Wednesday, December 24 2025 | 04:50:54 AM
Breaking News

Matribhumi Samachar

ನಡೆಯುತ್ತಿರುವ ಮಹಾಕುಂಭ 2025ರ ಸಮಯದಲ್ಲಿ ಭಕ್ತರು ಬರುವುದನ್ನು ಮತ್ತು ಸುಗಮವಾಗಿ ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ

ನಿರಂತರ ಭಾರೀ ಜನದಟ್ಟಣೆಯ ಹೊರತಾಗಿಯೂ, ಭಾರತೀಯ ರೈಲ್ವೆಯು ನಡೆಯುತ್ತಿರುವ ಮಹಾಕುಂಭ ಮೇಳದ ಸಮಯದಲ್ಲಿ ಭಕ್ತರನ್ನು ಕರೆತರುವ ಮೂಲಕ ಮತ್ತು ಅವರ ಮನೆಗೆ ಕರೆದೊಯ್ಯುವ ಮೂಲಕ ಸೇವೆ ಸಲ್ಲಿಸಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಯಾಗ್ರಾಜ್‌ ಪ್ರದೇಶದ ಎಂಟು ವಿವಿಧ ನಿಲ್ದಾಣಗಳಿಂದ ಸುಮಾರು 330 ರೈಲುಗಳು 12 ಲಕ್ಷ  50 ಸಾವಿರ ಪ್ರಯಾಣಿಕರನ್ನು ತಮ್ಮ ಮನೆಗಳಿಗೆ ಕರೆದೊಯ್ದಿವೆ ಎಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ ಮಾಧ್ಯಮಗಳ ಮೂಲಕ ರಾಷ್ಟ್ರಕ್ಕೆ ಮಾಹಿತಿ ನೀಡಿದರು. ನೂಕುನುಗ್ಗಲು …

Read More »

ವೇವ್ಸ್ 2025ರಲ್ಲಿ ನಡೆಯುವ ಭಾರತದಲ್ಲಿ ಸೃಜನಶೀಲ ಸವಾಲು ಆವೃತ್ತಿ – 1ರಲ್ಲಿ ಶಿಕ್ಷಣವು ಗೇಮಿಂಗ್ ಅನ್ನು ಎದುರುಗೊಳ್ಳಲಿದೆ

