Tuesday, January 20 2026 | 10:32:26 PM
Breaking News

National

ಭಾರತದ ಪ್ರತಿಭಾವಂತ ಯುವಕರು ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಿದ್ದಾರೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ವಿವಿಧ ಕ್ಷೇತ್ರಗಳಲ್ಲಿ ಭಾರತದ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸಿದರು, ಈ ಯಶಸ್ಸಿಗೆ ರಾಷ್ಟ್ರದ ಯುವಕರ ಶಕ್ತಿ ಮತ್ತು ಪ್ರತಿಭೆಯೇ ಕಾರಣ ಎಂದು ಅವರು ಹೇಳಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಗಮನಾರ್ಹ ಸಾಧನೆಗಳ ಬಗ್ಗೆ X ಪ್ಲಾಟ್ ಫಾರ್ಮ್ ನಲ್ಲಿ MyGov ನ ನವೀಕರಣಗಳಿಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು; “ಭಾರತವು ಪ್ರಭಲ ಪ್ರವೃತ್ತಿಯನ್ನು ಸ್ಥಾಪಿಸುತ್ತಿದ್ದು ಇದಕ್ಕೆ ನಮ್ಮ ಪ್ರತಿಭಾವಂತ ಯುವಕರು ಕಾರಣ! ಮುಂಬರುವ ದಿನಗಳಲ್ಲಿ ನಾವು ಇನ್ನೂ …

Read More »

ಕೇಂದ್ರ ಸಚಿವರಾದ ಶ್ರೀ ವಿ ಸೋಮಣ್ಣ ಅವರಿಂದ ಅಡಿಪ್ (ADIP) ಯೋಜನೆಯಡಿ ದಿವ್ಯಾಂಗ ಫಲಾನುಭವಿಗಳಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣೆ

ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವರಾದ ಶ್ರೀ ವಿ ಸೋಮಣ್ಣ ಇಂದು ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು,  ಕಸಬಾ, ಚೇಳೂರು ಮತ್ತು ಹಾಗಲವಾಡಿ ಹೋಬಳಿಗಳ ಪ್ರವಾಸ ಕೈಗೊಂಡಿದ್ದರು. ಕಸಬಾ ಹೋಬಳಿ ವ್ಯಾಪ್ತಿಯ 6 ಪಂಚಾಯಿತಿ, ಚೇಳೂರು ಮತ್ತು ಹಾಗಲವಾಡಿ ಹೋಬಳಿ ವ್ಯಾಪ್ತಿಯ 9 ಪಂಚಾಯಿತಿಯ ದಿವ್ಯಾಂಗ ಫಲಾನುಭವಿಗಳಿಗೆ ಭಾರತ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ADIP ಯೋಜನೆಯಡಿಯಲ್ಲಿ ದಿವ್ಯಾಂಗ ಫಲಾನುಭವಿಗಳಿಗೆ ಸಹಾಯಕ ಸಲಕರಣೆ ವಿತರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಆಹವಾಲು ಸ್ವೀಕರಿಸಿ …

Read More »

ರಾಷ್ಟ್ರಪತಿ ಅವರಿಂದ ಅತ್ಯಾಧುನಿಕ ರೋಗಪತ್ತೆ ಸೌಲಭ್ಯಗಳಾದ- ಸುಧಾರಿತ 3ಟಿ ಎಂ ಆರ್ ಐ ಸ್ಕ್ಯಾನರ್ ಮತ್ತು ಡಿ ಎಸ್ ಎ ಸಿಸ್ಟಮ್ ರಾಷ್ಟ್ರಕ್ಕೆ ಸಮರ್ಪಣೆ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) 2025ರ ಜನವರಿ 3ರಂದು ತನ್ನ ಸುವರ್ಣ ಮಹೋತ್ಸವವನ್ನು ಸಮಾವೇಶ ಸಭಾಂಗಣದಲ್ಲಿ ಆಚರಿಸಿಕೊಳ್ಳಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ನಿಮ್ಹಾನ್ಸ್ ಐದು ದಶಕಗಳ ಗಮನಾರ್ಹ ಸೇವೆಯನ್ನು ಸ್ಮರಿಸುತ್ತಿರುವುದರಿಂದ, ಇದು ಸಂಸ್ಥೆಯ ಬದ್ಧತೆ, ನಾವೀನ್ಯತೆ ಮತ್ತು ಶ್ರೇಷ್ಠತೆಯ ದೃಢವಾದ ಅನ್ವೇಷಣೆಯಿಂದ ಕೂಡಿರುವ ಅದರ ಪಯಣವನ್ನು ಪ್ರತಿಬಿಂಬಿಸುತ್ತದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಲಿದ್ದಾರೆ. …

Read More »

ಕೇಂದ್ರ ವಲಯ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿ.ಎಂ.ಎಫ್.ಬಿ.ವೈ) ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್.ಡಬ್ಲ್ಯೂ.ಬಿ.ಸಿ.ಐ.ಎಸ್.) ಗಳ ಅನುಷ್ಠಾನ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ವೈಶಿಷ್ಟ್ಯಗಳು/ ನಿಬಂಧನೆಗಳಲ್ಲಿ ಸೂಕ್ತ ಮಾರ್ಪಾಡು/ ಸೇರ್ಪಡೆಗೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಸ್ತುತ 2021-22 ರಿಂದ 2025 ರವರೆಗೆ ಅನುಷ್ಠಾನದಲ್ಲಿರುವ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ರೂ.69,515.71 ಕೋಟಿಗಳ ಒಟ್ಟಾರೆ ವೆಚ್ಚದೊಂದಿಗೆ 2025-26 ರವರೆಗೆ ಮುಂದುವರಿಸಲು ಅನುಮೋದಿಸಿದೆ. ಈ ನಿರ್ಧಾರವು 2025-26 ರವರೆಗೆ ದೇಶದಾದ್ಯಂತ ರೈತರಿಗೆ ಕೈಮಿಗಿಲಾಗಿ ಸಂಭವಿಸುವ ತಡೆಗಟ್ಟಲಾಗದ …

Read More »

ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಡಿಎಪಿಯ ಸುಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 01.01.2025 ರಿಂದ ಮುಂದಿನ ಆದೇಶದವರೆಗೆ ಎನ್ ಬಿ ಎಸ್ ಸಬ್ಸಿಡಿಯನ್ನು ಮೀರಿ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಮೇಲಿನ ಒಂದು-ಬಾರಿ ವಿಶೇಷ ಪ್ಯಾಕೇಜ್ ಅನ್ನು ವಿಸ್ತರಿಸಲು ಕ್ಯಾಬಿನೆಟ್ ಅನುಮೋದಿಸಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಮೇಲೆ ಒಂದು ಬಾರಿ ವಿಶೇಷ ಪ್ಯಾಕೇಜ್ ಅನ್ನು ಎನ್ ಬಿ ಎಸ್ ಸಬ್ಸಿಡಿ @ ರೂ 3,500 ರ ಅವಧಿಗೆ ವಿಸ್ತರಿಸಲು ರಸಗೊಬ್ಬರ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ. 01.01.2025 ರಿಂದ ಮುಂದಿನ ಆದೇಶದವರೆಗೆ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಡಿಎಪಿ ಸುಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು. ಮೇಲಿನ ತಾತ್ಕಾಲಿಕ ಬಜೆಟ್ ಅಗತ್ಯವು ಸರಿಸುಮಾರು ರೂ. …

Read More »

2025ನೇ ಹೊಸ ವರ್ಷಕ್ಕೆ ಪ್ರತಿಯೊಬ್ಬರಿಗೂ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದ ಎಲ್ಲಾ ನಾಗರಿಕರಿಗೂ 2025ನೇ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, “2025ನೇ ಹೊಸ ವರ್ಷದ ಶುಭಾಶಯಗಳು! ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಅನಂತ ಸಂತೋಷವನ್ನು ತರಲಿ. ಪ್ರತಿಯೊಬ್ಬರಿಗೂ ಅದ್ಭುತವಾದ ಆರೋಗ್ಯ ಮತ್ತು ಸಮೃದ್ಧಿಯ ಆಶೀರ್ವಾದ ಸಿಗಲಿ.” ಎಂದು ಆಶಯ ವ್ಯಕ್ತಪಡಿಸಿದ್ದಾರೆ.   भारत : 1885 से 1950 (इतिहास …

Read More »

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 29.12.2024 ರಂದು ಮಾಡಿದ ‘ಮನ್ ಕಿ ಬಾತ್’ – 117ನೇ ಸಂಚಿಕೆಯ ಕನ್ನಡ ಅವತರಣಿಕೆ

ನನ್ನ ಪ್ರಿಯ ದೇಶವಾಸಿಗಳಿಗೆ ನಮಸ್ಕಾರ. 2025 ಇನ್ನೇನು ಬಂದೆ ಬಿಟ್ಟಿತು, ನವ ಸಂವತ್ಸರ  ಬಾಗಿಲು ತಟ್ಟುತ್ತಿದೆ. 2025ರ ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ತುಂಬುತ್ತವೆ. ನಮಗೆಲ್ಲರಿಗೂ ಇದು ಹೆಮ್ಮೆಯ ವಿಷಯ. ನಮ್ಮ ಸಂವಿಧಾನ ನಿರ್ಮಾತೃಗಳು ನಮಗೆ ಒಪ್ಪಿಸಿದ ಸಂವಿಧಾನವು ಎಲ್ಲಾ ಕಾಲದಲ್ಲು ಪ್ರಸ್ತುತವಾಗಿದೆ. ಸಂವಿಧಾನ ನಮಗೆ ದಿಕ್ಸೂಚಿಯಾಗಿದೆ, ಮಾರ್ಗದರ್ಶಕನಾಗಿದೆ. ಭಾರತದ ಸಂವಿಧಾನದಿಂದಾಗಿಯೇ  ಇಂದು ನಾನು ಇಲ್ಲಿದ್ದೇನೆ, ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಈ ವರ್ಷ, ನವೆಂಬರ್ 26 …

Read More »

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕಾರ್ಯದರ್ಶಿಗಳು ವಿವಿಧ ಕಡಲ ರಾಜ್ಯಗಳಲ್ಲಿ ಚತುರ ಮತ್ತು ಸಮಗ್ರ ಮೀನುಗಾರಿಕಾ ಬಂದರು (ಸ್ಮಾರ್ಟ್ ಅಂಡ್ ಇಂಟಿಗ್ರೇಟೆಡ್ ಫಿಶಿಂಗ್ ಹಾರ್ಬರ್‌)ಗಳ ಅಭಿವೃದ್ಧಿಯ ಪ್ರಗತಿ ಹಾಗೂ ಬೆಂಗಳೂರಿನಲ್ಲಿರುವ ಮೀನುಗಾರಿಕೆಯ ಕರಾವಳಿ ಎಂಜಿನಿಯರಿಂಗ್ ಕೇಂದ್ರೀಯ ಸಂಸ್ಥೆಯ ಚಟುವಟಿಕೆಗಳ ಪರಿಶೀಲನೆ ನಡೆಸಿದರು

ಗುಜರಾತ್ ರಾಜ್ಯದ ಜಾಖೌ, ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಕರೈಕಲ್ ಮತ್ತು ಕೇಂದ್ರಾಡಳಿತ ಪ್ರದೇಶ  ದಾದ್ರಾ ಮತ್ತು ನಗರ್ ಹವೇಲಿ, ದಿಯು ದಮನ್ ನ ವಾಣಕ್ಬಾರಾ ಗಳಲ್ಲಿನ ಚತುರ ಮೀನುಗಾರಿಕಾ ಬಂದರು  (ಸ್ಮಾರ್ಟ್ ಫಿಶಿಂಗ್ ಹಾರ್ಬರ್) ಘಟಕಗಳ ಪ್ರಗತಿ ಪರಿಶೀಲಿಸಲು ಮತ್ತು ಸಂಸ್ಥೆಯ ಚಟುವಟಿಕೆಗಳನ್ನು ಪರಾಂಬರಿಸಲು ಕೇಂದ್ರೀಯ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ಬೆಂಗಳೂರಿನಲ್ಲಿರುವ ಮೀನುಗಾರಿಕೆಗಾಗಿನ ಕರಾವಳಿ ಎಂಜಿನಿಯರಿಂಗ್ (CICEF) ನಲ್ಲಿ 2024ರ ಡಿಸೆಂಬರ್ 27 ರಂದು ನಡೆದ ಸಭೆಯ …

Read More »

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಡಿಸೆಂಬರ್ 26, 2024) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಅಸಾಧಾರಣ ಹಾಗೂ ವಿಶೇಷ ಸಾಧನೆಗಳಿಗಾಗಿ ಏಳು ವಿಭಾಗಗಳಲ್ಲಿ ಒಟ್ಟು 17 ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ, ಎಲ್ಲಾ ಪ್ರಶಸ್ತಿ ವಿಜೇತರನ್ನು ರಾಷ್ಟ್ರಪತಿಯವರು ಅಭಿನಂದಿಸಿದರು ಮತ್ತು ಸಾಧಕ ಮಕ್ಕಳ ಕುರಿತಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ “ಇಡೀ ದೇಶ ಮತ್ತು ಸಮಾಜವು ಇವರ …

Read More »

ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ಸ್ಮೃತಿ ಸ್ಥಳ ‘ಸದೈವ್ ಅಟಲ್’ ನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಸ್ಮೃತಿ ಸ್ಥಳ ‘ಸದೈವ್ ಅಟಲ್’ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಸಾಮಾಜಿಕ ವೇದಿಕೆ ಎಕ್ಸ್ ನಲ್ಲಿನ ತಮ್ಮ ಖಾತೆಯ ಸರಣಿ ಸಂದೇಶಗಳಲ್ಲಿ, ಶ್ರೀ ಅಮಿತ್ ಶಾ ಅವರು “ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅಟಲ್ ಜಿ ಅವರ ಸಮರ್ಪಣೆ ಭವಿಷ್ಯದ …

Read More »