ವ್ಯಾಪಕವಾದ ವಿಮಾನ ರದ್ದತಿ ಮತ್ತು ಚಳಿಗಾಲದ ದಟ್ಟಣೆಯ ಹಿನ್ನೆಲೆಯಲ್ಲಿ, ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ರೈಲ್ವೆಯು ಸುಗಮ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದೆ. ಇಂದಿನಿಂದ ಪ್ರಾರಂಭವಾಗಿ ಮುಂದಿನ ಮೂರು ದಿನಗಳ ಕಾಲ ವಿವಿಧ ವಲಯಗಳಲ್ಲಿ 89 ವಿಶೇಷ ರೈಲು ಸೇವೆಗಳು (100ಕ್ಕೂ ಹೆಚ್ಚು ಟ್ರಿಪ್‌ಗಳು) ಸಂಚರಿಸಲಿವೆ. ರೈಲು ಪ್ರಯಾಣಕ್ಕೆ ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಪ್ರಯಾಣಿಕರಿಗೆ ಸಮರ್ಪಕ ಸಂಪರ್ಕ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಲು ಇದು ಸಹಕಾರಿಯಾಗಲಿದೆ. ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು …
Read More »ಫಲಿತಾಂಶಗಳ ಪಟ್ಟಿ: ರಷ್ಯಾ ಒಕ್ಕೂಟದ ಅಧ್ಯಕ್ಷರ ಅಧಿಕೃತ ಭಾರತ ಭೇಟಿ
ತಿಳುವಳಿಕಾ ಒಡಂಬಡಿಕೆಗಳು ಮತ್ತು ಒಪ್ಪಂದಗಳು. ವಲಸೆ ಮತ್ತು ಚಲನಶೀಲತೆ: ಒಂದು ದೇಶದ ನಾಗರಿಕರು ಇನ್ನೊಂದು ದೇಶದ ಭೂಭಾಗದಲ್ಲಿ ಕೈಗೊಳ್ಳುವ ತಾತ್ಕಾಲಿಕ ಕಾರ್ಮಿಕ ಚಟುವಟಿಕೆಯ ಕುರಿತು ಭಾರತ ಗಣರಾಜ್ಯ ಸರ್ಕಾರ ಮತ್ತು ರಷ್ಯನ್ ಒಕ್ಕೂಟ ಸರ್ಕಾರದ ನಡುವೆ ಒಪ್ಪಂದ ಅಕ್ರಮ ವಲಸೆಯನ್ನು ಎದುರಿಸುವಲ್ಲಿ/ತಡೆಯುವಲ್ಲಿ ಸಹಕಾರದ ಕುರಿತು ಭಾರತ ಗಣರಾಜ್ಯ ಸರ್ಕಾರ ಮತ್ತು ರಷ್ಯನ್ ಒಕ್ಕೂಟ ಸರ್ಕಾರದ ನಡುವೆ ಒಪ್ಪಂದ. ಆರೋಗ್ಯ ಮತ್ತು ಆಹಾರ ಸುರಕ್ಷತೆ: ಆರೋಗ್ಯ ರಕ್ಷಣೆ, ವೈದ್ಯಕೀಯ ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಗಣರಾಜ್ಯದ ಆರೋಗ್ಯ ಮತ್ತು ಕುಟುಂಬ …
Read More »ರಷ್ಯಾ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
ಗೌರವಾನ್ವಿತ, ನನ್ನ ಸ್ನೇಹಿತ, ಅಧ್ಯಕ್ಷ ಪುಟಿನ್, ಎರಡೂ ದೇಶಗಳ ಪ್ರತಿನಿಧಿಗಳೇ ಮಾಧ್ಯಮದ ಸ್ನೇಹಿತರೇ, ನಮಸ್ಕಾರ! ಡೋಬ್ರಿ ಡೆನ್! (ರಶ್ಯನ್ ಭಾಷೆಯಲ್ಲಿ ಶುಭ ಮಧ್ಯಾಹ್ನ) ಇಂದು 23 ನೇ ಭಾರತ-ರಷ್ಯಾ ಶೃಂಗಸಭೆಗೆ ಅಧ್ಯಕ್ಷ ಪುಟಿನ್ ಅವರನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧವು ಹಲವಾರು ಐತಿಹಾಸಿಕ ಮೈಲಿಗಲ್ಲುಗಳ ಮೂಲಕ ಸಾಗುತ್ತಿರುವ ಸಮಯದಲ್ಲಿ ಅವರ ಭೇಟಿ ಬಂದಿದೆ. ನಿಖರವಾಗಿ 25 ವರ್ಷಗಳ ಹಿಂದೆ, ಅಧ್ಯಕ್ಷ ಪುಟಿನ್ ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಅಡಿಪಾಯ ಹಾಕಿದರು. ಹದಿನೈದು ವರ್ಷಗಳ ಹಿಂದೆ, 2010 ರಲ್ಲಿ, …