ನಿಮ್ಮ ನಗರದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್.ಡಿ.ಜಿ) ಪ್ರಗತಿಯ ಬಗ್ಗೆ ನಿಮಗೆ ಆಳವಾದ ಜ್ಞಾನವಿದ್ದರೆ, ರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಲ್ಪಡುವ ಅವಕಾಶ ಇಲ್ಲಿದೆ. ವಿಶ್ವ ದೃಶ್ಯ ಶ್ರವಣ ಮತ್ತು ಮನೋರಂಜನಾ ಶೃಂಗಸಭೆ (ವೇವ್ಸ್) 2025 ತಮ್ಮ ನಗರದ ಸುಸ್ಥಿರತೆಯ ಪ್ರಯತ್ನಗಳು, ಸವಾಲುಗಳು ಮತ್ತು ಸಾಧನೆಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗಳಿಗೆ ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ‘ಸಿಟಿ ಕ್ವೆಸ್ಟ್: ಶೇಡ್ಸ್ ಆಫ್ ಭಾರತ್’ ಎಂಬ ನವೀನ ಶೈಕ್ಷಣಿಕ ಆಟವು ವೇವ್ಸ್ 2025ರ ಅಡಿಯಲ್ಲಿ ನಡೆಯುತ್ತಿರುವ ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್‌’ನ ಪ್ರಮುಖ ಅಂಶವಾಗಿದೆ. ಈ ಆಕರ್ಷಕ ಆಟವನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್.ಡಿ.ಗಳು)ನ್ನು ಗುರಿಯಾಗಿಸುವ ಮೂಲಕ ನಗರ ಅಭಿವೃದ್ಧಿಯ ಮಾಪನಗಳನ್ನು ಆಟ ಆಡುವ ಮೂಲಕ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಯುವಕರಿಗೆ ಶಿಕ್ಷಣ ನೀಡಲು ಮತ್ತು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿದೆ. ಇದು ಬಾಲ್ಯದ ಟ್ರಂಪ್ ಕಾರ್ಡ್ ಆಟದ ಸಂತೋಷವನ್ನು ಮೆಲುಕು ಹಾಕುವಾಗ ದೇಶಾದ್ಯಂತ 56 ನಗರಗಳ ಸಾಮರ್ಥ್ಯ ಮತ್ತು ಸವಾಲುಗಳನ್ನು ಸಹ ಪರಿಶೋಧಿಸುತ್ತದೆ. ಈ ವೇದಿಕೆಯು ಸುಸ್ಥಿರ ಭವಿಷ್ಯದತ್ತ ಗಮನಾರ್ಹ ದಾಪುಗಾಲು ಹಾಕುತ್ತಿರುವ ನಗರಗಳನ್ನು ಪ್ರಮುಖವಾಗಿ ಗುರುತಿಸಲು ಸ್ಥಳ ಒದಗಿಸುತ್ತದೆ. ನಗರ ಸುಸ್ಥಿರತೆಯ ಚಾಂಪಿಯನ್ ಆಗಿ ಎದ್ದು ಕಾಣಿರಿ ಮತ್ತು ನಗರದ ಎಸ್.ಡಿ.ಜಿ ಪ್ರಯಾಣದ ಬಗ್ಗೆ ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯಿರಿ, ಮೇ 1-4, 2025 ರಂದು ಮುಂಬೈನಲ್ಲಿ ನಡೆಯುವ ವೇವ್ಸ್ 2025 ರಲ್ಲಿ ವಿಜೇತರನ್ನು ಸನ್ಮಾನಿಸಲಾಗುತ್ತದೆ. ಆಟದ ಕುರಿತು  ಸಿಟಿ ಕ್ವೆಸ್ಟ್ ಆಟವು ಸಿಂಗಲ್-ಪ್ಲೇಯರ್ ಸ್ವರೂಪದಲ್ಲಿ ತೊಡಗಿಸಿಕೊಳ್ಳುತ್ತದೆ, ಅಲ್ಲಿ ಆಟಗಾರರು ಸಿಟಿ ಕಾರ್ಡ್‌ಗಳ ಡೆಕ್ ಬಳಸಿ ಕಂಪ್ಯೂಟರ್ ಎದುರಾಳಿಯ ವಿರುದ್ಧ ಸ್ಪರ್ಧಿಸುತ್ತಾರೆ. ಪ್ರತಿ ಕಾರ್ಡ್ ಆರು ನಿಯತಾಂಕಗಳನ್ನು ಒಳಗೊಂಡಿರುತ್ತದೆ, ಇದು ಆಟಗಾರರಿಗೆ ಹಸಿವು ಸೂಚ್ಯಂಕ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಮತ್ತು ಲಿಂಗ ಸಮಾನತೆಯಂತಹ ವಿವಿಧ ಅಂಕಿಅಂಶಗಳ ಆಧಾರದ ಮೇಲೆ ನಗರಗಳನ್ನು ಹೋಲಿಸಲು ಅನುವು ಮಾಡಿಕೊಡುತ್ತದೆ. ಇದು 15 ಸುಸ್ಥಿರ ಅಭಿವೃದ್ಧಿ ಗುರಿಗಳ ಜಾಡು ಪತ್ತೆ ಮಾಡುತ್ತದೆ ಮತ್ತು ನೀತಿ ಆಯೋಗದ ನಗರ ಸೂಚ್ಯಂಕ (2021) ಬಳಸಿಕೊಂಡು 56 ನಗರಗಳಲ್ಲಿ ಅಗ್ರ ಶ್ರೆಯಾಂಕದ 6 ಎಸ್.ಡಿ.ಜಿಗಳನ್ನು ಬಳಸುತ್ತದೆ. ಸಂವಾದಾತ್ಮಕ ಆಟದ ಮೂಲಕ, ಇದು 56 ಭಾರತೀಯ ನಗರಗಳ ಅಭಿವೃದ್ಧಿ ಸವಾಲುಗಳು ಮತ್ತು ಸಾಧನೆಗಳ ಬಗ್ಗೆ ಆಟಗಾರರಿಗೆ ಶಿಕ್ಷಣ ನೀಡುತ್ತದೆ, ಸುಸ್ಥಿರ ಅಭ್ಯಾಸಗಳ ಪ್ರಭಾವವನ್ನು ಒತ್ತಿ ಹೇಳುತ್ತದೆ. ಸಂವಾದಾತ್ಮಕವಾಗಿ ಆಟ ಆಡಲು ಅವಕಾಶ ನೀಡಲಿದ್ದು, ಇದು ಆಟಗಾರರಿಗೆ ಶಿಕ್ಷಣ ನೀಡುತ್ತದೆ. ಆಟಗಾರರು ಸಿಟಿ ಕ್ವೆಸ್ಟ್ ಮೂಲಕ ಪ್ರತಿಯೊಂದು ನಗರದ ಗುಣಲಕ್ಷಣಗಳನ್ನು ಅನ್ವೇಷಿಸುವಾಗ, …

