Wednesday, December 10 2025 | 10:05:52 PM
Breaking News

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಪ್ರಕೃತಿ ವಿಕೋಪಗಳು ಮತ್ತು ವಿಪತ್ತುಗಳ ಸಮಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಜೊತೆಯಾಗಿ ನಿಂತಿದೆ

Connect us on:

2023ರ ಪ್ರವಾಹ, ಭೂಕುಸಿತ, ಮೇಘಸ್ಫೋಟದ ನಂತರ ಹಿಮಾಚಲ ಪ್ರದೇಶ ರಾಜ್ಯಕ್ಕೆ ಚೇತರಿಕೆ ಮತ್ತು ಪುನರ್ ನಿರ್ಮಾಣ ಯೋಜನೆಗೆ ಒಟ್ಟು 2006.40 ಕೋಟಿ ರೂ.ಗಳನ್ನು  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಅನುಮೋದಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್) ಅಡಿಯಲ್ಲಿ ಚೇತರಿಕೆ ಮತ್ತು ಪುನರ್ನಿರ್ಮಾಣ ನಿಧಿ ವಿಭಾಗದಿಂದ ರಾಜ್ಯಕ್ಕೆ ಆರ್ಥಿಕ ಸಹಾಯದ ಪ್ರಸ್ತಾವನೆಯನ್ನು ಹಣಕಾಸು ಸಚಿವರು, ಕೃಷಿ ಸಚಿವರು ಮತ್ತು ನೀತಿ ಆಯೋಗದ ಉಪಾಧ್ಯಕ್ಷರನ್ನು ಒಳಗೊಂಡ ಸಮಿತಿಯು ಪರಿಗಣಿಸಿದೆ.

2023ರ ಮಳೆಗಾಲದಲ್ಲಿ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತಗಳಿಂದ ಉಂಟಾದ ಹಾನಿ ಮತ್ತು ವಿನಾಶದಿಂದಾಗಿ ಹಿಮಾಚಲ ಪ್ರದೇಶಕ್ಕೆ ಚೇತರಿಕೆ ಮತ್ತು ಪುನರ್ ನಿರ್ಮಾಣ ಚಟುವಟಿಕೆಗಳಲ್ಲಿ ಸಹಾಯ ಮಾಡಲು ಉನ್ನತ ಮಟ್ಟದ ಸಮಿತಿಯು 2006.40 ಕೋಟಿ ರೂ.ಗಳ ಚೇತರಿಕೆ ಯೋಜನೆಯನ್ನು ಅನುಮೋದಿಸಿದೆ. ಇದರಲ್ಲಿ, ಕೇಂದ್ರದ ಪಾಲು ರಾಷ್ಟ್ರೀಯ ವಿಪತ್ತು ನಿರ್ವಹಣಾ  ನಿಧಿಯ ಅಡಿಯಲ್ಲಿ ಚೇತರಿಕೆ ಮತ್ತು ಪುನರ್ ನಿರ್ಮಾಣ ನಿಧಿಯಿಂದ 1504.80 ಕೋಟಿ ರೂ.ಗಳು  ಇರಲಿದೆ.  ಇದಕ್ಕೂ ಮುನ್ನ, ಈ ವಿಪತ್ತಿನಿಂದ ಹಾನಿಗೊಳಗಾದ ಹಿಮಾಚಲ ಪ್ರದೇಶಕ್ಕೆ ಪರಿಹಾರ ಕಾರ್ಯಗಳಿಗಾಗಿ ಗೃಹ ಸಚಿವಾಲಯವು ಡಿಸೆಂಬರ್ 12, 2023 ರಂದು ಎನ್.ಡಿ.ಆರ್.ಎಫ್   ನಿಂದ 633.73 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಸಹಾಯವನ್ನು ಅನುಮೋದಿಸಿತ್ತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಪ್ರಕೃತಿ ವಿಕೋಪಗಳು ಮತ್ತು ವಿಪತ್ತುಗಳ ಸಮಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಜೊತೆಯಾಗಿ   ನಿಲ್ಲುತ್ತದೆ. ವಿಪತ್ತಿನಿಂದ  ಚೇತರಿಕೆಯ   ಭಾರತದ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಈಡೇರಿಸಲು, ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯವು ದೇಶದಲ್ಲಿ ವಿಪತ್ತುಗಳ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿ ವಿಪತ್ತು ಅಪಾಯ ಕಡಿತ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ವಿಪತ್ತುಗಳ ಸಮಯದಲ್ಲಿ ಯಾವುದೇ ಹೆಚ್ಚಿನ ಜೀವ ಮತ್ತು ಆಸ್ತಿಯ ನಷ್ಟವನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಜೋಶಿಮಠ ದುರಂತದ ನಂತರ ಉತ್ತರಾಖಂಡಕ್ಕೆ 1658.17 ಕೋಟಿ ರೂ. ಮತ್ತು 2023ರ ಜಿ ಎಲ್ ಒ ಎಫ್ ಘಟನೆಯ ನಂತರ ಸಿಕ್ಕಿಂಗೆ 555.27 ಕೋಟಿ ರೂ.ಗಳ ಚೇತರಿಕೆ ಯೋಜನೆಗಳನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ.

