Monday, September 14 2026 | 09:02:27 AM
Breaking News

Regional

ಬೆಂಗಳೂರಿನಲ್ಲಿ ಹೊಸ ಆಧಾರ್‌ ಸೇವಾ ಕೇಂದ್ರದ ಉದ್ಘಾಟನೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಹೊಸ ಯುಐಡಿಎಐ ಆಧಾರ್‌ ಸೇವಾ ಕೇಂದ್ರವನ್ನು (ಎಎಸ್‌ಕೆ) ಉದ್ಘಾಟಿಸಿದೆ. ನಗರದಲ್ಲಿ ನಾಗರಿಕ ಕೇಂದ್ರಿತ ಆಧಾರ್‌ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಧಾರ್‌ ಸೇವಾ ಕೇಂದ್ರವನ್ನು ಯುಐಡಿಎಐ ತಂತ್ರಜ್ಞಾನ ಕೇಂದ್ರದ ಬೆಂಗಳೂರಿನ ಉಪ ಮಹಾನಿರ್ದೇಶಕಿ ಶ್ರೀಮತಿ ತನುಶ್ರೀ ದೇಬ್‌ ಬರ್ಮಾ(ಐಎಎಸ್‌) ಮತ್ತು ಯುಐಡಿಎಐ-ಪ್ರಾದೇಶಿಕ ಕಚೇರಿ, ಬೆಂಗಳೂರು ಉಪ ಮಹಾನಿರ್ದೇಶಕಿ ಶ್ರೀಮತಿ ಅನ್ನಿ ಜಾಯ್ಸ್ ವಿ. …

Read More »

ಸ್ವದೇಶ್ ದರ್ಶನ್ 2.0 ಮತ್ತು ಪ್ರಸಾದ್‌ ಯೋಜನೆಗಳ ಅಡಿಯಲ್ಲಿ ಕರ್ನಾಟಕದ ಹಂಪಿ, ಮೈಸೂರು, ಬೀದರ್‌ ಮತ್ತಿತರ ತಾಣಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾತಿ: ಕೇಂದ್ರ ಸಚಿವರಾದ ಶ್ರೀ ಗಜೇಂದ್ರಸಿಂಗ್‌ ಶೆಖಾವತ್

ಸ್ವದೇಶ್ ದರ್ಶನ್ 2.0 ಮತ್ತು ಪ್ರಸಾದ್‌ ಯೋಜನೆಗಳ ಅಡಿಯಲ್ಲಿ ಕರ್ನಾಟಕದ ವಿಶ್ವವಿಖ್ಯಾತ ಹಂಪಿ, ಪಾರಂಪರಿಕ ನಗರಿ ಮೈಸೂರು, ಬೀದರ್‌ ಮತ್ತಿತರ ತಾಣಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಲಾಗಿದೆ. ಈ ತಾಣಗಳ ಅಭಿವೃದ್ದಿಗಾಗಿ ಸ್ವದೇಶ್ ದರ್ಶನ್ 2.0 ಅಡಿಯಲ್ಲಿ 46.84 ಕೋಟಿ ರೂ.ಗಳು, ಪ್ರಸಾದ್‌ ಯೋಜನೆಯ ಅಡಿಯಲ್ಲಿ 86 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರಸಿಂಗ್‌ ಶೆಖಾವತ್‌ ತಿಳಿಸಿದ್ದಾರೆ. ಕರ್ನಾಟಕದ ಶ್ರೀನಿವಾಸ ಸಾಗರ ಜಲಾಶಯ, …

Read More »

ಹಾರ್ನ್ ಬಿಲ್ ಉತ್ಸವವನ್ನು ಭಾರತದ ಸಾಂಸ್ಕೃತಿಕ ಪ್ರತಿಭೆಗಳ ಮತ್ತು ಈಶಾನ್ಯದ ಹೆಚ್ಚುತ್ತಿರುವ ಆತ್ಮವಿಶ್ವಾಸದ ಆಚರಣೆಯಾಗಿದೆ ಎಂದು ಶ್ಲಾಘಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

ನಾಗಾಲ್ಯಾಂಡ್ ನ ಹಾರ್ನ್ ಬಿಲ್ ಉತ್ಸವದ ಉತ್ಸಾಹಭರಿತ ಮನೋಭಾವವನ್ನು ಶ್ಲಾಘಿಸಿದ್ದಾರೆ, ಇದು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಅದರ ಬುಡಕಟ್ಟು ಪರಂಪರೆಯ ಶಾಶ್ವತ ಚೈತನ್ಯದ ಪ್ರಬಲ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬಣ್ಣಿಸಿದ್ದಾರೆ. ಇಂದು ಈಶಾನ್ಯವು ಹೊಸ, ಆತ್ಮವಿಶ್ವಾಸದ ಭಾರತದ ಮುಖವನ್ನು ಪ್ರತಿನಿಧಿಸುತ್ತದೆ ಎಂದು  ನಾಗಾಲ್ಯಾಂಡ್ ನ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರಾಜ್ಯವು ಕೇವಲ ಉತ್ಸವವನ್ನು ಆಯೋಜಿಸುವುದಿಲ್ಲ; ಅದು …

Read More »

ಕರ್ನಾಟಕದ ಅಥಣಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 25 ಅಡಿ ಎತ್ತರದ ಪ್ರತಿಮೆಯನ್ನು ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅನಾವರಣಗೊಳಿಸಿದರು

ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಭಾನುವಾರ ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮರಾಠಾ ಐಕಾನ್ ಛತ್ರಪತಿ ಶಿವಾಜಿ ಮಹಾರಾಜರ 25 ಅಡಿ ಎತ್ತರದ ಭವ್ಯ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭವನ್ನು ಐತಿಹಾಸಿಕ ಎಂದು ಬಣ್ಣಿಸಿದ ಸಚಿವರು, ಇದು ಕೇವಲ ಪ್ರತಿಮೆಯ ಅನಾವರಣವಲ್ಲ, ಬದಲಾಗಿ ಭಾರತದ ಸ್ವಾಭಿಮಾನ, ಧೈರ್ಯ ಮತ್ತು ಹಿಂದವಿ ಸ್ವರಾಜ್‌ ನ ಪ್ರಜ್ಞೆಯನ್ನು ಭವಿಷ್ಯದ ಪೀಳಿಗೆಗೆ ಕೊಂಡೊಯ್ಯುವ ದೃಢಸಂಕಲ್ಪವಾಗಿದೆ …

Read More »

ಮಿಜೋರಾಂ ಮೊದಲ ಬಾರಿಗೆ ರೈಲಿನ ಮೂಲಕ ಸಾಗಿಸಿದ ಕಾರುಗಳನ್ನು ಸ್ವೀಕರಿಸಿದ್ದು, ಈ ಪ್ರದೇಶದ ಸಾರಿಗೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ

ಗುವಾಹಟಿ ಬಳಿಯ ಚಾಂಗ್ಸಾರಿಯಿಂದ 119 ಮಾರುತಿ ಕಾರುಗಳನ್ನು ಹೊತ್ತ ಆಟೋಮೊಬೈಲ್ ರೇಕ್‌ ನ ಮೊದಲ ನೇರ ಆಗಮನಕ್ಕೆ ಸೈರಾಂಗ್ ರೈಲು ನಿಲ್ದಾಣ ಸಾಕ್ಷಿಯಾಯಿತು. ಈ ಐತಿಹಾಸಿಕ ಕ್ರಮವು ಐಜ್ವಾಲ್‌ ನಲ್ಲಿ ವಾಹನ ಲಭ್ಯತೆಯನ್ನು ಹೆಚ್ಚಿಸುತ್ತದೆ, ದೀರ್ಘ ರಸ್ತೆ ಸಾರಿಗೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಡೀಲರ್‌ ಗಳು, ಸೇವಾ ಪೂರೈಕೆದಾರರು ಮತ್ತು ಗ್ರಾಹಕರು ಸೇರಿದಂತೆ ಮಿಜೋರಾಂನ ಆಟೋಮೊಬೈಲ್ ವಲಯಕ್ಕೆ ಪ್ರಯೋಜನವನ್ನು ನೀಡುತ್ತದೆ, ಇದು ರಾಜ್ಯದ ಮೂಲಸೌಕರ್ಯ ಮತ್ತು ಆರ್ಥಿಕ …

Read More »

ಕರ್ನಾಟಕದಲ್ಲಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಉಪಕ್ರಮಗಳಲ್ಲಿ ಗಮನಾರ್ಹ ಪ್ರಗತಿ

ಕರ್ನಾಟಕದಾದ್ಯಂತ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಯೋಜನೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಅವರು ಲೋಕಸಭೆಯಲ್ಲಿ ತಿಳಿಸಿದರು. ರಾಜ್ಯವು ಈಗ 395 ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಹೊಂದಿದೆ, ನಿಖರವಾದ ಪೋಷಕಾಂಶ ನಿರ್ವಹಣೆಯೊಂದಿಗೆ ರೈತರನ್ನು ಸಬಲೀಕರಣಗೊಳಿಸಲು ಸುಧಾರಿತ ಮೂಲಸೌಕರ್ಯದಿಂದ ಬಲಪಡಿಸಲಾಗಿದೆ ಎಂಬ ಮಾಹಿತಿ ನೀಡಿದರು ಕೃಷಿ ನಿಟ್ಟಿನಲ್ಲಿ ಪ್ರಮುಖ ಸಾಧನೆಗಳಲ್ಲಿ 2020-21 ರಿಂದ 2024-25 ರವರೆಗೆ ರಾಜ್ಯಾದ್ಯಂತ 11,15,363 ಮಣ್ಣಿನ …

Read More »

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಯು ಪ್ರಸ್ತುತ ಪ್ರಶಾದ್ ಯೋಜನೆಯಡಿ ಪರಿಗಣನೆಯಲ್ಲಿಲ್ಲ

ಕರ್ನಾಟಕದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಯು ಪ್ರಸ್ತುತ ಪ್ರಶಾದ್ ಯೋಜನೆಯಡಿ ಅನುಮೋದನೆಗಾಗಿ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರಸಿಂಗ್‌ ಶೆಖಾವತ್‌ ಹೇಳಿದ್ದಾರೆ. ಪ್ರವಾಸೋದ್ಯಮ ಯೋಜನೆಗಳಿಗೆ ಆರ್ಥಿಕ ಸಹಾಯಕ್ಕಾಗಿ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತವೆ. ಸ್ವೀಕರಿಸಿದ ಪ್ರಸ್ತಾವನೆಗಳನ್ನು ಸ್ಥಾಪಿತ ಮಾರ್ಗಸೂಚಿಗಳ ಪ್ರಕಾರ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದರೆ ಮತ್ತು ಹಣ ಲಭ್ಯವಿದ್ದರೆ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. …

Read More »

ಗುಜರಾತ್‌ ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್‌ ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ವ್ಯಾಪ್ತಿಯಲ್ಲಿ ಸುಮಾರು 1,500 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ …

Read More »

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಗುಜರಾತ್‌ ನಲ್ಲಿ ‘ಅರ್ಥ್ ಶೃಂಗಸಭೆ – 2025’ ಉದ್ಘಾಟಿಸಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಅರ್ಥ್ ಶೃಂಗಸಭೆ 2025 ಅನ್ನು ಉದ್ಘಾಟಿಸಿದರು. ಶ್ರೀ ಅಮಿತ್ ಶಾ ಅವರು ‘ಸಹಕಾರ ಸಾರಥಿ’ ಅಡಿಯಲ್ಲಿ 13ಕ್ಕೂ ಹೆಚ್ಚು ಹೊಸ ಸೇವೆಗಳು ಮತ್ತು ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಇವುಗಳಲ್ಲಿ ಡಿಜಿ ಕೆಸಿಸಿ, ಅಭಿಯಾನ ಸಾರಥಿ, ವೆಬ್‌ಸೈಟ್ ಸಾರಥಿ, ಸಹಕಾರಿ ಆಡಳಿತ ಸೂಚ್ಯಂಕ, ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣಾ ಅಪ್ಲಿಕೇಶನ್ …

Read More »

ಕರ್ನಾಟಕದಲ್ಲಿ ನವೋದ್ಯಮಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರದಿಂದ ಹಲವು ಉಪಕ್ರಮ

ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನೇತರ ಹಾಗೂ ನವೋದ್ಯಮಗಳ ಉತ್ತೇಜನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಹಲವು ಉಪ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ದಡಿ ಭಾರತೀಯ ಸಾಫ್ಟ್‌ ವೇರ್ ತಂತ್ರಜ್ಞಾನ ಪಾರ್ಕ್‌ (ಎಸ್ ಟಿ ಪಿ ಐ ) ಮೂಲಕ ಗುಣಮಟ್ಟದ ಮೂಲಸೌಕರ್ಯ, ವೇಗದ ಸಂಪರ್ಕ, ಸಂಪೋಷಣೆ ಮತ್ತು ನೀತಿ ಬೆಂಬಲವನ್ನು ನೀಡುತ್ತಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ …

Read More »