿದೆ.

VoWiFi ಸೇವೆಯ ಆರಂಭವು ಬಿ.ಎಸ್.ಎನ್.ಎಲ್ ಜಾಲದ ಆಧುನೀಕರಣ ಕಾರ್ಯದಲ್ಲಿ ಮತ್ತು ದೇಶಾದ್ಯಂತ, ವಿಶೇಷವಾಗಿ ದೂರವಾಣಿ ಸೇವೆ ವಂಚಿತ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುವ ಬದ್ಧತೆಯ ಕಾರ್ಯದಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಬಹುತೇಕ ಆಧುನಿಕ ಸ್ಮಾರ್ಟ್‌ ಫೋನ್‌ ಗಳು VoWiFi ಬೆಂಬಲಿತವಾಗಿದೆ. ಗ್ರಾಹಕರು ತಮ್ಮ ಹ್ಯಾಂಡ್‌ ಸೆಟ್ ನ ಸೆಟ್ಟಿಂಗ್‌ ನಲ್ಲಿ ಮಾತ್ರ Wi-Fi ಕರೆ ಮಾಡುವಿಕೆಯನ್ನು ಸಕ್ರಿಯಗೊಳಿಸಬೇಕಿದೆ. ಮೊಬೈಲ್ ಸಾಧನ ಹೊಂದಿಸಲು ಮತ್ತು ಬೆಂಬಲಕ್ಕಾಗಿ, ಗ್ರಾಹಕರು ಹತ್ತಿರದ ಬಿ.ಎಸ್.ಎನ್.ಎಲ್ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಬಿ.ಎಸ್.ಎನ್.ಎಲ್ ಸಹಾಯವಾಣಿ ಸಂಖ್ಯೆ 18001503 ಅನ್ನು ಸಂಪರ್ಕಿಸಬಹುದು.

About Matribhumi Samachar

Check Also

2025ರ ಡಿಸೆಂಬರ್ 1 ರಿಂದ ಜನ ಸಮರ್ಥ್ ಪೋರ್ಟಲ್ ಮೂಲಕ ರಫ್ತುದಾರರಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ (ಸಿ.ಜಿ.ಎಸ್.ಇ.) ಕಾರ್ಯರೂಪಕ್ಕೆ ಬಂದಿದೆ

ಭಾರತೀಯ ಆರ್ಥಿಕತೆಯ ನಿರ್ಣಾಯಕ ಆಧಾರಸ್ತಂಭವಾಗಿರುವ ರಫ್ತುಗಳು, ಜಿ.ಡಿ.ಪಿ. ಯ ಸುಮಾರು 21% ಮತ್ತು ಬಲವಾದ ವಿದೇಶಿ ವಿನಿಮಯ ಒಳಹರಿವುಗಳನ್ನು ಹೊಂದಿವೆ. …