Thursday, December 25 2025 | 08:55:53 AM
Breaking News

ಪರಂಪರೆಯನ್ನು ಸಂಧಿಸಿದ ಯೋಗ: ಎ.ಎಸ್.ಐ. (ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ) ಸ್ಮಾರಕಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Connect us on:

ಅಂತಾರಾಷ್ಟ್ರೀಯ ಯೋಗ ದಿನವನ್ನು  ಭಾರತದಾದ್ಯಂತ ಭವ್ಯವಾಗಿ ಆಚರಿಸಲಾಯಿತು.  ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆ (ಎ.ಎಸ್.ಐ.-ASI) ಯ ಆಧೀನದಲ್ಲಿರುವ 81 ಪರಂಪರೆಯ ಸ್ಮಾರಕಗಳಲ್ಲಿ ಶನಿವಾರದಂದು ಆಯುಷ್ ಸಚಿವಾಲಯದ ಸಹಯೋಗದಲ್ಲಿ ರೋಮಾಂಚಕ ಯೋಗ ಅಧಿವೇಶನ/ಸತ್ರಗಳನ್ನು ಆಯೋಜಿಸಲಾಗಿತ್ತು.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಆಯೋಜನೆಯಾಗಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತೃತ್ವ ನೀಡಿದರು. ಅವರು ಯೋಗದ ಎಲ್ಲರನ್ನೂ ಒಳಗೊಳ್ಳುವ ಸ್ವಭಾವವನ್ನು ಉಲ್ಲೇಖಿಸಿ, “ಯೋಗವು ಎಲ್ಲರಿಗೂ – ಅದು ಗಡಿಗಳ ಸೀಮೆಯನ್ನು ಮೀರಿ, ಹಿನ್ನೆಲೆ, ವಯಸ್ಸು ಅಥವಾ ಸಾಮರ್ಥ್ಯವನ್ನು ಮೀರಿ ಎಲ್ಲರೂ ಅನುಸರಿಸಬಹುದಾದುದು” ಎಂದು ಹೇಳಿದರು. ಮುಂದುವರಿದು ಮಾತನಾಡಿದ  ಅವರು “ಈ ಯೋಗ ದಿನವು ಮಾನವತೆಯ ಯೋಗದ ಅಧ್ಯಾಯ 2.0ಕ್ಕೆ  ನಾಂದಿಯಾಗಲಿ – ಅಲ್ಲಿ ಅಂತರಂಗ ಶಾಂತಿಯೇ ಜಾಗತಿಕ ನೀತಿಯಾಗಿರುತ್ತದೆ” ಎಂದೂ ಹೇಳಿದರು.

‘ಒಂದು ಭೂಮಿ, ಒಂದು ಆರೋಗ್ಯಕ್ಕೆ ಯೋಗ’ ಎಂಬ ಈ ವರ್ಷದ ವಿಷಯ ಶೀರ್ಷಿಕೆ , ದೇಹದ ಆರೋಗ್ಯವನ್ನು ವಿವೇಚನಾಯುಕ್ತ  ಜೀವನಶೈಲಿಯೊಂದಿಗೆ ಜೋಡಿಸಿ ಜಾಗತಿಕ ಸಮಗ್ರ ಆರೋಗ್ಯದ ದಿಕ್ಕಿನಲ್ಲಿ ಭಾರತದ ನಾಯಕತ್ವದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಗುಜರಾತ್‌ನ ಅದಲಜ್ ಕಿವಾವ್‌ನಿಂದ ಕೊನಾರ್ಕ್‌ನ ಸೂರ್ಯ ಮಂದಿರವರೆಗೆ, ಈ ಕಲಾತ್ಮಕ ವಾಸ್ತುವೈಭವದ ಸ್ಮಾರಕಗಳು ಜನಸಾಮಾನ್ಯರಿಂದ ನಡೆಯುವ ಸಾಮೂಹಿಕ ಯೋಗ ಕಾರ್ಯಕ್ರಮಗಳಿಗೆ ಹಿನ್ನೆಲೆಯಾಗಿ ನಿಂತು ಮೆರುಗು ನೀಡಿದವು. ಈ ಸ್ಥಳಗಳು ಯೋಗದ ಈ ಭವ್ಯ ಉತ್ಸವವು ಎಲ್ಲ ವಯೋಮಾನದ ಮತ್ತು ಹಿನ್ನೆಲೆಯ ಜನರು ಈ ಪ್ರಾಚೀನ ಆರೋಗ್ಯ ಪರಂಪರೆಯನ್ನು ಇಂದಿನ ದಿನದಲ್ಲೂ ಅನುಸರಿಸುತ್ತಿರುವ ದೃಶ್ಯವನ್ನು ಸಾಕ್ಷೀಕರಿಸಿದವು.

