Thursday, December 11 2025 | 09:53:38 PM
Breaking News

ಪದ್ಮ ಪ್ರಶಸ್ತಿ 2026ಗೆ ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ 2025 ಆಗಸ್ಟ್‌ 15ರವರೆಗೆ ವಿಸ್ತರಣೆ

Connect us on:

ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು2025ರ ಜುಲೈ 31 ರಿಂದ 2025ರ ಆಗಸ್ಟ್ 15 ರವರೆಗೆ ವಿಸ್ತರಿಸಲಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್‌ನಲ್ಲಿ (https://awards.gov.in) ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುವುದು. 2026ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿಗಳು-2026 ರ ನಾಮನಿರ್ದೇಶನಗಳು/ಶಿಫಾರಸುಗಳ ಸಲ್ಲಿಕೆ ಕಾರ್ಯ 2025ರ ಮಾರ್ಚ್ 15 ರಂದು ಆರಂಭವಾಗಿದೆ.

ಪದ್ಮ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಸ್ಥಾನ ಪಡೆದಿವೆ. 1954ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವುದು. ಈ ಪ್ರಶಸ್ತಿಯು ‘ಅತ್ಯುತ್ತಮ ಕಾರ್ಯ’ವನ್ನು ಗುರುತಿಸಲು ಪ್ರಯತ್ನಿಸುತ್ತದೆ ಮತ್ತು ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಮುಂತಾದ ಎಲ್ಲಾ ಕ್ಷೇತ್ರಗಳು/ವಿಭಾಗಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು/ಸೇವೆಗಾಗಿ ನೀಡಲಾಗುವುದು.ಯಾವುದೇ ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗ ಭೇದವಿಲ್ಲದ ಎಲ್ಲಾ ವ್ಯಕ್ತಿಗಳೂ ಸಹ ಈ ಪ್ರಶಸ್ತಿಗಳಿಗೆ ಅರ್ಹರಾಗಿದ್ದಾರೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವವರೂ ಸೇರಿದಂತೆ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಲ್ಲ.

ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿಗಳನ್ನು “ಜನರ ಪದ್ಮ”ವನ್ನಾಗಿ ಪರಿವರ್ತಿಸಲು ಬದ್ಧವಾಗಿದೆ. ಆದ್ದರಿಂದ, ಎಲ್ಲಾ ನಾಗರಿಕರು ಸ್ವಯಂ ನಾಮನಿರ್ದೇಶನ ಸೇರಿದಂತೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ಮಾಡುವಂತೆ ಕೋರಲಾಗಿದೆ. ಮಹಿಳೆಯರು, ಸಮಾಜದ ದುರ್ಬಲ ವರ್ಗಗಳು, ಎಸ್‌ಸಿ ಮತ್ತು ಎಸ್‌ಟಿಗಳು, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪ್ರತಿಭಾನ್ವಿತ ವ್ಯಕ್ತಿಗಳನ್ನು ಗುರುತಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಲು ಅವಕಾಶವಿದೆ.

ನಾಮನಿರ್ದೇಶನಗಳು/ಶಿಫಾರಸುಗಳನ್ನು ಮೇಲೆ ತಿಳಿಸಲಾದ ಪೋರ್ಟಲ್‌ನಲ್ಲಿ ಲಭ್ಯವಿರುವ ಸ್ವರೂಪದಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸಂಬಂಧಿಸಿದ ವಿವರಗಳು ಒಳಗೊಂಡಿರಬೇಕು. ಅದರಲ್ಲಿ ನಿರೂಪಣಾ ರೂಪದಲ್ಲಿ ಉಲ್ಲೇಖ (ಗರಿಷ್ಠ 800 ಪದಗಳು) ಸೇರಿರಬೇಕು, ಇದು ಶಿಫಾರಸು ಮಾಡಲಾದ ವ್ಯಕ್ತಿಯ ಆಯಾ ಕ್ಷೇತ್ರ/ವಿಭಾಗದ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು/ಸೇವೆಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಈ ಕುರಿತಾದ ವಿವರಗಳು ಗೃಹ ವ್ಯವಹಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ (https://mha.gov.in) ಮತ್ತು ಪದ್ಮ ಪ್ರಶಸ್ತಿಗಳ ಪೋರ್ಟಲ್‌ನಲ್ಲಿ (https://padmaawards.gov.in) ‘ಪ್ರಶಸ್ತಿಗಳು ಮತ್ತು ಪದಕಗಳು’ ಶೀರ್ಷಿಕೆಯಡಿಯಲ್ಲಿ ಲಭ್ಯವಿದೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳು https://padmaawards.gov.in/AboutAwards.aspx  ಲಿಂಕ್‌ನೊಂದಿಗೆ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

About Matribhumi Samachar

Check Also

2023 ಮತ್ತು 2024ರ ರಾಷ್ಟ್ರೀಯ ಕರಕುಶಲ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (2025ರ ಡಿಸೆಂಬರ್ 9) ನವದೆಹಲಿಯಲ್ಲಿ 2023 ಮತ್ತು 2024 ರ …