Wednesday, December 24 2025 | 11:58:28 PM
Breaking News

ಭಾರತವು ತೈಲ ಮತ್ತು ಅನಿಲ ಪರಿಶೋಧನೆಯಲ್ಲಿ ತ್ವರಿತ ಪ್ರಗತಿ ಸಾಧಿಸಿದೆ: ಪೆಟ್ರೋಲಿಯಂ ಸಚಿವರಾದ ಹರ್‌ದೀಪ್‌ ಎಸ್ ಪುರಿ

ಭಾರತವು ತೈಲ ಮತ್ತು ಅನಿಲ ನಿಕ್ಷೇಪ ಪರಿಶೋಧನೆಯಲ್ಲಿ, ವಿಶೇಷವಾಗಿ ಕಡಲು ಪ್ರದೇಶಗಳಲ್ಲಿ, ಹೊಸ ಪ್ರಗತಿಯನ್ನು ಕಾಣುತ್ತಿದೆ, ಇದು ದೇಶದ ವಿಶಾಲವಾದ ಹೈಡ್ರೋಕಾರ್ಬನ್ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ರಾಜ್ಯಸಭೆಯಲ್ಲಿ ನಕ್ಷತ್ರ ಗುರುತಿನ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್‌ದೀಪ್‌ ಸಿಂಗ್ ಪುರಿ, 2022 ರಲ್ಲಿ ಸುಮಾರು ಒಂದು ಮಿಲಿಯನ್ ಚದರ ಕಿಲೋಮೀಟರ್ನಷ್ಟು ಕಡಲಿನೊಳಗಿನ ‘ನೋ-ಗೋ’ ಪ್ರದೇಶಗಳನ್ನು ತೆರೆದಿರುವುದು ಒಂದು ಹೆಗ್ಗುರುತು ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. …

Read More »

ಮಹಿಳಾ ಸ್ವಸಹಾಯ ಗುಂಪುಗಳಿಗೆ ವಿತರಿಸಲಾದ ಸಾಲ 11 ಲಕ್ಷ ಕೋಟಿ ರೂ.ಗೆ ತಲುಪಿದೆ

ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿ.ಎ.ವೈ-ಎನ್.ಆರ್.ಎಲ್.ಎಂ) ಅಡಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, ಔಪಚಾರಿಕ ಹಣಕಾಸು ಸಂಸ್ಥೆಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್.ಎಚ್.ಜಿ) 11 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಸಾಲವನ್ನು ವಿತರಿಸಿದೆ. ಬ್ಯಾಂಕಿಂಗ್ ಭ್ರಾತೃತ್ವದ ಅಚಲ ಬೆಂಬಲದಿಂದ ಸಾಧ್ಯವಾದ ಈ ಹೆಗ್ಗುರುತು ಸಾಧನೆಯು ಅಂತರ್ಗತ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ತಳಮಟ್ಟದ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಸರ್ಕಾರದ ದೃಢ …

Read More »

ಕಡಿಮೆ ವೆಚ್ಚದ ʻಸ್ಮಾರ್ಟ್ ಕಿಟಕಿʼ ಅಭಿವೃದ್ಧಿಪಡಿಸಿದ ಬೆಂಗಳೂರಿನ ವಿಜ್ಞಾನಿಗಳು

ಒಮ್ಮೆ ʻಸ್ವಿಚ್‌ʼ ತಿರುಗಿಸದರೆ ಬಣ್ಣವನ್ನು ಬದಲಾಯಿಸುವ, ಬಿಸಿಲಿನ ದಿನಗಳಲ್ಲಿ ಶಾಖವನ್ನು ನಿರ್ಬಂಧಿಸುವ, ಶಕ್ತಿಯನ್ನು ಉಳಿಸುವ ಮತ್ತು ವಿದ್ಯುತ್ ಅನ್ನು ಸಂಗ್ರಹಿಸುವ ʻಸ್ಮಾರ್ಟ್ ಕಿಟಕಿʼಗಳನ್ನು (ಸ್ಮಾರ್ಟ್‌ ವಿಂಡೋ) ಈಗ ಕೈಗೆಟುಕುವ ದರದ ವಸ್ತುಗಳನ್ನೇ ಬಳಸಿ ತಯಾರಿಸಬಹುದು. ಈ ತಾಂತ್ರಿಕ ಸುಧಾರಣೆಯು ʻಸ್ಮಾರ್ಟ್ ಕಿಟಕಿʼ ತಂತ್ರಜ್ಞಾನವನ್ನು ಹೆಚ್ಚು ಜನರಿಗೆ ಲಭ್ಯವಾಗುವಂತೆ ಮಾಡಬಲ್ಲದು. ʻಎಲೆಕ್ಟ್ರೋಕ್ರೋಮಿಕ್ ಸ್ಮಾರ್ಟ್ ವಿಂಡೋʼಗಳು ಸಣ್ಣ ವಿದ್ಯುತ್ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಬಣ್ಣವನ್ನು ಬದಲಾಯಿಸುತ್ತವೆ, ಇದು ಗೋಚರ ಮತ್ತು ಹತ್ತಿರದ-ಇನ್ಫ್ರಾರೆಡ್ (ಎನ್ಐಆರ್) ಬೆಳಕನ್ನು …

