ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗೆ ರೈಲ್ವೆಯು ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಕಳೆದ 2024-25ನೇ ಹಣಕಾಸು ವರ್ಷದಲ್ಲಿಯೇ, ವಿವಿಧ ದೂರದ ರೈಲುಗಳಲ್ಲಿ 1250 ಸಾಮಾನ್ಯ ಬೋಗಿಗಳನ್ನು ಬಳಸಲಾಗಿದೆ. ಕೆಳಗೆ ವಿವರಿಸಿದಂತೆ ಹವಾನಿಯಂತ್ರಣ ರಹಿತ ಬೋಗಿಗಳ ಶೇಕಡಾವಾರು ಪ್ರಮಾಣವು ಸುಮಾರು 70ಕ್ಕೆ ಗಮನಾರ್ಹವಾಗಿ ಹೆಚ್ಚಾಗಿದೆ: ಕೋಷ್ಟಕ 1: ಬೋಗಿಗಳ ವಿತರಣೆ: ಹವಾನಿಯಂತ್ರಣ ರಹಿತ ಬೋಗಿಗಳು (ಸಾಮಾನ್ಯ ಮತ್ತು ಸ್ಲೀಪರ್) ~57 ~70% ಹವಾನಿಯಂತ್ರಣ ಬೋಗಿಗಳು ~25 ~30% ಒಟ್ಟು ಬೋಗಿಗಳು ~82 …
Read More »“ಮಹಿಳಾ ಸ್ವಸಹಾಯ ಗುಂಪು (ಎಸ್ ಹೆಚ್ ಜಿ) ಗಳಿಗೆ ಬ್ಯಾಂಕುಗಳಿಂದ ₹11 ಲಕ್ಷ ಕೋಟಿಗೂ ಹೆಚ್ಚು ಸಾಲ ವಿತರಣೆ” – ಶ್ರೀ ಶಿವರಾಜ್ ಸಿಂಗ್
ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ ಔಪಚಾರಿಕ ಹಣಕಾಸು ಸಂಸ್ಥೆಗಳ ಮೂಲಕ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ (SHGs) ₹11 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಸಾಲವನ್ನು ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಹೇಳಿದ್ದಾರೆ. ಈ ಮೈಲಿಗಲ್ಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮಗ್ರ ಗ್ರಾಮೀಣಾಭಿವೃದ್ಧಿ, …
Read More »ಟೆಲಿಕಾಂ ಸೈಬರ್ ವಂಚನೆಗಳ ವಿರುದ್ಧ ಕ್ರಮವನ್ನು ಬಲಪಡಿಸಲು ಕೇಂದ್ರ ಸಚಿವ ಸಿಂಧಿಯಾ ಅಧ್ಯಕ್ಷತೆಯಲ್ಲಿ ಸಂಚಾರ್ ಸಾಥಿ ಮಧ್ಯಸ್ಥಗಾರರ ಸಭೆ
ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ.ಸಿಂಧಿಯಾ ಅವರು ಇಂದು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಅವರೊಂದಿಗೆ ಸಂಚಾರ್ ಸಾಥಿ ಉಪಕ್ರಮದ ಅಡಿಯಲ್ಲಿ ಮಧ್ಯಸ್ಥಗಾರರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಟೆಲಿಕಾಂ ಸಂಬಂಧಿತ ಸೈಬರ್ ವಂಚನೆಗಳ ವಿರುದ್ಧ ಪ್ರಯತ್ನಗಳನ್ನು ರೂಪಿಸಲು ಮತ್ತು ಮತ್ತಷ್ಟು ಬಲಪಡಿಸಲು, ಹೆಚ್ಚಿನ ಜಾಗೃತಿ, ತಡೆಗಟ್ಟುವ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಮತ್ತು ನಾಗರಿಕ ವರದಿ ಮಾಡುವ ಮೂಲಕ ಜನ-ಭಾಗಿದಾರಿಯನ್ನು ಪ್ರೋತ್ಸಾಹಿಸುವ ತುರ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದರು. ಈ …
Read More »ʻಪ್ರಳಯ್ʼ ಕ್ಷಿಪಣಿಯ ಸತತ ಎರಡು ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ ʻಡಿಆರ್‌ಡಿಒʼ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 2025ರ ಜುಲೈ 28 ಮತ್ತು 29 ರಂದು ಒಡಿಶಾ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ʻಪ್ರಳಯ್ʼ ಕ್ಷಿಪಣಿಯ ಸತತ ಎರಡು ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿತು. ಕ್ಷಿಪಣಿ ವ್ಯವಸ್ಥೆಯ ಗರಿಷ್ಠ ಮತ್ತು ಕನಿಷ್ಠ ವ್ಯಾಪ್ತಿಯ ಸಾಮರ್ಥ್ಯವನ್ನು ಪ್ರಮಾಣಿಕರಿಸಲು ʻಬಳಕೆದಾರ ಮೌಲ್ಯಮಾಪನ ಪ್ರಯೋಗʼಗಳ ಭಾಗವಾಗಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಕ್ಷಿಪಣಿಗಳು ನಿಖರವಾಗಿ ಉದ್ದೇಶಿತ ಪಥವನ್ನು ಅನುಸರಿಸಿದವು ಮತ್ತು ಎಲ್ಲಾ …
