ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂ.ಎನ್.ಆರ್.ಇ.) ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಗಮನಾರ್ಹ ಪ್ರಗತಿಯನ್ನು ವರದಿ ಮಾಡಿದೆ. ಇದು ಡಿಸೆಂಬರ್ 2023 ಮತ್ತು ಡಿಸೆಂಬರ್ 2024ರ ನಡುವಿನ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸುತ್ತದೆ. ಈ ಬೆಳವಣಿಗೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ ‘ಪಂಚಾಮೃತ’ ಯೋಜನೆಯ ಗುರಿಗಳ ದೃಷ್ಟಿಕೋನದ ಅಡಿಯಲ್ಲಿ ತನ್ನ ಶುದ್ಧ ಇಂಧನ ಗುರಿಗಳನ್ನು ಸಾಧಿಸುವ ಭಾರತದ ದೃಢ ಬದ್ಧತೆ ಮತ್ತು ಅದರ ವಿಶಾಲ …
Read More »ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಮಹಾ ಕುಂಭ ಮೇಳವು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯವನ್ನು ಆಚರಿಸುತ್ತದೆ: ಪ್ರಧಾನಮಂತ್ರಿ
ಪ್ರಯಾಗ್ ರಾಜ್ ನಲ್ಲಿ 2025ರ ಮಹಾಕುಂಭ ಮೇಳ ಆರಂಭವಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ. “ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟ್ಯಂತರ ಜನರಿಗೆ ಇದು ಬಹಳ ವಿಶೇಷವಾದ ದಿನವಾಗಿದೆ. ಮತ್ತು, ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಮಹಾ ಕುಂಭಮೇಳವು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯವನ್ನು ಆಚರಿಸುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದರು. ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ತಾಣದ ಸಂದೇಶದಲ್ಲಿ …
Read More »ಜನವರಿ 14ರಂದು ಭಾರತೀಯ ಹವಾಮಾನ ಇಲಾಖೆಯ 150ನೇ ಸಂಸ್ಥಾಪನಾ ದಿನಾಚರಣೆಯ ಆಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನವರಿ 14ರಂದು ಬೆಳಿಗ್ಗೆ 10:30ಕ್ಕೆ ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತೀಯ ಹವಾಮಾನ ಇಲಾಖೆಯ 150ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣವನ್ನು ಕೂಡಾ ಮಾಡಲಿದ್ದಾರೆ. ನಮ್ಮ ದೇಶವನ್ನು ‘ಹವಾಮಾನ ಸಿದ್ಧ ಮತ್ತು ಹವಾಮಾನ ಸ್ಮಾರ್ಟ್’ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಪ್ರಧಾನಿಯವರು ‘ಮಿಷನ್ ಮೌಸಮ್’ ಗೆ ಚಾಲನೆ ನೀಡಲಿದ್ದಾರೆ. ಅತ್ಯಾಧುನಿಕ ಹವಾಮಾನ ಕಣ್ಗಾವಲು ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಹೆಚ್ಚಿನ …