Read More »

ವೇವ್ಸ್ ಎಐ ಆರ್ಟ್ ಇನ್ಸ್ಟಾಲೇಶನ್ ಚಾಲೆಂಜ್

ಪರಿಚಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಭಾಗಿತ್ವದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿರುವ ಎಐ ಆರ್ಟ್ ಇನ್ಸ್ಟಾಲೇಶನ್ ಚಾಲೆಂಜ್, ಕೃತಕ ಬುದ್ಧಿಮತ್ತೆ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಸಮ್ಮಿಳನವನ್ನು ಅನ್ವೇಷಿಸಲು ಕಲಾವಿದರು, ವಿನ್ಯಾಸಕರು ಮತ್ತು ಎಐ ಉತ್ಸಾಹಿಗಳನ್ನು ಒಟ್ಟುಗೂಡಿಸುವ ಪ್ರವರ್ತಕ ಸ್ಪರ್ಧೆಯಾಗಿದೆ. ಸೃಜನಶೀಲತೆ ಮತ್ತು ನಾವೀನ್ಯತೆಯ ಗಡಿಗಳನ್ನು ವಿಸ್ತರಿಸಿ, ಎಐ-ಚಾಲಿತ ಉಪಕರಣಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ಆಳವಾದ ಮತ್ತು ಸಂವಾದಾತ್ಮಕ ಅನುಸ್ಥಾಪನೆಗಳನ್ನು ರಚಿಸಲು ಸ್ಪರ್ಧಿಗಳನ್ನು ಆಹ್ವಾನಿಸಲಾಗಿದೆ. ಹೂಡಿಕೆದಾರರು, ಸಹಯೋಗಿಗಳು ಮತ್ತು ಉದ್ಯಮದ ನಾಯಕರೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಬೆಳೆಸುವಾಗ ಕಲೆಗಳಲ್ಲಿ ಎಐನ ಪರಿವರ್ತಕ ಸಾಮರ್ಥ್ಯವನ್ನು ಎತ್ತಿ ತೋರಿಸುವ ಗುರಿಯನ್ನು ಈ ಚಾಲೆಂಜ್ ಹೊಂದಿದೆ. ಕಲೆ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಮೂಲಕ, ಇದು ಎಐ-ಚಾಲಿತ ಸೃಜನಶೀಲ ಅಭಿವ್ಯಕ್ತಿಯಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಲಿದೆ. ಈ ಚಾಲೆಂಜ್ (ಸವಾಲು) ವಿಶ್ವ ಆಡಿಯೊ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) ಅಡಿಯಲ್ಲಿ ಪ್ರಮುಖ ಉಪಕ್ರಮವಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಿನ  ಭಾಗವಾಗಿದೆ, ಇದು ಮಾಧ್ಯಮ ಮತ್ತು ಮನರಂಜನೆ (ಎಂ & ಇ) ಉದ್ಯಮದಲ್ಲಿ ನಾವೀನ್ಯತೆಗೆ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನೇತೃತ್ವದಲ್ಲಿ ಇದು 70,000 ಕ್ಕೂ ಹೆಚ್ಚು ನೋಂದಣಿಗಳನ್ನು ಆಕರ್ಷಿಸಿದೆ. 31 ಸ್ಪರ್ಧೆಗಳನ್ನು ಪ್ರಾರಂಭಿಸುವುದರೊಂದಿಗೆ, ಇದು ಸೃಜನಶೀಲತೆ ಮತ್ತು ಜಾಗತಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದೆ. ಪ್ರಮುಖ ಉದ್ಯಮ ವೇದಿಕೆಯಾಗಿ, ಇದು ಸಹಯೋಗ, ವ್ಯಾಪಾರ ಅವಕಾಶಗಳು ಮತ್ತು ಜಾಗತಿಕ ಸೃಜನಶೀಲ ಕೇಂದ್ರವಾಗಿ ಭಾರತದ ಹೊರಹೊಮ್ಮುವಿಕೆಯನ್ನು ಪ್ರೇರೇಪಿಸುತ್ತದೆ. 2025 ರ ಮೇ 1 ರಿಂದ 4 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಈ ಶೃಂಗಸಭೆಯು ದೂರದೃಷ್ಟಿಯ ಆಲೋಚನೆಗಳು/ನವೀನ ಚಿಂತನೆಗಳು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯನ್ನು (ಲಾಂಚ್ ಪ್ಯಾಡ್) ಒದಗಿಸುತ್ತದೆ. ಅರ್ಹತಾ ಮಾರ್ಗಸೂಚಿಗಳುibility ಸಲ್ಲಿಕೆ ಸಂದರ್ಭದ ಆವಶ್ಯಕತೆಗಳು v. ಅನುಸ್ಥಾಪನೆಯ ಕಾರ್ಯಸಾಧ್ಯತೆ ಮತ್ತು ಪರಸ್ಪರ ಕ್ರಿಯೆಯನ್ನು ಪ್ರದರ್ಶಿಸುವ ಮೂಲಮಾದರಿ ಅಥವಾ ಮಾಕ್ಅಪ್ ಅನ್ನು ಸಲ್ಲಿಸಿ. v. ಬಳಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ …

