Friday, September 18 2026 | 07:10:11 PM
Breaking News

Matribhumi Samachar

11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತ ಮತ್ತು ವಿಶ್ವದಾದ್ಯಂತದ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು ಮತ್ತು ಯೋಗ ಅಧಿವೇಶನದಲ್ಲಿ ಭಾಗವಹಿಸಿದರು. “ಹನ್ನೊಂದು ವರ್ಷಗಳ ನಂತರ, ಯೋಗವು ಪ್ರಪಂಚದಾದ್ಯಂತ ಕೋಟ್ಯಂತರ ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ” ಎಂದು ಅವರು ಹೇಳಿದರು. ದೃಷ್ಟಿ ಕಳೆದುಕೊಂಡವರು (ದಿವ್ಯಾಂಗರು) ಬ್ರೈಲ್‌ ಲಿಪಿಯಲ್ಲಿ ಯೋಗ ಗ್ರಂಥಗಳನ್ನು ಓದುವುದನ್ನು …

Read More »

ಉಪ ರಾಷ್ಟ್ರಪತಿಗಳು ಭಾರತದ ರಾಷ್ಟ್ರಪತಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ

ಗೌರವಾನ್ವಿತ ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಸಾಮಾಜಿಕ ಮಾಧ್ಯಮ  ‘ಎಕ್ಸ್’ ನಲ್ಲಿ ರಾಷ್ಟ್ರಪತಿಗಳಿಗೆ ಶುಭ ಹಾರೈಸುತ್ತಾ ಅವರು ಹೀಗೆ ಹೇಳಿದ್ದಾರೆ: ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ವಿನಮ್ರ ಹಿನ್ನೆಲೆಯಿಂದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಅವರ ಅಸಾಧಾರಣ ಪಯಣವು ಅವರ ವಿನಮ್ರತೆ, ಸರಳತೆ ಮತ್ತು ಉದಾತ್ತತೆಯ ಸಂಕೇತವಾಗಿದೆ, …

Read More »

ಕರ್ನಾಟಕದಿಂದ ಯುಕೆಗೆ ಜಾಮೂನು ಹಣ್ಣಿನ ಮೊದಲ ರಫ್ತು ರವಾನೆಗೆ ಎಪಿಇಡಿಎ ಹಸಿರು ನಿಶಾನೆ

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) 2025ರ ಜೂನ್ 19 ರಂದು ಕರ್ನಾಟಕದಿಂದ ಯುನೈಟೆಡ್ ಕಿಂಗ್ ಡಮ್ ಗೆ  ಜಾಮೂನು ಹಣ್ಣು (ಕುಂದಾನಾ ಪ್ರಭೇದ) ಮೊದಲ ರಫ್ತು ರವಾನೆಗಾಗಿ ವರ್ಚುವಲ್ ಫ್ಲ್ಯಾಗ್ಆಫ್ (ಹಸಿರು ನಿಶಾನೆ) ಆಯೋಜಿಸಿತ್ತು. ಈ ಹೆಗ್ಗುರುತು ರಫ್ತು ಜಾಗತಿಕ ಮಾರುಕಟ್ಟೆಗಳಲ್ಲಿ ವಿವಿಧ ಪ್ರದೇಶಗಳಿಂದ ಭಾರತದ ಸಾಂಪ್ರದಾಯಿಕ ಹಣ್ಣುಗಳನ್ನು ಉತ್ತೇಜಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗಮನಾರ್ಹವಾಗಿ, ಜಾಮೂನು ಹಣ್ಣುಗಳನ್ನು ನೇರವಾಗಿ ರೈತ ಉತ್ಪಾದಕ ಸಂಸ್ಥೆಯಿಂದ (ಎಫ್ …

Read More »

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಬೆಂಗಳೂರಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ (ACU) ಕ್ಯಾಂಪಸ್ ಉದ್ಘಾಟನೆ

