ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 25, 2025) ಹೊಸದಿಲ್ಲಿಯಲ್ಲಿ ನಡೆದ 15 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪಾಲ್ಗೊಂಡು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಚುನಾವಣೆಗಳನ್ನು ಸುಗಮವಾಗಿ ನಡೆಸುವಲ್ಲಿ ಅನುಕರಣೀಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರಿಂದ “ಇಂಡಿಯಾ ವೋಟ್ಸ್ 2024: ಎ ಸಾಗಾ ಆಫ್ ಡೆಮಾಕ್ರಸಿ” ಪುಸ್ತಕದ ಮೊದಲ ಪ್ರತಿಯನ್ನು ಅವರು ಸ್ವೀಕರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ನಮ್ಮ ಪ್ರಜಾಪ್ರಭುತ್ವವು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮಾತ್ರವಲ್ಲ, ವಿಶ್ವದ ಅತಿದೊಡ್ಡ, ವೈವಿಧ್ಯಮಯ, ಯುವ, ಅಂತರ್ಗತ ಮತ್ತು ಸೂಕ್ಷ್ಮ ಪ್ರಜಾಪ್ರಭುತ್ವವಾಗಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಭಾರತದ ಪ್ರಜಾಪ್ರಭುತ್ವವು ಆಧುನಿಕ ಜಗತ್ತಿಗೆ ವಿಶಿಷ್ಟ ಉದಾಹರಣೆಯಾಗಿದೆ. ವಿಶ್ವದ ಅನೇಕ ದೇಶಗಳು ನಮ್ಮ ಚುನಾವಣಾ ವ್ಯವಸ್ಥೆ ಮತ್ತು ನಿರ್ವಹಣೆಯಿಂದ ಕಲಿಯುತ್ತಿವೆ ಎಂದು ಅವರು ಹೇಳಿದರು. ನಮ್ಮ ಅಂತರ್ಗತ ಪ್ರಜಾಪ್ರಭುತ್ವದ ಪ್ರಭಾವಶಾಲಿ ನೋಟವು ಚುನಾವಣೆಗಳಲ್ಲಿ ಗೋಚರಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆಯು ನಮ್ಮ ಸಮಾಜ ಮತ್ತು ದೇಶದ ಒಟ್ಟಾರೆ ಅಭಿವೃದ್ಧಿಯ ಪ್ರಮುಖ ಸಂಕೇತವಾಗಿದೆ. 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಮತದಾರರು, ವಿಕಲಚೇತನ ಮತದಾರರು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಮತದಾರರಿಗೆ ಮತದಾನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಚುನಾವಣಾ ಆಯೋಗ ವಿಶೇಷ ಪ್ರಯತ್ನಗಳನ್ನು ಮಾಡಿದೆ ಎಂಬುದರತ್ತ ಅವರು ಗಮನ ಸೆಳೆದರು. ಈ ರೀತಿಯಾಗಿ, ಚುನಾವಣಾ ಆಯೋಗವು ಅಂತರ್ಗತ ಮತ್ತು ಸೂಕ್ಷ್ಮ ಚುನಾವಣಾ ನಿರ್ವಹಣೆಗೆ ಉತ್ತಮ ಉದಾಹರಣೆಯನ್ನು ನೀಡಿದೆ ಎಂದೂ ಅವರು ಹೇಳಿದರು. ಮತದಾನಕ್ಕೆ ಸಂಬಂಧಿಸಿದ ಆದರ್ಶಗಳು ಮತ್ತು ಜವಾಬ್ದಾರಿಗಳು ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಆಯಾಮಗಳಾಗಿವೆ ಎಂದು ರಾಷ್ಟ್ರಪತಿ ಹೇಳಿದರು. ಚುನಾವಣಾ ಆಯೋಗ ಹೊರಡಿಸಿದ ಮತದಾರರ ಪ್ರತಿಜ್ಞೆ ಎಲ್ಲಾ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆಯ ಜೊತೆಗೆ, ಮತದಾರರು ಎಲ್ಲಾ ರೀತಿಯ ಸಂಕುಚಿತ ಮನೋಭಾವ, ತಾರತಮ್ಯ ಮತ್ತು ಪ್ರಲೋಭನೆಗಳನ್ನು ಮೀರಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ದೃಢ ಸಂಕಲ್ಪವನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಪ್ರಬುದ್ಧ ಮತದಾರರು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತಾರೆ ಎಂದು ಅವರು ನುಡಿದರು. 2011 ರಿಂದ, ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮವು ಮತದಾರರ ಕೇಂದ್ರೀಕರಣವನ್ನು ಒತ್ತಿಹೇಳುವುದು, ನಾಗರಿಕರಲ್ಲಿ ಚುನಾವಣಾ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
Read More »2025ರ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾಷಣ
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ! ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ. ಗಣರಾಜ್ಯೋತ್ಸವದ ಮುನ್ನಾದಿನದಂದು, ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ! 75 ವರ್ಷಗಳ ಹಿಂದೆ ಇದೇ ಜನವರಿ 26ರಂದು ನಮ್ಮ ಸಂಸ್ಥಾಪಕ ದಾಖಲೆಯಾದ ಭಾರತದ ಸಂವಿಧಾನ ಜಾರಿಗೆ ಬಂದಿತು. ಸಂವಿಧಾನ ರಚನಾ ಸಭೆಯು ಸುಮಾರು ಮೂರು ವರ್ಷಗಳ ಚರ್ಚೆಯ ನಂತರ, 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿತು. ಆ ದಿನವನ್ನು, ಅಂದರೆ, ನವೆಂಬರ್ …
Read More »ಸೈಬರ್ ಭದ್ರತೆ ಸಹಕಾರದ ಕುರಿತು ಬಿಮ್ ಸ್ಟೆಕ್ ತಜ್ಞರ ಗುಂಪಿನ ಎರಡನೇ ಸಭೆ
ಭಾರತ ಸರ್ಕಾರದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ನವದೆಹಲಿಯಲ್ಲಿ 2025ರ ಜನವರಿ 21ರಂದು ಸೈಬರ್ ಭದ್ರತೆ ಸಹಕಾರದ ಕುರಿತು ಬಿಮ್ ಸ್ಟೆಕ್ ತಜ್ಞರ ಗುಂಪಿನ ಎರಡನೇ ಸಭೆಯನ್ನು ಆಯೋಜಿಸಿತ್ತು. ಭಾರತ ಸೈಬರ್ ಭದ್ರತೆ ಕುರಿತ ಬಿಮ್ ಸ್ಟೆಕ್ ಗುಂಪಿನ ಮೊದಲ ತಜ್ಞರ ಸಮಿತಿ ಸಭೆಯನ್ನು ನವದೆಹಲಿಯಲ್ಲಿ 2022ರಲ್ಲಿ ಆಯೋಜಿಸಿತ್ತು. ಈ ಬಿಮ್ ಸ್ಟೆಕ್ ತಜ್ಞರ ಗುಂಪಿನ ಸಭೆಯ ಪ್ರಮುಖ ಉದ್ದೇಶವೆಂದರೆ, ಐಸಿಟಿ ಗಳ ಬಳಕೆಯಲ್ಲಿ ಸೈಬರ್ ಭದ್ರತೆಯನ್ನು ಬಲಪಡಿಸಲು ಬಿಮ್ …
Read More »ದೇಶದಲ್ಲಿ ಪ್ರಸಾರ ಮೂಲಸೌಕರ್ಯಗಳ ಉನ್ನತೀಕರಣಕ್ಕೆ ಭಾರತ ಸರ್ಕಾರ ಬದ್ಧವಾಗಿದೆ: ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್ ಮುರುಗನ್
ಶಿವಮೊಗ್ಗ ದೂರದರ್ಶನ ಕೇಂದ್ರದ ಆವರಣದಲ್ಲಿಂದು ನಡೆದ ಭದ್ರಾವತಿ ಆಕಾಶವಾಣಿ ಕೇಂದ್ರದ ಉನ್ನತೀಕರಿಸಿದ 10 KW ಟ್ರಾನ್ಸ್‌ಮಿಟರ್ ಮತ್ತು ಇತರ ಸಲಕರಣೆಗಳ ಪೂಜಾ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ.ಎಲ್.ಮುರುಗನ್ ಅವರು ಭಾಗವಹಿಸಿದ್ದರು. ಪೂಜಾ ಕಾರ್ಯಕ್ರಮದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಎಲ್. ಮುರುಗನ್ ಅವರು, “ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಪ್ರಸಾರ ಮೂಲಸೌಕರ್ಯಗಳನ್ನು …
Read More »“ಪರಾಕ್ರಮ್ ದಿವಸ್” ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯ ಅಂಗವಾಗಿ ಆಚರಿಸಿರುವ “ಪರಾಕ್ರಮ್ ದಿವಸ್” ಸಂದರ್ಭದಲ್ಲಿ ಇಂದು ಭಾಷಣವನ್ನು ಮಾಡಿದರು. ವೀಡಿಯೋ ಸಂದೇಶ ನೀಡಿದ ಪ್ರಧಾನಮಂತ್ರಿಗಳು ಜನತೆಗೆ ಶುಭಾಶಯ ಕೋರಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಇಂದು ಇಡೀ ರಾಷ್ಟ್ರವು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದೆ. ನೇತಾಜಿ ಸುಭಾಸ್ ಬೋಸ್ ಅವರಿಗೆ ಗೌರವ ಸಲ್ಲಿಸಿದ ಶ್ರೀ ಮೋದಿ, ಈ ವರ್ಷದ ಪರಾಕ್ರಮ್ ದಿವಸ್‌ನ ಭವ್ಯವಾದ ಆಚರಣೆಯನ್ನು …
Read More »ಭಾರತದ ನವೀಕರಿಸಬಹುದಾದ ಇಂಧನ ಕ್ರಾಂತಿ
ಭಾರತವು ಸುಸ್ಥಿರ ಭವಿಷ್ಯದತ್ತ ತನ್ನ ಪರಿವರ್ತನೆಯನ್ನು ವೇಗಗೊಳಿಸುತ್ತಿರುವುದರಿಂದ, ಅದರ ನವೀಕರಿಸಬಹುದಾದ ಇಂಧನ (ಆರ್ ಇ) ವಲಯವು ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ. 2024ರಲ್ಲಿ, ಸೌರ ಮತ್ತು ಪವನ ಶಕ್ತಿ ಸ್ಥಾಪನೆಗಳು, ನೀತಿ ಪ್ರಗತಿಗಳು ಮತ್ತು ಮೂಲಸೌಕರ್ಯ ಸುಧಾರಣೆಗಳಲ್ಲಿ ದೇಶವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, 2025ರಲ್ಲಿ ಮಹತ್ವಾಕಾಂಕ್ಷೆಯ ಗುರಿಗಳಿಗೆ ವೇದಿಕೆಯನ್ನು ಸ್ಥಾಪಿಸಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ಇಂಧನ ಸಾಮರ್ಥ್ಯವನ್ನು ಸಾಧಿಸುವ ಬದ್ಧತೆಯೊಂದಿಗೆ, ಭಾರತವು ಶುದ್ಧ ಇಂಧನದಲ್ಲಿ ಜಾಗತಿಕ …
Read More »2025-26 ಹಂಗಾಮಿಗಾಗಿ ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ) ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿ (ಸಿಸಿಇಎ) ಸಭೆ 2025-26ನೇ ಸಾಲಿನ ಮಾರುಕಟ್ಟೆ ಹಂಗಾಮಿಗಾಗಿ ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ)ಯನ್ನು ಅನುಮೋದಿಸಿದೆ. 2025-26ನೇ ಸಾಲಿಗೆ ಕಚ್ಚಾ ಸೆಣಬಿನ (ಟಿಡಿ-3 ದರ್ಜೆ) ಎಂಎಸ್‌ಪಿಯನ್ನು ಕ್ವಿಂಟಾಲ್‌ಗೆ 5,650/- ರೂ. ನಿಗದಿಪಡಿಸಲಾಗಿದೆ. ಇದು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಶೇ. 66.8 ರಷ್ಟು ಹೆಚ್ಚಿನ ಆದಾಯವನ್ನು …
Read More »ರಾಷ್ಟ್ರೀಯ ಆರೋಗ್ಯ ಮಿಷನ್ (2021-24) ಅಡಿಯಲ್ಲಿ ಸಾಧನೆಗಳಿಗೆ ಸಂಪುಟದ ಅನುಮೋದನೆ: ಭಾರತದ ಸಾರ್ವಜನಿಕ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಒಂದು ಮೈಲಿಗಲ್ಲು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ 2021-22, 2022-23 ಮತ್ತು 2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ.) ಅಡಿಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಿವರಿಸಲಾಯಿತು. ತಾಯಂದಿರ ಮರಣ ಪ್ರಮಾಣ, ಶಿಶು ಮರಣ ಪ್ರಮಾಣ, 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದಲ್ಲಾಗಿರುವ ತ್ವರಿತ ಇಳಿಕೆ ಮತ್ತು ಒಟ್ಟು ಫಲವತ್ತತೆ ದರ ಮತ್ತು ಟಿಬಿ, ಮಲೇರಿಯಾ, ಕಾಲಾ-ಅಜರ್, ಡೆಂಗ್ಯೂ, ಕ್ಷಯ, ಕುಷ್ಠರೋಗ, ವೈರಲ್ ಹೆಪಟೈಟಿಸ್ ಮುಂತಾದ ವಿವಿಧ ರೋಗಗಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿ ಹಾಗು ರಾಷ್ಟ್ರೀಯ ಕುಡಗೋಲು ಕೋಶ ರಕ್ತಹೀನತೆ ನಿರ್ಮೂಲನಾ ಮಿಷನ್ ನಂತಹ ಹೊಸ ಉಪಕ್ರಮಗಳಿಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯ ಬಗ್ಗೆಯೂ ಸಂಪುಟಕ್ಕೆ ವಿವರಿಸಲಾಯಿತು. ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಮಾನವ ಸಂಪನ್ಮೂಲವನ್ನು ವಿಸ್ತರಿಸುವಲ್ಲಿ, ನಿರ್ಣಾಯಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಆರೋಗ್ಯ ತುರ್ತುಸ್ಥಿತಿಗಳಿಗೆ ಸಮಗ್ರ ಪ್ರತಿಕ್ರಿಯೆಯನ್ನು ಬೆಳೆಸುವಲ್ಲಿ, ನಿರಂತರ ಪ್ರಯತ್ನಗಳ ಮೂಲಕ ಭಾರತದ ಸಾರ್ವಜನಿಕ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ಗಮನಾರ್ಹವಾಗಿ ಕೊಡುಗೆ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ, ಎನ್ಎಚ್ಎಂ ತಾಯಿ ಮತ್ತು ಮಕ್ಕಳ ಆರೋಗ್ಯ , ರೋಗ ನಿರ್ಮೂಲನೆ ಮತ್ತು ಆರೋಗ್ಯ ಮೂಲಸೌಕರ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಮಿಷನ್ನಿನ ಪ್ರಯತ್ನಗಳು ಭಾರತದ ಆರೋಗ್ಯ ಸುಧಾರಣೆಗಳಿಗೆ, ವಿಶೇಷವಾಗಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ವಿಶೇಷ ಕೊಡುಗೆ ನೀಡಿವೆ ಮತ್ತು ದೇಶಾದ್ಯಂತ ಹೆಚ್ಚು ಪ್ರವೇಶಿಸಬಹುದಾದ (ಎಲ್ಲರಿಗೂ ಲಭ್ಯವಾಗಬಹುದಾದ) ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದಲ್ಲಿ ಆಗಿರುವ ಗಮನಾರ್ಹ ಹೆಚ್ಚಳವು ಎನ್ಎಚ್ಎಂನ ಪ್ರಮುಖ ಸಾಧನೆಯಾಗಿದೆ. 2021-22ರ ಹಣಕಾಸು ವರ್ಷದಲ್ಲಿ, ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (ಜಿಡಿಎಂಒಗಳು), ತಜ್ಞರು, ಸ್ಟಾಫ್ ನರ್ಸ್ಗಳು, …
Read More »ಬೇಟಿ ಬಚಾವೋ ಬೇಟಿ ಪಡಾವೋ ಉಪಕ್ರಮವು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ ಮತ್ತು ಭಾರತದ ಪ್ರಗತಿಯಲ್ಲಿ ಮಹಿಳೆಯರನ್ನು ಮುಂಚೂಣಿಯಲ್ಲಿರಿಸಿದೆ: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೇಟಿ ಬಚಾವೋ ಬೇಟಿ ಪಡಾವೋ ಉಪಕ್ರಮವು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ ಮತ್ತು ಭಾರತದ ಪ್ರಗತಿಯಲ್ಲಿ ಮಹಿಳೆಯರನ್ನು ಮುಂಚೂಣಿಯಲ್ಲಿರಿಸಿದೆ ಎಂದು ಹೇಳಿದ್ದಾರೆ. ಅವರು ಕೇಂದ್ರ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರ ಲೇಖನವು ಭಾರತದ ಹೆಣ್ಣುಮಕ್ಕಳು ಹೇಗೆ ಬದಲಾವಣೆ ತರುತ್ತಿದ್ದಾರೆ, ಉದ್ಯಮಿಗಳು ಮತ್ತು ನಾಯಕಿಯರಾಗಿ ಹೊರಹೊಮ್ಮುತ್ತಿದ್ದಾರೆಂಬುದನ್ನು ಎತ್ತಿ ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಪ್ರಧಾನಮಂತ್ರಿ ಅವರು ಕೇಂದ್ರ ಸಚಿವೆ ಶ್ರೀಮತಿ ಅನ್ನಪೂರ್ಣ …
Read More »ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 19.01.2025 ರಂದು ಮಾಡಿದ ‘ಮನ್ ಕಿ ಬಾತ್’ – 118ನೇ ಭಾಷಣದ ಕನ್ನಡ ಅವತರಣಿಕೆ
ನನ್ನ ಪ್ರಿಯ ದೇಶವಾಸಿಗಳಿಗೆ ನಮಸ್ಕಾರ. ಇಂದು 2025ರ ಮೊದಲ ‘ಮನದ ಮಾತು’ ಮಾತನಾಡಲಾಗುತ್ತಿದೆ. ನೀವು ಖಂಡಿತ ಈ ವಿಷಯವನ್ನು ಗಮನಿಸಿರಬಹುದು. ಪ್ರತಿ ಬಾರಿ ತಿಂಗಳ ಕೊನೆಯ ಭಾನುವಾರದಂದು ‘ಮನದ ಮಾತು’ ಪ್ರಸಾರವಾಗುತ್ತದೆ, ಆದರೆ ಈ ಬಾರಿ ನಾವು ನಾಲ್ಕನೇ ಭಾನುವಾರದ ಬದಲು ಮೂರನೇ ಭಾನುವಾರದಂದು ಒಂದು ವಾರ ಮುಂಚಿತವಾಗಿ ಭೇಟಿಯಾಗುತ್ತಿದ್ದೇವೆ. ಏಕೆಂದರೆ ಮುಂದಿನ ಭಾನುವಾರದಂದೇ ಗಣರಾಜ್ಯೋತ್ಸವವಿದೆ. ಮುಂಚಿತವಾಗಿಯೇ ಎಲ್ಲಾ ದೇಶವಾಸಿಗಳಿಗೆ ನಾನು ಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ. ಸ್ನೇಹಿತರೇ, ಈ ಬಾರಿಯ …
Read More »
Matribhumi Samachar Kannad