Tuesday, March 24 2026 | 08:53:13 AM
Breaking News

Matribhumi Samachar

15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪಾಲ್ಗೊಂಡ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 25, 2025) ಹೊಸದಿಲ್ಲಿಯಲ್ಲಿ ನಡೆದ 15 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪಾಲ್ಗೊಂಡು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಚುನಾವಣೆಗಳನ್ನು ಸುಗಮವಾಗಿ ನಡೆಸುವಲ್ಲಿ ಅನುಕರಣೀಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರಿಂದ “ಇಂಡಿಯಾ ವೋಟ್ಸ್ 2024: ಎ ಸಾಗಾ ಆಫ್ ಡೆಮಾಕ್ರಸಿ” ಪುಸ್ತಕದ ಮೊದಲ ಪ್ರತಿಯನ್ನು ಅವರು ಸ್ವೀಕರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ನಮ್ಮ ಪ್ರಜಾಪ್ರಭುತ್ವವು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮಾತ್ರವಲ್ಲ, ವಿಶ್ವದ ಅತಿದೊಡ್ಡ, ವೈವಿಧ್ಯಮಯ, ಯುವ, ಅಂತರ್ಗತ ಮತ್ತು ಸೂಕ್ಷ್ಮ ಪ್ರಜಾಪ್ರಭುತ್ವವಾಗಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಭಾರತದ ಪ್ರಜಾಪ್ರಭುತ್ವವು ಆಧುನಿಕ ಜಗತ್ತಿಗೆ ವಿಶಿಷ್ಟ ಉದಾಹರಣೆಯಾಗಿದೆ. ವಿಶ್ವದ ಅನೇಕ ದೇಶಗಳು ನಮ್ಮ ಚುನಾವಣಾ ವ್ಯವಸ್ಥೆ ಮತ್ತು ನಿರ್ವಹಣೆಯಿಂದ   ಕಲಿಯುತ್ತಿವೆ ಎಂದು ಅವರು ಹೇಳಿದರು. ನಮ್ಮ ಅಂತರ್ಗತ ಪ್ರಜಾಪ್ರಭುತ್ವದ ಪ್ರಭಾವಶಾಲಿ ನೋಟವು ಚುನಾವಣೆಗಳಲ್ಲಿ ಗೋಚರಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆಯು ನಮ್ಮ ಸಮಾಜ ಮತ್ತು ದೇಶದ ಒಟ್ಟಾರೆ ಅಭಿವೃದ್ಧಿಯ ಪ್ರಮುಖ ಸಂಕೇತವಾಗಿದೆ. 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಮತದಾರರು, ವಿಕಲಚೇತನ ಮತದಾರರು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಮತದಾರರಿಗೆ ಮತದಾನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಚುನಾವಣಾ ಆಯೋಗ ವಿಶೇಷ ಪ್ರಯತ್ನಗಳನ್ನು ಮಾಡಿದೆ ಎಂಬುದರತ್ತ  ಅವರು ಗಮನ ಸೆಳೆದರು. ಈ ರೀತಿಯಾಗಿ, ಚುನಾವಣಾ ಆಯೋಗವು ಅಂತರ್ಗತ ಮತ್ತು ಸೂಕ್ಷ್ಮ ಚುನಾವಣಾ ನಿರ್ವಹಣೆಗೆ ಉತ್ತಮ ಉದಾಹರಣೆಯನ್ನು ನೀಡಿದೆ ಎಂದೂ ಅವರು ಹೇಳಿದರು. ಮತದಾನಕ್ಕೆ ಸಂಬಂಧಿಸಿದ ಆದರ್ಶಗಳು ಮತ್ತು ಜವಾಬ್ದಾರಿಗಳು ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಆಯಾಮಗಳಾಗಿವೆ ಎಂದು ರಾಷ್ಟ್ರಪತಿ ಹೇಳಿದರು. ಚುನಾವಣಾ ಆಯೋಗ ಹೊರಡಿಸಿದ ಮತದಾರರ ಪ್ರತಿಜ್ಞೆ ಎಲ್ಲಾ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆಯ ಜೊತೆಗೆ, ಮತದಾರರು ಎಲ್ಲಾ ರೀತಿಯ ಸಂಕುಚಿತ ಮನೋಭಾವ, ತಾರತಮ್ಯ ಮತ್ತು ಪ್ರಲೋಭನೆಗಳನ್ನು ಮೀರಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ದೃಢ ಸಂಕಲ್ಪವನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಪ್ರಬುದ್ಧ ಮತದಾರರು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತಾರೆ ಎಂದು ಅವರು ನುಡಿದರು. 2011 ರಿಂದ, ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮವು ಮತದಾರರ ಕೇಂದ್ರೀಕರಣವನ್ನು ಒತ್ತಿಹೇಳುವುದು, ನಾಗರಿಕರಲ್ಲಿ ಚುನಾವಣಾ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

Read More »

2025ರ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾಷಣ

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ! ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ. ಗಣರಾಜ್ಯೋತ್ಸವದ ಮುನ್ನಾದಿನದಂದು, ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ! 75 ವರ್ಷಗಳ ಹಿಂದೆ ಇದೇ ಜನವರಿ 26ರಂದು ನಮ್ಮ ಸಂಸ್ಥಾಪಕ ದಾಖಲೆಯಾದ ಭಾರತದ ಸಂವಿಧಾನ ಜಾರಿಗೆ ಬಂದಿತು. ಸಂವಿಧಾನ ರಚನಾ ಸಭೆಯು ಸುಮಾರು ಮೂರು ವರ್ಷಗಳ ಚರ್ಚೆಯ ನಂತರ, 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿತು. ಆ ದಿನವನ್ನು, ಅಂದರೆ, ನವೆಂಬರ್ …

Read More »

ಸೈಬರ್ ಭದ್ರತೆ ಸಹಕಾರದ ಕುರಿತು ಬಿಮ್‌ ಸ್ಟೆಕ್ ತಜ್ಞರ ಗುಂಪಿನ ಎರಡನೇ ಸಭೆ

ಭಾರತ ಸರ್ಕಾರದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ನವದೆಹಲಿಯಲ್ಲಿ 2025ರ ಜನವರಿ 21ರಂದು ಸೈಬರ್ ಭದ್ರತೆ ಸಹಕಾರದ ಕುರಿತು ಬಿಮ್ ಸ್ಟೆಕ್ ತಜ್ಞರ ಗುಂಪಿನ ಎರಡನೇ ಸಭೆಯನ್ನು ಆಯೋಜಿಸಿತ್ತು. ಭಾರತ ಸೈಬರ್ ಭದ್ರತೆ ಕುರಿತ ಬಿಮ್‌ ಸ್ಟೆಕ್ ಗುಂಪಿನ ಮೊದಲ ತಜ್ಞರ ಸಮಿತಿ ಸಭೆಯನ್ನು ನವದೆಹಲಿಯಲ್ಲಿ 2022ರಲ್ಲಿ ಆಯೋಜಿಸಿತ್ತು. ಈ ಬಿಮ್ ಸ್ಟೆಕ್ ತಜ್ಞರ ಗುಂಪಿನ ಸಭೆಯ ಪ್ರಮುಖ ಉದ್ದೇಶವೆಂದರೆ, ಐಸಿಟಿ ಗಳ ಬಳಕೆಯಲ್ಲಿ ಸೈಬರ್ ಭದ್ರತೆಯನ್ನು ಬಲಪಡಿಸಲು ಬಿಮ್ …

Read More »

ಬನಾರಸ್ ಲೋಕೋಮೋಟಿವ್ ವರ್ಕ್ಸ್ ಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಭೇಟಿ

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು  2025ರ ಜನವರಿ 24 ರಂದು ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ಗೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಅವರು, ಬಿ ಎಲ್ ಡಬ್ಲ್ಯು ನ ನಾವಿನ್ಯತೆಗಳು, ರೈಲ್ವೆ ಎಂಜಿನ್ (ಚಲನಶೀಲ) ಉತ್ಪಾದನಾ ಸಾಮರ್ಥ್ಯಗಳು ಹಾಗೂ ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಅದರ ಮಹತ್ವದ ಜಾಗತಿಕ ಕೊಡುಗೆಗಳನ್ನು ಶ್ಲಾಘಿಸಿದರು. ಬಿ ಎಲ್ ಡಬ್ಲ್ಯು ಗೆ ಭೇಟಿ …

Read More »

2025ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎಂ.ಎನ್.ಆರ್.ಇ. ‘ಹೊಸ ಭಾರತದ ಸೂರ್ಯೋದಯ’ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದೆ

ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್.ಆರ್.ಇ.) ಆಕರ್ಷಕ ಸ್ತಬ್ಧಚಿತ್ರವನ್ನು ಅನಾವರಣಗೊಳಿಸಲಿದೆ. ಈ ವೈವಿದ್ಯಮಯ ಪ್ರದರ್ಶನವು ಭಾರತದ ವಿಕಸನಗೊಳ್ಳುತ್ತಿರುವ ಇಂಧನ ಕ್ಷೇತ್ರದ ಒಂದು ನೋಟವನ್ನು ನೀಡುತ್ತದೆ. ರಾಷ್ಟ್ರದ ಆಳವಾದ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವಾಗ ನವೀಕರಿಸಬಹುದಾದ ಇಂಧನದಲ್ಲಿ ಅದರ ಅದ್ಭುತ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ವಿಶ್ವದ ಅತಿದೊಡ್ಡ ವಸತಿ ಮೇಲ್ಛಾವಣಿ ಸೌರ ಉಪಕ್ರಮವು ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ, …

Read More »

ಭಾರತ ರತ್ನ ಕರ್ಪುರಿ ಠಾಕೂರ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬಿಹಾರದ ಮಾಜಿ ಮುಖ್ಯಮಂತ್ರಿಯವರಾದ, ಭಾರತ ರತ್ನ ಕರ್ಪುರಿ ಠಾಕೂರ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಶ್ರೀ ಮೋದಿಯವರು Xನಲ್ಲಿ ಪೋಸ್ಟ್ ಮಾಡಿ: “ಬಿಹಾರದ ಮಾಜಿ ಮುಖ್ಯಮಂತ್ರಿ ಭಾರತ ರತ್ನ ಕರ್ಪೂರಿ ಠಾಕೂರ್ ಅವರಿಗೆ ಜನ್ಮ ದಿನಾಚರಣೆಯಂದು ಗೌರವ ನಮನಗಳು. ಜನನಾಯಕರಾದ ಅವರು ತಮ್ಮ ಇಡೀ ಜೀವನವನ್ನು ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟು, ಆ ನಿಟ್ಟಿನಲ್ಲಿ ಅನೇಕ ಕಾರ್ಯಗಳನ್ನು ಮಾಡಿದ ಧೀಮಂತರು. ಅವರ ಜೀವನ …

Read More »

ಸಂಸ್ಥಾಪನಾ ದಿನದಂದು ಉತ್ತರ ಪ್ರದೇಶದ ಜನತೆಗೆ ಪ್ರಧಾನಮಂತ್ರಿಯವರು ಶುಭ ಕೋರಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶದ ಜನತೆಗೆ ಸಂಸ್ಥಾಪನಾ ದಿನದಂದು ಶುಭ ಕೋರಿದ್ದಾರೆ. Xನಲ್ಲಿ ಪೋಸ್ಟ್ ಮಾಡಿ: “ಉತ್ತರ ಪ್ರದೇಶದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಸಂಸ್ಥಾಪನಾ ದಿನದಂದು ಶುಭಾಶಯಗಳು. ಭಾರತೀಯ ಸಂಸ್ಕೃತಿಯ ಅಸಂಖ್ಯಾತ ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿರುವ ಈ ಪವಿತ್ರ ಭೂಮಿ ಕಳೆದ ಎಂಟು ವರ್ಷಗಳಿಂದ ಅಭಿವೃದ್ಧಿಯ ಹೊಸ ಅಧ್ಯಾಯಗಳನ್ನು ರಚಿಸುವ ನಿಟ್ಟಿನಲ್ಲಿ ಸಾಗಿದೆ. ಜನರ ಕಲ್ಯಾಣಕ್ಕಾಗಿ ಸಮರ್ಪಿತವಾದ ಸರ್ಕಾರ ಮತ್ತು ಈ …

Read More »

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವ್ಯಾಪಕವಾದ ಅವಕಾಶಗಳನ್ನು ನೀಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವಿಸ್ತೃತ ಶ್ರೇಣಿಯ ಅವಕಾಶಗಳನ್ನು ನೀಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. Xನ ಒಂದು ಥ್ರೆಡ್ ಪೋಸ್ಟ್ ನಲ್ಲಿ ಶ್ರೀ ಮೋದಿಯವರು: “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವ್ಯಾಪಕವಾದ ಅವಕಾಶಗಳನ್ನು ನೀಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಸಾಧನೆಗಳ ಬಗ್ಗೆ ಭಾರತ …

Read More »

ಐರ್ಲೆಂಡ್ ಪ್ರಧಾನಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀ ಮೈಕೆಲ್ ಮಾರ್ಟಿನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐರ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀ ಮೈಕೆಲ್ ಮಾರ್ಟಿನ್ ಅವರನ್ನು ಅಭಿನಂದಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ. “ಐರ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ  @MichealMartinTD ಅವರಿಗೆ  ಅಭಿನಂದನೆಗಳು. ಹಂಚಿಕೆಯ ಮೌಲ್ಯಗಳ ಭದ್ರ ಬುನಾದಿ ಮತ್ತು ಜನರ ನಡುವಿನ ಆಳವಾದ ಸಂಪರ್ಕವನ್ನು ಆಧರಿಸಿದ ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಒಗ್ಗೂಡಿ ಕೆಲಸ …

Read More »

ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಕ್ರೀಡಾಕೂಟ ಮೂಲಕ ಕ್ರೀಡಾ ಶ್ರೇಷ್ಠತೆಯನ್ನು ಹೊಸ ಮಟ್ಟಕ್ಕೆ ಏರಿಸಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ

ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ಕ್ರೀಡಾಕೂಟ ಇಂದು ಲಡಾಖ್‌ ನ ಲೇಹ್‌ ನಲ್ಲಿರುವ ಪ್ರಸಿದ್ಧ ಎನ್‌ಡಿಎಸ್ ಸ್ಟೇಡಿಯಂನಲ್ಲಿ ಬಹಳ ಉತ್ಸಾಹದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಮೊದಲ ಹಂತವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶವು ಆಯೋಜಿಸುತ್ತಿದೆ ಮತ್ತು ಇದು ಜನವರಿ 27, 2025 ರವರೆಗೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಫೆಬ್ರವರಿ 22 ರಿಂದ 25 ರವರೆಗೆ ಹಿಮದ ಹಿನ್ನೆಲೆಯ ಆಟಗಳನ್ನು ಆಯೋಜಿಸುತ್ತದೆ. 5000 ಸಾಮರ್ಥ್ಯದ ಎನ್‌ಡಿಎಸ್ ಕ್ರೀಡಾಂಗಣವು ಉದ್ಘಾಟನಾ ದಿನದಂದು …

Read More »