Read More »

ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾಸಿಸ್) ಸಾಂಕ್ರಾಮಿಕ ಗುರುತಿಸಿರುವ 13 ರಾಜ್ಯಗಳಾದ್ಯಂತ ಎಲ್ ಎಫ್ ನಿರ್ಮೂಲನೆಗಾಗಿ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರಿಂದ ರಾಷ್ಟ್ರೀಯ ಸಾಮೂಹಿಕ ಔಷಧ ನೀಡುವ ಸುತ್ತಿಗೆ ಚಾಲನೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಇಂದು  ಆನೆಕಾಲು ರೋಗ (ಎಲ್ ಎಫ್‌ ) ಕಾಯಿಲೆ ಗುರುತಿಸುವ 13 ರಾಜ್ಯಗಳ ಆರೋಗ್ಯ ಸಚಿವರು ಮತ್ತು ಸ್ಥಳೀಯ ರಾಜ್ಯಗಳ ಹಿರಿಯ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಲಿಂಫಾಟಿಕ್ ಫೈಲೇರಿಯಾಸಿಸ್ (ಎಲ್ ಎಫ್) ನಿರ್ಮೂಲನೆಗಾಗಿ ವಾರ್ಷಿಕ ರಾಷ್ಟ್ರವ್ಯಾಪಿ ಸಾಮೂಹಿಕ ಔಷಧ ವಿತರಿಸುವ (ಎಂಡಿಎ) ಅಭಿಯಾನಕ್ಕೆ ಚಾಲನೆ ನೀಡಿದರು. ಭಾಗವಹಿಸಿದವರಿಗೆ ಅಭಿಯಾನ, ಅದರ ಉದ್ದೇಶಗಳು, ಕೈಗೊಳ್ಳುತ್ತಿರುವ …

Read More »

ಏರೋ ಇಂಡಿಯಾ 2025 ಹಾರಾಟ ಆರಂಭ; ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನದ 15ನೇ ಆವೃತ್ತಿಗೆ ರಕ್ಷಣಾ ಸಚಿವರಿಂದ ಚಾಲನೆ