Read More »ಜನವರಿ 15 ರಂದು ಮಹಾರಾಷ್ಟ್ರಕ್ಕೆ ಪ್ರಧಾನಮಂತ್ರಿ ಭೇಟಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 15 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10:30ರ ಸುಮಾರಿಗೆ, ಪ್ರಧಾನಮಂತ್ರಿಯವರು ಮೂರು ಮುಂಚೂಣಿ ಯುದ್ಧ ನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್‌ಗಳನ್ನು ಮುಂಬೈನ ನೌಕಾ ನೌಕಾನೆಲೆಯಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನಂತರ, ಮಧ್ಯಾಹ್ನ 3:30ರ ಸುಮಾರಿಗೆ ಅವರು ನವಿ ಮುಂಬೈನ ಖಾರ್ಘರ್‌ನಲ್ಲಿ ಇಸ್ಕಾನ್ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಮೂರು ಪ್ರಮುಖ ನೌಕೆಗಳು ರಕ್ಷಣಾ ಉತ್ಪಾದನೆ ಮತ್ತು ಕಡಲ ಭದ್ರತೆಯಲ್ಲಿ …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋನಾಮಾರ್ಗ್ ಸುರಂಗವನ್ನು ಉದ್ಘಾಟಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋನಾಮಾರ್ಗ್ ಸುರಂಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಅಭಿವೃದ್ಧಿಗಾಗಿ ಶ್ರಮಿಸಿದ ಮತ್ತು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದರು. ಸವಾಲುಗಳ ಹೊರತಾಗಿಯೂ, ನಮ್ಮ ಸಂಕಲ್ಪವು ಚಂಚಲವಾಗಲಿಲ್ಲ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕಾರ್ಮಿಕರ ಸಂಕಲ್ಪ ಮತ್ತು ಬದ್ಧತೆಗಾಗಿ ಮತ್ತು ಕೆಲಸವನ್ನು ಪೂರ್ಣಗೊಳಿಸಲು ಎಲ್ಲಾ ಅಡೆತಡೆಗಳನ್ನು …
Read More »ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಾಗಿ ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ಒಡಿಶಾ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡುವೆ ಒಡಂಬಡಿಕೆಗೆ ಸಹಿ – ಒಡಿಶಾದ ಜನರಿಗೆ ಪ್ರಧಾನಮಂತ್ರಿ ಅಭಿನಂದನೆ
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಾಗಿ ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ಒಡಿಶಾ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡುವಿನ ಒಡಂಬಡಿಕೆಗಾಗಿ ಒಡಿಶಾದ ಜನರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಈ ಯೋಜನೆಯು ಕೈಗೆಟುಕುವ ದರದಲ್ಲಿ ಅತ್ಯುನ್ನತ ಗುಣಮಟ್ಟದ ಆರೋಗ್ಯ ಸೇವೆಯನ್ನು, ವಿಶೇಷವಾಗಿ ನಾರಿ ಶಕ್ತಿ ಮತ್ತು ಒಡಿಶಾದ ಹಿರಿಯ ನಾಗರಿಕರಿಗೆ ಖಚಿತಪಡಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. …
Read More »2025ರ ಮಹಾ ಕುಂಭವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ಉತ್ತೇಜಿಸಲು ಪ್ರವಾಸೋದ್ಯಮ ಸಚಿವಾಲಯ ಪ್ರಮುಖ ಉಪಕ್ರಮಗಳನ್ನು ಅನಾವರಣಗೊಳಿಸಿದೆ
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಮಹಾ ಕುಂಭ 2025 ಅನ್ನು ಆಧ್ಯಾತ್ಮಿಕ ಕೂಟಗಳಿಗೆ ಮಾತ್ರವಲ್ಲದೆ ಜಾಗತಿಕ ಪ್ರವಾಸೋದ್ಯಮಕ್ಕೂ ಹೆಗ್ಗುರುತು ಘಟನೆಯನ್ನಾಗಿ ಮಾಡಲು ಸಜ್ಜಾಗಿದೆ. ಈ ಮಹತ್ವದ ಸಂದರ್ಭವನ್ನು ಆಚರಿಸಲು, ಸಚಿವಾಲಯವು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ರೂಪಿಸುತ್ತಿದೆ. ಮಹಾ ಕುಂಭವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಧಾರ್ಮಿಕ ಸಭೆಗಳಲ್ಲಿ ಒಂದಾಗಿದೆ, ಇದನ್ನು ಪ್ರತಿ 12 ವರ್ಷಗಳಿಗೊಮ್ಮೆ ಭಾರತದ ನಾಲ್ಕು ಸ್ಥಳಗಳಲ್ಲಿ ಒಂದರಲ್ಲಿ ನಡೆಸಲಾಗುತ್ತದೆ. …