Read More »ಕೃಷಿ ಕ್ಷೇತ್ರದಲ್ಲಿ ಭಾರತ-ರಷ್ಯಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಕೃಷಿ ಸಚಿವರು ರಷ್ಯಾದ ತಮ್ಮ ಸಹವರ್ತಿಯೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ರಷ್ಯಾ ಒಕ್ಕೂಟದ ಕೃಷಿ ಸಚಿವರಾದ ಗೌರವಾನ್ವಿತ ಶ್ರೀಮತಿ ಒಕ್ಸಾನಾ ಲುಟ್ ಅವರೊಂದಿಗೆ 2025ರ ಡಿಸೆಂಬರ್ 4 ರಂದು ಕೃಷಿ ಭವನದಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಭೆಯಲ್ಲಿ ಉಭಯ ನಾಯಕರು ಪ್ರಸ್ತುತ ನಡೆಯುತ್ತಿರುವ ಸಹಕಾರದ ಕುರಿತು ಚರ್ಚಿಸಿದರು ಮತ್ತು ಭವಿಷ್ಯದ ಸಹಯೋಗದ ಕ್ಷೇತ್ರಗಳನ್ನು ಗುರುತಿಸಿದರು. ಭಾರತ ಮತ್ತು ರಷ್ಯಾ ಸಂಬಂಧಗಳು ವಿಶ್ವಾಸ, ಸ್ನೇಹ ಮತ್ತು …
Read More »ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಗುಜರಾತ್ ನಲ್ಲಿ ‘ಅರ್ಥ್ ಶೃಂಗಸಭೆ – 2025’ ಉದ್ಘಾಟಿಸಿದರು
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಅರ್ಥ್ ಶೃಂಗಸಭೆ 2025 ಅನ್ನು ಉದ್ಘಾಟಿಸಿದರು. ಶ್ರೀ ಅಮಿತ್ ಶಾ ಅವರು ‘ಸಹಕಾರ ಸಾರಥಿ’ ಅಡಿಯಲ್ಲಿ 13ಕ್ಕೂ ಹೆಚ್ಚು ಹೊಸ ಸೇವೆಗಳು ಮತ್ತು ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಇವುಗಳಲ್ಲಿ ಡಿಜಿ ಕೆಸಿಸಿ, ಅಭಿಯಾನ ಸಾರಥಿ, ವೆಬ್‌ಸೈಟ್ ಸಾರಥಿ, ಸಹಕಾರಿ ಆಡಳಿತ ಸೂಚ್ಯಂಕ, ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣಾ ಅಪ್ಲಿಕೇಶನ್ …
Read More »ಕರ್ನಾಟಕದಲ್ಲಿ ನವೋದ್ಯಮಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರದಿಂದ ಹಲವು ಉಪಕ್ರಮ
ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನೇತರ ಹಾಗೂ ನವೋದ್ಯಮಗಳ ಉತ್ತೇಜನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಹಲವು ಉಪ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ದಡಿ ಭಾರತೀಯ ಸಾಫ್ಟ್ ವೇರ್ ತಂತ್ರಜ್ಞಾನ ಪಾರ್ಕ್ (ಎಸ್ ಟಿ ಪಿ ಐ ) ಮೂಲಕ ಗುಣಮಟ್ಟದ ಮೂಲಸೌಕರ್ಯ, ವೇಗದ ಸಂಪರ್ಕ, ಸಂಪೋಷಣೆ ಮತ್ತು ನೀತಿ ಬೆಂಬಲವನ್ನು ನೀಡುತ್ತಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ …
Read More »ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ 33ನೇ ಸಭೆಯು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ರಾಷ್ಟ್ರೀಯ ತೋಟಗಾರಿಕೆ ಮಂಡಳಿ (ಎನ್.ಹೆಚ್.ಬಿ) ನಿರ್ದೇಶಕರ ಮಂಡಳಿಯ 33ನೇ ಸಭೆ ಇಂದು ನವದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಮುಖ ಕಾರ್ಯಕ್ರಮಗಳು ಮತ್ತು ಕಾರ್ಯತಂತ್ರ ರೂಪುರೇಷೆಗಳ ಪರಿಶೀಲನಾ ಸಭೆಯಲ್ಲಿ – ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು …
Read More »ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮತ್ತು ಸಂಸತ್ ಸದಸ್ಯರು ಬನಾಸ್ ಡೈರಿಗೆ ಕ್ಷೇತ್ರ ಭೇಟಿ ನೀಡಲಿದ್ದಾರೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ನೇತೃತ್ವದ ಸಹಕಾರ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯು, ಡೈರಿ ಅಭಿವೃದ್ಧಿ, ಮರುಬಳಕೆ ಆರ್ಥಿಕತೆ, ಕೃಷಿ ಮೌಲ್ಯವರ್ಧನೆ, ಜಾನುವಾರು ಉತ್ಪಾದಕತೆ, ನೀರಿನ ಸಂರಕ್ಷಣೆ ಮತ್ತು ಗ್ರಾಮೀಣ ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವ ಕ್ಷೇತ್ರಗಳಲ್ಲಿ ಬನಾಸ್ ಡೈರಿ ಕೈಗೊಂಡ ಪ್ರಮುಖ ಉಪಕ್ರಮಗಳನ್ನು ಪರಿಶೀಲಿಸಲಿದೆ. ಡಿಸೆಂಬರ್ 4 ರಿಂದ 6 ರವರೆಗೆ ಬನಸ್ಕಾಂತದಲ್ಲಿರುವ ಬನಾಸ್ ಡೈರಿಗೆ ನೀಡುವ ಕ್ಷೇತ್ರ ಭೇಟಿಯು, ಪ್ರಧಾನಮಂತ್ರಿ ಶ್ರೀ ನರೇಂದ್ರ …
Read More »ಬೆಳ್ಳಿ ಆಭರಣಗಳಿಗೆ ಹೆಚ್.ಯು.ಐ.ಡಿ ಕಡ್ಡಾಯ ಕುರಿತ ಇತ್ತೀಚಿನ ಮಾಹಿತಿ
ಬೆಳ್ಳಿಗೆ ಕಡ್ಡಾಯ ಹೆಚ್.ಯು.ಐ.ಡಿ (ಹಾಲ್ ಮಾರ್ಕಿಂಗ್ ಯೂನಿಕ್ ಐಡೆಂಟಿಫಿಕೇಷನ್) ಜಾರಿಗೆ ಬಂದ ನಂತರದ ಮೊದಲ ಮೂರು ತಿಂಗಳಲ್ಲಿ, 17 ಲಕ್ಷಕ್ಕೂ ಹೆಚ್ಚು ಬೆಳ್ಳಿಯ ವಸ್ತುಗಳನ್ನು ಹಾಲ್ ಮಾರ್ಕ್ ಮಾಡಲಾಗಿದೆ, ಇದು ಆಭರಣ ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಬಲವಾದ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. ಬೆಳ್ಳಿ ಹಾಲ್ ಮಾರ್ಕ್ ಯೋಜನೆ ಸ್ವಯಂಪ್ರೇರಿತವಾಗಿದ್ದರೂ, ಹಾಲ್ ಮಾರ್ಕ್ ಮಾಡಲಾದ ಯಾವುದೇ ಬೆಳ್ಳಿ ವಸ್ತುವಿಗೆ ಹೆಚ್.ಯು.ಐ.ಡಿ ಗುರುತು ಕಡ್ಡಾಯಗೊಳಿಸಲಾಗಿದೆ. ಬಲವಾದ ಬೇಡಿಕೆ: 17 ಲಕ್ಷಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು ಈಗಾಗಲೇ …
Read More »ನಾಗರಿಕರ ಅನುಕೂಲ ಮತ್ತು ಸುರಕ್ಷತೆಗಾಗಿ ಡಿಜಿಲಾಕರ್ ನಲ್ಲಿ ಈಗ ‘ಪಾಸ್ ಪೋರ್ಟ್ ಪರಿಶೀಲನಾ ದಾಖಲೆ’ ಲಭ್ಯ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ‘ರಾಷ್ಟ್ರೀಯ ಇ-ಆಡಳಿತ ವಿಭಾಗ’ವು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಡಿಜಿಲಾಕರ್ ಪ್ಲಾಟ್ ಫಾರ್ಮ್ ನಲ್ಲಿ ‘ಪಾಸ್ ಪೋರ್ಟ್ ಪರಿಶೀಲನಾ ದಾಖಲೆ’ (PVR) ಸೌಲಭ್ಯವನ್ನು ಒದಗಿಸುವ ಮೂಲಕ ನಾಗರಿಕ ಸೇವೆಗಳಲ್ಲಿ ಮಹತ್ವದ ಸುಧಾರಣೆಯನ್ನು ಘೋಷಿಸಿದೆ. ಡಿಜಿಲಾಕರ್ ಎನ್ನುವುದು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿರುವ ಒಂದು ಸುರಕ್ಷಿತ ಹಾಗೂ ಕ್ಲೌಡ್ ಆಧಾರಿತ ವೇದಿಕೆಯಾಗಿದೆ. ಇದು ಡಿಜಿಟಲ್ ದಾಖಲೆಗಳು ಮತ್ತು ಪ್ರಮಾಣಪತ್ರಗಳ ವಿತರಣೆ, ಸಂಗ್ರಹಣೆ, ಹಂಚಿಕೆ ಮತ್ತು ಪರಿಶೀಲನೆಗೆ ಅನುವು ಮಾಡಿಕೊಡುತ್ತದೆ. ನಾಗರಿಕರ …
Read More »
Matribhumi Samachar Kannad