ಇಂದು ತಮಿಳು ನಾಡಿನಲ್ಲಿ ಹಿಂದೂಗಳು ಆಚರಿಸುವ ಸುಬ್ರಹ್ಮಣ್ಯ ಸ್ವಾಮಿ ಆರಾಧಿಸುವ ಥೈಪೂಸಂ ಹಬ್ಬದ ಪ್ರಯುಕ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯ ತಿಳಿಸಿದರು. “ಮುರುಗನ್ ದೇವರ ದೈವಿಕ ಅನುಗ್ರಹವು ನಮಗೆ ಶಕ್ತಿ, ಸಮೃದ್ಧಿ ಮತ್ತು ಬುದ್ಧಿವಂತಿಕೆಯೊಂದಿಗೆ ಮಾರ್ಗದರ್ಶನ ನೀಡಲಿ. ಈ ಪವಿತ್ರ ಸಂದರ್ಭದಲ್ಲಿ, ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಶ್ರೀ ಮೋದಿ ಹೇಳಿದರು. ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿಗಳು, …
Read More »ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾಸಿಸ್) ಸಾಂಕ್ರಾಮಿಕ ಗುರುತಿಸಿರುವ 13 ರಾಜ್ಯಗಳಾದ್ಯಂತ ಎಲ್ ಎಫ್ ನಿರ್ಮೂಲನೆಗಾಗಿ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರಿಂದ ರಾಷ್ಟ್ರೀಯ ಸಾಮೂಹಿಕ ಔಷಧ ನೀಡುವ ಸುತ್ತಿಗೆ ಚಾಲನೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ಆನೆಕಾಲು ರೋಗ (ಎಲ್ ಎಫ್ ) ಕಾಯಿಲೆ ಗುರುತಿಸುವ 13 ರಾಜ್ಯಗಳ ಆರೋಗ್ಯ ಸಚಿವರು ಮತ್ತು ಸ್ಥಳೀಯ ರಾಜ್ಯಗಳ ಹಿರಿಯ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಲಿಂಫಾಟಿಕ್ ಫೈಲೇರಿಯಾಸಿಸ್ (ಎಲ್ ಎಫ್) ನಿರ್ಮೂಲನೆಗಾಗಿ ವಾರ್ಷಿಕ ರಾಷ್ಟ್ರವ್ಯಾಪಿ ಸಾಮೂಹಿಕ ಔಷಧ ವಿತರಿಸುವ (ಎಂಡಿಎ) ಅಭಿಯಾನಕ್ಕೆ ಚಾಲನೆ ನೀಡಿದರು. ಭಾಗವಹಿಸಿದವರಿಗೆ ಅಭಿಯಾನ, ಅದರ ಉದ್ದೇಶಗಳು, ಕೈಗೊಳ್ಳುತ್ತಿರುವ …
Read More »ಏರೋ ಇಂಡಿಯಾ 2025 ಹಾರಾಟ ಆರಂಭ; ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನದ 15ನೇ ಆವೃತ್ತಿಗೆ ರಕ್ಷಣಾ ಸಚಿವರಿಂದ ಚಾಲನೆ
“ಏರೋ ಇಂಡಿಯಾ 2025 ನಿರ್ಣಾಯಕ ಮತ್ತು ಮುಂಚೂಣಿ ತಂತ್ರಜ್ಞಾನಗಳ ಸಂಗಮವಾಗಿದ್ದು, ಇಂದಿನ ಅನಿಶ್ಚಿತ ಪರಿಸ್ಥಿತಿಗಳನ್ನು ನಿಭಾಯಿಸಲು ಪರಸ್ಪರ ಗೌರವ, ಪರಸ್ಪರ ಆಸಕ್ತಿ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ಸಮಾನ ಮನಸ್ಕ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ವೇದಿಕೆ ಒದಗಿಸುತ್ತದೆ” ಎಂದು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಹೇಳಿದರು. ಅವರು 2025ರ ಫೆಬ್ರವರಿ 10 ರಂದು ಕರ್ನಾಟಕದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 15ನೇ ಆವೃತ್ತಿಯ ಏರೋ ಇಂಡಿಯಾ …
Read More »ಬಾಹ್ಯಾಕಾಶ ಮತ್ತು ರಕ್ಷಣಾ ನಾವೀನ್ಯತೆಯ ಭವಿಷ್ಯದ ಬಗ್ಗೆ ಒಂದು ನೋಟ
ಏರೋ ಇಂಡಿಯಾ ಏಷ್ಯಾದ ಬಹುದೊಡ್ಡ ವಾಯು ಪ್ರದರ್ಶನವಾಗಿದ್ದು, ಬೆಂಗಳೂರಿನಲ್ಲಿ ನಡೆಯುವ ಈ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಮತ್ತು ವಿಮಾನಗಳ ಪ್ರದರ್ಶನವಾಗಿದೆ. ಇದನ್ನು ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಪ್ರದರ್ಶನ ಸಂಸ್ಥೆಗಳು ಆಯೋಜಿಸಿವೆ. ಏರೋ ಇಂಡಿಯಾ, ಭಾರತದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾಗಿದ್ದು, ಜಾಗತಿಕ ವೈಮಾನಿಕ ಮಾರಾಟಗಾರರು ಮತ್ತು ಭಾರತೀಯ ವಾಯುಪಡೆ (ಐಎಎಫ್) ಸತತ ಏರೋಬ್ಯಾಟಿಕ್ ಹಾರಾಟ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ. ಇದು ಜಾಗತಿಕ ಉದ್ಯಮ ನಾಯಕರು, ಸರ್ಕಾರಿ ಅಧಿಕಾರಿಗಳು, ತಂತ್ರಜ್ಞಾನ ತಜ್ಞರು ಮತ್ತು ರಕ್ಷಣಾ ತಂತ್ರಜ್ಞರನ್ನು ಒಂದೇ ಸೂರಿನಡಿ ಒಗ್ಗೂಡಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ರಾಷ್ಟ್ರದ ತಾಂತ್ರಿಕ ಪರಾಕ್ರಮ ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸುವುದಲ್ಲದೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ಕಾರ್ಯತಂತ್ರದ ಸಂವಾದಕ್ಕೆ ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ. ಏರೋ ಇಂಡಿಯಾದ ವೈಭವ ಮತ್ತು ಪ್ರಾಮುಖ್ಯತೆ ಏರೋ ಇಂಡಿಯಾ ಒಂದು ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ವಿಕಸನಗೊಂಡಿದೆ, ಇದು ವೈಮಾನಿಕ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯನ್ನು ಎತ್ತಿ ತೋರಿಸುವುದಲ್ಲದೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ನಡುವಿನ ಕಾರ್ಯತಂತ್ರದ ಸಂವಹನಗಳಿಗೆ ನಿರ್ಣಾಯಕ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಪ್ರದರ್ಶನವು ತನ್ನ ಏರೋಸ್ಪೇಸ್ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು …
Read More »15ನೇ ಆವೃತ್ತಿಯ ದ್ವೈವಾರ್ಷಿಕ ಏರೋ-ಇಂಡಿಯಾ ಅಂತಾರಾಷ್ಟ್ರೀಯ ವಿಚಾರಸಂಕಿರಣ ಬೆಂಗಳೂರಿನಲ್ಲಿ ಆರಂಭ
15ನೇ ಆವೃತ್ತಿಯ ದ್ವೈವಾರ್ಷಿಕ ಏರೋ-ಇಂಡಿಯಾ ಅಂತಾರಾಷ್ಟ್ರೀಯ ವಿಚಾರಸಂಕಿರಣ ಕರ್ನಾಟಕದ ಬೆಂಗಳೂರಿನಲ್ಲಿ 2025ರ ಫೆಬ್ರವರಿ 8ರಂದು ಆರಂಭವಾಯಿತು. 2025ರ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏರೋ ಇಂಡಿಯಾ 2025ಕ್ಕೆ ಪೂರ್ವಭಾವಿಯಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ದ ಮಿಲಿಟರಿ ವಾಯುಯೋಗ್ಯತೆ ಮತ್ತು ಪ್ರಮಾಣೀಕರಣ ಕೇಂದ್ರ (CEMILAC) ಮತ್ತು ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (AeSI) ಸಹಯೋಗದೊಂದಿಗೆ ಎರಡು ದಿನಗಳ ಈ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. …
Read More »ಫೆಬ್ರವರಿ 22ರಿಂದ ಹೊಸ ಸ್ವರೂಪದಲ್ಲಿ ಕಂಡುಬರಲಿರುವ ಗಾರ್ಡ್ ಬದಲಾವಣಾ ಸಮಾರಂಭ
ಗಾರ್ಡ್ ಬದಲಾವಣೆ ಸಮಾರಂಭವು ಫೆಬ್ರವರಿ 22, 2025ರಿಂದ ಇನ್ನೂ ಹೆಚ್ಚಿನ ಆಸೀನ ಸಾಮರ್ಥ್ಯದೊಂದಿಗೆ ಹೊಸ ಸ್ವರೂಪದಲ್ಲಿ ನಡೆಯಲಿದೆ. ಭಾರತದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಫೆಬ್ರವರಿ 16, 2025ರಂದು ಇದರ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಗಾರ್ಡ್ ಬದಲಾವಣಾ ಸಮಾರಂಭದ ಹೊಸ ಸ್ವರೂಪವು, ರಾಷ್ಟ್ರಪತಿ ಭವನದ ಹಿನ್ನೆಲೆಯಲ್ಲಿ ಕ್ರಿಯಾತ್ಮಕ ದೃಶ್ಯ ಮತ್ತು ಸಂಗೀತ ಪ್ರದರ್ಶನದ ಜೊತೆ ನಡೆಯಲಿದೆ. ಸಾರ್ವಜನಿಕರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಸಮಾರಂಭದಲ್ಲಿ ರಾಷ್ಟ್ರಪತಿಯವರ ಅಂಗರಕ್ಷಕ ಪಡೆಗಳು …
Read More »100 ಗಿಗಾವ್ಯಾಟ್ ಸೌರ ವಿದ್ಯುತ್ ಸಾಮರ್ಥ್ಯ ಸಾಧಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಭಾರತ
ಭಾರತವು 100 ಗಿಗಾವ್ಯಾಟ್ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವನ್ನು ತಲುಪುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಈ ಗಮನಾರ್ಹ ಸಾಧನೆಯು ಸ್ವಚ್ಛ, ಹಸಿರು ಭವಿಷ್ಯಕ್ಕಾಗಿ ರಾಷ್ಟ್ರದ ಬದ್ಧತೆಗೆ ಸಾಕ್ಷಿಯಾಗಿದೆ ಮತ್ತು ಇದು 2030ರ ವೇಳೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಗದಿಪಡಿಸಿದ 500 ಗಿಗಾವ್ಯಾಟ್ ನವೀಕರಿಸಬಹುದಾದ ಮೂಲಗಳನ್ನು ಆಧರಿಸಿದ ಇಂಧನ ಸಾಮರ್ಥ್ಯದ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವತ್ತ ಮಹತ್ವದ …
Read More »‘ಹರ್ ಕಂಠ್ ಮೇ ಭಾರತ್’ : ಭಾರತದ ಸಂಗೀತ ಪರಂಪರೆಯನ್ನು ಆಚರಿಸಲಾಗುವುದು: ಆಕಾಶವಾಣಿ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯವು ಶಾಸ್ತ್ರೀಯ ಸಂಗೀತ ಸರಣಿಯ ಬಿಡುಗಡೆಗಾಗಿ ಕೈಜೋಡಿಸಿದೆ
ಬಸಂತ್ ಪಂಚಮಿಯ ಪುಣ್ಯ ಸಂದರ್ಭದಲ್ಲಿ ಆಕಾಶವಾಣಿಯ ಬ್ರಾಡ್ ಕಾಸ್ಟಿಂಗ್ ಹೌಸ್ ನಲ್ಲಿರುವ ಪಂಡಿತ್ ರವಿಶಂಕರ್ ಮ್ಯೂಸಿಕ್ ಸ್ಟುಡಿಯೋವು ಭಾರತೀಯ ಶಾಸ್ತ್ರೀಯ ಸಂಗೀತದ ಅಸಂಖ್ಯಾತ ಕಾರ್ಯಕ್ರಮಗಳನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡಲಿದೆ. ಇದಕ್ಕಾಗಿ ವಿಶೇಷವಾಗಿ ರಚಿಸಲಾದ ಹೊಸ ರೇಡಿಯೊ ಕಾರ್ಯಕ್ರಮದ ಸೀರೀಸ್, ‘ಹರ್ ಕಂಠ್ ಮೇ ಭಾರತ್’ ಅನ್ನು ಪ್ರಾರಂಭಿಸುವ ಸಲುವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ಸಾರ್ವಜನಿಕ ಸೇವಾ ಪ್ರಸಾರಕ “ಆಕಾಶವಾಣಿ” ಜಂಟಿಯಾಗಿ ಪ್ರಸ್ತುತಪಡಿಸಿದ ಈ …
Read More »ಕೇಂದ್ರ ಬಜೆಟ್ 2025-26ರ ಮುಖ್ಯಾಂಶಗಳು
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಬಜೆಟ್ ನ ಮುಖ್ಯಾಂಶಗಳು ಈ ಕೆಳಗಿನಂತಿವೆ: ಬಜೆಟ್ ಅಂದಾಜು 2025-26 • ಸಾಲವನ್ನು ಹೊರತುಪಡಿಸಿ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚವನ್ನು ಕ್ರಮವಾಗಿ ₹ 34.96 ಲಕ್ಷ ಕೋಟಿ ಮತ್ತು ₹ 50.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. • ನಿವ್ವಳ ತೆರಿಗೆ ಸ್ವೀಕೃತಿಗಳನ್ನು ₹ 28.37 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. • ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.4 ಎಂದು ಅಂದಾಜಿಸಲಾಗಿದೆ. • ಒಟ್ಟು ಮಾರುಕಟ್ಟೆ ಸಾಲವನ್ನು ₹ 14.82 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. • 2025-26ರ ಹಣಕಾಸು ವರ್ಷದಲ್ಲಿ 11.21 ಲಕ್ಷ ಕೋಟಿ ರೂ.ಗಳ ಕ್ಯಾಪೆಕ್ಸ್ ವೆಚ್ಚವನ್ನು (ಜಿಡಿಪಿಯ 3.1%) ನಿಗದಿ ಮಾಡಲಾಗಿದೆ. ಅಭಿವೃದ್ಧಿಯ ಮೊದಲ ಎಂಜಿನ್ ಆಗಿ ಕೃಷಿ ಪ್ರಧಾನ ಮಂತ್ರಿ ಧನ್-ಧನ್ಯಾ ಕೃಷಿ ಯೋಜನೆ – ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ • 1.7 ಕೋಟಿ ರೈತರಿಗೆ ಅನುಕೂಲವಾಗುವಂತೆ ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು • ಕೌಶಲ್ಯ, …
Read More »ಹಸಿರು ತಂತ್ರಜ್ಞಾನಗಳಿಗೆ ಅತ್ಯಗತ್ಯವಾದ ನಿರ್ಣಾಯಕ ಖನಿಜ ಸಂಪನ್ಮೂಲಗಳಿಗೆ ಸ್ಥಿತಿಸ್ಥಾಪಕ ಮೌಲ್ಯ ಸರಪಳಿಯನ್ನು ನಿರ್ಮಿಸಲು ‘ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್’ ಗೆ ಏಳು ವರ್ಷಗಳಲ್ಲಿ 34,300 ಕೋಟಿ ರೂ. ವೆಚ್ಚ ಮಾಡಲು ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 16,300 ಕೋಟಿ ರೂ.ಗಳ ವೆಚ್ಚ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಿಂದ 18,000 ಕೋಟಿ ರೂ.ಗಳ ನಿರೀಕ್ಷಿತ ಹೂಡಿಕೆಯೊಂದಿಗೆ ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ (ಎನ್.ಸಿ.ಎಂ.ಎಂ.) ಆರಂಭಿಸಲು ತನ್ನ ಅನುಮೋದನೆ ನೀಡಿದೆ. ಆತ್ಮನಿರ್ಭರ ಭಾರತ ಉಪಕ್ರಮದ ಭಾಗವಾಗಿ ಮತ್ತು ಹೈಟೆಕ್ ಕೈಗಾರಿಕೆಗಳು, ಶುದ್ಧ ಇಂಧನ ಮತ್ತು ರಕ್ಷಣೆಯಲ್ಲಿ ನಿರ್ಣಾಯಕ ಖನಿಜಗಳ ಅನಿವಾರ್ಯ ಪಾತ್ರವನ್ನು ಗುರುತಿಸಿ, ನಿರ್ಣಾಯಕ …
Read More »
Matribhumi Samachar Kannad