Friday, January 09 2026 | 04:43:04 AM
Breaking News

ಫಿಟ್ ಇಂಡಿಯಾ ಸೈಕ್ಲಿಂಗ್ ಮಂಗಳವಾರ ಅಭಿಯಾನ:ಅದ್ಧೂರಿ ದೇಶವ್ಯಾಪಿ ಚಾಲನೆ

Connect us on:

ಮಾನ್ಯ ಕೇಂದ್ರ ಯುವ ಜನ ಮತ್ತು ಕ್ರೀಡಾ ಸಚಿವರು 2024 ಡಿಸೆಂಬರ್ 17ರಂದು ದೆಹಲಿಯಲ್ಲಿ ಫಿಟ್ ಇಂಡಿಯಾ ಸೈಕ್ಲಿಂಗ್ ಮಂಗಳವಾರ ಅಭಿಯಾನವನ್ನು ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಚಳುವಳಿಯ ಭಾಗವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮವು ಸೈಕ್ಲಿಂಗ್ ಅನ್ನು ನಿಯಮಿತವಾದ ಫಿಟ್ನೆಸ್ ಚಟುವಟಿಕೆಯಾಗಿಯೂ, ನಾಗರಿಕರ ನಡುವೆ ದೀರ್ಘಕಾಲಿಕ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರತಿಸ್ಥಾಪಿಸಲು ಪ್ರೋತ್ಸಾಹಿಸುವುದಕ್ಕೆ ಉದ್ದೇಶಿತವಾಗಿದೆ.

ಈ ಸಂಧರ್ಭದಲ್ಲಿ, ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ), ಎನ್‌ಎಸ್‌ಎಸ್‌ಸಿ, ಬೆಂಗಳೂರು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ 15 ವಿವಿಧ ಸ್ಥಳಗಳಲ್ಲಿ ಸೈಕ್ಲಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಿತು. 1200 ಕ್ಕೂ ಹೆಚ್ಚು ಸ್ಪರ್ಧಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು, ಇದರಲ್ಲಿ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಪಾರಾ ಕ್ರೀಡಾಪಟುಗಳು, ಅಧಿಕಾರಿ ಮತ್ತು ಸಾಮಾನ್ಯ ಸಾರ್ವಜನಿಕರು ಸೇರಿದ್ದರು.

ದೇಶವ್ಯಾಪಿ ಪ್ರಾರಂಭದ ಭಾಗವಾಗಿ ಕೆಳಗಿನ ಸ್ಥಳಗಳು ಸೇರಿವೆ: 

– ಹೈದರಾಬಾದ್, ತೆಲಂಗಾಣ 

– ಎಲುರು, ಆಂಧ್ರ ಪ್ರದೇಶ 

– ಪೋರ್ಟ್ ಸ್ಟೇಡಿಯಂ, ವಿಶಾಖಪಟ್ಟಣಂ, ಆಂಧ್ರ ಪ್ರದೇಶ 

– ZPHS ಶಾಲೆ, ಗೋಪಾಲ ಪಟ್ಣಂ, ವಿಶಾಖಪಟ್ಟಣಂ, ಆಂಧ್ರ ಪ್ರದೇಶ 

– ZPHS ತೋಟಗರುವು, ವಿಶಾಖಪಟ್ಟಣಂ, ಆಂಧ್ರ ಪ್ರದೇಶ 

-ಕರ್ನೂಲ್, ಆಂಧ್ರ ಪ್ರದೇಶ 

– ಮಡಿಕೇರಿ, ಕರ್ನಾಟಕ 

– ಧಾರವಾಡ, ಕರ್ನಾಟಕ 

– ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ಆಂಧ್ರ ಪ್ರದೇಶ 

– ಐಐಎಸ್‌ಇಆರ್, ತಿರುಪತಿ, ಆಂಧ್ರ ಪ್ರದೇಶ 

– ಜ್ಞಾನಭಾರತಿ, ಮೈಸೂರು ರಸ್ತೆ, ಬೆಂಗಳೂರು 

– ಶಾಂತಿನಗರ, ಬೆಂಗಳೂರು 

– ಮೈಸೂರು ನಗರ, ಕರ್ನಾಟಕ 

– ಆದಿತ್ಯ ಮೆಹ್ತಾ ಫೌಂಡೇಶನ್, ತೆಲಂಗಾಣ 

– ಮುಲುಗು, ತೆಲಂಗಾಣ

ಬೆಂಗಳೂರು ನಗರ ಕಾರ್ಯಕ್ರಮದ ಪ್ರಮುಖ ಅಂಶಗಳು:

ಬೆಂಗಳೂರು ನಗರದಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರು, ಒಲಿಂಪಿಯನ್‌ಗಳು, ಮತ್ತು ಅರ್ಜುನಾ ಪುರಸ್ಕೃತರಾದ ಅವಿನಾಶ್ ಸಾಬ್ಲೆ ಮತ್ತು ಪಾರುಲ್ ಚೌಧರಿ ಧ್ವಜ ಹಾರಿಸಿ ಸೈಕ್ಲಿಂಗ್ ರ‍್ಯಾಲಿಯನ್ನು ಪ್ರಾರಂಭಿಸಿದರು. ಈ ರ‍್ಯಾಲಿ ಬೆಂಗಳೂರಿನ ಪ್ರಮುಖ ಸ್ಥಳಗಳಾದ ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ರಸ್ತೆ, ಮತ್ತು ಆರ್‌ಆರ್ ನಗರವನ್ನು ಒಳಗೊಂಡ ಮಾರ್ಗಗಳಲ್ಲಿ ಸಾಗಿತು. ಸುಮಾರು 50 ಜನರು ಈ ರ‍್ಯಾಲಿ ಯಲ್ಲಿ ಭಾಗವಹಿಸಿದರು.

ಶಾಂತಿನಗರದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮವನ್ನು ಪ್ರಸಿದ್ಧ ಹಾಕಿ ಆಟಗಾರ, ಅರ್ಜುನಾ ಪುರಸ್ಕೃತ ಮತ್ತು ಒಲಿಂಪಿಯನ್ ಶ್ರೀ ರಘುನಾಥ್ ಪ್ರಾರಂಭಿಸಿದರು. 100 ಕ್ಕೂ ಹೆಚ್ಚು ಜನರು ಈ ಸೈಕ್ಲಿಂಗ್ ರ‍್ಯಾಲಿಯಲ್ಲಿ ಭಾಗವಹಿಸಿದರು. ರ‍್ಯಾಲಿಯು ಶಾಂತಿನಗರ, ರಿಚ್ಮಂಡ್ ರಸ್ತೆ, ಲ್ಯಾಂಗ್‌ಫೋರ್ಡ್ ಟೌನ್ ಪ್ರದೇಶಗಳನ್ನು ಆವರಿಸಿತು.

ಸೈಕ್ಲಿಂಗ್ ಮಂಗಳವಾರ ಅಭಿಯಾನದ ಉದ್ದೇಶಗಳು: 

1. ಸೈಕ್ಲಿಂಗ್ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೈಕ್ಲಿಂಗ್ಅನ್ನು ಮುಖ್ಯ ಆರೋಗ್ಯಕರ ಚಟುವಟಿಕೆಯಾಗಿಸಲು ಉತ್ತೇಜನ ನೀಡುವುದು.

2. ಆರೋಗ್ಯವನ್ನು ಉತ್ತೇಜಿಸುವುದು: ಎಲ್ಲಾ ವಯಸ್ಸಿನವರು ಮತ್ತು ವೃತ್ತಿಯವರು ತಮ್ಮ ದಿನನಿತ್ಯದ ಜೀವನಶೈಲಿಗೆ ಸೈಕ್ಲಿಂಗ್ ಅನ್ನು ಸೇರಿಸಿಕೊಳ್ಳಲು ಪ್ರೋತ್ಸಾಹಿಸುವುದು.

3. ಸುಸ್ಥಿರತೆಯನ್ನು ಬೆಂಬಲಿಸಲು: ಹಸಿರು ಸಾರಿಗೆ ಪರ್ಯಾಯವಾಗಿ ಸೈಕ್ಲಿಂಗ್‌ನ ಪರಿಸರ ಪ್ರಯೋಜನಗಳನ್ನು ಎತ್ತಿಹಿಡಿಯಲು.

About Matribhumi Samachar

Check Also

ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ 2025ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬಿಲ್ಲುಗಾರಿಕಾ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ

2025ರ ಏಷ್ಯನ್ ಬಿಲ್ಲುಗಾರಿಕಾ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬಿಲ್ಲುಗಾರಿಕೆ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ …