ಜಾಗತಿಕ ಹವಾಮಾನ ಹಣಕಾಸನ್ನು ಹೆಚ್ಚಿನ ಪಾರದರ್ಶಕತೆ ಮತ್ತು ಸಾಮಾನ್ಯ ಮಾನದಂಡಗಳೊಂದಿಗೆ ಮರುರೂಪಿಸಲು ಬಲವಾದ ಅವಕಾಶವಿದೆ ಎಂಬ ಮಾಹಿತಿಯನ್ನು ವಿವರಿಸುವ ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಭವಿಷ್ಯಕ್ಕಾಗಿ ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಜಾಗತಿಕ ವಾಸ್ತುಶಿಲ್ಪಕ್ಕೆ ಮಾರ್ಗದರ್ಶನ ನೀಡುವ ಪ್ರಾಯೋಗಿಕ ನಾಯಕತ್ವದ ಉದಾಹರಣೆಯಾಗಿ ಭಾರತದ ಕರಡು ಹವಾಮಾನ ಹಣಕಾಸು ವರ್ಗೀಕರಣ ಮತ್ತು ಬೆಳೆಯುತ್ತಿರುವ ದೇಶೀಯ ಹಸಿರು ಹಣಕಾಸು ವ್ಯವಸ್ಥೆಯನ್ನು ಈ …
Read More »ದೆಹಲಿಯಲ್ಲಿ ನಡೆದ ಆರನೇ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿದ ಭಾಷಣದ ಕೆಲವು ತುಣುಕುಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
ದೆಹಲಿಯಲ್ಲಿ ನಡೆದ ಆರನೇ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿದ ಭಾಷಣದ ಕೆಲವು ತುಣುಕುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಪ್ರತ್ಯೇಕ ಪೋಸ್ಟ್‌ಗಳಲ್ಲಿ ಹಂಚಿಕೊಂಡಿರುವ, ಶ್ರೀ ಮೋದಿ ಅವರು; “ರಾಮನಾಥ ಗೋಯೆಂಕಾ ಅವರಿಗೆ, ಯಾವಾಗಲೂ ರಾಷ್ಟ್ರವೇ ಮೊದಲನೆಯದಾಗಿತ್ತು. ಅವರು ಯಾವಾಗಲೂ ಸತ್ಯ ಮತ್ತು ವಸ್ತುನಿಷ್ಠ ಪರವಾಗಿ ನಿಲ್ಲುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಕರ್ತವ್ಯ ಮುಖ್ಯವಾಗಿತ್ತು.” “ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಇತ್ತೀಚಿನ ಬಿಹಾರ ಚುನಾವಣೆಯಲ್ಲಿ …
Read More »ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕಾ ಯೋಜನೆ (ಇ.ಸಿ.ಎಂ.ಎಸ್) ಅಡಿಯಲ್ಲಿ ₹ 7,172 ಕೋಟಿ ಹೂಡಿಕೆ, ₹ 65,111 ಕೋಟಿ ಉತ್ಪಾದನೆ ಮತ್ತು 11,808 ನೇರ ಉದ್ಯೋಗ ಸೃಷ್ಟಿಸುವ 17 ಅನುಮೋದನೆಗಳ 2ನೇ ಕಂತನ್ನು ಭಾರತ ಪ್ರಕಟಿಸಿದೆ
₹5,532 ಕೋಟಿ ಮೌಲ್ಯದ ಏಳು ಅರ್ಜಿಗಳ ಅನುಮೋದನೆಯನ್ನು ಈ ಹಿಂದೆ ಘೋಷಿಸಿದ್ದರ ಮುಂದುವರಿದ ಭಾಗವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲೆಕ್ಟ್ರಾನಿಕ್ಸ್ ಘಟಕ ತಯಾರಿಕಾ ಯೋಜನೆ (ಇ.ಸಿ.ಎಂ.ಎಸ್) ಅಡಿಯಲ್ಲಿ ಇನ್ನೂ 17 ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಈ ಅನುಮೋದಿತ ಯೋಜನೆಗಳು ದೇಶಾದ್ಯಂತ ವ್ಯಾಪಿಸಿದ್ದು, ಒಟ್ಟು ₹7,172 ಕೋಟಿ ಹೂಡಿಕೆಯೊಂದಿಗೆ, ₹65,111 ಕೋಟಿ ಉತ್ಪಾದನೆಯ ಅಂದಾಜು ಮಾಡಲಾಗಿದ್ದು, 11,808 ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಅನುಮೋದಿತ ಘಟಕಗಳು 9 ರಾಜ್ಯಗಳಾದ ಗೋವಾ, ಗುಜರಾತ್, …
Read More »ಎಐ (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಹೆಚ್ಚುತ್ತಿರುವ ತಪ್ಪು ಮಾಹಿತಿಯ ನಡುವೆ ಪತ್ರಿಕಾ ವಿಶ್ವಾಸಾರ್ಹತೆಯನ್ನು ಕಾಪಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ
ಪ್ರಜಾಸತ್ತಾತ್ಮಕ ದೇಶದ ನಾಗರಿಕರಿಗೆ ಪತ್ರಿಕಾ ಮಾಧ್ಯಮಗಳು ಕಣ್ಣು ಮತ್ತು ಕಿವಿಗಳು. ನಾವು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸುತ್ತಿರುವಾಗ, ಎಐ (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಹೆಚ್ಚುತ್ತಿರುವ ತಪ್ಪು ಮಾಹಿತಿಯ ಮಧ್ಯೆ, ನಾಗರಿಕರನ್ನು ಸಬಲೀಕರಣಗೊಳಿಸಲು ಪತ್ರಿಕಾ ವಿಶ್ವಾಸಾರ್ಹತೆಯನ್ನು ಕಾಪಾಡುವುದು ನಿರ್ಣಾಯಕವಾಗಿದೆ. ಇಂದು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿಭಾಗವಹಿಸಿದವರು ಈ ಭಾವನೆಯನ್ನು ಹಂಚಿಕೊಂಡರು. ‘‘ಹೆಚ್ಚುತ್ತಿರುವ ತಪ್ಪು ಮಾಹಿತಿಯ ನಡುವೆ ಪತ್ರಿಕಾ ವಿಶ್ವಾಸಾರ್ಹತೆಯನ್ನು ರಕ್ಷಿಸುವುದು’’ ಎಂಬ ಈ ವರ್ಷದ ಧ್ಯೇಯವಾಕ್ಯದೊಂದಿಗೆ ಈ ಕಾರ್ಯಕ್ರಮಕ್ಕೆ …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು
ನವದೆಹಲಿಯ ಪುಸಾದಲ್ಲಿ ಇಂದು ನಡೆದ ಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 2025ರ ಆಗಸ್ಟ್ 7–9 ರವರೆಗೆ ನವದೆಹಲಿಯ ಪುಸಾ ಆವರಣದಲ್ಲಿ ಆಯೋಜಿಸಲಾಗಿರುವ ಈ ಸಮ್ಮೇಳನವು ಕೃಷಿ ವಿಜ್ಞಾನದಲ್ಲಿ ಶ್ರೇಷ್ಠ ವ್ಯಕ್ತಿತ್ವ ಮತ್ತು ಆಹಾರ ಭದ್ರತೆಯ ಪ್ರವರ್ತಕ …
Read More »ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ವಿಶೇಷ ನೋಂದಣಿ ಅಭಿಯಾನ 2025ರ ಆಗಸ್ಟ್ 15ರವರೆಗೆ ವಿಸ್ತರಣೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ (PMMVY) ವಿಶೇಷ ನೋಂದಣಿ ಅಭಿಯಾನವನ್ನು 2025ರ ಆಗಸ್ಟ್ 15ರವರೆಗೆ ವಿಸ್ತರಿಸಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ಮನೆ-ಮನೆ ಜಾಗೃತಿ ಮತ್ತು ದಾಖಲಾತಿ ಅಭಿಯಾನವು, ಎಲ್ಲಾ ಅರ್ಹ ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರನ್ನು ತಲುಪುವ ಮೂಲಕ ಯೋಜನೆಯಡಿಯಲ್ಲಿ ಅವರ ಸಕಾಲಿಕ ನೋಂದಣಿಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು (PW&LM) ಪೌಷ್ಟಿಕ …
Read More »ಡಿ.ಪಿ.ಐ.ಐ.ಟಿ ಕಾರ್ಯದರ್ಶಿ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿನ ಐ.ಒ.ಟಿ ಮತ್ತು ಎ.ಐ ಗಾಗಿ ಇರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕೆ-ಟೆಕ್, ನಾಸ್ಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಭೇಟಿ ನೀಡಿತು
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿ.ಪಿ.ಐ.ಐ.ಟಿ) ಕಾರ್ಯದರ್ಶಿ ಶ್ರೀ ಅಮರದೀಪ್ ಸಿಂಗ್ ಭಾಟಿಯಾ ನೇತೃತ್ವದ ನಿಯೋಗವು ಎನ್.ಐ.ಸಿ.ಡಿ.ಸಿ ಯ ಸಿ.ಇ.ಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಜತ್ ಕುಮಾರ್ ಸೈನಿ, ಡಿ.ಪಿ.ಐ.ಐ.ಟಿ ನಿರ್ದೇಶಕ ಮತ್ತು ಸ್ಟಾರ್ಟ್ಅಪ್ ಇಂಡಿಯಾದ ಮುಖ್ಯಸ್ಥರೊಂದಿಗೆ ಬೆಂಗಳೂರಿನಲ್ಲಿರುವ ಐ.ಒ.ಟಿ ಮತ್ತು ಎ.ಐ ಗಾಗಿ ಇರುವ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕೆ-ಟೆಕ್, ನಾಸ್ಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಭೇಟಿ ನೀಡಿತು. ನವೋದ್ಯಮ ಮತ್ತು ಇನ್ಕ್ಯುಬೇಷನ್ …