Read More »ಭಾರತವು ತೈಲ ಮತ್ತು ಅನಿಲ ಪರಿಶೋಧನೆಯಲ್ಲಿ ತ್ವರಿತ ಪ್ರಗತಿ ಸಾಧಿಸಿದೆ: ಪೆಟ್ರೋಲಿಯಂ ಸಚಿವರಾದ ಹರ್‌ದೀಪ್ ಎಸ್ ಪುರಿ
ಭಾರತವು ತೈಲ ಮತ್ತು ಅನಿಲ ನಿಕ್ಷೇಪ ಪರಿಶೋಧನೆಯಲ್ಲಿ, ವಿಶೇಷವಾಗಿ ಕಡಲು ಪ್ರದೇಶಗಳಲ್ಲಿ, ಹೊಸ ಪ್ರಗತಿಯನ್ನು ಕಾಣುತ್ತಿದೆ, ಇದು ದೇಶದ ವಿಶಾಲವಾದ ಹೈಡ್ರೋಕಾರ್ಬನ್ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ರಾಜ್ಯಸಭೆಯಲ್ಲಿ ನಕ್ಷತ್ರ ಗುರುತಿನ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್‌ದೀಪ್ ಸಿಂಗ್ ಪುರಿ, 2022 ರಲ್ಲಿ ಸುಮಾರು ಒಂದು ಮಿಲಿಯನ್ ಚದರ ಕಿಲೋಮೀಟರ್ನಷ್ಟು ಕಡಲಿನೊಳಗಿನ ‘ನೋ-ಗೋ’ ಪ್ರದೇಶಗಳನ್ನು ತೆರೆದಿರುವುದು ಒಂದು ಹೆಗ್ಗುರುತು ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. …
Read More »ಮಹಿಳಾ ಸ್ವಸಹಾಯ ಗುಂಪುಗಳಿಗೆ ವಿತರಿಸಲಾದ ಸಾಲ 11 ಲಕ್ಷ ಕೋಟಿ ರೂ.ಗೆ ತಲುಪಿದೆ
ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿ.ಎ.ವೈ-ಎನ್.ಆರ್.ಎಲ್.ಎಂ) ಅಡಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, ಔಪಚಾರಿಕ ಹಣಕಾಸು ಸಂಸ್ಥೆಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್.ಎಚ್.ಜಿ) 11 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಸಾಲವನ್ನು ವಿತರಿಸಿದೆ. ಬ್ಯಾಂಕಿಂಗ್ ಭ್ರಾತೃತ್ವದ ಅಚಲ ಬೆಂಬಲದಿಂದ ಸಾಧ್ಯವಾದ ಈ ಹೆಗ್ಗುರುತು ಸಾಧನೆಯು ಅಂತರ್ಗತ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ತಳಮಟ್ಟದ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಸರ್ಕಾರದ ದೃಢ …
Read More »ಕಡಿಮೆ ವೆಚ್ಚದ ʻಸ್ಮಾರ್ಟ್ ಕಿಟಕಿʼ ಅಭಿವೃದ್ಧಿಪಡಿಸಿದ ಬೆಂಗಳೂರಿನ ವಿಜ್ಞಾನಿಗಳು
ಒಮ್ಮೆ ʻಸ್ವಿಚ್ʼ ತಿರುಗಿಸದರೆ ಬಣ್ಣವನ್ನು ಬದಲಾಯಿಸುವ, ಬಿಸಿಲಿನ ದಿನಗಳಲ್ಲಿ ಶಾಖವನ್ನು ನಿರ್ಬಂಧಿಸುವ, ಶಕ್ತಿಯನ್ನು ಉಳಿಸುವ ಮತ್ತು ವಿದ್ಯುತ್ ಅನ್ನು ಸಂಗ್ರಹಿಸುವ ʻಸ್ಮಾರ್ಟ್ ಕಿಟಕಿʼಗಳನ್ನು (ಸ್ಮಾರ್ಟ್ ವಿಂಡೋ) ಈಗ ಕೈಗೆಟುಕುವ ದರದ ವಸ್ತುಗಳನ್ನೇ ಬಳಸಿ ತಯಾರಿಸಬಹುದು. ಈ ತಾಂತ್ರಿಕ ಸುಧಾರಣೆಯು ʻಸ್ಮಾರ್ಟ್ ಕಿಟಕಿʼ ತಂತ್ರಜ್ಞಾನವನ್ನು ಹೆಚ್ಚು ಜನರಿಗೆ ಲಭ್ಯವಾಗುವಂತೆ ಮಾಡಬಲ್ಲದು. ʻಎಲೆಕ್ಟ್ರೋಕ್ರೋಮಿಕ್ ಸ್ಮಾರ್ಟ್ ವಿಂಡೋʼಗಳು ಸಣ್ಣ ವಿದ್ಯುತ್ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಬಣ್ಣವನ್ನು ಬದಲಾಯಿಸುತ್ತವೆ, ಇದು ಗೋಚರ ಮತ್ತು ಹತ್ತಿರದ-ಇನ್ಫ್ರಾರೆಡ್ (ಎನ್ಐಆರ್) ಬೆಳಕನ್ನು …
