Tuesday, January 13 2026 | 11:01:08 AM
Breaking News

International

ಪ್ರಧಾನಮಂತ್ರಿಯವರ ಫ್ರಾನ್ಸ್‌ ಭೇಟಿಯ ಫಲಿತಾಂಶಗಳು

ಕ್ರ.ಸಂ ಎಂಒಯುಗಳು/ ಒಪ್ಪಂದಗಳು/ ತಿದ್ದುಪಡಿಗಳು ಕ್ಷೇತ್ರಗಳು ಕೃತಕ ಬುದ್ಧಿಮತ್ತೆ (ಎಐ) ಕುರಿತು ಭಾರತ ಫ್ರಾನ್ಸ್ ಘೋಷಣೆ ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026ರ  ಲೋಗೋ ಬಿಡುಗಡೆ ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ ಇಂಡೋ-ಫ್ರೆಂಚ್ ಸೆಂಟರ್ ಫಾರ್ ದಿ ಡಿಜಿಟಲ್ ಸೈನ್ಸಸ್ ಅನ್ನು ಸ್ಥಾಪಿಸಲು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ ಎಸ್‌ ಟಿ), ಮತ್ತು ಫ್ರಾನ್ಸ್ ನ ಇನ್‌ಸ್ಟಿಟ್ಯೂಟ್ ನ್ಯಾಷನಲ್ ಡಿ ರೆಚೆರ್ಚೆ ಎನ್ ಇನ್‌ಫಾರ್ಮ್ಯಾಟಿಕ್ …

Read More »

ಪ್ರಧಾನಮಂತ್ರಿಯವರಿಂದ ಫ್ರಾನ್ಸ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ

ಉಭಯ ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯವನ್ನು ಪ್ರತಿಬಿಂಬಿಸುವ ವಿಶೇಷ ಸಂದರ್ಭವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ನಿನ್ನೆ ಫ್ರಾನ್ಸ್ ಅಧ್ಯಕ್ಷೀಯ ವಿಮಾನದಲ್ಲಿ ಪ್ಯಾರಿಸ್‌ ನಿಂದ ಮಾರ್ಸೆಲ್ಲೆಗೆ ಒಟ್ಟಿಗೆ ಪ್ರಯಾಣಿಸಿದರು. ಅವರು ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿದರು. ಇದಾದ ಬಳಿಕ ಮಾರ್ಸೆಲ್ಲೆ ತಲುಪಿದ ಬಳಿಕ ನಿಯೋಗ ಮಟ್ಟದ ಮಾತುಕತೆ ನಡೆಯಿತು. ಕಳೆದ 25 ವರ್ಷಗಳಲ್ಲಿ …

Read More »

ಪ್ರಧಾನಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷರು ಮಾರ್ಸಿಲ್ಲೆಯಲ್ಲಿ ಭಾರತದ ದೂತವಾಸ ಕಚೇರಿ ಅನ್ನು ಜಂಟಿಯಾಗಿ ಉದ್ಘಾಟಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ಮಾರ್ಸಿಲ್ಲೆಯಲ್ಲಿ ಹೊಸದಾಗಿ ತೆರೆಯಲಾದ ಭಾರತದ ದೂತವಾಸ ಕಚೇರಿ ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಪ್ರಧಾನಮಂತ್ರಿ ಮತ್ತು ಅಧ್ಯಕ್ಷ ಶ್ರೀ ಮ್ಯಾಕ್ರನ್ ಅವರು ಭಾರತದ ದೂತವಾಸ ಕಚೇರಿ ಅನ್ನು ಉದ್ಘಾಟಿಸಿದ್ದು  ಇದು ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು ಆಗಿದೆ. ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷ ಶ್ರೀ ಮ್ಯಾಕ್ರನ್ ಅವರ …

Read More »

ಭಾರತದ ಪ್ರಧಾನಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷರು ಜಂಟಿಯಾಗಿ ಐಟಿಇಆರ್ ಘಟಕಕ್ಕೆ ಭೇಟಿ ನೀಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಜಂಟಿಯಾಗಿ ಕ್ಯಾಡರಾಚೆಯಲ್ಲಿರುವ ಅಂತಾರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ ಗೆ (ಐಟಿಇಆರ್) ಭೇಟಿ ನೀಡಿದ್ದಾರೆ. ನಾಯಕರನ್ನು ಐಟಿಇಆರ್ ಮಹಾನಿರ್ದೇಶಕರು ಸ್ವಾಗತಿಸಿದರು. ಈ ಭೇಟಿಯು ವಿಶಿಷ್ಟವಾಗಿದ್ದು, ವಿಶ್ವದ ಅತ್ಯಂತ ಮಹತ್ವಾಕಾಂಕ್ಷೆಯ ಸಮ್ಮಿಳನ ಇಂಧನ ಯೋಜನೆಗಳಲ್ಲಿ ಒಂದಾದ ಐಟಿಇಆರ್ ಗೆ ಯಾವುದೇ ರಾಷ್ಟ್ರದ ಮುಖ್ಯಸ್ಥರು ಅಥವಾ ಸರ್ಕಾರದ ಮುಖ್ಯಸ್ಥರ ಮೊದಲ ಭೇಟಿಯಾಗಿದೆ. ಭೇಟಿಯ ಸಮಯದಲ್ಲಿ, ವಿಶ್ವದ …