Read More »

ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ʻಬಿಎಸ್ಎನ್ಎಲ್ʼನ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು, ಗ್ರಾಹಕರ ಅನುಭವ ಮತ್ತು ಆದಾಯ ಉತ್ಪಾದನೆ ಬಗ್ಗೆ ಒತ್ತಿ ಹೇಳಿದರು

ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ನವದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ(ಬಿಎಸ್ಎನ್ಎಲ್) ಮುಖ್ಯ ಪ್ರಧಾನ ವ್ಯವಸ್ಥಾಪಕರೊಂದಿಗೆ(ಸಿಜಿಎಂ) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು. ಈ ಉನ್ನತ ಮಟ್ಟದ ಸಭೆಯು ʻಬಿಎಸ್ಎನ್ಎಲ್ʼನ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಿತು, ಪ್ರಾದೇಶಿಕ ಸವಾಲುಗಳನ್ನು ಚರ್ಚಿಸಿತು. ಜೊತೆಗೆ, ಕಂಪನಿಯ ಜಾಲ(ನೆಟ್ ವರ್ಕ್) ಹಾಗೂ ಸೇವಾ ವಿತರಣೆಯ ಮುಂದಿನ ಕಾರ್ಯತಂತ್ರದ ಬಗ್ಗೆ ಪರಿಶೀಲಿಸಿತು. ಸಂವಹನ ಖಾತೆ ಸಹಾಯಕ ಸಚಿವ ಶ್ರೀ ಪೆಮ್ಮಸಾನಿ ಚಂದ್ರಶೇಖರ್ ಮತ್ತು …

Read More »

ಗೌರವಾನ್ವಿತ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಎನ್.ಇ.ಪಿ 2020ರ 5 ವರ್ಷಗಳ ಸ್ಮರಣಾರ್ಥ ನಾಳೆ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ 2025 ಅನ್ನು ಉದ್ಘಾಟಿಸಲಿದ್ದಾರೆ

ಎನ್.ಇ.ಪಿ 2020 ರ 5ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಿಕ್ಷಣ ಸಚಿವಾಲಯವು 2025 ರ ಜುಲೈ 29ರಂದು ಅಖಿಲ ಭಾರತೀಯ ಶಿಕ್ಷಾ ಸಮಾಗಮ್, 2025 ಅನ್ನು ಭಾರತ್ ಮಂಟಪಂ ಆವರಣದಲ್ಲಿ ಆಯೋಜಿಸುತ್ತಿದೆ. ದಿನವಿಡೀ ನಡೆಯುವ ಚರ್ಚೆಗಳನ್ನು ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) 2020 ರ ಐದನೇ ವಾರ್ಷಿಕೋತ್ಸವವನ್ನು ಗುರುತಿಸುವ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ (ಎ.ಬಿ.ಎಸ್.ಎಸ್) 2025, ಎ.ಬಿ.ಎಸ್.ಎಸ್ 2025 ಶಿಕ್ಷಣ ತಜ್ಞರು, …

Read More »

ಪ್ರಧಾನಮಂತ್ರಿ ಅವರು ದಿನಾಂಕ 27.07.2025 ರಂದು ಮಾಡಿದ ‘ಮನ್ ಕಿ ಬಾತ್’ – 124 ನೇ ಸಂಚಿಕೆಯ ಕನ್ನಡ ಅವತರಣಿಕೆ

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ‘ಮನದ ಮಾತಿನಲ್ಲಿ’ ಮತ್ತೊಮ್ಮೆ ನಾವು ದೇಶದ ಯಶಸ್ಸಿನ ಬಗ್ಗೆ, ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತನಾಡಲಿದ್ದೇವೆ. ಕ್ರೀಡೆಯಾಗಿರಲಿ, ವಿಜ್ಞಾನವಾಗಿರಲಿ ಅಥವಾ ಸಂಸ್ಕೃತಿಯಾಗಿರಲಿ ಎಲ್ಲ ಕ್ಷೇತ್ರಗಳಲ್ಲಿ ಕಳೆದ ಕೆಲವು ವಾರಗಳಲ್ಲಿ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ, ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಹಿಂದಿರುಗಿದ ಕುರಿತು ದೇಶದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಶುಭಾಂಶು ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ತಕ್ಷಣ, ಜನರು ಸಂತೋಷದಿಂದ ಕುಣಿದು ಕುಪ್ಪಳಿಸಿದರು, ಪ್ರತಿಯೊಬ್ಬರ ಹೃದಯದಲ್ಲೂ ಸಂತಸದ …