Read More »ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ʻಬಿಎಸ್ಎನ್ಎಲ್ʼನ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು, ಗ್ರಾಹಕರ ಅನುಭವ ಮತ್ತು ಆದಾಯ ಉತ್ಪಾದನೆ ಬಗ್ಗೆ ಒತ್ತಿ ಹೇಳಿದರು
ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ನವದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ(ಬಿಎಸ್ಎನ್ಎಲ್) ಮುಖ್ಯ ಪ್ರಧಾನ ವ್ಯವಸ್ಥಾಪಕರೊಂದಿಗೆ(ಸಿಜಿಎಂ) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು. ಈ ಉನ್ನತ ಮಟ್ಟದ ಸಭೆಯು ʻಬಿಎಸ್ಎನ್ಎಲ್ʼನ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಿತು, ಪ್ರಾದೇಶಿಕ ಸವಾಲುಗಳನ್ನು ಚರ್ಚಿಸಿತು. ಜೊತೆಗೆ, ಕಂಪನಿಯ ಜಾಲ(ನೆಟ್ ವರ್ಕ್) ಹಾಗೂ ಸೇವಾ ವಿತರಣೆಯ ಮುಂದಿನ ಕಾರ್ಯತಂತ್ರದ ಬಗ್ಗೆ ಪರಿಶೀಲಿಸಿತು. ಸಂವಹನ ಖಾತೆ ಸಹಾಯಕ ಸಚಿವ ಶ್ರೀ ಪೆಮ್ಮಸಾನಿ ಚಂದ್ರಶೇಖರ್ ಮತ್ತು …
Read More »ಗೌರವಾನ್ವಿತ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಎನ್.ಇ.ಪಿ 2020ರ 5 ವರ್ಷಗಳ ಸ್ಮರಣಾರ್ಥ ನಾಳೆ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ 2025 ಅನ್ನು ಉದ್ಘಾಟಿಸಲಿದ್ದಾರೆ
ಎನ್.ಇ.ಪಿ 2020 ರ 5ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಿಕ್ಷಣ ಸಚಿವಾಲಯವು 2025 ರ ಜುಲೈ 29ರಂದು ಅಖಿಲ ಭಾರತೀಯ ಶಿಕ್ಷಾ ಸಮಾಗಮ್, 2025 ಅನ್ನು ಭಾರತ್ ಮಂಟಪಂ ಆವರಣದಲ್ಲಿ ಆಯೋಜಿಸುತ್ತಿದೆ. ದಿನವಿಡೀ ನಡೆಯುವ ಚರ್ಚೆಗಳನ್ನು ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) 2020 ರ ಐದನೇ ವಾರ್ಷಿಕೋತ್ಸವವನ್ನು ಗುರುತಿಸುವ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ (ಎ.ಬಿ.ಎಸ್.ಎಸ್) 2025, ಎ.ಬಿ.ಎಸ್.ಎಸ್ 2025 ಶಿಕ್ಷಣ ತಜ್ಞರು, …
Read More »ಪ್ರಧಾನಮಂತ್ರಿ ಅವರು ದಿನಾಂಕ 27.07.2025 ರಂದು ಮಾಡಿದ ‘ಮನ್ ಕಿ ಬಾತ್’ – 124 ನೇ ಸಂಚಿಕೆಯ ಕನ್ನಡ ಅವತರಣಿಕೆ
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ‘ಮನದ ಮಾತಿನಲ್ಲಿ’ ಮತ್ತೊಮ್ಮೆ ನಾವು ದೇಶದ ಯಶಸ್ಸಿನ ಬಗ್ಗೆ, ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತನಾಡಲಿದ್ದೇವೆ. ಕ್ರೀಡೆಯಾಗಿರಲಿ, ವಿಜ್ಞಾನವಾಗಿರಲಿ ಅಥವಾ ಸಂಸ್ಕೃತಿಯಾಗಿರಲಿ ಎಲ್ಲ ಕ್ಷೇತ್ರಗಳಲ್ಲಿ ಕಳೆದ ಕೆಲವು ವಾರಗಳಲ್ಲಿ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ, ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಹಿಂದಿರುಗಿದ ಕುರಿತು ದೇಶದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಶುಭಾಂಶು ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ತಕ್ಷಣ, ಜನರು ಸಂತೋಷದಿಂದ ಕುಣಿದು ಕುಪ್ಪಳಿಸಿದರು, ಪ್ರತಿಯೊಬ್ಬರ ಹೃದಯದಲ್ಲೂ ಸಂತಸದ …
Read More »
Matribhumi Samachar Kannad