ಭಾರತವು ತೈಲ ಮತ್ತು ಅನಿಲ ನಿಕ್ಷೇಪ ಪರಿಶೋಧನೆಯಲ್ಲಿ, ವಿಶೇಷವಾಗಿ ಕಡಲು ಪ್ರದೇಶಗಳಲ್ಲಿ, ಹೊಸ ಪ್ರಗತಿಯನ್ನು ಕಾಣುತ್ತಿದೆ, ಇದು ದೇಶದ ವಿಶಾಲವಾದ ಹೈಡ್ರೋಕಾರ್ಬನ್ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ರಾಜ್ಯಸಭೆಯಲ್ಲಿ ನಕ್ಷತ್ರ ಗುರುತಿನ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್‌ದೀಪ್ ಸಿಂಗ್ ಪುರಿ, 2022 ರಲ್ಲಿ ಸುಮಾರು ಒಂದು ಮಿಲಿಯನ್ ಚದರ ಕಿಲೋಮೀಟರ್ನಷ್ಟು ಕಡಲಿನೊಳಗಿನ ‘ನೋ-ಗೋ’ ಪ್ರದೇಶಗಳನ್ನು ತೆರೆದಿರುವುದು ಒಂದು ಹೆಗ್ಗುರುತು ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. …
Read More »ಮಹಿಳಾ ಸ್ವಸಹಾಯ ಗುಂಪುಗಳಿಗೆ ವಿತರಿಸಲಾದ ಸಾಲ 11 ಲಕ್ಷ ಕೋಟಿ ರೂ.ಗೆ ತಲುಪಿದೆ
ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿ.ಎ.ವೈ-ಎನ್.ಆರ್.ಎಲ್.ಎಂ) ಅಡಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, ಔಪಚಾರಿಕ ಹಣಕಾಸು ಸಂಸ್ಥೆಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್.ಎಚ್.ಜಿ) 11 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಸಾಲವನ್ನು ವಿತರಿಸಿದೆ. ಬ್ಯಾಂಕಿಂಗ್ ಭ್ರಾತೃತ್ವದ ಅಚಲ ಬೆಂಬಲದಿಂದ ಸಾಧ್ಯವಾದ ಈ ಹೆಗ್ಗುರುತು ಸಾಧನೆಯು ಅಂತರ್ಗತ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ತಳಮಟ್ಟದ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಸರ್ಕಾರದ ದೃಢ …
Read More »ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ʻಬಿಎಸ್ಎನ್ಎಲ್ʼನ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು, ಗ್ರಾಹಕರ ಅನುಭವ ಮತ್ತು ಆದಾಯ ಉತ್ಪಾದನೆ ಬಗ್ಗೆ ಒತ್ತಿ ಹೇಳಿದರು
ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ನವದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ(ಬಿಎಸ್ಎನ್ಎಲ್) ಮುಖ್ಯ ಪ್ರಧಾನ ವ್ಯವಸ್ಥಾಪಕರೊಂದಿಗೆ(ಸಿಜಿಎಂ) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು. ಈ ಉನ್ನತ ಮಟ್ಟದ ಸಭೆಯು ʻಬಿಎಸ್ಎನ್ಎಲ್ʼನ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಿತು, ಪ್ರಾದೇಶಿಕ ಸವಾಲುಗಳನ್ನು ಚರ್ಚಿಸಿತು. ಜೊತೆಗೆ, ಕಂಪನಿಯ ಜಾಲ(ನೆಟ್ ವರ್ಕ್) ಹಾಗೂ ಸೇವಾ ವಿತರಣೆಯ ಮುಂದಿನ ಕಾರ್ಯತಂತ್ರದ ಬಗ್ಗೆ ಪರಿಶೀಲಿಸಿತು. ಸಂವಹನ ಖಾತೆ ಸಹಾಯಕ ಸಚಿವ ಶ್ರೀ ಪೆಮ್ಮಸಾನಿ ಚಂದ್ರಶೇಖರ್ ಮತ್ತು …
Read More »ಮೇ 2025 ರಲ್ಲಿ 20.06 ಲಕ್ಷ ನಿವ್ವಳ ಸದಸ್ಯರೊಂದಿಗೆ ಇ.ಪಿ.ಎಫ್.ಒ ಸಾರ್ವಕಾಲಿಕ ಅತ್ಯಧಿಕ ಸೇರ್ಪಡೆ ದಾಖಲಿಸಿದೆ; ಇ.ಪಿ.ಎಫ್.ಒ ಗೆ 9.42 ಲಕ್ಷ ಹೊಸ ಸದಸ್ಯರು ದಾಖಲಾಗಿದ್ದಾರೆ
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇ.ಪಿ.ಎಫ್.ಒ) ಮೇ 2025 ರ ತಾತ್ಕಾಲಿಕ ವೇತನದಾರರ ಡೇಟಾವನ್ನು ಬಿಡುಗಡೆ ಮಾಡಿದೆ, ಇದು 20.06 ಲಕ್ಷ ಸದಸ್ಯರ ನಿವ್ವಳ ಸೇರ್ಪಡೆಯನ್ನು ಬಹಿರಂಗಪಡಿಸಿದೆ, ಇದು ಏಪ್ರಿಲ್ 2018ರಲ್ಲಿ ವೇತನದಾರರ ದತ್ತಾಂಶ ಟ್ರ್ಯಾಕಿಂಗ್ ಪ್ರಾರಂಭವಾದಾಗಿನಿಂದ ದಾಖಲಾದ ಅತ್ಯಧಿಕ ಸೇರ್ಪಡೆಯಾಗಿದೆ. ಈ ಅಂಕಿ ಅಂಶವು ಹಿಂದಿನ ಏಪ್ರಿಲ್ 2025 ರ ತಿಂಗಳಿಗೆ ಹೋಲಿಸಿದರೆ ಪ್ರಸ್ತುತ ತಿಂಗಳಲ್ಲಿ ನಿವ್ವಳ ವೇತನದಾರರ ಸೇರ್ಪಡೆಯಲ್ಲಿ ಶೇ.4.79 ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಇದಲ್ಲದೆ, ವರ್ಷದಿಂದ ವರ್ಷದ …
Read More »ಕೈಮಗ್ಗ ಪ್ರಶಸ್ತಿಗಳು 2024: ಕೈಮಗ್ಗ ವಲಯದಲ್ಲಿನ ಶ್ರೇಷ್ಠತೆಗೆ ಗೌರವ
ಕೈಮಗ್ಗ ವಲಯದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ನೇಕಾರರು, ಡಿಸೈನರ್ ಗಳು, ಮಾರಾಟಗಾರರು, ಸ್ಟಾರ್ಟ್ ಅಪ್ ಗಳು ಮತ್ತು ಉತ್ಪಾದಕ ಕಂಪನಿಗಳನ್ನು ಗೌರವಿಸಲು 2024 ರ ಪ್ರತಿಷ್ಠಿತ ಸಂತ ಕಬೀರ್ ಕೈಮಗ್ಗ ಪ್ರಶಸ್ತಿ ಮತ್ತು ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳನ್ನು ಜವಳಿ ಸಚಿವಾಲಯವು ಪ್ರಕಟಿಸಿದೆ. ಈ ಪ್ರಶಸ್ತಿಗಳು, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮದ (NHDP) ಅಡಿಯಲ್ಲಿನ ಕೈಮಗ್ಗ ಮಾರಾಟ ನೆರವು (HMA) ಯೋಜನೆಯ ಒಂದು ಭಾಗವಾಗಿವೆ. ಈ ವರ್ಷ, ಕೈಮಗ್ಗ ವಲಯಕ್ಕೆ …
Read More »ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿ ಪ್ರಚಾರ ಯೋಜನೆ (SPREE) ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ನೌಕರರ ರಾಜ್ಯ ವಿಮಾ ನಿಗಮ (ESIC) ಪ್ರಾದೇಶಿಕ ಕಚೇರಿಯಿಂದ ಪತ್ರಿಕಾಗೋಷ್ಠಿ ನಡೆಯಿತು
ಕಾರ್ಮಿಕರ ರಾಜ್ಯ ವಿಮಾ ನಿಗಮ, ಪ್ರಾದೇಶಿಕ ಕಛೇರಿ, ಕರ್ನಾಟಕ ಬೆಂಗಳೂರು ವತಿಯಿಂದ ಇಂದು ಶ್ರೀ ಮನೋಜ್ ಕುಮಾರ್, ಪ್ರಾದೇಶಿಕ ನಿರ್ದೇಶಕರು, ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಇ.ಎಸ್.ಐ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಯಿತು. ಶ್ರೀ ಅರಸದ ಕಿಶೋರ್, ಜಂಟಿ ನಿರ್ದೇಶಕರು (ಉಸ್ತುವಾರಿ), ಉಪ ಪ್ರಾದೇಶಿಕ ಕಛೇರಿ, ಪೀಣ್ಯ ಹಾಗೂ ಶ್ರೀಮತಿ ಕಣಿತ ಸೆಲ್ವಿ, ಜಂಟಿ ನಿರ್ದೇಶಕರು (ಉಸ್ತುವಾರಿ), ಉಪ ಪ್ರಾದೇಶಿಕ ಕಛೇರಿ, ಬೊಮ್ಮಸಂದ್ರ ಅವರು ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮನೋಜ್ ಕುಮಾರ್ ಅವರು …
Read More »ನವೀಕರಿಸಬಹುದಾದ ಇಂಧನ ಬೆಳವಣಿಗೆಯನ್ನು ವೇಗಗೊಳಿಸಲು ಎನ್.ಎಲ್.ಸಿ.ಐ.ಎಲ್ ಗೆ ಹೂಡಿಕೆ ವಿನಾಯಿತಿಗೆ ಒದಗಿಸಲು ಕೇಂದ್ರ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆಯು, ‘ನವರತ್ನ’ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ (ಸಿಪಿಎಸ್ಇ) ಅನ್ವಯವಾಗುವ ಹೂಡಿಕೆ ಮಾರ್ಗಸೂಚಿಗಳಿಂದ ಎನ್.ಎಲ್.ಸಿ. ಇಂಡಿಯಾ ಲಿಮಿಟೆಡ್ (ಎನ್.ಎಲ್.ಸಿ.ಐ.ಎಲ್)ಗೆ ವಿಶೇಷ ವಿನಾಯಿತಿ ನೀಡಲು ತನ್ನ ಅನುಮೋದನೆ ನೀಡಿದೆ. ಈ ಕಾರ್ಯತಂತ್ರದ ನಿರ್ಧಾರವು ಎನ್.ಎಲ್.ಸಿ.ಐ.ಎಲ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎನ್.ಎಲ್.ಸಿ. ಇಂಡಿಯಾ ರಿನ್ಯೂವೇಬಲ್ಸ್ ಲಿಮಿಟೆಡ್ (ಎನ್.ಐ.ಆರ್.ಎಲ್) ನಲ್ಲಿ 7,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ …
Read More »ಜೈವಿಕ ಉತ್ತೇಜಕಗಳ (ಬಯೋಸ್ಟಿಮ್ಯುಲಂಟ್) ಮಾರಾಟದ ಕುರಿತು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಮಹತ್ವದ ಸಭೆ ನಡೆಸಿದರು
ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಕೃಷಿ ಭವನದಲ್ಲಿ ಕೃಷಿ ಸಚಿವಾಲಯ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಹಿರಿಯ ಅಧಿಕಾರಿಗಳೊಂದಿಗೆ ಜೈವಿಕ ಉತ್ತೇಜಕಗಳ (ಬಯೋಸ್ಟಿಮ್ಯುಲಂಟ್) ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಿದರು. ಜೈವಿಕ ಉತ್ತೇಜಕಗಳ ವಿಷಯದಲ್ಲಿ ರೈತರನ್ನು ಯಾವುದೇ ರೀತಿಯಲ್ಲಿ ದಾರಿ ತಪ್ಪಿಸಬಾರದು ಎಂದು ಹೇಳಿದರು. ಯಾವುದೇ ಅನುಮೋದನೆಗಳನ್ನು ನೀಡುವಾಗ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ …
Read More »ನವದೆಹಲಿಯಲ್ಲಿ ನಡೆದ ಇಂಡಿಯಾ ಪೋಸ್ಟ್ ಬಿಸಿನೆಸ್ ಮೀಟ್ 2025-26ರಲ್ಲಿ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ತಳಮಟ್ಟದ ಚಾಲಿತ ಬೆಳವಣಿಗೆಯ ದೃಷ್ಟಿಕೋನವನ್ನು ಪಟ್ಟಿ ಮಾಡಿದರು
ಕೇಂದ್ರ ಸಂವಹನ ಮತ್ತು ದೂರಸಂಪರ್ಕ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ನೇತೃತ್ವದಲ್ಲಿ ಅಂಚೆ ಇಲಾಖೆ ತನ್ನ ವಾರ್ಷಿಕ ವ್ಯವಹಾರ ಸಭೆ 2025-26 ಅನ್ನು ನವದೆಹಲಿಯಲ್ಲಿಆಯೋಜಿಸಿತ್ತು. ಈ ಕಾರ್ಯತಂತ್ರದ ಸಭೆಯು ಇಂಡಿಯಾ ಪೋಸ್ಟ್‌ನ ವ್ಯವಹಾರ ರೂಪಾಂತರದ ಮಾರ್ಗಸೂಚಿ ಮತ್ತು ಪ್ರೀಮಿಯಂ ಲಾಜಿಸ್ಟಿಕ್ಸ್ ಮತ್ತು ನಾಗರಿಕ-ಕೇಂದ್ರಿತ ಸೇವಾ ಪೂರೈಕೆದಾರರಾಗಿ ಅದರ ವಿಕಸನದ ಪಾತ್ರದ ಬಗ್ಗೆ ಚರ್ಚಿಸಲು ದೇಶಾದ್ಯಂತದ ವಲಯಗಳ ಮುಖ್ಯಸ್ಥರನ್ನು ಒಟ್ಟುಗೂಡಿಸಿತು. 2025-26ನೇ ಸಾಲಿನ ವ್ಯಾಪಾರ ಸಭೆಯನ್ನುದ್ದೇಶಿಸಿ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಯೋಗ ಮೇಳವನ್ನುದ್ದೇಶಿಸಿ ಮಾತನಾಡಿದರು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000 ಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈ ಯುವಜನರಿಗೆ ಇಂದು ಹೊಸ ಜವಾಬ್ದಾರಿಗಳ ಆರಂಭದ ದಿನವಾಗಿದೆ ಎಂದು ಹೇಳಿದರು. ವಿವಿಧ ಇಲಾಖೆಗಳಲ್ಲಿ ತಮ್ಮ ಸೇವೆಗಳನ್ನು ಪ್ರಾರಂಭಿಸಿದ ಯುವಜನರನ್ನು ಅವರು …
Read More »
Matribhumi Samachar Kannad