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಬೆಂಗಳೂರಿನಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ (ಎಸಿಯು) ಬೆಂಗಳೂರು ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ನಮ್ಮ ಸಂಸ್ಕೃತಿಯ ಮೂಲ ತತ್ವ “ಸರ್ವ ಜನ ಹಿತಾಯ, ಸರ್ವ ಜನ ಸುಖಾಯ” ಎಂಬುದಾಗಿದೆ. ಇದರರ್ಥ ಕೇವಲ ತನ್ನ ಬಗ್ಗೆ ಮಾತ್ರವಲ್ಲದೆ ಎಲ್ಲರ ಕಲ್ಯಾಣ ಮತ್ತು ಸಂತೋಷದ ಬಗ್ಗೆ ಚಿಂತಿಸುವುದು ಎಂದು ಹೇಳಿದರು. …

Read More »

ಲಂಡನ್‌ನಲ್ಲಿ ನಡೆದ ವಿಶ್ವ ತಂಡ ಬ್ಲಿಟ್ಜ್ ಚಾಂಪಿಯನ್ಶಿಶಿಪ್‌ನ ಬ್ಲಿಟ್ಜ್ ಸೆಮಿಫೈನಲ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ದಿವ್ಯಾ ದೇಶಮುಖ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಲಂಡನ್‌ನಲ್ಲಿ ನಡೆದ ವಿಶ್ವ ಟೀಮ್ ಬ್ಲಿಟ್ಜ್ ಚಾಂಪಿಯನ್ಶಿಪ್‌ನ ಬ್ಲಿಟ್ಜ್ ಸೆಮಿಫೈನಲ್‌ನ ಎರಡನೇ ಸುತ್ತಿನಲ್ಲಿ, ವಿಶ್ವದ ನಂ. 1 ಹೌ ಯಿಫಾನ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕಾಗಿ ಭಾರತೀಯ ಚೆಸ್ ಪ್ರತಿಭೆ ದಿವ್ಯಾ ದೇಶಮುಖ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅಭಿನಂದಿಸಿದ್ದಾರೆ. X ನ ಪೋಸ್ಟ್‌ ನಲ್ಲಿ ಶ್ರೀ ಮೋದಿಯವರು: “ಲಂಡನ್‌ನಲ್ಲಿ ನಡೆದ ವಿಶ್ವ ಟೀಮ್ ಬ್ಲಿಟ್ಜ್ ಚಾಂಪಿಯನ್ಶಿಶಿಪ್‌ನ ಬ್ಲಿಟ್ಜ್ ಸೆಮಿಫೈನಲ್‌ನ ಎರಡನೇ ಸುತ್ತಿನಲ್ಲಿ ವಿಶ್ವದ ನಂ. 1 …

Read More »

ಪ್ರಧಾನಮಂತ್ರಿ ಅವರು ಭಾರತದ ಯುವಜನತೆಯ ಅಭಿವೃದ್ದಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರವನ್ನು ಸುಧಾರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ

ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯವು ಬಹಿರಂಗ ಪಡಿಸಿದ 2026ರ ಶ್ರೇಯಾಂಕಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಸ್ವಾಗತಿಸಿದರು. ಇದು ಜಾಗತಿಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಯುವಜನತೆಯ ಅಭಿವೃದ್ದಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ X ಕುರಿತಾದ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ …

Read More »

ಮಹಾರಾಷ್ಟ್ರದ ಜೆಜುರಿ-ಮೋರ್ಗಾನ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಭವಿಸಿದ ಜೀವ ಹಾನಿಗೆ ಪ್ರಧಾನಮಂತ್ರಿ ಸಂತಾಪ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಹಾರಾಷ್ಟ್ರದ ಜೆಜುರಿ-ಮೋರ್ಗಾನ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಪ್ರಧಾನಮಂತ್ರಿಯವರ ಕಛೇರಿಯ ಹ್ಯಾಂಡಲ್ Xನಲ್ಲಿ ಪೋಸ್ಟ್ ಮಾಡಿ: “ಮಹಾರಾಷ್ಟ್ರದ ಜೆಜುರಿ-ಮೋರ್ಗಾನ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆದ ಜೀವಹಾನಿಯಾದ ಬಗ್ಗೆ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು …

Read More »

ಒಂದು ರಾಷ್ಟ್ರ, ಒಂದು ಸಮಯ – ಸಮಯ ಸಾರ್ವಭೌಮತ್ವದ ಕಡೆಗೆ ಭಾರತದ ಪಯಣ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು, “ಒಂದು ರಾಷ್ಟ್ರ, ಒಂದು ಸಮಯ” ಎಂಬ ದೂರದೃಷ್ಟಿಯ ಧ್ಯೇಯವಾಕ್ಯದ ಅಡಿಯಲ್ಲಿ, ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ‘ಸಮಯ ಪ್ರಸರಣ’ (Time Dissemination) ಕುರಿತು ಒಂದು ಮಹತ್ವದ ದುಂಡುಮೇಜಿನ ಸಮ್ಮೇಳನವನ್ನು ಆಯೋಜಿಸಿತು. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಗ್ರಾಹಕ ವ್ಯವಹಾರಗಳ ಇಲಾಖೆಯು CSIR-NPL ಮತ್ತು ISRO ಸಹಯೋಗದೊಂದಿಗೆ …

Read More »

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಪ್ರಕೃತಿ ವಿಕೋಪಗಳು ಮತ್ತು ವಿಪತ್ತುಗಳ ಸಮಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಜೊತೆಯಾಗಿ ನಿಂತಿದೆ

2023ರ ಪ್ರವಾಹ, ಭೂಕುಸಿತ, ಮೇಘಸ್ಫೋಟದ ನಂತರ ಹಿಮಾಚಲ ಪ್ರದೇಶ ರಾಜ್ಯಕ್ಕೆ ಚೇತರಿಕೆ ಮತ್ತು ಪುನರ್ ನಿರ್ಮಾಣ ಯೋಜನೆಗೆ ಒಟ್ಟು 2006.40 ಕೋಟಿ ರೂ.ಗಳನ್ನು  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಅನುಮೋದಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್) ಅಡಿಯಲ್ಲಿ ಚೇತರಿಕೆ ಮತ್ತು ಪುನರ್ನಿರ್ಮಾಣ ನಿಧಿ ವಿಭಾಗದಿಂದ ರಾಜ್ಯಕ್ಕೆ ಆರ್ಥಿಕ ಸಹಾಯದ ಪ್ರಸ್ತಾವನೆಯನ್ನು ಹಣಕಾಸು ಸಚಿವರು, ಕೃಷಿ ಸಚಿವರು ಮತ್ತು …

Read More »

ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಿಬ್ಬಂದಿ ನೇಮಕಾತಿ ಆಯೋಗವು ಸಂಯುಕ್ತ ಹಿಂದಿ ಅನುವಾದಕ, ಸ್ಟೆನೊಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಹಾಗೂ ಸಂಯುಕ್ತ ಪದವಿ ಹಂತದ ಪರೀಕ್ಷೆಗಳು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಂಯುಕ್ತ ಹಿಂದಿ ಅನುವಾದಕ: ಸಿಬ್ಬಂದಿ ನೇಮಕಾತಿ ಆಯೋಗದಿಂದ ದೇಶಾದ್ಯಂತ 12 ಆಗಸ್ಟ್, 2025ರಂದು ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಸಂಯುಕ್ತ ಹಿಂದಿ ಅನುವಾದಕ ಪರೀಕ್ಷೆ ನಡೆಯಲಿದೆ. ಭಾರತ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆಗಳಲ್ಲಿ ಖಾಲಿ ಇರುವ 437 (ಅಂದಾಜು) ಹುದ್ದೆಗಳ ಭರ್ತಿಗೆ ಈ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು 100 ರೂ. ಶುಲ್ಕ ಭರಿಸಿ ಪರೀಕ್ಷೆಗೆ …

Read More »