Wednesday, December 10 2025 | 07:10:14 AM
Breaking News

Matribhumi Samachar

ಜಿ-20 ಶೃಂಗಸಭೆ ವೇಳೆ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ: ಅಧಿವೇಶನ -3

ಗೌರವಾನ್ವಿತರೇ, ತಂತ್ರಜ್ಞಾನ ಮುಂದುವರಿದಂತೆ, ಅವಕಾಶಗಳು ಮತ್ತು ಸಂಪನ್ಮೂಲಗಳು ಎರಡೂ ಕೆಲವೇ ಜನರ ಕೈಗಳಲ್ಲಿ ಕೇಂದ್ರೀಕೃತವಾಗುತ್ತಿವೆ. ವಿಶ್ವದಾದ್ಯಂತ ನಿರ್ಣಾಯಕ ತಂತ್ರಜ್ಞಾನಗಳ ಮೇಲಿನ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ಇದು ಮನುಕುಲಕ್ಕೆ ಕಳವಳಕಾರಿ ವಿಷಯವಾಗಿದೆ ಮತ್ತು ಇದು ನಾವೀನ್ಯತೆಗೆ ದೊಡ್ಡ ಅಡ್ಡಿಯಾಗಿದೆ. ಇದನ್ನು ಪರಿಹರಿಸಲು ನಾವು ನಮ್ಮ ಕಾರ್ಯ ವಿಧಾನದಲ್ಲಿ ಮೂಲಭೂತ ಬದಲಾವಣೆಯನ್ನು ತಂದುಕೊಳ್ಳಬೇಕಾಗಿದೆ. ’ಹಣಕಾಸು ಕೇಂದ್ರಿತ’ ಬದಲು ‘ಮಾನವ ಕೇಂದ್ರಿತ’, ಕೇವಲ ‘ರಾಷ್ಟ್ರೀಯ’ ಬದಲು ‘ಜಾಗತಿಕ’ ಮತ್ತು ‘ವಿಶೇಷ’ ಬದಲು ‘ಓಪನ್ ಸೋರ್ಸ್’ ಮಾದರಿಗಳನ್ನು …

Read More »

ಐ.ಬಿ.ಎಸ್.ಎ ನಾಯಕರ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ

ಗೌರವಾನ್ವಿತ ಅಧ್ಯಕ್ಷ ರಾಮಫೋಸಾ, ಗೌರವಾನ್ವಿತ ಅಧ್ಯಕ್ಷ ಲೂಲಾ, ಸ್ನೇಹಿತರೇ, ನಮಸ್ಕಾರ! ಜೋಹಾನ್ಸ್‌ಬರ್ಗ್‌ನ ರೋಮಾಂಚಕ ಮತ್ತು ಸುಂದರ ನಗರದಲ್ಲಿ ನಡೆಯುತ್ತಿರುವ ಐಬಿಎಸ್‌ಎ ನಾಯಕರ ಸಭೆಯಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಉಪಕ್ರಮಕ್ಕಾಗಿ ಐಬಿಎಸ್‌ಎ ಅಧ್ಯಕ್ಷ ಲೂಲಾ ಮತ್ತು ಅವರ ಆತ್ಮೀಯ ಆತಿಥ್ಯಕ್ಕಾಗಿ ಅಧ್ಯಕ್ಷ ರಾಮಫೋಸಾ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಐಬಿಎಸ್‌ಎ ಕೇವಲ ಮೂರು ದೇಶಗಳ ವೇದಿಕೆಯಲ್ಲ; ಇದು ಮೂರು ಖಂಡಗಳು, ಮೂರು ಪ್ರಮುಖ ಪ್ರಜಾಪ್ರಭುತ್ವ ಶಕ್ತಿಗಳು ಮತ್ತು …

Read More »

ಯು.ಎನ್.ಎಫ್.ಸಿ.ಸಿ.ಸಿ. ಸಿಒಪಿ 30ರಲ್ಲಿ ಪ್ರಮುಖ ಫಲಿತಾಂಶಗಳನ್ನು ಸ್ವಾಗತಿಸಿದ ಭಾರತ; ಸಮಾನತೆ, ಹವಾಮಾನ ನ್ಯಾಯ ಮತ್ತು ಜಾಗತಿಕ ಒಗ್ಗಟ್ಟಿನ ಬದ್ಧತೆ ಕುರಿತು ಪುನರುಚ್ಚಾರ