Read More »

ಮಾಲ್ಡೀವ್ಸ್‌ಗೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿ: ಫಲಪ್ರದತೆಯ ಪಟ್ಟಿ

ಕ್ರ.ಸಂ. ಒಪ್ಪಂದ/ತಿಳುವಳಿಕಾ ಒಡಂಬಡಿಕೆ 1. ಮಾಲ್ಡೀವ್ಸ್ ಗೆ 4,850 ಕೋಟಿ ರೂ.ಗಳ ಸಾಲ ಸೌಲಭ್ಯ (ಎಲ್‌ಒಸಿ) ವಿಸ್ತರಣೆ 2. ಭಾರತ ಸರ್ಕಾರ ಒದಗಿಸಿದ ಸಾಲಸೌಲಭ್ಯಗಳ ಪೈಕಿ ಮಾಲ್ಡೀವ್ಸ್‌ನ ವಾರ್ಷಿಕ ಸಾಲ ಮರುಪಾವತಿ ಬಾಧ್ಯತೆಗಳನ್ನು ಕಡಿಮೆ ಮಾಡುವುದು 3. ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ (ಐಎಂಎಫ್‌ಟಿಎ) ಮಾತುಕತೆಗಳ ಆರಂಭ 4. ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ   ಕ್ರ.ಸಂ. ಉದ್ಘಾಟನೆ / ಹಸ್ತಾಂತರ …

Read More »

ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಮತ್ತು ಮಾಲ್ಡೀವ್ಸ್

ಭಾರತದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುವ ಮೀನುಗಾರಿಕೆ ಇಲಾಖೆ ಹಾಗೂ ಮಾಲ್ಡೀವ್ಸ್‌ನ ಮೀನುಗಾರಿಕೆ ಮತ್ತು ಸಾಗರ ಸಂಪನ್ಮೂಲ ಸಚಿವಾಲಯವು ಮೀನುಗಾರಿಕೆ ಮತ್ತು ಜಲಚರ ಸಾಕಾಣೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಹೆಚ್ಚಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದವು 2025ರ ಜುಲೈ 25ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದ್ವೀಪ ರಾಷ್ಟ್ರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ವಿನಿಮಯವಾದ 6 …

Read More »

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ‘ಬಿಮಾ ಸಖಿ ಯೋಜನೆ’ಯ ಐತಿಹಾಸಿಕ ಆರಂಭ – ಶ್ರೀ ಶಿವರಾಜ್ ಸಿಂಗ್ ಚೌಹಾಣ್

‘ಬಿಮಾ ಸಖಿ ಯೋಜನೆ’ ಕುರಿತು ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ‘ಬಿಮಾ ಸಖಿ ಯೋಜನೆ’ಯ ಐತಿಹಾಸಿಕ ಆರಂಭವನ್ನು ಸಾಧಿಸಿದ್ದೇವೆ. ಈ ಯೋಜನೆಯು ಮಹಿಳಾ ಸಬಲೀಕರಣದ ಕಡೆಗೆ ಒಂದು ಪ್ರಮುಖ ಹೆಜ್ಜೆ ಮಾತ್ರವಲ್ಲ, ಗ್ರಾಮೀಣ ಮತ್ತು ಅರೆ-ನಗರ ಭಾರತಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿಯೂ ಒಂದು ಪ್ರಮುಖ ಹೆಜ್ಜೆಯಾಗಿದೆ. …

Read More »

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಜುಲೈ 24 ರಂದು ನವದೆಹಲಿಯಲ್ಲಿ ‘ರಾಷ್ಟ್ರೀಯ ಸಹಕಾರ ನೀತಿ 2025’ ಅನ್ನು ಅನಾವರಣಗೊಳಿಸಲಿದ್ದಾರೆ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2025ರ ಜುಲೈ 24ರಂದು ನವದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಹಕಾರ ನೀತಿ 2025 ಅನ್ನು ಪ್ರಕಟಿಸಲಿದ್ದಾರೆ. ರಾಷ್ಟ್ರೀಯ ಸಹಕಾರಿ ನೀತಿಯ ಕರಡು ಸಮಿತಿಯ ಸದಸ್ಯರು, ಎಲ್ಲಾ ರಾಷ್ಟ್ರೀಯ ಸಹಕಾರಿ ಒಕ್ಕೂಟಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್ ಸಿಡಿಸಿ), ರಾಷ್ಟ್ರೀಯ ಸಹಕಾರಿ …

Read More »