Read More »

ಪ್ಯಾರೀಸ್ ನಲ್ಲಿ ನಡೆದ ಎಐ ಕ್ರಿಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಸ್ತಾವಿಕ ಭಾಷಣ

ಗೌರವಾನ್ವಿತರೇ, ಮಿತ್ರರೇ, ಸಣ್ಣ ಪ್ರಯೋಗದೊಂದಿಗೆ ಆರಂಭಿಸೋಣ. ನೀವು ನಿಮ್ಮ ವೈದ್ಯಕೀಯ ವರದಿಯನ್ನು ಎಐ ಆಪ್‌ ನಲ್ಲಿ ಅಪ್ ಲೋಡ್ ಮಾಡಿದರೆ, ಅದು ಯಾವುದೇ ಗೊಂದಲಗಳಿಲ್ಲದೆ ಅದು ಸರಳ ಭಾಷೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿವರಿಸುತ್ತದೆ. ಆದರೆ, ನೀವು ಅದೇ ಅಪ್ಲಿಕೇಶನ್ ಅನ್ನು ಎಡಗೈಯಿಂದ ಬರೆಯುವವರ ಚಿತ್ರವನ್ನು ಬರೆಯಲು ಕೇಳಿದರೆ, ಅಪ್ಲಿಕೇಶನ್ ಹೆಚ್ಚಾಗಿ ಬಲಗೈಯಿಂದ ಬರೆಯುವವರನ್ನು ಸೆಳೆಯುತ್ತದೆ. ಏಕೆಂದರೆ ತರಬೇತಿ ಡೇಟಾವು ಅದನ್ನೇ ಮೇಲುಗೈ ಆಗುವಂತೆ ಮಾಡುತ್ತದೆ. ಕೃತಕ ಬುದ್ಧಿಮತ್ತೆಯ (ಎಐ) …

Read More »

ಫ್ರಾನ್ಸ್‌ ಮತ್ತು ಅಮೆರಿಕಾ ಪ್ರವಾಸಕ್ಕೂ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ

ಅಧ್ಯಕ್ಷರಾದ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ನಾನು ಫೆಬ್ರವರಿ 10 ರಿಂದ 12 ರವರೆಗೆ ಫ್ರಾನ್ಸ್‌ಗೆ ಭೇಟಿ ನೀಡುತ್ತಿದ್ದೇನೆ. ಪ್ಯಾರಿಸ್‌ನಲ್ಲಿ ವಿಶ್ವ ನಾಯಕರು ಮತ್ತು ಜಾಗತಿಕ ತಂತ್ರಜ್ಞಾನ ಸಿಇಒಗಳ ಸಭೆಯಾದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಲು ನಾನು ಎದುರು ನೋಡುತ್ತಿದ್ದೇನೆ. ಅಲ್ಲಿ ನಾವು ನಾವೀನ್ಯತೆ ಮತ್ತು ಸಾರ್ವಜನಿಕ ಒಳಿತಿಗಾಗಿ ದೊಡ್ಡ ಮಟ್ಟದಲ್ಲಿ ಎಐ ತಂತ್ರಜ್ಞಾನಕ್ಕೆ ಸಹಯೋಗದ ವಿಧಾನದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದೇವೆ. ನನ್ನ …

Read More »

ಭಾರತದ 76ನೇ ಗಣರಾಜ್ಯೋತ್ಸವದಂದು ಶುಭಾಶಯ ಕೋರಿದ ಫ್ರಾನ್ಸ್ ಅಧ್ಯಕ್ಷರು ಮತ್ತು ಐರ್ಲೆಂಡ್ ಪ್ರಧಾನಮಂತ್ರಿ ಅವರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಐರ್ಲೆಂಡ್ ಪ್ರಧಾನಮಂತ್ರಿ ಘನತೆವೆತ್ತ ಮೈಕೆಲ್ ಮಾರ್ಟಿನ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಫ್ರಾನ್ಸ್ ಅಧ್ಯಕ್ಷರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ನರೇಂದ್ರ ಮೋದಿ ಹೀಗೆ ಹೇಳಿದರು: “ನನ್ನ ಆತ್ಮೀಯ ಸ್ನೇಹಿತ, ಅಧ್ಯಕ್ಷ @EmmanuelMacron, ಭಾರತದ 76ನೇ ಗಣರಾಜ್ಯೋತ್ಸವದಂದು ನಿಮ್ಮ ಪ್ರೀತಿಯ ಶುಭಾಶಯಗಳನ್ನು …

Read More »

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ 2025 ಜನವರಿ 27-28ರ ವರೆಗೆ ಓಮನ್‌ಗೆ ಭೇಟಿ ನೀಡಲಿದ್ದಾರೆ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು 11ನೇ ಜಂಟಿ ಆಯೋಗದ ಸಭೆ(ಜೆಸಿಎಂ)ಯಲ್ಲಿ ಭಾಗವಹಿಸಲು ಓಮನ್‌ನ ಮಸ್ಕತ್‌ಗೆ ಭೇಟಿ ನೀಡಲಿದ್ದಾರೆ. 2025 ಜನವರಿ 27-28ರ ವರೆಗೆ ನಡೆಯಲಿರುವ ಈ ಸಭೆಯಲ್ಲಿ ಓಮನ್ ಸುಲ್ತಾನ ಮತ್ತು ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ ಖಾತೆ ಸಚಿವರಾದ ಕೈಸ್ ಬಿನ್ ಮೊಹಮ್ಮದ್ ಬಿನ್ ಮೂಸಾ ಅಲ್-ಯೂಸೆಫ್  ಅವರೊಂದಿಗೆ ಗೋಯಲ್ ಭಾಗವಹಿಸಲಿದ್ದಾರೆ. ನಮ್ಮ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾದ ಓಮನ್ …

Read More »

ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ

ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳು ಮತ್ತು ಶುಭಸಂದೇಶಗಳಿಗಾಗಿ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ಯವಾದಗಳನ್ನು ತಿಳಿಸಿದರು. ನೇಪಾಳದ ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು ಈ ರೀತಿ ಹೇಳಿದರು: “ಪ್ರಧಾನಮಂತ್ರಿ @kpsharmaoli, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.  ಭಾರತವು ತನ್ನ ಗಣರಾಜ್ಯಕ್ಕೆ 75 ವರ್ಷಗಳನ್ನು ಪೂರೈಸುತ್ತಿರುವಾಗ, ನಮ್ಮ ಎರಡು ರಾಷ್ಟ್ರಗಳ ಪ್ರಜೆಗಳ ನಡುವಿನ ಸ್ನೇಹದ ಐತಿಹಾಸಿಕ ಬಂಧಗಳನ್ನು ನಾವು ಆಳವಾಗಿ ಪಾಲಿಸುತ್ತೇವೆ ಮತ್ತು …

Read More »

ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯ ಇಂಗ್ಲಿಷ್ ಅವತರಣಿಕೆ

ಗೌರವಾನ್ವಿತ  ಅಧ್ಯಕ್ಷರು ಮತ್ತು ನನ್ನ ಸಹೋದರ ಪ್ರಬೋವೊ ಸುಬಿಯಾಂಟೊ, ಎರಡೂ ದೇಶಗಳ ಪ್ರತಿನಿಧಿಗಳು, ಮಾಧ್ಯಮದ ಸ್ನೇಹಿತರೇ, ನಮಸ್ಕಾರ! ಭಾರತದ ಮೊದಲ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ನಮ್ಮ ಮುಖ್ಯ ಅತಿಥಿಯಾಗಿತ್ತು. ಮತ್ತು ನಾವು ನಮ್ಮ 75 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಮತ್ತೊಮ್ಮೆ, ಇಂಡೋನೇಷ್ಯಾ ಈ ಮಹತ್ವದ ಸಂದರ್ಭದ ಭಾಗವಾಗಲು ಗೌರವಯುತವಾಗಿ ಒಪ್ಪಿಕೊಂಡಿದೆ ಎಂಬುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ. ಈ ಸಂದರ್ಭದಲ್ಲಿ ನಾನು ಅಧ್ಯಕ್ಷ ಪ್ರಬೋವೊ ಅವರನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಸ್ನೇಹಿತರೇ, 2018ರಲ್ಲಿ ನಾನು ಇಂಡೋನೇಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ನಾವು ನಮ್ಮ ಪಾಲುದಾರಿಕೆಯನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯತ್ತ ಕೊಂಡೊಯ್ದಿದ್ದೇವೆ. ಇಂದು, ನಾವು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಪರಸ್ಪರ ಸಹಕಾರದ ವಿವಿಧ ಅಂಶಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲು, ರಕ್ಷಣಾ ಉತ್ಪಾದನೆ ಮತ್ತು ಪೂರೈಕೆ ಸರಪಳಿ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ನಾವು ನಿರ್ಧರಿಸಿದ್ದೇವೆ. ನಾವು ಕಡಲ ಭದ್ರತೆ, ಸೈಬರ್ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ನಿಗ್ರಹದಲ್ಲಿ ಸಹಕಾರಕ್ಕೆ ಒತ್ತು ನೀಡಿದ್ದೇವೆ. ಕಡಲ ಸುರಕ್ಷತೆ ಮತ್ತು ಭದ್ರತೆ ಕುರಿತ ಇಂದು ಅಂಕಿತ ಹಾಕಲಾದ ಒಪ್ಪಂದವು ಅಪರಾಧ ತಡೆ, ಶೋಧ ಮತ್ತು ಪಾರುಗಾಣಿಕಾ/ಪರಿಹಾರ-ರಕ್ಷಣಾ ಕಾರ್ಯಾಚರಣೆ ಹಾಗು ಸಾಮರ್ಥ್ಯ ವರ್ಧನೆ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ದ್ವಿಪಕ್ಷೀಯ ವ್ಯಾಪಾರವು ವೇಗವಾಗಿ ಬೆಳೆದಿದೆ ಮತ್ತು ಕಳೆದ ವರ್ಷ ಇದು 30 ಬಿಲಿಯನ್ ಡಾಲರ್ ದಾಟಿದೆ. ಇದನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ಯಲು, ಮಾರುಕಟ್ಟೆ ಪ್ರವೇಶ ಮತ್ತು ವ್ಯಾಪಾರ ಬುಟ್ಟಿಯನ್ನು ವೈವಿಧ್ಯಮಯಗೊಳಿಸುವ ಬಗ್ಗೆಯೂ ನಾವು ಚರ್ಚೆ ನಡೆಸಿದ್ದೇವೆ. ಈ ಪ್ರಯತ್ನಗಳಲ್ಲಿ ಖಾಸಗಿ ವಲಯವೂ ಸಮಾನ ಪಾಲುದಾರನಾಗಿದೆ. ಇಂದು ನಡೆದ ಸಿಇಒ ಫೋರಂ ಸಭೆ ಮತ್ತು ಖಾಸಗಿ ವಲಯದಲ್ಲಿ ಅಂತಿಮಗೊಳಿಸಲಾದ ಒಪ್ಪಂದಗಳನ್ನು ನಾವು ಸ್ವಾಗತಿಸುತ್ತೇವೆ. ಫಿನ್ ಟೆಕ್, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ನಿರ್ಧರಿಸಿದ್ದೇವೆ. ಆರೋಗ್ಯ ಮತ್ತು ಆಹಾರ ಭದ್ರತೆ ಕ್ಷೇತ್ರಗಳಲ್ಲಿ, ಭಾರತವು ಮಧ್ಯಾಹ್ನದ ಊಟ ಯೋಜನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಕಲಿತದ್ದನ್ನು ಮತ್ತು ಅನುಭವವನ್ನು ಇಂಡೋನೇಷ್ಯಾದೊಂದಿಗೆ ಹಂಚಿಕೊಳ್ಳುತ್ತಿದೆ. ಇಂಧನ, ನಿರ್ಣಾಯಕ ಖನಿಜಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಸ್ಟೆಮ್ ಶಿಕ್ಷಣ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಎರಡೂ ದೇಶಗಳ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಜಂಟಿ ಸಮರಾಭ್ಯಾಸ ನಡೆಸಲು ಒಗ್ಗೂಡಬೇಕು. ಸ್ನೇಹಿತರೇ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು ಸಾವಿರಾರು ವರ್ಷಗಳಷ್ಟು ಹಳೆಯದು. ರಾಮಾಯಣ ಮತ್ತು ಮಹಾಭಾರತದಿಂದ ಸ್ಫೂರ್ತಿ ಪಡೆದ ಕಥೆಗಳು ಮತ್ತು ‘ಬಲಿ ಜಾತ್ರೆ’ ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳಿಗೆ ಜೀವಂತ ಸಾಕ್ಷಿಗಳಾಗಿವೆ. ಬೌದ್ಧ ಬೊರೊಬುದೂರ್ ದೇವಾಲಯದ ನಂತರ, ಭಾರತವು ಈಗ ಪ್ರಂಬನನ್ ಹಿಂದೂ ದೇವಾಲಯದ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡಲಿದೆ ಎಂಬುದು  ನನಗೆ ತುಂಬಾ ಸಂತೋಷದ ಸಂಗತಿಯಾಗಿದೆ. …

Read More »