ಸಿಒಪಿ 30 ಅಧ್ಯಕ್ಷತೆಯ ಅಂತರ್ಗತ ನಾಯಕತ್ವಕ್ಕೆ ಭಾರತವು ಬಲವಾದ ಬೆಂಬಲವನ್ನು ವ್ಯಕ್ತಪಡಿಸಿತು ಮತ್ತು 22.11.2025 ರಂದು ಬ್ರೆಜಿಲ್ ನ ಬೆಲೆಮ್ ನಲ್ಲಿ ನಡೆದ ಯು.ಎನ್.ಎಫ್.ಸಿ.ಸಿ.ಸಿ. ಸಿಒಪಿ 30ರ ಸಮಾರೋಪ ಸಮಾರಂಭದಲ್ಲಿ ಉನ್ನತ ಮಟ್ಟದ ಹೇಳಿಕೆಯಲ್ಲಿ ಸಮ್ಮೇಳನದಲ್ಲಿ ಅಳವಡಿಸಿಕೊಂಡ ಹಲವಾರು ಮಹತ್ವದ ನಿರ್ಧಾರಗಳನ್ನು ಸ್ವಾಗತಿಸಿತು. ಈ ಹೇಳಿಕೆಯು ಸಿಒಪಿ ಅಧ್ಯಕ್ಷರ ನಾಯಕತ್ವಕ್ಕಾಗಿ ಭಾರತದ ಕೃತಜ್ಞತೆಯನ್ನು ತಿಳಿಸಿತು. ಇದು ಸೇರ್ಪಡೆ, ಸಮತೋಲನ ಮತ್ತು ಮುಟಿರಾವೊದ ಬ್ರೆಜಿಲಿಯನ್ ಮನೋಭಾವದಲ್ಲಿ ಬೇರೂರಿದೆ ಮತ್ತು ಸಿಒಪಿ 30 ಅನ್ನು ಸಮಗ್ರತೆಯಿಂದ ಮಾರ್ಗದರ್ಶನ ಮಾಡಿದೆ. …

Read More »

ಜಿ20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ: ಅಧಿವೇಶನ 2

ಘನತೆವೆತ್ತರೇ, ನೈಸರ್ಗಿಕ ವಿಕೋಪಗಳು ಮಾನವೀಯತೆಗೆ ಪ್ರಮುಖ ಸವಾಲನ್ನು ಒಡ್ಡುತ್ತಲೇ ಇವೆ. ಈ ವರ್ಷವೂ ಅವು ಜಾಗತಿಕ ಜನಸಂಖ್ಯೆಯ ಹೆಚ್ಚಿನ ಭಾಗದ ಮೇಲೆ ಪರಿಣಾಮ ಬೀರಿವೆ. ಪರಿಣಾಮಕಾರಿ ವಿಪತ್ತು ಸಿದ್ಧತೆ ಮತ್ತು ಪ್ರತಿಕ್ರಿಯೆಗಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಈ ಘಟನೆಗಳು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ. ಈ ಚಿಂತನೆಯನ್ನು ಬೆಂಬಲಿಸಲು, ಭಾರತವು ತನ್ನ ಜಿ20 ಅಧ್ಯಕ್ಷತೆಯಲ್ಲಿ ವಿಪತ್ತು ಅಪಾಯ ಕಡಿತ ಕಾರ್ಯ ಗುಂಪನ್ನು ರಚಿಸಿತು. ಈ ಪ್ರಮುಖ ಕಾರ್ಯಸೂಚಿಗೆ ಆದ್ಯತೆ ನೀಡಿದ್ದಕ್ಕಾಗಿ ದಕ್ಷಿಣ …

Read More »

ಜಿ20 ಶೃಂಗಸಭೆಯ ಮೊದಲ ಅಧಿವೇಶನ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ

ಗೌರವಾನ್ವಿತರೇ, ನಮಸ್ಕಾರ! ಮೊದಲನೆಯದಾಗಿ, ಜಿ20 ಶೃಂಗಸಭೆಯ ಅತ್ಯುತ್ತಮ ಆತಿಥ್ಯ ಮತ್ತು ಯಶಸ್ವಿ ಅಧ್ಯಕ್ಷತೆಗಾಗಿ ಅಧ್ಯಕ್ಷ ರಾಮಫೋಸಾ ಅವರನ್ನು ನಾನು ಅಭಿನಂದಿಸುತ್ತೇನೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ, ಕೌಶಲ್ಯದ ವಲಸೆ, ಪ್ರವಾಸೋದ್ಯಮ, ಆಹಾರ ಭದ್ರತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರ್ಥಿಕತೆ, ನಾವೀನ್ಯತೆ ಮತ್ತು ಮಹಿಳಾ ಸಬಲೀಕರಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ನವದೆಹಲಿಯ ಜಿ20 ಶೃಂಗಸಭೆಯಲ್ಲಿ ಪ್ರಾರಂಭಿಸಲಾದ ಐತಿಹಾಸಿಕ ಉಪಕ್ರಮಗಳನ್ನು ಇಲ್ಲಿಯೂ ಮುಂದುವರಿಸಲಾಗಿದೆ. ಸ್ನೇಹಿತರೇ, ಕಳೆದ ಹಲವಾರು ದಶಕಗಳಲ್ಲಿ, ಜಿ20 ಜಾಗತಿಕ …

Read More »

ಶಿಕ್ಷಣ ಸಚಿವಾಲಯದಿಂದ 2025ರ ಡಿಸೆಂಬರ್ 2 ರಿಂದ ಕಾಶಿ ತಮಿಳ್‌ ಸಂಗಮಂ (ಕೆ.ಟಿ.ಎಸ್) 4.0 ಆಯೋಜನೆ

ಕೇಂದ್ರ ಶಿಕ್ಷಣ ಸಚಿವಾಲಯವು ತಮಿಳುನಾಡು ಮತ್ತು ಕಾಶಿ ನಡುವಿನ ಗಾಢವಾದ ನಾಗರಿಕ ಸಂಬಂಧಗಳನ್ನು ನೆನಪು ಮಾಡಿಕೊಂಡು ಸಂಭ್ರಮಿಸಲು 2025ರ ಡಿಸೆಂಬರ್ 2 ರಿಂದ ಕಾಶಿ ತಮಿಳು ಸಂಗಮಮ್ (ಕೆ.ಟಿ.ಎಸ್) 4.0ನ ನಾಲ್ಕನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರೇಪಣೆ ಪಡೆದಿರುವ ಈ ಉಪಕ್ರಮವು, ಎರಡೂ ಪ್ರದೇಶಗಳ ನಡುವಿನ ನಾಗರಿಕತೆ, ಸಾಂಸ್ಕೃತಿಕ, ಭಾಷಾಶಾಸ್ತ್ರ ಮತ್ತು  ಜನರ ನಡುವಿನ ಸಂಪರ್ಕವನ್ನು ಗೌರವಿಸುವುದನ್ನು ಮುಂದುವರೆಸುತ್ತದೆ ಮತ್ತು ಇದು ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಯನ್ನು …

Read More »

ಅಹಮದಾಬಾದ್‌ ನಲ್ಲಿ ಇಂದು ನಡೆದ ಅಹಮದಾಬಾದ್ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು ಮತ್ತು ವಿವಿಧ ಮಳಿಗೆಗಳಿಗೆ ಭೇಟಿ ನೀಡಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಅಹಮದಾಬಾದ್‌ ನಲ್ಲಿ ನಡೆದ ಅಹಮದಾಬಾದ್ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು ಮತ್ತು ವಿವಿಧ ಮಳಿಗೆಗಳಿಗೆ ಭೇಟಿ ನೀಡಿದರು. ‘ಎಕ್ಸ್ ತಾಣದ ಸಂದೇಶದಲ್ಲಿ ಸಚಿವರಾದ ಶ್ರೀ ಅಮಿತ್ ಶಾ ಅವರು ಪುಸ್ತಕಗಳು ಜ್ಞಾನದ ಮೂಲ ಮಾತ್ರವಲ್ಲ, ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ಮಾಧ್ಯಮವಾಗಿದೆ ಎಂದು ಹೇಳಿದರು. ಅವರು, ಇಂದು, ನಾನು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದೆ ಮತ್ತು ಎಎಂಸಿ …

Read More »

