Sunday, December 07 2025 | 04:27:07 AM
Breaking News

Business

ಕರ್ನಾಟಕದಲ್ಲಿ ನವೋದ್ಯಮಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರದಿಂದ ಹಲವು ಉಪಕ್ರಮ

ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನೇತರ ಹಾಗೂ ನವೋದ್ಯಮಗಳ ಉತ್ತೇಜನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಹಲವು ಉಪ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ದಡಿ ಭಾರತೀಯ ಸಾಫ್ಟ್‌ ವೇರ್ ತಂತ್ರಜ್ಞಾನ ಪಾರ್ಕ್‌ (ಎಸ್ ಟಿ ಪಿ ಐ ) ಮೂಲಕ ಗುಣಮಟ್ಟದ ಮೂಲಸೌಕರ್ಯ, ವೇಗದ ಸಂಪರ್ಕ, ಸಂಪೋಷಣೆ ಮತ್ತು ನೀತಿ ಬೆಂಬಲವನ್ನು ನೀಡುತ್ತಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ …

Read More »

ಬೆಳ್ಳಿ ಆಭರಣಗಳಿಗೆ ಹೆಚ್‌.ಯು.ಐ.ಡಿ ಕಡ್ಡಾಯ ಕುರಿತ ಇತ್ತೀಚಿನ ಮಾಹಿತಿ

ಬೆಳ್ಳಿಗೆ ಕಡ್ಡಾಯ ಹೆಚ್‌.ಯು.ಐ.ಡಿ (ಹಾಲ್‌ ಮಾರ್ಕಿಂಗ್ ಯೂನಿಕ್‌ ಐಡೆಂಟಿಫಿಕೇಷನ್‌) ಜಾರಿಗೆ ಬಂದ ನಂತರದ ಮೊದಲ ಮೂರು ತಿಂಗಳಲ್ಲಿ, 17 ಲಕ್ಷಕ್ಕೂ ಹೆಚ್ಚು ಬೆಳ್ಳಿಯ ವಸ್ತುಗಳನ್ನು ಹಾಲ್‌ ಮಾರ್ಕ್ ಮಾಡಲಾಗಿದೆ, ಇದು ಆಭರಣ ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಬಲವಾದ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. ಬೆಳ್ಳಿ ಹಾಲ್‌ ಮಾರ್ಕ್ ಯೋಜನೆ ಸ್ವಯಂಪ್ರೇರಿತವಾಗಿದ್ದರೂ, ಹಾಲ್‌ ಮಾರ್ಕ್ ಮಾಡಲಾದ ಯಾವುದೇ ಬೆಳ್ಳಿ ವಸ್ತುವಿಗೆ ಹೆಚ್‌.ಯು.ಐ.ಡಿ ಗುರುತು ಕಡ್ಡಾಯಗೊಳಿಸಲಾಗಿದೆ. ಬಲವಾದ ಬೇಡಿಕೆ: 17 ಲಕ್ಷಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು ಈಗಾಗಲೇ …

Read More »

ಬೃಹತ್ ಕೈಗಾರಿಕೆಗಳನ್ನು ಆಧುನೀಕರಿಸಲು; ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚಿಸಲು ಮತ್ತು ಎಂ.ಎಸ್.ಎಂ.ಇ ವಲಯದಲ್ಲಿ ಮಹಿಳೆಯರು ಮತ್ತು ದುರ್ಬಲ ಗುಂಪುಗಳ ಹೆಚ್ಚಿನ ಭಾಗವಹಿಸುವಿಕೆ ಸುಗಮಗೊಳಿಸಲು ಸರ್ಕಾರದಿಂದ ಹಲವು ಉಪಕ್ರಮ

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂ.ಎಸ್.ಎಂ.ಇ) ವಲಯವು ಆರ್ಥಿಕತೆಯ ಒಂದು ಚೈತನ್ಯಶೀಲ ವಲಯವಾಗಿದೆ. ದೇಶದಲ್ಲಿ ಎಂ.ಎಸ್.ಎಂ.ಇ ಗಳ ಉತ್ತೇಜನ, ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನೀತಿ ಉಪಕ್ರಮಗಳ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಭಾರತ ಸರ್ಕಾರವು ಪೂರಕವಾಗಿದೆ. ಈ ಯೋಜನೆಗಳು/ಕಾರ್ಯಕ್ರಮಗಳಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ಪಿಎಂ ವಿಶ್ವಕರ್ಮ ಯೋಜನೆ, ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತರಿ ಯೋಜನೆ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ …

Read More »

ನಾಗರಿಕರಿಗೆ ಸೇವೆಗಳನ್ನು ಒದಗಿಸಲು ದೇಶಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿ ಎಸ್‌ ಸಿ) ಸ್ಥಾಪಿಸಲಾಗಿದ್ದು, ಈ ಕೇಂದ್ರಗಳನ್ನು ಗ್ರಾಮ ಮಟ್ಟದ ಉದ್ಯಮಿಗಳು (ವಿ ಎಲ್‌ ಇ) ನಿರ್ವಹಿಸುತ್ತಿದ್ದಾರೆ: ಕೇಂದ್ರ ಸಚಿವರಾದ​​​​​​​ ಶ್ರೀ ಜಿತಿನ್‌ ಪ್ರಸಾದ

ನಾಗರಿಕರಿಗೆ ಸೇವೆಗಳನ್ನು ಒದಗಿಸಲು ದೇಶಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿ ಎಸ್‌ ಸಿ) ಸ್ಥಾಪಿಸಲಾಗಿದ್ದು, ಈ ಕೇಂದ್ರಗಳನ್ನು ಗ್ರಾಮ ಮಟ್ಟದ ಉದ್ಯಮಿಗಳು (ವಿ ಎಲ್‌ ಇ) ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ಜಿತಿನ್‌ ಪ್ರಸಾದ ಹೇಳಿದ್ದಾರೆ. ಸಿ ಎಸ್‌ ಸಿ ಗಳ ಜಾಲವು ಬೆಳೆಯುತ್ತಲೇ ಇದ್ದು, ಪ್ರಸ್ತುತ ಭಾರತದಾದ್ಯಂತ ಸುಮಾರು 5.69 ಲಕ್ಷ ಕೇಂದ್ರಗಳು (ಸೆಪ್ಟೆಂಬರ್ 30, 2025 ರವರೆಗೆ) ಕಾರ್ಯನಿರ್ವಹಿಸುತ್ತಿವೆ, …

Read More »

ಅಟಲ್ ಪಿಂಚಣಿ ಯೋಜನೆಯು 8.34 ಕೋಟಿಗೂ ಹೆಚ್ಚು ನೋಂದಣಿಗಳನ್ನು ಕಂಡಿದೆ; ಇದರಲ್ಲಿ ಶೇ.48 ರಷ್ಟು ಮಹಿಳೆಯರಾಗಿದ್ದಾರೆ

ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಬಡವರು, ಸೌಲಭ್ಯ ವಂಚಿತರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಒದಗಿಸುವ ಗುರಿಯೊಂದಿಗೆ ಅಟಲ್ ಪಿಂಚಣಿ ಯೋಜನೆ (ಎ.ಪಿ.ವೈ) ಅನ್ನು 09.05.2015 ರಂದು ಪ್ರಾರಂಭಿಸಲಾಯಿತು. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ 18-40 ವರ್ಷ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ ಇದು ಮುಕ್ತವಾಗಿದೆ. ಯೋಜನೆಯ ಪ್ರಕಾರ, ಚಂದಾದಾರರು 60 ವರ್ಷ ತಲುಪಿದ ನಂತರ ಪಿಂಚಣಿ ಪ್ರಯೋಜನಗಳನ್ನು ಪಡೆಯುತ್ತಾರೆ. ಆದ್ದರಿಂದ, …

Read More »

26 ಪ್ರಮುಖ ಇ-ಕಾಮರ್ಸ್ ವೇದಿಕೆಗಳಿಂದ ‘ಡಾರ್ಕ್ ಪ್ಯಾಟರ್ನ್ಸ್’ಗಳನ್ನು ತೊಡೆದುಹಾಕಲು ಸ್ವಯಂ-ಪರಿಶೋಧನೆಯ ಅನುಸರಣೆ ಘೋಷಣೆ

ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಪ್ರಮುಖ ಹೆಜ್ಜೆಯಾಗಿ, 26 ಪ್ರಮುಖ ಇ-ಕಾಮರ್ಸ್ ವೇದಿಕೆಗಳು ಡಾರ್ಕ್ ಪ್ಯಾಟರ್ನ್ಸ್, 2023ರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳಿಗೆ ಅನುಸರಣೆಯನ್ನು ದೃಢೀಕರಿಸುವ ಸ್ವಯಂ-ಘೋಷಣಾ ಪತ್ರಗಳನ್ನು ಸ್ವಯಂಪ್ರೇರಿತವಾಗಿ ಸಲ್ಲಿಸಿವೆ. ಗ್ರಾಹಕರನ್ನು ದಾರಿತಪ್ಪಿಸುವ ಅಥವಾ ನಿರ್ವಹಿಸುವ ಮೋಸದ ಆನ್‌ಲೈನ್ ವಿನ್ಯಾಸ ಅಭ್ಯಾಸಗಳನ್ನು ತಡೆಯುವ ಭಾರತದ ಪ್ರಯತ್ನಗಳಲ್ಲಿ ಈ ಬೆಳವಣಿಗೆಯು ಒಂದು ಪ್ರಮುಖ ಮೈಲಿಗಲ್ಲಾಗಿದೆ. ಈ ವೇದಿಕೆಗಳು ತಮ್ಮಲ್ಲಿ ಡಾರ್ಕ್ ಪ್ಯಾಟರ್ನ್ಸ್ ಇರುವುದನ್ನು ಗುರುತಿಸಲು, ಮೌಲ್ಯಮಾಪನ ಮಾಡಲು ಮತ್ತು …

Read More »

ದೇಶದ ಮಾಹಿತಿ ತಂತ್ರಜ್ಞಾನ ರಫ್ತಿನಲ್ಲಿ ಕರ್ನಾಟಕ ಶೇ. 42ರಷ್ಟು ಕೊಡುಗೆ ನೀಡುತ್ತಿದೆ: ಎಸ್.ಟಿ.ಪಿ.ಐ. ಮಹಾನಿರ್ದೇಶಕ ಶ್ರೀ ಅರವಿಂದ ಕುಮಾರ

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ, ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಆಯೋಜಿಸಿರುವ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಇಂದು ಎಸ್.ಟಿ.ಪಿ.ಐ ಮಹಾ ನಿರ್ದೇಶಕರಾದ ಶ್ರೀ ಅರವಿಂದ ಕುಮಾರ್ ಅವರು ಎಸ್.ಟಿ.ಪಿ.ಐ. ಪೆವಿಲಿಯನ್ ಗೆ ಚಾಲನೆ ನೀಡಿದರು‌. ಈ ಸಂದರ್ಭದಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಕೆ.ಕೆ. ಸಿಂಗ್ ಉಪಸ್ಥಿತರಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಟಿ.ಪಿ.ಐ. ಮಹಾ ನಿರ್ದೇಶಕ ಶ್ರೀ ಅರವಿಂದ …

Read More »

‘ಭಾರತ್ ಸ್ಟೀಲ್’ ಲಾಂಛನ, ಕರಪತ್ರ ಮತ್ತು ವೆಬ್ ಸೈಟ್ ಲೋಕಾರ್ಪಣೆ ಮಾಡಿದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರು

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ‘ಭಾರತ್ ಸ್ಟೀಲ್’ನ ಅಧಿಕೃತ ಲಾಂಛನ, ಕರಪತ್ರ ಮತ್ತು ವೆಬ್ ಸೈಟ್ ಅನ್ನು ಅನಾವರಣಗೊಳಿಸಿದರು.  ಈ ಸಂದರ್ಭದಲ್ಲಿ ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್ ಮತ್ತು ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ದ್ವಿತೀಯ ಉಕ್ಕು ವಲಯದ ಕಾರ್ಯಾಗಾರದ ಸಂದರ್ಭದಲ್ಲಿ ನೆರವೇರಿದ ಈ ಅನಾವರಣವು, ಇಡೀ ಉಕ್ಕಿನ ಮೌಲ್ಯ ಸರಪಳಿಯಲ್ಲಿ ಬೆಳವಣಿಗೆ, …

Read More »

11ನೇ ರಾಷ್ಟ್ರೀಯ ಕೈಮಗ್ಗ ದಿನದಂದು ಭಾರತದ ಕೈಮಗ್ಗ ನೇಯ್ಗೆಯ ಶ್ರೇಷ್ಠರನ್ನು ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಗೌರವಿಸಿದರು

ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಇಂದು ನವದೆಹಲಿಯಲ್ಲಿ 11ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಉದ್ಘಾಟಿಸಿದರು ಮತ್ತು ಪ್ರತಿಷ್ಠಿತ ಕೈಮಗ್ಗ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ವಿದೇಶಾಂಗ ವ್ಯವಹಾರ ಮತ್ತು ಜವಳಿ ರಾಜ್ಯ ಸಚಿವರಾದ ಶ್ರೀ ಪಬಿತ್ರ ಮಾರ್ಘೆರಿಟಾ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವರಾದ ಶ್ರೀಮತಿ ನಿಮುಬೆನ್  ಜಯಂತಿಭಾಯಿ ಬಂಭಾನಿಯಾ, ಸಂಸತ್ ಸದಸ್ಯೆ ಶ್ರೀಮತಿ ಕಂಗನಾ ರನೌತ್, ಜವಳಿ ಕಾರ್ಯದರ್ಶಿ ಶ್ರೀಮತಿ ನೀಲಂ ಶಮಿ …

Read More »

ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ 2024-25ನೇ ಸಾಲಿನ ಲಾಭಾಂಶದ ರೂಪದಲ್ಲಿ 22.90 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಿದ ರೆಪ್ಕೋ ಬ್ಯಾಂಕ್

ರೆಪ್ಕೋ ಬ್ಯಾಂಕ್ 2024-25ನೇ ಸಾಲಿನ ಲಾಭಾಂಶದ ರೂಪದಲ್ಲಿ 22.90 ಕೋಟಿ ರೂ.ಗಳ ಚೆಕ್ ಅನ್ನು ಹೊಸದಿಲ್ಲಿಯಲ್ಲಿ  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಹಸ್ತಾಂತರಿಸಿತು. 2024-25ನೇ ಹಣಕಾಸು ವರ್ಷದಲ್ಲಿ 140 ಕೋಟಿ ರೂ.ಗಳ ಲಾಭವನ್ನು ಗಳಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರು ರೆಪ್ಕೋ ಬ್ಯಾಂಕ್ ತಂಡವನ್ನು ಅಭಿನಂದಿಸಿದರು, ಇದು ಸಹಕಾರಿ ಬ್ಯಾಂಕಿನ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ. ‘X’ ನಲ್ಲಿ ಮಾಡಲಾದ ಪೋಸ್ಟ್‌ನಲ್ಲಿ ಶ್ರೀ ಅಮಿತ್ ಶಾ ಅವರು ಗೃಹ …

Read More »