Sunday, December 28 2025 | 03:11:38 PM
Breaking News

Business

ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ(ಎನ್‌ಪಿಡಿಡಿ)ಕ್ಕೆ ಕೇಂದ್ರ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ  (ಎನ್‌ಪಿಡಿಡಿ)ಕ್ಕೆ ಅನುಮೋದನೆ ನೀಡಿದೆ. ಕೇಂದ್ರ ಸ್ವಾಮ್ಯದ ಯೋಜನೆಯಾದ ಪರಿಷ್ಕೃತ ಎನ್‌ಪಿಡಿಡಿಗೆ ಹೆಚ್ಚುವರಿಯಾಗಿ 1000 ಕೋಟಿ ರೂ. ಒದಗಿಸಲಾಗಿದೆ. ಇದರೊಂದಿಗೆ, 15ನೇ ಹಣಕಾಸು ಆಯೋಗದ ಅವಧಿ(2021-22ರಿಂದ 2025-26ರ ವರೆಗೆ)ಯಲ್ಲಿ ಒಟ್ಟು ಬಜೆಟ್ ಗಾತ್ರವನ್ನು 2,790 ಕೋಟಿ ರೂ.ಗೆ ಹೆಚ್ಚಿಸಿದಂತಾಗಿದೆ. ಈ ಉಪಕ್ರಮವು ಡೇರಿ ಮೂಲಸೌಕರ್ಯ ಆಧುನೀಕರಣ ಮತ್ತು ವಿಸ್ತರಣೆ ಮೇಲೆ …

Read More »

ಫೆಬ್ರವರಿ 16 ರಂದು ದೆಹಲಿಯಲ್ಲಿ ನಡೆಯಲಿರುವ “ಭಾರತ್ ಟೆಕ್ಸ್ 2025”ರಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 16, 2025 ರಂದು ಸಂಜೆ 4 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುವ “ಭಾರತ್ ಟೆಕ್ಸ್ 2025”ರಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ 14-17,2025 ರಿಂದ ಭಾರತ ಮಂಟಪದಲ್ಲಿ ನಡೆಯಲಿರುವ ಬೃಹತ್ ಜಾಗತಿಕ ಕಾರ್ಯಕ್ರಮವಾದ “ಭಾರತ್ ಟೆಕ್ಸ್ 2025” ವಿಶಿಷ್ಟ ಕಾರ್ಯಕ್ರಮವಾಗಿದೆ. ಏಕೆಂದರೆ, ಇದು ಕಚ್ಚಾ ವಸ್ತುಗಳಿಂದ ಹಿಡಿದು, ಪರಿಕರಗಳು ಸೇರಿದಂತೆ ಸಿದ್ಧಪಡಿಸಿದ ಉತ್ಪನ್ನಗಳವರೆಗೆ ಸಂಪೂರ್ಣ ಜವಳಿ …

Read More »

ಸಂಸತ್ತಿನಲ್ಲಿ, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಭಾರತದ ಆರ್ಥಿಕತೆ ಮತ್ತು ನಾವು ಕೈಗೊಳ್ಳುತ್ತಿರುವ ಸುಧಾರಣಾ ಪಥದ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡಿದ್ದಾರೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ಅವರನ್ನು ಶ್ಲಾಘಿಸಿದ್ದಾರೆ. ಸಂಸತ್ತಿನಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಾಡಿದ ಭಾಷಣದಲ್ಲಿ, “ಇದು ಭಾರತದ ಆರ್ಥಿಕತೆ ಮತ್ತು ಕೇಂದ್ರ ಸರ್ಕಾರವು ಕೈಗೊಳ್ಳುತ್ತಿರುವ ಸುಧಾರಣಾ ಪಥದ ಸ್ಪಷ್ಟ ಚಿತ್ರಣವನ್ನು ಒದಗಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.  ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ; “ಸಂಸತ್ತಿನಲ್ಲಿ ತಮ್ಮ ಹೇಳಿಕೆಗಳ ಸಂದರ್ಭದಲ್ಲಿ, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ …

Read More »

ಗೌರವಾನ್ವಿತ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ 2025-26ರ ಬಜೆಟ್ ಮುಖ್ಯಾಂಶಗಳ ಬಗ್ಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು

ಗೌರವಾನ್ವಿತ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು 2025-26ರ ಬಜೆಟ್ ನಲ್ಲಿ ರೈಲ್ವೆಗೆ ಸಂಬಂಧಿಸಿದ ಮುಖ್ಯಾಂಶಗಳ ಬಗ್ಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ವಿಡಿಯೊ ದೆಹಲಿ. ಕಾನ್ಫರೆನ್ಸ್ ಮೂಲಕ ಕರ್ನಾಟಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಬಜೆಟ್ ನಲ್ಲಿ ರೈಲ್ವೆ ಸಚಿವಾಲಯಕ್ಕೆ ಅತಿ ಹೆಚ್ಚು 2.65 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ನಿಲ್ದಾಣಗಳು ಮತ್ತು ರೈಲುಗಳ ಆಧುನೀಕರಣ, ಸಂಪರ್ಕ ಹೆಚ್ಚಳ, ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯಕ್ಕೆ ಹೆಚ್ಚಿನ ಒತ್ತು …

Read More »

ವಿಕಸಿತ ಭಾರತ @2047ರ ನಿಟ್ಟಿನಲ್ಲಿ 100-ದಿನಗಳ ಕ್ರಿಯಾ ಯೋಜನೆಯಡಿಯಲ್ಲಿ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ವಲಯದಲ್ಲಿ ಸುರಕ್ಷತಾ ಮಾನದಂಡಗಳನ್ನು ಬಲಪಡಿಸಲಾಗುವುದು

ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಕೇಂದ್ರ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ (ಡಿಸಿಪಿಸಿ)ಯ ರಾಷ್ಟ್ರವ್ಯಾಪಿ ತರಬೇತಿ ಉಪಕ್ರಮದ ಭಾಗವಾಗಿ, ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (ಸಿಐಪಿಇಟಿ) ಸಂಸ್ಥೆಯು ಜನವರಿ 30-31, 2025 ರಂದು ಬೆಂಗಳೂರು ಸಿಐಪಿಇಟಿ: ಎಸ್.ಎ.ಆರ್.ಪಿ. – ಎಪಿ.ಡಿ.ಡಿ.ಆರ್.ಎಲ್. ನಲ್ಲಿ ಪ್ರಮುಖ ಅಪಘಾತ ಅಪಾಯದ (ಎಂ.ಎ.ಹೆಚ್)  ಘಟಕಗಳಿಗಾಗಿ “ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಕೈಗಾರಿಕಾ ಸುರಕ್ಷತೆ” ಕುರಿತು ಎರಡು ದಿನಗಳ ವಸತಿ ತರಬೇತಿ …

Read More »

2025-26ನೇ ಸಾಲಿನ ಕೇಂದ್ರ ಮುಂಗಡಪತ್ರದ ಸಾರಾಂಶ

“ಮೇಕ್ ಇನ್ ಇಂಡಿಯಾ” ಮುಂದುವರಿಸಲು ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳನ್ನು ಒಳಗೊಂಡ ರಾಷ್ಟ್ರೀಯ ತಯಾರಿಕಾ ಮಿಷನ್ ಮುಂದಿನ 5 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳು ಒಟ್ಟು ₹500 ಕೋಟಿ ವೆಚ್ಚದಲ್ಲಿ ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಬ್ಯಾಂಕುಗಳಿಂದ ವರ್ಧಿತ ಸಾಲಗಳೊಂದಿಗೆ ಪಿಎಂ ಸ್ವನಿಧಿ ಮತ್ತು ₹30,000 ಮಿತಿಯೊಂದಿಗೆ ಯುಪಿಐ ಲಿಂಕ್ ಮಾಡಿದ ಕ್ರೆಡಿಟ್ ಕಾರ್ಡ್ ಗಳು ಗಿಗ್ ಕಾರ್ಮಿಕರಿಗೆ ಗುರುತಿನ ಚೀಟಿಗಳು. …

Read More »

ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದಡಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಎಥೆನಾಲ್ ಸಂಗ್ರಹಿಸುವ ಕಾರ್ಯವಿಧಾನಕ್ಕೆ ಸಂಪುಟ ಅನುಮೋದನೆ – ಎಥೆನಾಲ್ ಪೂರೈಕೆ ವರ್ಷ (ಇಎಸ್‌ವೈ) 2024-25ಕ್ಕೆ ಸಾರ್ವಜನಿಕ ವಲಯದ ಒಎಂಸಿಗಳಿಗೆ ಪೂರೈಕೆಗಾಗಿ ಎಥೆನಾಲ್ ಬೆಲೆಯ ಪರಿಷ್ಕರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ (ಸಿಸಿಇಎ), ಭಾರತ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದಡಿ 2024ರ ನವೆಂಬರ್ 1ರಿಂದ ಆರಂಭವಾಗಿ 2025ರ ಅಕ್ಟೋಬರ್‌ 31ರವರೆಗಿನ 2024-25ನೇ ಎಥೆನಾಲ್ ಪೂರೈಕೆ ವರ್ಷಕ್ಕೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಎಥೆನಾಲ್ ಖರೀದಿ ದರವನ್ನು ಪರಿಷ್ಕರಿಸಲು ಅನುಮೋದನೆ ನೀಡಿದೆ. ಅದರಂತೆ 2024-25 ರ ಎಥೆನಾಲ್ ಪೂರೈಕೆ ವರ್ಷ (2024ರ …

Read More »

ಬನಾರಸ್ ಲೋಕೋಮೋಟಿವ್ ವರ್ಕ್ಸ್ ಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಭೇಟಿ

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು  2025ರ ಜನವರಿ 24 ರಂದು ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ಗೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಅವರು, ಬಿ ಎಲ್ ಡಬ್ಲ್ಯು ನ ನಾವಿನ್ಯತೆಗಳು, ರೈಲ್ವೆ ಎಂಜಿನ್ (ಚಲನಶೀಲ) ಉತ್ಪಾದನಾ ಸಾಮರ್ಥ್ಯಗಳು ಹಾಗೂ ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಅದರ ಮಹತ್ವದ ಜಾಗತಿಕ ಕೊಡುಗೆಗಳನ್ನು ಶ್ಲಾಘಿಸಿದರು. ಬಿ ಎಲ್ ಡಬ್ಲ್ಯು ಗೆ ಭೇಟಿ …

Read More »

ಆಟಿಕೆ ತಯಾರಿಕಾ ವಲಯದಲ್ಲಿ ನಮ್ಮ ದಾಪುಗಾಲುಗಳು ಆತ್ಮನಿರ್ಭರತೆಗಾಗಿ ನಮ್ಮ ಹೊಸ ಅವಕಾಶಗಳ ಅನ್ವೇಷಣೆಯನ್ನು ಹೆಚ್ಚಿಸಿವೆ ಮತ್ತು ಆಟಿಕೆ ತಯಾರಿಕಾ ಸಂಪ್ರದಾಯಗಳು ಮತ್ತು ಉದ್ಯಮವನ್ನು ಜನಪ್ರಿಯಗೊಳಿಸಿವೆ: ಪ್ರಧಾನಮಂತ್ರಿ

ಆಟಿಕೆ ತಯಾರಿಕಾ ವಲಯದಲ್ಲಿ ಕೇಂದ್ರ ಸರ್ಕಾರದ ದಾಪುಗಾಲುಗಳು ಆತ್ಮನಿರ್ಭರತೆಗಾಗಿ ಹೊಸ ಅವಕಾಶಗಳ ನಮ್ಮ ಅನ್ವೇಷಣೆಯನ್ನು ಹೆಚ್ಚಿಸಿವೆ ಮತ್ತು ಆಟಿಕೆ ತಯಾರಿಕಾ ಸಂಪ್ರದಾಯಗಳು ಮತ್ತು ಉದ್ಯಮವನ್ನು ಜನಪ್ರಿಯಗೊಳಿಸಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದರು. ಮನ್ ಕಿ ಬಾತ್ ನವೀಕರಣಗಳ ಕುರಿತಾಗಿ ಎಕ್ಸ್ ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ: “ಮನ್ ಕಿ ಬಾತ್  (#MannKiBaat) ಸಂಚಿಕೆಯೊಂದರಲ್ಲಿ ನಾವು ಆಟಿಕೆ …

Read More »

ದಾವೋಸ್‌ನಲ್ಲಿ ನಡೆಯಲಿರುವ “ವಿಶ್ವ ಆರ್ಥಿಕ ವೇದಿಕೆ- 2025″ರಲ್ಲಿ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಭಾಗವಹಿಸಲಿದ್ದಾರೆ

ದಾವೋಸ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್‌) 2025ರಲ್ಲಿ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು  ಭಾಗವಹಿಸಲಿದ್ದಾರೆ. ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿಕಲ್ಪನೆ ದೂರದೃಷ್ಟಿಯಡಿ ಎಲ್ಲರನ್ನೂ ಒಳಗೊಂಡ ಸಮಗ್ರ ಬೆಳವಣಿಗೆ ಮತ್ತು ಪರಿವರ್ತನಾತ್ಮಕ ಅಭಿವೃದ್ಧಿಯನ್ನು ಮುನ್ನಡೆಸುವ ಭಾರತದ ಬದ್ಧತೆಯನ್ನು ಅವರು ತಮ್ಮ ಭೇಟಿ ವೇಳೆ ಪ್ರಧಾನವಾಗಿ ಪ್ರತಿಪಾದಿಸಲಿದ್ದಾರೆ. ಸಮಗ್ರ …

Read More »