ನಮ್ಮ ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಧೈರ್ಯಶಾಲಿ ಮಹಿಳೆಯರು ಮತ್ತು ಪುರುಷರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಇಂದು ಸಶಸ್ತ್ರ ಪಡೆಗಳ ವೆಟರನ್ಸ್ ದಿನದ ಸಂದರ್ಭದಲ್ಲಿ, ನಮ್ಮ ವೆಟರನ್ ವೀರರು ದೇಶಭಕ್ತಿಯ ಶಾಶ್ವತ ಸಂಕೇತವಾಗಿದ್ದಾರೆ ಎಂದು ಹೇಳಿದ್ದಾರೆ. Xನ ಪೋಸ್ಟ್ ನಲ್ಲಿ, ಅವರು: “ಸಶಸ್ತ್ರ ಪಡೆಗಳ ವೆಟರನ್ಸ್ ದಿನದಂದು, ನಮ್ಮ ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಧೈರ್ಯಶಾಲಿ ಮಹಿಳೆಯರು ಮತ್ತು ಪುರುಷರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಅವರ ತ್ಯಾಗ, …
Read More »ಮಕರ ಸಂಕ್ರಾಂತಿಯ ಮಹಾ ಹಬ್ಬದಂದು ಮಹಾಕುಂಭದಲ್ಲಿ ನಡೆದ ಮೊದಲ ಅಮೃತ ಸ್ನಾನದಲ್ಲಿ ಪಾಲ್ಗೊಂಡ ಭಕ್ತರನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಕರ ಸಂಕ್ರಾಂತಿಯ ಮಹಾ ಹಬ್ಬದಂದು ಮಹಾಕುಂಭದಲ್ಲಿ ನಡೆದ ಮೊದಲ ಅಮೃತ ಸ್ನಾನದಲ್ಲಿ ಭಾಗವಹಿಸಿದ ಭಕ್ತರನ್ನು ಅಭಿನಂದಿಸಿದ್ದಾರೆ. ಮಹಾಕುಂಭ ಮೇಳದ ಮುನ್ನೋಟಗಳನ್ನು ಹಂಚಿಕೊಂಡ ಶ್ರೀ ಮೋದಿಯವರು: “ಮಹಾಕುಂಭದಲ್ಲಿ ಆದ ಭಕ್ತಿ ಮತ್ತು ಆಧ್ಯಾತ್ಮಿಕತೆಯ ಅದ್ಭುತ ಸಂಗಮ! ಮಕರ ಸಂಕ್ರಾಂತಿಯ ಹಬ್ಬದ ಸಂದರ್ಭದಲ್ಲಿ ಮಹಾಕುಂಭದ ಮೊದಲ ಅಮೃತ ಸ್ನಾನದಲ್ಲಿ ಭಾಗಿಯಾಗಿರುವ ಎಲ್ಲಾ ಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳು. ಮಹಾ ಕುಂಭದ ಕೆಲವು ಚಿತ್ರಗಳು…” ಎಂದು ಬರೆದಿದ್ದಾರೆ. …
Read More »ಜಾಗತಿಕ ಇಂಧನ ಸಂವಾದವನ್ನು ಮರು ವ್ಯಾಖ್ಯಾನಿಸಲಿರುವ ಭಾರತ ಇಂಧನ ಸಪ್ತಾಹ 2025
ಹಿಂದಿನ ಎರಡು ಆವೃತ್ತಿಗಳ ಗಮನಾರ್ಹ ಯಶಸ್ಸನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹಾಗೂ ಎತ್ತರಕ್ಕೆ ನಿರ್ಮಿಸುವ ಸಲುವಾಗಿ, ಭಾರತ ಸರ್ಕಾರದ ಪ್ರಮುಖ ಇಂಧನ ಕಾರ್ಯಕ್ರಮವಾದ ಭಾರತ ಇಂಧನ ಸಪ್ತಾಹ 2025 (ಇಂಡಿಯಾ ಎನರ್ಜಿ ವೀಕ್ – ಐ.ಇ.ಡಬ್ಲ್ಯ.’25) ಅನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ, ಫೆಬ್ರವರಿ 11 ರಿಂದ 14, 2025 ರವರೆಗೆ ನವದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ. ಇಂಧನ ವರ್ಷದ ಮೊದಲ ಪ್ರಮುಖ ಜಾಗತಿಕ …
Read More »ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ವರ್ಷದಿಂದ ವರ್ಷಕ್ಕೆ 15.84% ಬೆಳವಣಿಗೆಯನ್ನು ದಾಖಲಿಸಿದೆ
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂ.ಎನ್.ಆರ್.ಇ.) ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಗಮನಾರ್ಹ ಪ್ರಗತಿಯನ್ನು ವರದಿ ಮಾಡಿದೆ. ಇದು ಡಿಸೆಂಬರ್ 2023 ಮತ್ತು ಡಿಸೆಂಬರ್ 2024ರ ನಡುವಿನ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸುತ್ತದೆ. ಈ ಬೆಳವಣಿಗೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ ‘ಪಂಚಾಮೃತ’ ಯೋಜನೆಯ ಗುರಿಗಳ ದೃಷ್ಟಿಕೋನದ ಅಡಿಯಲ್ಲಿ ತನ್ನ ಶುದ್ಧ ಇಂಧನ ಗುರಿಗಳನ್ನು ಸಾಧಿಸುವ ಭಾರತದ ದೃಢ ಬದ್ಧತೆ ಮತ್ತು ಅದರ ವಿಶಾಲ …