“ಏರೋ ಇಂಡಿಯಾ 2025 ನಿರ್ಣಾಯಕ ಮತ್ತು ಮುಂಚೂಣಿ ತಂತ್ರಜ್ಞಾನಗಳ ಸಂಗಮವಾಗಿದ್ದು, ಇಂದಿನ ಅನಿಶ್ಚಿತ ಪರಿಸ್ಥಿತಿಗಳನ್ನು ನಿಭಾಯಿಸಲು ಪರಸ್ಪರ ಗೌರವ, ಪರಸ್ಪರ ಆಸಕ್ತಿ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ಸಮಾನ ಮನಸ್ಕ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ವೇದಿಕೆ ಒದಗಿಸುತ್ತದೆ” ಎಂದು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಹೇಳಿದರು. ಅವರು 2025ರ ಫೆಬ್ರವರಿ 10 ರಂದು ಕರ್ನಾಟಕದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 15ನೇ ಆವೃತ್ತಿಯ ಏರೋ ಇಂಡಿಯಾ …

Read More »

ನಾಳೆ ಯುನಾನಿ ದಿನದ ಸಂದರ್ಭದಲ್ಲಿ, ದೆಹಲಿಯಲ್ಲಿ ನಡೆಯುವ ಸಮಗ್ರ ಆರೋಗ್ಯ ಪರಿಹಾರಗಳ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಭಾರತದ ರಾಷ್ಟ್ರಪತಿ ಉದ್ಘಾಟಿಸಲಿದ್ದಾರೆ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನಾಳೆ ನವದೆಹಲಿಯ ವಿಜ್ಞಾನ ಭವನದಲ್ಲಿ ಎರಡು ದಿನಗಳ ಯುನಾನಿ ದಿನದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಮತ್ತು ಆಯುಷ್ ಸಚಿವಾಲಯದ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಶ್ರೀ ಪ್ರತಾಪ್ರಾವ್ ಜಾಧವ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಪ್ರತಿ ವರ್ಷ ಫೆಬ್ರವರಿ 11 …

Read More »

ಫ್ರಾನ್ಸ್‌ ಮತ್ತು ಅಮೆರಿಕಾ ಪ್ರವಾಸಕ್ಕೂ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ

ಅಧ್ಯಕ್ಷರಾದ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ನಾನು ಫೆಬ್ರವರಿ 10 ರಿಂದ 12 ರವರೆಗೆ ಫ್ರಾನ್ಸ್‌ಗೆ ಭೇಟಿ ನೀಡುತ್ತಿದ್ದೇನೆ. ಪ್ಯಾರಿಸ್‌ನಲ್ಲಿ ವಿಶ್ವ ನಾಯಕರು ಮತ್ತು ಜಾಗತಿಕ ತಂತ್ರಜ್ಞಾನ ಸಿಇಒಗಳ ಸಭೆಯಾದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಲು ನಾನು ಎದುರು ನೋಡುತ್ತಿದ್ದೇನೆ. ಅಲ್ಲಿ ನಾವು ನಾವೀನ್ಯತೆ ಮತ್ತು ಸಾರ್ವಜನಿಕ ಒಳಿತಿಗಾಗಿ ದೊಡ್ಡ ಮಟ್ಟದಲ್ಲಿ ಎಐ ತಂತ್ರಜ್ಞಾನಕ್ಕೆ ಸಹಯೋಗದ ವಿಧಾನದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದೇವೆ. ನನ್ನ …

Read More »

ಪರೀಕ್ಷಾ ಪೇ ಚರ್ಚಾ

ಪರೀಕ್ಷೆಗಳು ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಒತ್ತಡದ ಮೂಲವಾಗಿದೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಉಪಕ್ರಮವು ಈ ನಿರೂಪಣೆಯನ್ನು ಪರಿವರ್ತಿಸುತ್ತಿದೆ. 2025ರ ಫೆಬ್ರವರಿ 10ರಂದು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿರುವ ಈ ವರ್ಷದ ಪಿಪಿಸಿ ಮತ್ತೊಮ್ಮೆ ಸಂವಾದಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಪ್ರಧಾನಿ ನೇರವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ತೊಡಗುತ್ತಾರೆ. ಪಿಪಿಸಿಯ ಪ್ರತಿ ಆವೃತ್ತಿಯು ಪರೀಕ್ಷೆಗೆ ಸಂಬಂಧಿಸಿದ ಆತಂಕವನ್ನು ನಿಭಾಯಿಸಲು ನವೀನ …