ಈ ಸಂಭ್ರಮದ  ಭಾಗವಾಗಿ, ಹಲವಾರು ಕೇಂದ್ರ ಸಚಿವರು ಪ್ರಸಿದ್ಧ ಎ.ಎಸ್.ಐ. ಸಂರಕ್ಷಿತ ಸ್ಮಾರಕಗಳಲ್ಲಿಆಯೋಜನೆಯಾಗಿದ್ದ  ಯೋಗದಲ್ಲಿ ಪಾಲ್ಗೊಂಡರು, ಆ ಮೂಲಕ  ಯೋಗವನ್ನು ರಾಷ್ಟ್ರೀಯ ಆಂದೋಲನವಾಗಿ  ಬಲಪಡಿಸುವ ಮಹತ್ವವನ್ನು  ಮತ್ತೆ ಒತ್ತಿ ಹೇಳಲಾಯಿತು.

ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜಸ್ಥಾನದ ಮೆಹ್ರಾಘರ ಕೋಟೆಯಲ್ಲಿ ಯೋಗ ಮಾಡಿದರು. ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರು ದಿಲ್ಲಿಯ  ಜಂತರ್  ಮಂತರ್ ನಲ್ಲಿ ಪಾಲ್ಗೊಂಡರು. ಶ್ರೀ ಪ್ರಲ್ಹಾದ್ ಜೋಶಿ ಅವರು ಪಟ್ಟದಕಲ್ಲಿನ ಸ್ಮಾರಕ ಗುಂಪಿನಲ್ಲಿ ನಡೆದ ಯೋಗದಲ್ಲಿ ಭಾಗವಹಿಸಿದರು.ಇತರ ಪ್ರಮುಖ ಗಣ್ಯರು ದೇಶದ ವಿವಿಧ ಸ್ಥಳಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅವರ ಭಾಗವಹಿಸುವಿಕೆ  ಯೋಗವು ಜೀವನ ವಿಧಾನ ಮತ್ತು ಅದು  ಏಕತೆ ಹಾಗು  ಸಾಂಸ್ಕೃತಿಕ ಹೆಮ್ಮೆ ಎಂಬ ಪ್ರಬಲ ಸಂದೇಶವನ್ನು ದೇಶಾದ್ಯಂತ ಹರಡಿತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ  ಮುಖ್ಯ ಕಾರ್ಯಕ್ರಮವನ್ನು ಎಲ್ಲಾ 81 ಎ.ಎಸ್.ಐ. ಸ್ಮಾರಕ ತಾಣಗಳಲ್ಲಿ ನೇರಪ್ರಸಾರ ಮಾಡಲಾಯಿತು, ಮತ್ತು ಭಾಗವಹಿಸಿದವರು  ಅದನ್ನು ಏಕರೂಪವಾಗಿ  ಅನುಸರಿಸಿದರು.

ಯೋಗವು ಭಾರತದಿಂದ ಜಗತ್ತಿಗೆ ನೀಡಲಾಗಿರುವ ಅಮೂಲ್ಯ ಉಡುಗೊರೆ, ಅದು ಸಮಸ್ತ ಮಾನವತೆಗೆ  ಸಮಗ್ರ ಲಾಭಗಳನ್ನು ಒದಗಿಸುತ್ತದೆ.

About Matribhumi Samachar

Check Also

ಭಾರತದ ರಾಷ್ಟ್ರಪತಿ ಅವರು ‘ಜನಕೇಂದ್ರೀಯ ರಾಷ್ಟ್ರೀಯ ಭದ್ರತೆ: ವಿಕಸಿತ ಭಾರತ ನಿರ್ಮಾಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ’ ಎಂಬ ವಿಷಯದ ಕುರಿತು ಐಬಿ ಶತಮಾನೋತ್ಸವ ದತ್ತಿ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದರು

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಡಿಸೆಂಬರ್ 23, 2025) ನವದೆಹಲಿಯಲ್ಲಿ ‘ಜನಕೇಂದ್ರೀಯ ರಾಷ್ಟ್ರೀಯ ಭದ್ರತೆ: ವಿಕಸಿತ …