ಇದಲ್ಲದೆ, ನಗರ ಪ್ರವಾಹ (ರೂ. 3075.65 ಕೋಟಿ), ಭೂಕುಸಿತ (ರೂ. 1000 ಕೋಟಿ), ಜಿಎಲ್ ಒಎಫ್ (ರೂ. 150 ಕೋಟಿ), ಕಾಳ್ಗಿಚ್ಚು (ರೂ. 818.92 ಕೋಟಿ), ಮಿಂಚು (ರೂ. 186.78 ಕೋಟಿ) ಮತ್ತು ಬರ (ರೂ. 2022.16 ಕೋಟಿ) ಪ್ರದೇಶಗಳಲ್ಲಿನ ಹಲವಾರು ವಿಪತ್ತುಗಳ ಅಪಾಯಗಳನ್ನು ತಗ್ಗಿಸಲು ಕೇಂದ್ರ ಸರ್ಕಾರವು 7253.51 ಕೋಟಿ ರೂ.ಗಳ ಒಟ್ಟಾರೆ ಆರ್ಥಿಕ ವೆಚ್ಚದೊಂದಿಗೆ ಹಲವಾರು ಅಪಾಯ ತಗ್ಗಿಸುವ ಯೋಜನೆಗಳನ್ನು ಅನುಮೋದಿಸಿದೆ.

ಈ ಹೆಚ್ಚುವರಿ ನೆರವು ರಾಜ್ಯಗಳ ವಿಲೇವಾರಿಯಲ್ಲಿ ಈಗಾಗಲೇ ಇರಿಸಲಾಗಿರುವ ರಾಜ್ಯ ವಿಪತ್ತು ನಿರ್ವಹಣಾ  ನಿಧಿಯಲ್ಲಿ (ಎಸ್.ಡಿ.ಆರ್.ಎಫ್) ಕೇಂದ್ರವು ರಾಜ್ಯಗಳಿಗೆ ಬಿಡುಗಡೆ ಮಾಡಿದ ನಿಧಿಗಿಂತ ಹೆಚ್ಚಾಗಿದೆ. 2024-25ನೇ ಹಣಕಾಸು ವರ್ಷದಲ್ಲಿ, ಕೇಂದ್ರ ಸರ್ಕಾರವು ಎಸ್,ಡಿ.ಆರ್.ಎಫ್.  ಅಡಿಯಲ್ಲಿ 28 ರಾಜ್ಯಗಳಿಗೆ 20,264.40 ಕೋಟಿ ರೂ. ಮತ್ತು ಎನ್.ಡಿ.ಆರ್.ಎಫ್  ಅಡಿಯಲ್ಲಿ 19 ರಾಜ್ಯಗಳಿಗೆ 5,160.76 ಕೋಟಿ ರೂ. ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ, 19 ರಾಜ್ಯಗಳಿಗೆ ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎಸ್.ಡಿ.ಎಂ.ಎಫ್.) 4984.25 ಕೋಟಿ ರೂ. ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎನ್..ಡಿ.ಎಂ.ಎಫ್.) 8 ರಾಜ್ಯಗಳಿಗೆ 719.72 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

About Matribhumi Samachar

Check Also

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಸಭೆಯಲ್ಲಿ ವಿಶೇಷ ಚರ್ಚೆ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ …