Thursday, April 16 2026 | 04:17:30 AM
Breaking News

ಪ್ರಧಾನಮಂತ್ರಿ ಮತ್ತು ಸೈಪ್ರಸ್ ನ ಅಧ್ಯಕ್ಷರು, ಭಾರತ ಮತ್ತು ಸೈಪ್ರಸ್ ವಾಣಿಜ್ಯ ನಾಯಕರೊಂದಿಗೆ ಸಂವಾದ ನಡೆಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೈಪ್ರಸ್ ಅಧ್ಯಕ್ಷ ಘನತೆವೆತ್ತ ನಿಕೋಸ್ ಕ್ರಿಸ್ಟೋಡೌಲಿಡೆಸ್ ಅವರೊಂದಿಗೆ ಇಂದು ಲಿಮಾಸೋಲ್ ನಲ್ಲಿ ಸೈಪ್ರಸ್ ಮತ್ತು ಭಾರತದ ವಾಣಿಜ್ಯ ನಾಯಕರೊಂದಿಗೆ ದುಂಡುಮೇಜಿನ ಸಂವಾದ ನಡೆಸಿದರು. ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳು, ಉತ್ಪಾದನೆ, ರಕ್ಷಣೆ, ಲಾಜಿಸ್ಟಿಕ್ಸ್, ಕಡಲ, ಹಡಗು, ತಂತ್ರಜ್ಞಾನ, ನಾವೀನ್ಯತೆ, ಡಿಜಿಟಲ್ ತಂತ್ರಜ್ಞಾನಗಳು, ಎಐ, ಐಟಿ ಸೇವೆಗಳು, ಪ್ರವಾಸೋದ್ಯಮ ಮತ್ತು ಚಲನಶೀಲತೆಯಂತಹ ವೈವಿಧ್ಯಮಯ ಕ್ಷೇತ್ರಗಳನ್ನು  ಪ್ರತಿನಿಧಿಸುವವರು ಭಾಗವಹಿಸಿದರು. ಕಳೆದ 11 ವರ್ಷಗಳಲ್ಲಿ ಭಾರತದ ತ್ವರಿತ ಆರ್ಥಿಕ …

Read More »

ಬೆಂಗಳೂರಿನ ಕೇಂದ್ರ ಸಂವಹನ ಇಲಾಖೆಯು ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ -2025ಕ್ಕಾಗಿ ಪೂರ್ವಭಾವಿ ಕಾರ್ಯಕ್ರಮವನ್ನು ನಡೆಸಿತು

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ-2025ಕ್ಕೆ ಮುಂಚಿತವಾಗಿ, ಬೆಂಗಳೂರಿನ ಕೇಂದ್ರ ಸಂವಹನ ಇಲಾಖೆಯು ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದೊಂದಿಗೆ ಜೂನ್ 15, 2025 ರಂದು ಬೆಂಗಳೂರಿನ ಗೊಟ್ಟಿಗೆರೆಯ ರಾಜಯೋಗ ಭವನದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ಯೋಗ ಉತ್ಸಾಹಿಗಳು ಭಾಗವಹಿಸಿದರು, ಮಕ್ಕಳಿಂದ ಹಿರಿಯರವರೆಗೆ ಎಲ್ಲಾ ವಯಸ್ಸಿನ ಯೋಗಾಭ್ಯಾಸಿಗಳು ಯೋಗವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಕುಮಾರಿಯ ವಿವಿ ಪುರಂ ಉಪವಲಯ ಅಧ್ಯಕ್ಷರಾದ ಸೋದರಿ ರಾಜಯೋಗಿನಿ ಬಿ.ಕೆ. ಅಂಬಿಕಾ ಅವರು, …

Read More »

ಪವನ ಶಕ್ತಿಯು ಭಾರತದ ನವೀಕರಿಸಬಹುದಾದ ಇಂಧನ ವಲಯದ ಕಾರ್ಯತಂತ್ರದ ಕೇಂದ್ರಬಿಂದು: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ

ವಿಶ್ವ ಪವನ ದಿನ 2025″ ರ ಅಂಗವಾಗಿ ಇಂದು ಬೆಂಗಳೂರಿನಲ್ಲಿ ನಡೆದ ಪಾಲುದಾರರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, “ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಕಾರ್ಯತಂತ್ರದಲ್ಲಿ ಪವನ ಶಕ್ತಿಯು ಕೇಂದ್ರ ಸ್ಥಾನದಲ್ಲಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಮತ್ತು ಕರ್ನಾಟಕ ಸರ್ಕಾರದ ಇಂಧನ …

Read More »

ದಕ್ಷಿಣ ರಾಜ್ಯಗಳಲ್ಲಿ ಗ್ರಾಹಕ ನ್ಯಾಯ ಬಲಪಡಿಸಲು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಚೆನ್ನೈನಲ್ಲಿ ಪ್ರಾದೇಶಿಕ ಕಾರ್ಯಾಗಾರ

ಗ್ರಾಹಕರ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸಲು ಮತ್ತು ಸಾಂಸ್ಥಿಕ ದಕ್ಷತೆ ಉತ್ತೇಜಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಲು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು, 2025 ಜೂನ್ 13ರಂದು ಚೆನ್ನೈನಲ್ಲಿ “ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಹಕ ರಕ್ಷಣೆ” ಕುರಿತು ಪ್ರಾದೇಶಿಕ ಕಾರ್ಯಾಗಾರ ಆಯೋಜಿಸಿತ್ತು. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ತಮ್ಮ ಮುಖ್ಯ ಭಾಷಣದಲ್ಲಿ, ಡಿಜಿಟಲ್ ಯುಗಕ್ಕೆ ಹೊಂದಾಣಿಕೆಯ ಕಾನೂನು ಮತ್ತು ಡಿಜಿಟಲ್ ಕಾರ್ಯವಿಧಾನಗಳು …

Read More »

ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅವಘಡದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ಪತನ ದುರ್ಘಟನೆಯಲ್ಲಿ ಅನೇಕರು ಮೃತಪಟ್ಟಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಲ್ಲಿಗೆ ಭೇಟಿ ನೀಡಿದರು. ಸಂತ್ರಸ್ತ ಕುಟುಂಬಗಳ ಜೊತೆಗೆ ನಿಲ್ಲುವುದಾಗಿ ಹೇಳಿರುವ ಶ್ರೀ ಮೋದಿ ಅವರು, ವಿಮಾನದಲ್ಲಿದ್ದವರ ಪೈಕಿ ಬದುಕುಳಿದ ಏಕೈಕ ವ್ಯಕ್ತಿ ಹಾಗೂ ಇತರ ಗಾಯಗೊಂಡವರನ್ನು ಭೇಟಿ ಮಾಡಿದರು ಹಾಗೂ ಈ ಸಂಕಷ್ಟದ ಸಮಯದಲ್ಲಿ ರಾಷ್ಟ್ರದ ದೃಢ ಬೆಂಬಲದ ಭರವಸೆ ನೀಡಿದರು. ಪ್ರಸ್ತುತ ನಡೆಯುತ್ತಿರುವ ಪರಿಹಾರ ಮತ್ತು ಇತರ ಕಾರ್ಯಗಳ …

Read More »

ಅಹಮದಾಬಾದ್ ವಿಮಾನ ದುರಂತದಲ್ಲಿ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ

ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅನೇಕರು ಮೃತಪಟ್ಟಿದ್ದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳ ನೋವು ಮತ್ತು ನಷ್ಟದ ಅರಿವಿದೆ ಎಂದು ಅವರು ಸಂತಾಪ ಸೂಚಿಸಿದ್ದಾರೆ. ಇದಕ್ಕೂ ಮುನ್ನ ಶ್ರೀ ಮೋದಿ ಅವರು ಅಹಮದಾಬಾದ್‌ನಲ್ಲಿ ಅವಘಡದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಾಮರ್ಶಿಸಿದರು. ದುರಂತದ ನಂತರ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ತುರ್ತು ಪ್ರತಿಕ್ರಿಯಾ ತಂಡಗಳನ್ನು ಅವರು ಭೇಟಿ ಮಾಡಿದರು. …

Read More »

ಅಹಮದಾಬಾದ್ ದುರಂತದ ಬಗ್ಗೆ ಪ್ರಧಾನಮಂತ್ರಿ ದುಃಖ ವ್ಯಕ್ತಪಡಿಸಿದ್ದಾರೆ, ತ್ವರಿತ ಮತ್ತು ಪರಿಣಾಮಕಾರಿ ನೆರವಿನ ಭರವಸೆ ನೀಡಿದ್ದಾರೆ

ಅಹಮದಾಬಾದ್ ನಲ್ಲಿ ಇಂದು ಸಂಭವಿಸಿದ ದುರಂತದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಈ ದುರಂತವು ಇಡೀ ರಾಷ್ಟ್ರವನ್ನು ದಿಗ್ಭ್ರಮೆಗೊಳಿಸಿದೆ ಮತ್ತು ದುಃಖಕ್ಕೆ ತಳ್ಳಿದೆ ಮತ್ತು ಇದು ಪದಗಳಲ್ಲಿ ಹೇಳಲಾಗದಷ್ಟು ಹೃದಯವಿದ್ರಾವಕವಾಗಿದೆ ಎಂದು ಅವರು ಹೇಳಿದ್ದಾರೆ. ಸಂತ್ರಸ್ತರಿಗೆ ತ್ವರಿತ ಮತ್ತು ಪರಿಣಾಮಕಾರಿ ಸಹಾಯವನ್ನು ಖಚಿತಪಡಿಸಿಕೊಳ್ಳಲು ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ …

Read More »

ದೇಶದಲ್ಲಿ ಸ್ವಾವಲಂಬನೆ ಬಲಗೊಳಿಸುವಲ್ಲಿ ಭಾರತದ ಯುವಶಕ್ತಿ ನೇತೃತ್ವದ ತಂತ್ರಜ್ಞಾನ ನಾವಿನ್ಯತೆಗೆ ಪ್ರಧಾನಮಂತ್ರಿ ಮೆಚ್ಚುಗೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂತ್ರಜ್ಞಾನವನ್ನು ಮುಂದುವರಿಸುವಲ್ಲಿ ಮತ್ತು ದೇಶದ ಸ್ವಾವಲಂಬನೆಯನ್ನು ಮುನ್ನಡೆಸುವಲ್ಲಿ ಭಾರತದ ಯುವ ನಾವಿನ್ಯಕಾರರ ಪ್ರಮುಖ ಪಾತ್ರವನ್ನು ಶ್ಲಾಘಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ, ಡಿಜಿಟಲ್ ಇಂಡಿಯಾ ಉಪಕ್ರಮವು  ನಾವಿನ್ಯತೆಯ ಸಮರ್ಪಕ ಬಳಕೆಯ ಮೂಲಕ ಯುವಜನರನ್ನು ಸಬಲಗೊಳಿಸುತ್ತಾ ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ. ಕಳೆದ 11 ವರ್ಷಗಳಲ್ಲಿ ತಂತ್ರಜ್ಞಾನದ ಶಕ್ತಿಯ ಸಮರ್ಪಕ ಬಳಕೆಯಿಂದಾಗಿ ಭಾರತದ ಜನರಿಗೆ ಅಸಂಖ್ಯಾತ ಅನುಕೂಲಗಳುಂಟಾಗಿದೆ ಎಂದು ಶ್ರೀ ಮೋದಿ …

Read More »

ಇಲೇಕ್ಟ್ರಿಸಿಟೀ ಡೇರಿವೇಟಿವ್ಝ ಪ್ರಾರಂಭಿಸಲು ಎಂಸಿಎಕ್ಸ್ ಗೆ ಸೆಬಿ ಅನುಮೋದನೆ

ಭಾರತದ ಇಂಧನ ಮಾರುಕಟ್ಟೆಯ ವಿಕಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮುಂಬೈ: ಭಾರತದ ಪ್ರಮುಖ ಸರಕು ಉತ್ಪನ್ನಗಳ ವಿನಿಮಯ ಕೇಂದ್ರವಾದ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (ಎಂಸಿಎಕ್ಸ್), ಭಾರತದ ಇಂಧನ ವ್ಯಾಪಾರ ಕ್ಷೇತ್ರದ ವಿಕಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುವ ಇಲೇಕ್ಟ್ರಿಸಿಟೀ ಡೇರಿವೇಟಿವ್ಝ ಪ್ರಾರಂಭಿಸಲು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿಂದ ಅನುಮೋದನೆ ಪಡೆದಿದೆ. ಈ ಬೆಳವಣಿಗೆಯು ನಿಯಂತ್ರಕರಾದ ಸೆಬಿ ಮತ್ತು ಕೇಂದ್ರ ವಿದ್ಯುತ್ …

Read More »

ಭಾರತವು ವಿಶ್ವದ ಆಹಾರ ಬುಟ್ಟಿಯಾಗಲಿದೆ: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾರತವನ್ನು ವಿಶ್ವದ ಆಹಾರ ಬುಟ್ಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದಾರೆ. ದೇಶದ 145 ಕೋಟಿ ನಾಗರಿಕರಿಗೆ ಆಹಾರವನ್ನು ನೀಡುವುದರ ಜೊತೆಗೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು), ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಹಯೋಗದೊಂದಿಗೆ ಈ ಗುರಿಯನ್ನು ಸಾಧಿಸಲು ಸಮಗ್ರ ಮಾರ್ಗಸೂಚಿಯನ್ನು ರೂಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಬೆಂಗಳೂರಿನ ಐಸಿಎಆರ್-ಐಐಎಚ್‌ಆರ್ ಆವರಣದಲ್ಲಿ ಇಂದು ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, 2047ರ ವೇಳೆಗೆ ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಅಭಿಯಾನದ ಧ್ಯೇಯವಾಕ್ಯ “ವಿಕಸಿತ ಕೃಷಿ ಭಾರತ”. ಈ ಕಾರ್ಯಕ್ರಮದ ಭಾಗವಾಗಿ, “ಪ್ರಯೋಗಾಲಯದಿಂದ ಭೂಮಿಗೆ” ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು, ವೈಜ್ಞಾನಿಕ ಜ್ಞಾನ ಮತ್ತು ಬೆಂಬಲವನ್ನು ಒದಗಿಸಲು ದೇಶಾದ್ಯಂತ 16,000 ಕ್ಕೂ ಹೆಚ್ಚು ವಿಜ್ಞಾನಿಗಳು ರೈತರೊಂದಿಗೆ  ತೊಡಗಿಸಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಲ್ಲಿ, 1,896 ತಂಡಗಳು 8,188 ಹಳ್ಳಿಗಳಲ್ಲಿ ಸುಮಾರು 9 ಲಕ್ಷ ರೈತರೊಂದಿಗೆ ಸಂವಾದ ನಡೆಸಿವೆ. ಕರ್ನಾಟಕದಲ್ಲಿಯೇ, ಕೃಷಿ ಮತ್ತು ಸಂಬಂಧಿತ ಇಲಾಖೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ 70ಕ್ಕೂ ಹೆಚ್ಚು ಅಂತರಶಿಸ್ತೀಯ ತಂಡಗಳು ಪ್ರತಿದಿನ ತೋಟಗಳಿಗೆ ಭೇಟಿ ನೀಡುತ್ತಿವೆ. ಅವಶ್ಯಕತೆ ಆಧಾರಿತ, ಸಮಸ್ಯೆ ಆಧಾರಿತ ಕೃಷಿ ಸಂಶೋಧನಾ ಕಾರ್ಯಕ್ರಮಗಳನ್ನು ರೂಪಿಸಲು ಈ ತಂಡಗಳು ರೈತರಿಂದ ನೇರವಾಗಿ ಹಿಮ್ಮಾಹಿತಿಯನ್ನು ಪಡೆದುಕೊಂಡು ದಾಖಲಿಸುತ್ತಿವೆ. ಇಲ್ಲಿಯವರೆಗೆ, 639 ತಂಡಗಳು 2,495 ಹಳ್ಳಿಗಳಿಗೆ ಭೇಟಿ ನೀಡಿ, 2,77,264 ರೈತರೊಂದಿಗೆ ತೊಡಗಿಸಿಕೊಂಡಿವೆ. “ಒಂದು ರಾಷ್ಟ್ರ, ಒಂದು ಕೃಷಿ, ಒಂದು ತಂಡ” ಎಂಬ ಪರಿಕಲ್ಪನೆಯನ್ನು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹೊಂದಿದೆ ಎಂದು ಶ್ರೀ ಚೌಹಾಣ್ ಹೇಳಿದರು. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂ.ಐ.ಎಸ್.) ಅಡಿಯಲ್ಲಿ ಕೇಂದ್ರ ಸರ್ಕಾರವು ಸಾರಿಗೆ ವೆಚ್ಚವನ್ನು ಭರಿಸುತ್ತದೆ ಮತ್ತು ಆ ಮೂಲಕ ಮಾರುಕಟ್ಟೆಗಳಿಗೆ ಪ್ರವೇಶವನ್ನು ಬೆಂಬಲಿಸುತ್ತದೆ. …

Read More »