ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಬೆಂಗಳೂರಿನಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ (ಎಸಿಯು) ಬೆಂಗಳೂರು ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ನಮ್ಮ ಸಂಸ್ಕೃತಿಯ ಮೂಲ ತತ್ವ “ಸರ್ವ ಜನ ಹಿತಾಯ, ಸರ್ವ ಜನ ಸುಖಾಯ” ಎಂಬುದಾಗಿದೆ. ಇದರರ್ಥ ಕೇವಲ ತನ್ನ ಬಗ್ಗೆ ಮಾತ್ರವಲ್ಲದೆ ಎಲ್ಲರ ಕಲ್ಯಾಣ ಮತ್ತು ಸಂತೋಷದ ಬಗ್ಗೆ ಚಿಂತಿಸುವುದು ಎಂದು ಹೇಳಿದರು. …
Read More »ಪರೀಕ್ಷಾ ಸಮಯದಲ್ಲಿ ಸಕಾರಾತ್ಮಕತೆಯೇ ಪರೀಕ್ಷಾ ಯೋಧರಿಗೆ ಪರಮ ಮಿತ್ರ : ಪ್ರಧಾನಮಂತ್ರಿ
ಪರೀಕ್ಷಾ ತಯಾರಿಯ ಸಮಯದಲ್ಲಿ ಧನಾತ್ಮಕತೆಯು ವಿದ್ಯಾರ್ಥಿಗಳಿಗೆ ನಿರ್ಣಾಯಕ ಸ್ನೇಹಿತ ಎಂದು ಅದರ ಪ್ರಾಮುಖ್ಯತೆಯ ಬಗ್ಗೆ ಒತ್ತಿಹೇಳುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆಯ ‘ಪರೀಕ್ಷಾ ಪೇ ಚರ್ಚಾ’ ಸಂಚಿಕೆಯನ್ನು ಎಲ್ಲರೂ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಮೈಗೌವ್ ಇಂಡಿಯಾದ ಎಕ್ಸ್ ಪೋಸ್ಟ್ ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ: “ಪರೀಕ್ಷಾ ಸಮಯದಲ್ಲಿ #ExamWarriors ಗಳಿಗೆ ಸಕಾರಾತ್ಮಕತೆಯೇ ಪರಮ ಮಿತ್ರ. ನಾಳಿನ ‘ಪರೀಕ್ಷಾ ಪೇ ಚರ್ಚಾ’ ಸಂಚಿಕೆಯು ಈ ವಿಷಯದ …
Read More »ಪರೀಕ್ಷಾ ಪೇ ಚರ್ಚಾ 2025ರ ಮೊದಲ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
ಫೆಬ್ರವರಿ 10, 2025 ರಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಸುಂದರ್ ನರ್ಸರಿಯಲ್ಲಿ 8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ)ಯ ಮೊದಲ ಸಂಚಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಅನೌಪಚಾರಿಕ ಆದರೆ ಅನುಭವ ಹಂಚಿಕೊಳ್ಳುವ ಒಳನೋಟವುಳ್ಳ ಅಧಿವೇಶನದಲ್ಲಿ, ಪ್ರಧಾನಮಂತ್ರಿ ಅವರು ದೇಶಾದ್ಯಂತದ ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಹಾಜರಿದ್ದ 36 ವಿದ್ಯಾರ್ಥಿಗಳು ಪೌಷ್ಟಿಕಾಂಶ ಮತ್ತು ಸ್ವಾಸ್ಥ್ಯದ ಬಗ್ಗೆ ಅಮೂಲ್ಯವಾದ ಪಾಠಗಳನ್ನು ಕಲಿತರು; ಒತ್ತಡವನ್ನು ಕರಗತ ಮಾಡಿಕೊಳ್ಳುವುದು; …
Read More »ವೇವ್ಸ್ 2025ರಲ್ಲಿ ನಡೆಯುವ ಭಾರತದಲ್ಲಿ ಸೃಜನಶೀಲ ಸವಾಲು ಆವೃತ್ತಿ – 1ರಲ್ಲಿ ಶಿಕ್ಷಣವು ಗೇಮಿಂಗ್ ಅನ್ನು ಎದುರುಗೊಳ್ಳಲಿದೆ
ನಿಮ್ಮ ನಗರದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್.ಡಿ.ಜಿ) ಪ್ರಗತಿಯ ಬಗ್ಗೆ ನಿಮಗೆ ಆಳವಾದ ಜ್ಞಾನವಿದ್ದರೆ, ರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಲ್ಪಡುವ ಅವಕಾಶ ಇಲ್ಲಿದೆ. ವಿಶ್ವ ದೃಶ್ಯ ಶ್ರವಣ ಮತ್ತು ಮನೋರಂಜನಾ ಶೃಂಗಸಭೆ (ವೇವ್ಸ್) 2025 ತಮ್ಮ ನಗರದ ಸುಸ್ಥಿರತೆಯ ಪ್ರಯತ್ನಗಳು, ಸವಾಲುಗಳು ಮತ್ತು ಸಾಧನೆಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗಳಿಗೆ ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ‘ಸಿಟಿ ಕ್ವೆಸ್ಟ್: ಶೇಡ್ಸ್ ಆಫ್ ಭಾರತ್’ ಎಂಬ ನವೀನ ಶೈಕ್ಷಣಿಕ ಆಟವು ವೇವ್ಸ್ 2025ರ ಅಡಿಯಲ್ಲಿ ನಡೆಯುತ್ತಿರುವ ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್’ನ ಪ್ರಮುಖ ಅಂಶವಾಗಿದೆ. ಈ ಆಕರ್ಷಕ ಆಟವನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್.ಡಿ.ಗಳು)ನ್ನು ಗುರಿಯಾಗಿಸುವ ಮೂಲಕ ನಗರ ಅಭಿವೃದ್ಧಿಯ ಮಾಪನಗಳನ್ನು ಆಟ ಆಡುವ ಮೂಲಕ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಯುವಕರಿಗೆ ಶಿಕ್ಷಣ ನೀಡಲು ಮತ್ತು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿದೆ. ಇದು ಬಾಲ್ಯದ ಟ್ರಂಪ್ ಕಾರ್ಡ್ ಆಟದ ಸಂತೋಷವನ್ನು ಮೆಲುಕು ಹಾಕುವಾಗ ದೇಶಾದ್ಯಂತ 56 ನಗರಗಳ ಸಾಮರ್ಥ್ಯ ಮತ್ತು ಸವಾಲುಗಳನ್ನು ಸಹ ಪರಿಶೋಧಿಸುತ್ತದೆ. ಈ ವೇದಿಕೆಯು ಸುಸ್ಥಿರ ಭವಿಷ್ಯದತ್ತ ಗಮನಾರ್ಹ ದಾಪುಗಾಲು ಹಾಕುತ್ತಿರುವ ನಗರಗಳನ್ನು ಪ್ರಮುಖವಾಗಿ ಗುರುತಿಸಲು ಸ್ಥಳ ಒದಗಿಸುತ್ತದೆ. ನಗರ ಸುಸ್ಥಿರತೆಯ ಚಾಂಪಿಯನ್ ಆಗಿ ಎದ್ದು ಕಾಣಿರಿ ಮತ್ತು ನಗರದ ಎಸ್.ಡಿ.ಜಿ ಪ್ರಯಾಣದ ಬಗ್ಗೆ ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯಿರಿ, ಮೇ 1-4, 2025 ರಂದು ಮುಂಬೈನಲ್ಲಿ ನಡೆಯುವ ವೇವ್ಸ್ 2025 ರಲ್ಲಿ ವಿಜೇತರನ್ನು ಸನ್ಮಾನಿಸಲಾಗುತ್ತದೆ. ಆಟದ ಕುರಿತು ಸಿಟಿ ಕ್ವೆಸ್ಟ್ ಆಟವು ಸಿಂಗಲ್-ಪ್ಲೇಯರ್ ಸ್ವರೂಪದಲ್ಲಿ ತೊಡಗಿಸಿಕೊಳ್ಳುತ್ತದೆ, ಅಲ್ಲಿ ಆಟಗಾರರು ಸಿಟಿ ಕಾರ್ಡ್‌ಗಳ ಡೆಕ್ ಬಳಸಿ ಕಂಪ್ಯೂಟರ್ ಎದುರಾಳಿಯ ವಿರುದ್ಧ ಸ್ಪರ್ಧಿಸುತ್ತಾರೆ. ಪ್ರತಿ ಕಾರ್ಡ್ ಆರು ನಿಯತಾಂಕಗಳನ್ನು ಒಳಗೊಂಡಿರುತ್ತದೆ, ಇದು ಆಟಗಾರರಿಗೆ ಹಸಿವು ಸೂಚ್ಯಂಕ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಮತ್ತು ಲಿಂಗ ಸಮಾನತೆಯಂತಹ ವಿವಿಧ ಅಂಕಿಅಂಶಗಳ ಆಧಾರದ ಮೇಲೆ ನಗರಗಳನ್ನು ಹೋಲಿಸಲು ಅನುವು ಮಾಡಿಕೊಡುತ್ತದೆ. ಇದು 15 ಸುಸ್ಥಿರ ಅಭಿವೃದ್ಧಿ ಗುರಿಗಳ ಜಾಡು ಪತ್ತೆ ಮಾಡುತ್ತದೆ ಮತ್ತು ನೀತಿ ಆಯೋಗದ ನಗರ ಸೂಚ್ಯಂಕ (2021) ಬಳಸಿಕೊಂಡು 56 ನಗರಗಳಲ್ಲಿ ಅಗ್ರ ಶ್ರೆಯಾಂಕದ 6 ಎಸ್.ಡಿ.ಜಿಗಳನ್ನು ಬಳಸುತ್ತದೆ. ಸಂವಾದಾತ್ಮಕ ಆಟದ ಮೂಲಕ, ಇದು 56 ಭಾರತೀಯ ನಗರಗಳ ಅಭಿವೃದ್ಧಿ ಸವಾಲುಗಳು ಮತ್ತು ಸಾಧನೆಗಳ ಬಗ್ಗೆ ಆಟಗಾರರಿಗೆ ಶಿಕ್ಷಣ ನೀಡುತ್ತದೆ, ಸುಸ್ಥಿರ ಅಭ್ಯಾಸಗಳ ಪ್ರಭಾವವನ್ನು ಒತ್ತಿ ಹೇಳುತ್ತದೆ. ಸಂವಾದಾತ್ಮಕವಾಗಿ ಆಟ ಆಡಲು ಅವಕಾಶ ನೀಡಲಿದ್ದು, ಇದು ಆಟಗಾರರಿಗೆ ಶಿಕ್ಷಣ ನೀಡುತ್ತದೆ. ಆಟಗಾರರು ಸಿಟಿ ಕ್ವೆಸ್ಟ್ ಮೂಲಕ ಪ್ರತಿಯೊಂದು ನಗರದ ಗುಣಲಕ್ಷಣಗಳನ್ನು ಅನ್ವೇಷಿಸುವಾಗ, …
Read More »ಪರೀಕ್ಷಾ ಪೇ ಚರ್ಚಾ
ಪರೀಕ್ಷೆಗಳು ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಒತ್ತಡದ ಮೂಲವಾಗಿದೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಉಪಕ್ರಮವು ಈ ನಿರೂಪಣೆಯನ್ನು ಪರಿವರ್ತಿಸುತ್ತಿದೆ. 2025ರ ಫೆಬ್ರವರಿ 10ರಂದು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿರುವ ಈ ವರ್ಷದ ಪಿಪಿಸಿ ಮತ್ತೊಮ್ಮೆ ಸಂವಾದಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಪ್ರಧಾನಿ ನೇರವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ತೊಡಗುತ್ತಾರೆ. ಪಿಪಿಸಿಯ ಪ್ರತಿ ಆವೃತ್ತಿಯು ಪರೀಕ್ಷೆಗೆ ಸಂಬಂಧಿಸಿದ ಆತಂಕವನ್ನು ನಿಭಾಯಿಸಲು ನವೀನ …
Read More »ಪರೀಕ್ಷಾ ಪೇ ಚರ್ಚಾ (PPC) 2025
ಬಹು ನಿರೀಕ್ಷಿತ ಪರೀಕ್ಷಾ ಪೇ ಚರ್ಚಾ 2025 (PPC 2025) ಫೆಬ್ರವರಿ 10, ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ, ಪರೀಕ್ಷೆಯ ತಯಾರಿ, ಒತ್ತಡ ನಿರ್ವಹಣೆ ಮತ್ತು ವೈಯಕ್ತಿಕ ಬೆಳವಣಿಗೆಯ ಕುರಿತು ಒಳನೋಟಗಳನ್ನು ನೀಡಲಿದ್ದಾರೆ. ಈ ವರ್ಷ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 36 ವಿದ್ಯಾರ್ಥಿಗಳನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಮಂಡಳಿ …
Read More »‘ಪರೀಕ್ಷಾ ಪೇ ಚರ್ಚಾ’ ಮತ್ತೊಮ್ಮೆ ಹೊಸ ಜೀವಂತ ಸ್ವರೂಪದಲ್ಲಿ ಬಂದಿದೆ: ಪ್ರಧಾನಮಂತ್ರಿ
ಪರೀಕ್ಷಾ ಪೇ ಚರ್ಚಾ-2025ನ್ನು ವೀಕ್ಷಿಸುವಂತೆ ಎಲ್ಲಾ ಪರೀಕ್ಷಾ ಯೋಧರು, ಅವರ ಪೋಷಕರು ಮತ್ತು ಶಿಕ್ಷಕರನ್ನು ಒತ್ತಾಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಎಕ್ಸ್ ನ ಪೋಸ್ಟ್ ನಲ್ಲಿ: “‘ಪರೀಕ್ಷಾ ಪೇ ಚರ್ಚಾ’ ಮತ್ತೊಮ್ಮೆ ತಾಜಾ ಮತ್ತು ಜೀವಂತ ಸ್ವರೂಪದಲ್ಲಿ ಬಂದಿದೆ! ಒತ್ತಡ-ಮುಕ್ತ ಪರೀಕ್ಷೆಗಳ ವಿವಿಧ ಅಂಶಗಳನ್ನು ಒಳಗೊಂಡ 8 ಅತ್ಯಂತ ಆಸಕ್ತಿದಾಯಕ ಸಂಚಿಕೆಗಳನ್ನು ಒಳಗೊಂಡಿರುವ #PPC2025 ವೀಕ್ಷಿಸಲು ಎಲ್ಲಾ #ExamWarriors, ಅವರ ಪೋಷಕರು ಮತ್ತು ಶಿಕ್ಷಕರನ್ನು ಒತ್ತಾಯಿಸುತ್ತೇನೆ” ಎಂದು ಟ್ವೀಟ್ …
Read More »ಗಣರಾಜ್ಯೋತ್ಸವ ಪರೇಡ್ 2025ರಲ್ಲಿ ಇದೇ ಮೊದಲ ಬಾರಿಗೆ ಮೂರು ಸರ್ಕಾರಿ ಶಾಲಾ ಬ್ಯಾಂಡ್ ತಂಡಗಳು ಪ್ರದರ್ಶನ ನೀಡಲಿವೆ
2025ರ ಜನವರಿ 26 ರಂದು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡಿನಲ್ಲಿ ಪ್ರದರ್ಶನ ನೀಡಲು ಮೂರು ಸರ್ಕಾರಿ ಶಾಲಾ ತಂಡಗಳು ಸಜ್ಜಾಗಿವೆ. ಜಾರ್ಖಂಡ್ ನ ಪ್ರಧಾನಮಂತ್ರಿ ಶ್ರೀ ಕೆ.ಜಿ.ಬಿ.ವಿ.ಪಟಮ್ಡಾ ತಂಡವು ಸೇನಾ ಬ್ಯಾಂಡ್ ನೊಂದಿಗೆ ಸಮನ್ವಯಗೊಂಡು ರಾಷ್ಟ್ರಪತಿಗಳ ವೇದಿಕೆಯ ಎದುರಿನ ವೇದಿಕೆಯಲ್ಲಿ (ರಾಸ್ಟ್ರಮ್ ನಲ್ಲಿ) ಪ್ರದರ್ಶನ ನೀಡುವ ಗೌರವವನ್ನು ಪಡೆಯಲಿದೆ. ಏತನ್ಮಧ್ಯೆ, ಸಿಕ್ಕಿಂನ ಗ್ಯಾಂಗ್ಟಾಕಿನ ಸರ್ಕಾರಿ ಹಿರಿಯ ಸೆಕೆಂಡರಿ ಶಾಲೆ ವೆಸ್ಟ್ ಪಾಯಿಂಟ್ ಮತ್ತು ಕರ್ನಾಟಕದ ಬೆಳಗಾವಿ ಕಂಟೋನ್ಮೆಂಟ್ನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಸಂಖ್ಯೆ 2 ರ ತಂಡಗಳು ವಿಜಯ್ ಚೌಕ್ನಲ್ಲಿ ತಮ್ಮ ಪ್ರದರ್ಶನವನ್ನು ನೀಡಲಿವೆ. ಹೊಸದಿಲ್ಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 2025 ರ ಜನವರಿ 24-25 ರಂದು ನಡೆಯುವ ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆ 6.0 ರ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸುತ್ತಿರುವ 16 ತಂಡಗಳಲ್ಲಿ ಈ ಶಾಲಾ ಬ್ಯಾಂಡ್ ಗಳು ಸೇರಿವೆ. ಜಾರ್ಖಂಡಿನ ಪೂರ್ವ ಸಿಂಗ್ಭೂಮ್ ನ ಪಟಾಮ್ಡಾದ ಪಿಎಂ ಶ್ರೀ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದ (ಕೆಜಿಬಿವಿ) ಪೈಪ್ ಬ್ಯಾಂಡ್ ಬಾಲಕಿಯರ ತಂಡವು ದೃಢನಿಶ್ಚಯ ಮತ್ತು ಸಾಧನೆಯ ಸ್ಪೂರ್ತಿದಾಯಕ ಪ್ರಯಾಣವನ್ನು ಪ್ರದರ್ಶಿಸುತ್ತದೆ. ಈ 25 ಸದಸ್ಯರ ತಂಡವು ಕೃಷಿ ಮತ್ತು ದಿನಗೂಲಿ ಕಾರ್ಮಿಕರನ್ನು ಅವಲಂಬಿಸಿರುವ ದೀನದಲಿತ ಕುಟುಂಬಗಳ ಹುಡುಗಿಯರನ್ನು ಒಳಗೊಂಡಿದೆ. ಹೆಚ್ಚಿನವರಿಗೆ, ಇದು ದಿಲ್ಲಿಗೆ ಅವರ ಮೊದಲ ರೈಲು ಪ್ರಯಾಣವಾಗಿದೆ. ಅವರು ರಾಮಗಢ ಸೇನಾ ರೆಜಿಮೆಂಟಲ್ ಕೇಂದ್ರದಲ್ಲಿರುವ ಸಿಖ್ ರೆಜಿಮೆಂಟ್ ಮತ್ತು ಪಂಜಾಬ್ ರೆಜಿಮೆಂಟಿನ ಬೋಧಕರಿಂದ ಮಾರ್ಗದರ್ಶನ ಪಡೆದಿದ್ದಾರೆ. ಹಿತ್ತಾಳೆ (ಬ್ರಾಸ್) ಬ್ಯಾಂಡ್ ಬಾಲಕಿಯರ ತಂಡ: ಸಿಕ್ಕಿಂನ ಗ್ಯಾಂಗ್ಟಾಕಿನ ಸರ್ಕಾರಿ ವೆಸ್ಟ್ ಪಾಯಿಂಟ್ ಸೀನಿಯರ್ ಸೆಕೆಂಡರಿ ಶಾಲೆಯು ರಾಜ್ಯ, ವಲಯ ಮತ್ತು ರಾಷ್ಟ್ರ ಮಟ್ಟದ ಪ್ರಶಂಸೆಗಳನ್ನು ಪಡೆಯುವ ಮೂಲಕ ಶ್ರೇಷ್ಠತೆಯ ಮಾನದಂಡಗಳನ್ನು ನಿಗದಿಪಡಿಸಿದೆ. ಏಳು ಚಾಂಪಿಯನ್ ತಂಡಗಳ ವಿರುದ್ಧ ಸ್ಪರ್ಧಿಸಿದ ತಂಡವು ಸಾಟಿಯಿಲ್ಲದ ಸಮರ್ಪಣೆಯನ್ನು ಪ್ರದರ್ಶಿಸಿತು ಮತ್ತು ಪೂರ್ವ ವಲಯದ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ವಿದ್ಯಾರ್ಥಿಗಳಲ್ಲಿ ಅನೇಕರು ವಿನಮ್ರ ಮತ್ತು ಸವಾಲಿನ ಹಿನ್ನೆಲೆಯಿಂದ ಬಂದವರು. ಕರ್ನಾಟಕದ ಬೆಳಗಾವಿ ಕಂಟೋನ್ಮೆಂಟ್ನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಸಂಖ್ಯೆ 2 ರ ಪೈಪ್ ಬ್ಯಾಂಡ್ (ಬಾಲಕರ) ತುಕಡಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೋಷಕರನ್ನು ಹೊಂದಿರುವ ಕುಟುಂಬಗಳ ಅನೇಕ ವಿದ್ಯಾರ್ಥಿಗಳು ಇದ್ದಾರೆ. ಈ ತಂಡಕ್ಕೆ ಎಂಎಲ್ಐಆರ್ಸಿ (ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ ಬೆಳಗಾವಿ) ತರಬೇತಿ ನೀಡಿದೆ. “ಸಂಪೂರ್ಣ ಸರ್ಕಾರದ ವಿಧಾನ”ಕ್ಕೆ ಅನುಗುಣವಾಗಿ, ಸೇನಾ ರೆಜಿಮೆಂಟಲ್ ಕೇಂದ್ರಗಳ ಬ್ಯಾಂಡ್ ಬೋಧಕರು / ತಂಡಗಳಿಂದ ಪಿಎಂ ಶ್ರೀ ಶಾಲಾ ಬ್ಯಾಂಡ್ ತಂಡಗಳಿಗೆ ತರಬೇತಿ ನೀಡಲು ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ. ತರಬೇತಿಯು 11 ರಾಜ್ಯಗಳು …
Read More »ಐಐಎಂಸಿಯಲ್ಲಿ ಸರಸ್ವತಿ ಬುಯ್ಯಾಳ ನೇತೃತ್ವದಲ್ಲಿ ನಡೆದ ಕಥೆ ಹೇಳುವ ಕಾರ್ಯಾಗಾರದಲ್ಲಿ ಪ್ರಮುಖ ಚಲನಚಿತ್ರಗಳ ರಹಸ್ಯಗಳ ಅನಾವರಣ
ವೇವ್ಸ್ 2025ರ ಅಡಿ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೀಸನ್-1ರಲ್ಲಿ ಅನಿಮೇಷನ್ ಚಲನಚಿತ್ರ ನಿರ್ಮಾಣ ಸ್ಪರ್ಧೆಯನ್ನು ಆಯೋಜಿಸುತ್ತಿರುವ ಡ್ಯಾನ್ಸಿಂಗ್ ಆಟಮ್ಸ್ ನಡಿ 2025ರ ಜನವರಿ 23 ರಂದು ನವದೆಹಲಿಯ ಭಾರತೀಯ ಸಮೂಹ ಸಂಸ್ಥೆಯ (ಐಐಎಂಸಿ)ಯಲ್ಲಿ ಕಥೆ ಹೇಳುವ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಹೆಸರಾಂತ ಲೇಖಕರು-ನಿರ್ದೇಶಕರಾದ ಸರಸ್ವತಿ ಬುಯ್ಯಾಳ ಅವರು ಈ ತನ್ಮಯಗೊಳಿಸುವ ಅಧಿವೇಶನವನ್ನು ಮುನ್ನಡೆಸಿದರು. ಮಹತ್ವಾಕಾಂಕ್ಷೆ ಹೊಂದಿರುವ ಚಲನಚಿತ್ರ ನಿರ್ಮಾಪಕರನ್ನು ತಮ್ಮ ಕಥೆಗಳೊಂದಿಗೆ ಹೂಡಿಕೆದಾರರು ಮತ್ತು ನಿರ್ಮಾಪಕರನ್ನು ಆಕರ್ಷಿಸುವ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾಗಿತ್ತು. ದೃಷ್ಟಿಕೋನದ ಹಾದಿಯಲ್ಲಿ: ಭಾರತದಲ್ಲಿ ವಿನ್ಯಾಸ, ಜಗತ್ತಿಗಾಗಿ ವಿನ್ಯಾಸ 114ರ ಸಂಚಿಕೆಯ ‘ಮನ್ ಕಿ ಬಾತ್’ ನ ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ …
Read More »ಪರಾಕ್ರಮ್ ದಿವಸ್ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸುವ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಯುವ ಸ್ನೇಹಿತರೊಂದಿಗೆ ವಿಶೇಷ ಸಂವಾದ ನಡೆಸಿದರು. 2047ರ ವೇಳೆಗೆ ರಾಷ್ಟ್ರದ ಗುರಿ ಏನು ಎಂದು ವಿದ್ಯಾರ್ಥಿಗಳಿಗೆ ವಿಚಾರಿಸಿದ ಪ್ರಧಾನಿ, ಇದಕ್ಕೆ ಅತ್ಯಂತ ಆತ್ಮವಿಶ್ವಾಸದಿಂದ ವಿದ್ಯಾರ್ಥಿಯೊಬ್ಬರು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು (ವಿಕಸಿತ ಭಾರತ) ಎಂದು ಉತ್ತರಿಸಿದರು.2047 ರವರೆಗೆ ಮಾತ್ರ ಏಕೆ …
Read More »
Matribhumi Samachar Kannad