56ನೇ ಐ.ಎಫ್.ಎಫ್‌.ಐ ನಲ್ಲಿ ವೈವಿಧ್ಯಮಯ ಪ್ರಾದೇಶಿಕ ನಿರೂಪಣೆಗಳನ್ನು ಮುನ್ನೆಲೆಗೆ ತಂದ “ಸು ಫ್ರಮ್ ಸೋ”, “ಮಾಲಿಪುಟ್ ಮೆಲೊಡೀಸ್” ಮತ್ತು “ಬಿಯೆ ಫಿಯೆ ನಿಯೆ”ಚಲನಚಿತ್ರಗಳು

56ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್‌.ಎಫ್‌.ಐ) ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವುದನ್ನು ಮುಂದುವರೆಸಿತು, ಭಾರತೀಯ ಪನೋರಮಾ ಚಲನಚಿತ್ರಗಳ ವಿಭಾಗದ ಅಡಿಯಲ್ಲಿ ಮೂರು ಪ್ರಾದೇಶಿಕ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು: ಕನ್ನಡ ಚಲನಚಿತ್ರ “ಸು ಫ್ರಮ್ ಸೋ”, ಒಡಿಯಾ ಚಲನಚಿತ್ರ “ಮಾಲಿಪುಟ್ ಮೆಲೋಡೀಸ್” ಮತ್ತು ಬಂಗಾಳಿ ಚಲನಚಿತ್ರ “ಬಿಯೇ ಫಿಯೇ ನಿಯೇ”. ಚಲನಚಿತ್ರಗಳ ನಿರ್ದೇಶಕರು ಮತ್ತು ನಿರ್ಮಾಪಕರು ಇಂದು ಗೋವಾದಲ್ಲಿ ನಡೆದ ಪತ್ರಿಕಾಗೋಷ್ಠಿಗಳಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ಚಲನಚಿತ್ರ “ಸು …

Read More »

ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ಸ್ವಾಗತಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ಸ್ವಾಗತಿಸಿದ್ದಾರೆ. ಇದು ಸ್ವಾತಂತ್ರ್ಯಾ ನಂತರದ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಕಾರ್ಮಿಕ ಆಧಾರಿತ ಸುಧಾರಣೆಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ. ಈ ಸುಧಾರಣೆಗಳು ಕಾರ್ಮಿಕರನ್ನು ಹೆಚ್ಚು ಸಬಲೀಕರಣಗೊಳಿಸುತ್ತವೆ ಮತ್ತು ಅನುಸರಣೆಯನ್ನು ಗಮನಾರ್ಹವಾಗಿ ಸರಳಗೊಳಿಸುತ್ತವೆ ಮತ್ತು ‘ಸುಲಭ ವ್ಯವಹಾರ’ವನ್ನು ಉತ್ತೇಜಿಸುತ್ತವೆ ಎಂದು ಅವರು ಹೇಳಿದರು. ನಾಲ್ಕು ಕಾರ್ಮಿಕ ಸಂಹಿತೆಗಳು ಸಾರ್ವತ್ರಿಕ ಸಾಮಾಜಿಕ ಭದ್ರತೆ, ಕನಿಷ್ಠ ಮತ್ತು ಸಮಯೋಚಿತ ವೇತನ ಪಾವತಿ, …

Read More »

ಗುಜರಾತ್‌ ನ ಭುಜ್‌ ನಲ್ಲಿ ನಡೆದ ಗಡಿ ಭದ್ರತಾ ಪಡೆಯ (ಬಿ.ಎಸ್‌.ಎಫ್) ‘ವಜ್ರ ಮಹೋತ್ಸವ’ ಸಮಾರಂಭವನ್ನು ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಭಾಷಣ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ ನ ಭುಜ್‌ ನಲ್ಲಿ ನಡೆದ ಗಡಿ ಭದ್ರತಾ ಪಡೆಯ (ಬಿ.ಎಸ್‌.ಎಫ್) ‘ವಜ್ರ ಮಹೋತ್ಸವ’ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗುಜರಾತ್‌ ನ ಉಪ ಮುಖ್ಯಮಂತ್ರಿ ಶ್ರೀ ಹರ್ಷ ಸಂಘವಿ, ಬಿ.ಎಸ್‌.ಎಫ್ ಮಹಾನಿರ್ದೇಶಕ ಶ್ರೀ ದಲ್ಜಿತ್ ಸಿಂಗ್ ಚೌಧರಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು, ‘ಕಳೆದ …

Read More »