Read More »

ನಾಳೆ ಪ್ರಯಾಗ್ರಾಜ್ ಗೆ ಭೇಟಿ ನೀಡಲಿರುವ ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನಾಳೆ (ಫೆಬ್ರವರಿ 10, 2025) ಪ್ರಯಾಗ್ರಾಜ್ (ಉತ್ತರ ಪ್ರದೇಶ) ಗೆ ಭೇಟಿ ನೀಡಲಿದ್ದಾರೆ. ಪ್ರಯಾಗ್‌ರಾಜ್‌ ಗೆ ತನ್ನ ಒಂದು ದಿನವಿಡೀ ಭೇಟಿಯ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿಯವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ , ಸಂಗಮದಲ್ಲಿ ಪೂಜೆಯನ್ನು ಕೂಡ ಮಾಡಲಿದ್ದಾರೆ. ಅಕ್ಷಯವತ್ ಮತ್ತು ಹನುಮಾನ್ ಮಂದಿರಗಳಲ್ಲಿ ಪೂಜೆ ಮತ್ತು ದರ್ಶನವನ್ನು ಮಾಡಲಿದ್ದಾರೆ, ಮತ್ತು ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ.   भारत …

Read More »

ಬಾಹ್ಯಾಕಾಶ ಮತ್ತು ರಕ್ಷಣಾ ನಾವೀನ್ಯತೆಯ ಭವಿಷ್ಯದ ಬಗ್ಗೆ ಒಂದು ನೋಟ

ಏರೋ ಇಂಡಿಯಾ ಏಷ್ಯಾದ ಬಹುದೊಡ್ಡ ವಾಯು ಪ್ರದರ್ಶನವಾಗಿದ್ದು, ಬೆಂಗಳೂರಿನಲ್ಲಿ ನಡೆಯುವ ಈ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಮತ್ತು ವಿಮಾನಗಳ ಪ್ರದರ್ಶನವಾಗಿದೆ. ಇದನ್ನು ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಪ್ರದರ್ಶನ ಸಂಸ್ಥೆಗಳು ಆಯೋಜಿಸಿವೆ. ಏರೋ ಇಂಡಿಯಾ, ಭಾರತದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾಗಿದ್ದು, ಜಾಗತಿಕ ವೈಮಾನಿಕ ಮಾರಾಟಗಾರರು ಮತ್ತು ಭಾರತೀಯ ವಾಯುಪಡೆ (ಐಎಎಫ್) ಸತತ ಏರೋಬ್ಯಾಟಿಕ್ ಹಾರಾಟ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ. ಇದು ಜಾಗತಿಕ ಉದ್ಯಮ ನಾಯಕರು, ಸರ್ಕಾರಿ ಅಧಿಕಾರಿಗಳು, ತಂತ್ರಜ್ಞಾನ ತಜ್ಞರು ಮತ್ತು ರಕ್ಷಣಾ ತಂತ್ರಜ್ಞರನ್ನು ಒಂದೇ ಸೂರಿನಡಿ ಒಗ್ಗೂಡಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ರಾಷ್ಟ್ರದ ತಾಂತ್ರಿಕ ಪರಾಕ್ರಮ ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸುವುದಲ್ಲದೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ಕಾರ್ಯತಂತ್ರದ ಸಂವಾದಕ್ಕೆ ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ.   ಏರೋ ಇಂಡಿಯಾದ ವೈಭವ ಮತ್ತು ಪ್ರಾಮುಖ್ಯತೆ ಏರೋ ಇಂಡಿಯಾ ಒಂದು ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ವಿಕಸನಗೊಂಡಿದೆ, ಇದು ವೈಮಾನಿಕ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯನ್ನು ಎತ್ತಿ ತೋರಿಸುವುದಲ್ಲದೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ನಡುವಿನ ಕಾರ್ಯತಂತ್ರದ ಸಂವಹನಗಳಿಗೆ ನಿರ್ಣಾಯಕ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಪ್ರದರ್ಶನವು ತನ್ನ ಏರೋಸ್ಪೇಸ್ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು …

Read More »