Read More »ಪದ್ಮ ಪ್ರಶಸ್ತಿ 2026ಗೆ ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ 2025 ಆಗಸ್ಟ್ 15ರವರೆಗೆ ವಿಸ್ತರಣೆ
ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು2025ರ ಜುಲೈ 31 ರಿಂದ 2025ರ ಆಗಸ್ಟ್ 15 ರವರೆಗೆ ವಿಸ್ತರಿಸಲಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್‌ನಲ್ಲಿ (https://awards.gov.in) ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುವುದು. 2026ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿಗಳು-2026 ರ ನಾಮನಿರ್ದೇಶನಗಳು/ಶಿಫಾರಸುಗಳ ಸಲ್ಲಿಕೆ ಕಾರ್ಯ 2025ರ ಮಾರ್ಚ್ 15 ರಂದು ಆರಂಭವಾಗಿದೆ. ಪದ್ಮ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ‘ಬಿಮಾ ಸಖಿ ಯೋಜನೆ’ಯ ಐತಿಹಾಸಿಕ ಆರಂಭ – ಶ್ರೀ ಶಿವರಾಜ್ ಸಿಂಗ್ ಚೌಹಾಣ್
‘ಬಿಮಾ ಸಖಿ ಯೋಜನೆ’ ಕುರಿತು ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ‘ಬಿಮಾ ಸಖಿ ಯೋಜನೆ’ಯ ಐತಿಹಾಸಿಕ ಆರಂಭವನ್ನು ಸಾಧಿಸಿದ್ದೇವೆ. ಈ ಯೋಜನೆಯು ಮಹಿಳಾ ಸಬಲೀಕರಣದ ಕಡೆಗೆ ಒಂದು ಪ್ರಮುಖ ಹೆಜ್ಜೆ ಮಾತ್ರವಲ್ಲ, ಗ್ರಾಮೀಣ ಮತ್ತು ಅರೆ-ನಗರ ಭಾರತಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿಯೂ ಒಂದು ಪ್ರಮುಖ ಹೆಜ್ಜೆಯಾಗಿದೆ. …
Read More »ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ನಾಮನಿರ್ದೇಶನಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು 2025 ರ ಆಗಸ್ಟ್ 15 ರವರೆಗೆ ವಿಸ್ತರಿಸಲಾಗಿದೆ
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ಗಾಗಿ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು 15.08.2025 ರವರೆಗೆ ವಿಸ್ತರಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯು 01.04.2025ರಂದು ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ https://awards.gov.in. ನಲ್ಲಿಪ್ರಾರಂಭವಾಯಿತು. ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಅರ್ಹರಾದ ಮಕ್ಕಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 5 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 18 ವರ್ಷ ಮೀರದ ಯಾವುದೇ ಮಗು …
Read More »
Matribhumi Samachar Kannad