Friday, July 24 2026 | 09:35:25 PM
Breaking News

ಮಕರ ಸಂಕ್ರಾಂತಿ, ಉತ್ತರಾಯಣ ಮತ್ತು ಮಾಘ ಬಿಹು ಪ್ರಯುಕ್ತ ಸರ್ವರಿಗೂ ಪ್ರಧಾನಮಂತ್ರಿ ಶುಭಾಶಯ

Connect us on:

ಮಕರ ಸಂಕ್ರಾಂತಿ, ಉತ್ತರಾಯಣ ಮತ್ತು ಮಾಘ ಬಿಹು ಹಬ್ಬದ ಪ್ರಯುಕ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಎಕ್ಸ್‌ ನಲ್ಲಿ ಪ್ರತ್ಯೇಕ ಪೋಸ್ಟ್‌ ಗಳಲ್ಲಿ ಅವರು ಹೀಗೆ ಬರೆದಿದ್ದಾರೆ:

“ಮಕರ ಸಂಕ್ರಾಂತಿ ಅಂಗವಾಗಿ ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳು. ಸೂರ್ಯನಿಗೆ ಸಮರ್ಪಿತವಾದ ಈ ಪವಿತ್ರ ಉತ್ತರಾಯಣ ಕಾಲವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಹೊಸ ಉತ್ಸಾಹವನ್ನು ತುಂಬಲಿ. ”

“ಈ ಪವಿತ್ರ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಹಬ್ಬ ನಿಮ್ಮೆಲ್ಲರ ಜೀವನದಲ್ಲಿ ಹೊಸ ಉತ್ಸಾಹ, ಸಂತೋಷ ಮತ್ತು ಸಮೃದ್ಧಿ ನೀಡಲಿ….!!!”

“ಅಮೋಘ ಉತ್ತರಾಯಣ ನಿಮ್ಮದಾಗಲಿ! ಈ ಹಬ್ಬವು ಎಲ್ಲರ ಜೀವನದಲ್ಲೂ ಯಶಸ್ಸು ಮತ್ತು ಸಂತೋಷವನ್ನು ತರಲಿ.”

“ಮಾಘ ಬಿಹು ಶುಭಾಶಯಗಳು! ನಾವು ಪ್ರಕೃತಿಯ ಸಮೃದ್ಧಿ, ಸುಗ್ಗಿಯ ಸಂತಸ ಮತ್ತು ಒಗ್ಗಟ್ಟಿನ ಉತ್ಸಾಹವನ್ನು ಸಂಭ್ರಮಿಸುತ್ತೇವೆ. ಈ ಹಬ್ಬವು ಸಂತೋಷ ಮತ್ತು ಒಗ್ಗಟ್ಟಿನ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ.

“ಮಾಘ ಬಿಹು ಅಂಗವಾಗಿ ಶುಭ ಹಾರೈಕೆಗಳು! ಪ್ರಕೃತಿಯ ಸಮೃದ್ಧತೆ, ಸುಗ್ಗಿಯ ಸಂಭ್ರಮ ಮತ್ತು ಭ್ರಾತೃತ್ವದ ಮನೋಭಾವವನ್ನು ಆಚರಿಸುತ್ತೇವೆ. ಈ ಹಬ್ಬವು ಸಂತೋಷ ಮತ್ತು ಭ್ರಾತೃತ್ವದ ಮನೋಭಾವವನ್ನು ಇನ್ನಷ್ಟು ಉತ್ತೇಜಿಸಲಿ.”

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

 

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ಆನ್‌ಲೈನ್‌ನಲ್ಲಿ ಟ್ರಾಫಿಕ್ ಇ-ಚಾಲನ್ ಪರಿಶೀಲಿಸುವುದು ಮತ್ತು ಪಾವತಿಸುವುದು ಹೇಗೆ? (ಸಂಪೂರ್ಣ ಮಾಹಿತಿ)

ರಸ್ತೆ ನಿಯಮಗಳನ್ನು ಉಲ್ಲಂಘಿಸಿದಾಗ ಸಂಚಾರ ಪೊಲೀಸರು ಡಿಜಿಟಲ್ ರೂಪದಲ್ಲಿ ಇ-ಚಾಲನ್ (e-Challan) ಜಾರಿಗೊಳಿಸುತ್ತಾರೆ. ಇಂದು ನಿಮ್ಮ ವಾಹನದ ಮೇಲೆ ಯಾವುದೇ …