Read More »ಸ್ವಾಮಿ ವಿವೇಕಾನಂದರ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವಾಮಿ ವಿವೇಕಾನಂದರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಶಾಶ್ವತ ಸ್ಫೂರ್ತಿಯಾಗಿದ್ದಾರೆ. ಅವರು ಯುವ ಮನಸ್ಸುಗಳಲ್ಲಿ ಉತ್ಸಾಹ ಮತ್ತು ಉದ್ದೇಶವನ್ನು ಬೆಳಗಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ: “ಸ್ವಾಮಿ ವಿವೇಕಾನಂದರ ಜಯಂತಿಯಂದು ಅವರಿಗೆ ಗೌರವ ನಮನಗಳು. ಯುವಕರಿಗೆ ಶಾಶ್ವತ ಸ್ಫೂರ್ತಿಯಾಗಿರುವ ಅವರು ಯುವ ಮನಸ್ಸುಗಳಲ್ಲಿ …
Read More »ಭುವನೇಶ್ವರದ ಜನತಾ ಮೈದಾನದಲ್ಲಿ ನಡೆಯುತ್ತಿರುವ 18ನೇ ಪ್ರವಾಸಿ ಭಾರತೀಯ ದಿನ ಸಮಾವೇಶದಲ್ಲಿ 09.01.2025ರಂದು ಕೇಂದ್ರ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್ ಎಂಇ) ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಭಾಗಿ
ಒಡಿಶಾದ ಭುವನೇಶ್ವರದ ಜನತಾ ಮೈದಾನದಲ್ಲಿ ನಡೆಯುತ್ತಿರುವ 18ನೇ ಪ್ರವಾಸಿ ಭಾರತೀಯ ದಿನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜನವರಿ 9ರಂದು ಉದ್ಘಾಟಿಸಿದರು. “ವಿಕಸಿತ ಭಾರತಕ್ಕೆ ಅನಿವಾಸಿ ಭಾರತೀಯರ ಕೊಡುಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವು ರಾಷ್ಟ್ರ ನಿರ್ಮಾಣದಲ್ಲಿ ಭಾರತದ ವಲಸಿಗರ ಪ್ರಮುಖ ಪಾತ್ರವನ್ನು ಪ್ರಮುಖವಾಗಿ ಎತ್ತಿ ತೋರಿಸುತ್ತಿದೆ.ಈ ಕಾರ್ಯಕ್ರಮದಲ್ಲಿ ನಾನಾ ಸಚಿವರು, ಅಧಿಕಾರಿಗಳು ಮತ್ತು ಗಮನಾರ್ಹ ಸಂಖ್ಯೆಯ ಪ್ರವಾಸಿ ಭಾರತೀಯರು ಭಾಗವಹಿಸಿದ್ದಾರೆ. ಕೇಂದ್ರ ಎಂಎಸ್ಎಂಇ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ, ಎಂಎಸ್ ಎಂಇ ಮತ್ತು ಅದರ ಸಂಸ್ಥೆಗಳು ತೆರೆದಿರುವ ಥೀಮ್ ಪೆವಿಲಿಯನ್ ಗೆ ಭೇಟಿ ನೀಡಿದ್ದರು. ಭುವನೇಶ್ವರದ ಕೇಂದ್ರೀಯ ಯಂತ್ರಾಗಾರ ಮತ್ತು ತರಬೇತಿ ಕೇಂದ್ರ (ಸಿಟಿಟಿಸಿ) ಅಭಿವೃದ್ಧಿಪಡಿಸಿರುವ ಚಂದ್ರಯಾನ-3 ಮಾದರಿಯನ್ನು ಪ್ರದರ್ಶಿಸಲಾಯಿತು. ಈ ಕೇಂದ್ರವು ಉತ್ತಮ ಗುಣಮಟ್ಟದ ನಿರ್ಣಾಯಕ ಘಟಕಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದು ಚಂದ್ರಯಾನ -3 ಮಿಷನ್ ಮತ್ತು “ಮೇಕ್ ಇನ್ ಇಂಡಿಯಾ” ಉಪಕ್ರಮದ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದೆ. ಅಲ್ಲದೆ, ಸಚಿವರು ಎಆರ್-ವಿಆರ್ ಅನುಭವ ಕೇಂದ್ರಗಳು, ಡ್ರೋಣ್ ತಂತ್ರಜ್ಞಾನಗಳು ಮತ್ತು ಸೌರ ಫಲಕ ಉತ್ಪಾದನಾ ಘಟಕಗಳು ಸೇರಿದಂತೆ ಹೊಸ ತಂತ್ರಜ್ಞಾನ ಪ್ರದರ್ಶನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅವರು ಖಾದಿ ಚರಕಗಳು, ಕೈ ಮಗ್ಗಗಳು ಮತ್ತು ಪೇಪರ್ ಮ್ಯಾಚೆಯಂತಹ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವ ಖಾದಿ ಮತ್ತು ಗ್ರಾಮೋದ್ಯೋಗ ಕುಶಲಕರ್ಮಿಗಳೊಂದಿಗೆ ಸಮಾಲೋಚಿಸಿದರು. ಅವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಸೆಪ್ಟೆಂಬರ್ 17ರಂದು ಉದ್ಘಾಟಿಸಿದ ಈ ಯೋಜನೆಯು, 18 ವ್ಯಾಪಾರಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ಕಸುಬುದಾರರಿಗೆ ಸಂಪೂರ್ಣ ಆರ್ಥಿಕ ನೆರವನ್ನು ಒದಗಿಸುವ ಎಂಎಸ್ ಎಂಇ ಸಚಿವಾಲಯದ ಪ್ರಮುಖ ಯೋಜನೆಯಾಗಿದೆ. ವೈದ್ಯಕೀಯ ಸಾಧನಗಳು, ಏರೋ ಎಂಜಿನಿಯರಿಂಗ್, ನೀರು ಶುದ್ಧೀಕರಣ ತಂತ್ರಜ್ಞಾನಗಳು ಮತ್ತು ರೇಷ್ಮೆ ಮತ್ತು ತೆಂಗಿನ ನಾರಿನ ಉತ್ಪನ್ನಗಳಂತಹ ಸ್ಥಳೀಯ ಕರಕುಶಲ ವಸ್ತುಗಳಲ್ಲಿ ಭಾರತದ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸುಶ್ರೀ ಶೋಭಾ ಕರಂದ್ಲಾಜೆ ಅವರು “ಚರಕದಿಂದ ಚಂದ್ರಯಾನಕ್ಕೆ” ಎಂಬ ಸೂಕ್ತ ಶೀರ್ಷಿಕೆಯ ಎಂಎಸ್ಎಂಇ ವಲಯದ ಥೀಮ್ ಮಳಿಗೆಯನ್ನು ಶ್ಲಾಘಿಸಿದರು. ಅವರು ದುಬೈನ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು. ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಮತ್ತು ಕರಕುಶಲತೆಯನ್ನು ಉತ್ತೇಜಿಸುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು. 2047ರ ವೇಳೆಗೆ “ವಿಕಸಿತ ಭಾರತ” ಗುರಿ ಸಾಧಿಸುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೂರದೃಷ್ಟಿಯ ಸಾಕಾರದಲ್ಲಿ ಅನಿವಾಸಿ ಭಾರತೀಯರ ಪಾತ್ರ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಪ್ರವಾಸಿ ಭಾರತೀಯರು ತಮ್ಮ ಬೇರುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸುವಂತೆ ಮತ್ತು ಭಾರತದ ಪ್ರಗತಿಗಾಥೆಗೆ ಸಕ್ರಿಯ ಕೊಡುಗೆ ನೀಡುವಂತೆ ಸಚಿವರು ಪ್ರೋತ್ಸಾಹಿಸಿದರು.
Read More »ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಮತ್ತು ಅವುಗಳ ಅಭಿವೃದ್ಧಿ ಮತ್ತು ಕಲ್ಯಾಣ ವೆಚ್ಚಗಳಿಗೆ ಹಣಕಾಸು ಒದಗಿಸಲು ₹1,73,030 ಕೋಟಿಗಳ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ
ಕೇಂದ್ರ ಸರ್ಕಾರ ಇಂದು ರಾಜ್ಯ ಸರ್ಕಾರಗಳಿಗೆ ₹1,73,030 ಕೋಟಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದ್ದು, ಡಿಸೆಂಬರ್ 2024 ರಲ್ಲಿ ಬಿಡುಗಡೆ ಮಾಡಬೇಕಿದ್ದ ₹89,086 ಕೋಟಿ ಹಂಚಿಕೆಗೆ ಬದಲಾಗಿ ಹೆಚ್ಚಿನ ಹಂಚಿಕೆಯನ್ನು ಮಾಡಲಾಗಿದೆ. ರಾಜ್ಯಗಳು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಮತ್ತು ಅವುಗಳ ಅಭಿವೃದ್ಧಿ ಮತ್ತು ಕಲ್ಯಾಣ ವೆಚ್ಚಗಳಿಗೆ ಹಣಕಾಸು ಒದಗಿಸಲು ಈ ತಿಂಗಳು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಮೊತ್ತದ ರಾಜ್ಯವಾರು ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ: ಕ್ರ.ಸಂ. ರಾಜ್ಯದ ಹೆಸರು …
Read More »
Matribhumi Samachar Kannad