Monday, December 08 2025 | 03:21:32 AM
Breaking News

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರು ಪಿ.ಎಲ್.ಐ. ಯೋಜನೆ 1.1 ಅನ್ನು ಪ್ರಾರಂಭಿಸಲಿದ್ದಾರೆ ಮತ್ತು ನಾಳೆಯಿಂದ ಅರ್ಜಿಗಳನ್ನು ಆಹ್ವಾನಿಸಲಿದ್ದಾರೆ

Connect us on:

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಉಕ್ಕು ಉದ್ಯಮಕ್ಕಾಗಿ ‘ಪಿ.ಎಲ್‌.ಐ ಯೋಜನೆ 1.1’ ಅನ್ನು ಪ್ರಾರಂಭಿಸಲಿದ್ದಾರೆ ಮತ್ತು ಜನವರಿ ೦6, 2025 ರಂದು ಹೊಸದಿಲ್ಲಿಯ ಮೌಲಾನಾ ಆಜಾದ್ ರಸ್ತೆಯ ವಿಜ್ಞಾನ ಭವನದ ಹಾಲ್ ಸಂಖ್ಯೆ 1 ರಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅರ್ಜಿಗಳನ್ನು ಕರೆಯುತ್ತಾರೆ.

ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ – ಪಿ.ಎಲ್‌.ಐ.) ಪರಿಕಲ್ಪನೆಯನ್ನು 2020 ರ ಜಾಗತಿಕ ಲಾಕ್‌ ಡೌನ್‌ ಗಳ ಸಮಯದಲ್ಲಿ ಕಲ್ಪಿಸಲಾಗಿದೆ. ಇದು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಆರಂಭದಲ್ಲಿ ಈ ಯೋಜನೆಯನ್ನು ಮೂರು ವಲಯಗಳಲ್ಲಿ ಪ್ರಾರಂಭಿಸಲಾಯಿತು.ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ – ಪಿ.ಎಲ್‌.ಐ.)ಯೋಜನೆಯನ್ನು ನಂತರ ನವೆಂಬರ್ 2020 ರಲ್ಲಿ ಉಕ್ಕನ್ನು ಕೂಡ ವ್ಯಾಪ್ತಿಯಲ್ಲಿ ಸೇರಿಸಲು ವಿಸ್ತರಿಸಲಾಯಿತು.

ಸ್ಟೀಲ್ ಸಚಿವಾಲಯದ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ – ಪಿ.ಎಲ್‌.ಐ.) ಯೋಜನೆಯಲ್ಲಿ ₹27,106 ಕೋಟಿ ಹೂಡಿಕೆಯಲ್ಲಿ ಬದ್ಧತೆಯನ್ನು ಆಕರ್ಷಿಸಿದೆ. 14,760 ನೇರ ಉದ್ಯೋಗ ಮತ್ತು ಯೋಜನೆಯಲ್ಲಿ ಗುರುತಿಸಲಾದ 7.90 ಮಿಲಿಯನ್ ಟನ್ ‘ಸ್ಪೆಷಾಲಿಟಿ ಸ್ಟೀಲ್’ನ ಅಂದಾಜು ಉತ್ಪಾದನೆ ಲೆಕ್ಕ ಹಾಕಲಾಗಿದೆ.  ನವೆಂಬರ್ 2024 ರ ಹೊತ್ತಿಗೆ, ಕಂಪನಿಗಳು ಈಗಾಗಲೇ ₹18,300 ಕೋಟಿ ಹೂಡಿಕೆ ಮಾಡಿ 8,660 ಉದ್ಯೋಗಗಳನ್ನು ಸೃಷ್ಟಿಸಿವೆ. ಕೇಂದ್ರ ಉಕ್ಕಿನ ಸಚಿವಾಲಯವು ಭಾಗವಹಿಸುವ ಕಂಪನಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ, ಹೆಚ್ಚಿನ ಭಾಗವಹಿಸುವಿಕೆಯನ್ನು ಆಕರ್ಷಿಸಲು ಯೋಜನೆಯನ್ನು ಮತ್ತೊಮ್ಮೆ ನಡೆಸಿಕೊಡುವ ಅವಕಾಶವಿದೆ.

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

 

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ವಿಮಾನಯಾನ ಕಾರ್ಯಾಚರಣೆಗಳ ತ್ವರಿತ ಪುನಃಸ್ಥಾಪನೆ ಮತ್ತು ಪ್ರಯಾಣಿಕರ ಸೌಲಭ್ಯಕ್ಕಾಗಿ ಕೈಗೊಂಡ ಕ್ರಮಗಳು

ಪ್ರಸ್ತುತ ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ ಇತ್ತೀಚಿನ ‘ಇಂಡಿಗೋ’ (IndiGo) ಕಾರ್ಯಾಚರಣೆಯ ಬಿಕ್ಕಟ್ಟಿನಿಂದ ಉಂಟಾದ ವ್ಯತ್ಯಯವನ್ನು ಸರಿಪಡಿಸಲು ಮತ್ತು ಪ್ರಯಾಣಿಕರಿಗೆ ನಿರಂತರ …