Read More »ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಮಹಾ ಕುಂಭ ಮೇಳವು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯವನ್ನು ಆಚರಿಸುತ್ತದೆ: ಪ್ರಧಾನಮಂತ್ರಿ
ಪ್ರಯಾಗ್ ರಾಜ್ ನಲ್ಲಿ 2025ರ ಮಹಾಕುಂಭ ಮೇಳ ಆರಂಭವಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ. “ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟ್ಯಂತರ ಜನರಿಗೆ ಇದು ಬಹಳ ವಿಶೇಷವಾದ ದಿನವಾಗಿದೆ. ಮತ್ತು, ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಮಹಾ ಕುಂಭಮೇಳವು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯವನ್ನು ಆಚರಿಸುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದರು. ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ತಾಣದ ಸಂದೇಶದಲ್ಲಿ …
Read More »ಜನವರಿ 14ರಂದು ಭಾರತೀಯ ಹವಾಮಾನ ಇಲಾಖೆಯ 150ನೇ ಸಂಸ್ಥಾಪನಾ ದಿನಾಚರಣೆಯ ಆಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನವರಿ 14ರಂದು ಬೆಳಿಗ್ಗೆ 10:30ಕ್ಕೆ ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತೀಯ ಹವಾಮಾನ ಇಲಾಖೆಯ 150ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣವನ್ನು ಕೂಡಾ ಮಾಡಲಿದ್ದಾರೆ. ನಮ್ಮ ದೇಶವನ್ನು ‘ಹವಾಮಾನ ಸಿದ್ಧ ಮತ್ತು ಹವಾಮಾನ ಸ್ಮಾರ್ಟ್’ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಪ್ರಧಾನಿಯವರು ‘ಮಿಷನ್ ಮೌಸಮ್’ ಗೆ ಚಾಲನೆ ನೀಡಲಿದ್ದಾರೆ. ಅತ್ಯಾಧುನಿಕ ಹವಾಮಾನ ಕಣ್ಗಾವಲು ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಹೆಚ್ಚಿನ …
Read More »ಜನವರಿ 15 ರಂದು ಮಹಾರಾಷ್ಟ್ರಕ್ಕೆ ಪ್ರಧಾನಮಂತ್ರಿ ಭೇಟಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 15 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10:30ರ ಸುಮಾರಿಗೆ, ಪ್ರಧಾನಮಂತ್ರಿಯವರು ಮೂರು ಮುಂಚೂಣಿ ಯುದ್ಧ ನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್‌ಗಳನ್ನು ಮುಂಬೈನ ನೌಕಾ ನೌಕಾನೆಲೆಯಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನಂತರ, ಮಧ್ಯಾಹ್ನ 3:30ರ ಸುಮಾರಿಗೆ ಅವರು ನವಿ ಮುಂಬೈನ ಖಾರ್ಘರ್‌ನಲ್ಲಿ ಇಸ್ಕಾನ್ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಮೂರು ಪ್ರಮುಖ ನೌಕೆಗಳು ರಕ್ಷಣಾ ಉತ್ಪಾದನೆ ಮತ್ತು ಕಡಲ ಭದ್ರತೆಯಲ್ಲಿ …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋನಾಮಾರ್ಗ್ ಸುರಂಗವನ್ನು ಉದ್ಘಾಟಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋನಾಮಾರ್ಗ್ ಸುರಂಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಅಭಿವೃದ್ಧಿಗಾಗಿ ಶ್ರಮಿಸಿದ ಮತ್ತು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದರು. ಸವಾಲುಗಳ ಹೊರತಾಗಿಯೂ, ನಮ್ಮ ಸಂಕಲ್ಪವು ಚಂಚಲವಾಗಲಿಲ್ಲ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕಾರ್ಮಿಕರ ಸಂಕಲ್ಪ ಮತ್ತು ಬದ್ಧತೆಗಾಗಿ ಮತ್ತು ಕೆಲಸವನ್ನು ಪೂರ್ಣಗೊಳಿಸಲು ಎಲ್ಲಾ ಅಡೆತಡೆಗಳನ್ನು …
Read More »ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಾಗಿ ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ಒಡಿಶಾ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡುವೆ ಒಡಂಬಡಿಕೆಗೆ ಸಹಿ – ಒಡಿಶಾದ ಜನರಿಗೆ ಪ್ರಧಾನಮಂತ್ರಿ ಅಭಿನಂದನೆ
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಾಗಿ ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ಒಡಿಶಾ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡುವಿನ ಒಡಂಬಡಿಕೆಗಾಗಿ ಒಡಿಶಾದ ಜನರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಈ ಯೋಜನೆಯು ಕೈಗೆಟುಕುವ ದರದಲ್ಲಿ ಅತ್ಯುನ್ನತ ಗುಣಮಟ್ಟದ ಆರೋಗ್ಯ ಸೇವೆಯನ್ನು, ವಿಶೇಷವಾಗಿ ನಾರಿ ಶಕ್ತಿ ಮತ್ತು ಒಡಿಶಾದ ಹಿರಿಯ ನಾಗರಿಕರಿಗೆ ಖಚಿತಪಡಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. …
Read More »2025ರ ಮಹಾ ಕುಂಭವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ಉತ್ತೇಜಿಸಲು ಪ್ರವಾಸೋದ್ಯಮ ಸಚಿವಾಲಯ ಪ್ರಮುಖ ಉಪಕ್ರಮಗಳನ್ನು ಅನಾವರಣಗೊಳಿಸಿದೆ
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಮಹಾ ಕುಂಭ 2025 ಅನ್ನು ಆಧ್ಯಾತ್ಮಿಕ ಕೂಟಗಳಿಗೆ ಮಾತ್ರವಲ್ಲದೆ ಜಾಗತಿಕ ಪ್ರವಾಸೋದ್ಯಮಕ್ಕೂ ಹೆಗ್ಗುರುತು ಘಟನೆಯನ್ನಾಗಿ ಮಾಡಲು ಸಜ್ಜಾಗಿದೆ. ಈ ಮಹತ್ವದ ಸಂದರ್ಭವನ್ನು ಆಚರಿಸಲು, ಸಚಿವಾಲಯವು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ರೂಪಿಸುತ್ತಿದೆ. ಮಹಾ ಕುಂಭವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಧಾರ್ಮಿಕ ಸಭೆಗಳಲ್ಲಿ ಒಂದಾಗಿದೆ, ಇದನ್ನು ಪ್ರತಿ 12 ವರ್ಷಗಳಿಗೊಮ್ಮೆ ಭಾರತದ ನಾಲ್ಕು ಸ್ಥಳಗಳಲ್ಲಿ ಒಂದರಲ್ಲಿ ನಡೆಸಲಾಗುತ್ತದೆ. …
Read More »
Matribhumi Samachar Kannad