Saturday, March 28 2026 | 04:58:53 AM
Breaking News

ಬಡವರ ಕಲ್ಯಾಣಕ್ಕೆ ಸಮರ್ಪಿತವಾದ ಸಹಾನುಭೂತಿಯುಳ್ಳ ಸರ್ಕಾರ: ಪ್ರಧಾನಮಂತ್ರಿ

ದೇಶವು ಪರಿವರ್ತನಶೀಲ ಮತ್ತು ಎಲ್ಲರನ್ನೂ ಒಳಗೊಂಡ ಆಡಳಿತದ 11ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬಡವರ ಕಲ್ಯಾಣಕ್ಕೆ ಎನ್‌ಡಿಎ ಸರ್ಕಾರದ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ. ಸಬಲೀಕರಣ, ಮೂಲಸೌಕರ್ಯ ಮತ್ತು ಒಳಗೊಳ್ಳುವಿಕೆಯ ಮೇಲೆ ಗಮನ ಕೇಂದ್ರೀಕರಿಸಿದ ಸಹಾನುಭೂತಿಯುಳ್ಳ ಸರ್ಕಾರವು 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ. ʻಪ್ರಧಾನಮಂತ್ರಿ ಆವಾಸ್ ಯೋಜನೆʼ, ʻಪಿಎಂ ಉಜ್ವಲ ಯೋಜನೆʼ, ʻಜನ್ ಧನ್ ಯೋಜನೆʼ ಮತ್ತು ʻಆಯುಷ್ಮಾನ್ ಭಾರತ್ʼನಂತಹ ಪರಿವರ್ತಕ ಯೋಜನೆಗಳ ಪರಿಣಾಮವನ್ನು ಪ್ರಧಾನಿ ಎತ್ತಿ ತೋರಿದರು. ಈ ಯೋಜನೆಗಳು ವಸತಿ, ಶುದ್ಧ ಅಡುಗೆ ಇಂಧನ, ಬ್ಯಾಂಕಿಂಗ್ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯನ್ನು ವಿಸ್ತರಿಸಿವೆ. ಪ್ರಯೋಜನಗಳ ಪಾರದರ್ಶಕ ಮತ್ತು ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ʻನೇರ ಲಾಭ ವರ್ಗಾವಣೆʼ (ಡಿಬಿಟಿ), ಡಿಜಿಟಲ್ ಸೇರ್ಪಡೆ ಮತ್ತು ಗ್ರಾಮೀಣ ಮೂಲಸೌಕರ್ಯದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ. ಪ್ರಧಾನಮಂತ್ರಿಯವರು ʻಎಕ್ಸ್‌ʼ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ: “ಬಡವರ ಕಲ್ಯಾಣಕ್ಕೆ ಸಮರ್ಪಿತವಾದ ಸಹಾನುಭೂತಿಯುಳ್ಳ ಸರ್ಕಾರ! ಕಳೆದ ದಶಕದಲ್ಲಿ, ಎನ್‌ಡಿಎ ಸರ್ಕಾರವು ಹಲವಾರು ಜನರನ್ನು ಬಡತನದ ಹಿಡಿತದಿಂದ ಮೇಲೆತ್ತಲು ಹೊಸ ಉಪಕ್ರಮಗಳನ್ನು ಕೈಗೊಂಡಿದೆ. ಸಬಲೀಕರಣ, ಮೂಲಸೌಕರ್ಯ ಮತ್ತು ಒಳಗೊಳ್ಳುವಿಕೆಯ ಮೇಲೆ ಗಮನ ಕೇಂದ್ರೀಕರಿಸಿದೆ. ನಮ್ಮ ಎಲ್ಲಾ ಪ್ರಮುಖ ಯೋಜನೆಗಳು ಬಡವರ ಜೀವನವನ್ನು ಪರಿವರ್ತಿಸಿವೆ. ಪಿಎಂ ಆವಾಸ್ ಯೋಜನೆ, ಪಿಎಂ ಉಜ್ವಲ ಯೋಜನೆ, ಜನ್ ಧನ್ ಯೋಜನೆ ಮತ್ತು ʻಆಯುಷ್ಮಾನ್ ಭಾರತ್ʼನಂತಹ ಉಪಕ್ರಮಗಳು ವಸತಿ, ಶುದ್ಧ ಅಡುಗೆ ಇಂಧನ, ಬ್ಯಾಂಕಿಂಗ್ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಿವೆ. ʻಡಿಬಿಟಿʼ, ಡಿಜಿಟಲ್ ಸೇರ್ಪಡೆ ಮತ್ತು ಗ್ರಾಮೀಣ ಮೂಲಸೌಕರ್ಯಗಳಿಗೆ ಒತ್ತು ನೀಡಿರುವುದು ಪಾರದರ್ಶಕತೆ ಮತ್ತು ಪ್ರಯೋಜನಗಳನ್ನು ಕೊನೆಯ ಮೈಲಿವರೆಗೆ ವೇಗವಾಗಿ ತಲುಪಿಸುವುದನ್ನು ಖಾತರಿಪಡಿಸಿದೆ. ಈ ಕಾರಣದಿಂದಾಗಿಯೇ 25 ಕೋಟಿಗೂ ಹೆಚ್ಚು ಜನರು ಬಡತನವನ್ನು ಸೋಲಿಸಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಬದುಕುವ ಅವಕಾಶವಿರುವ ಎಲ್ಲರನ್ನೂ ಒಳಗೊಂಡ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಎನ್‌ಡಿಎ ಬದ್ಧವಾಗಿದೆ. #11YearsOfGaribKalyan”   भारत : 1885 से 1950 (इतिहास पर एक दृष्टि) …

Read More »

ಜೂನ್ 6 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಮಂತ್ರಿ ಭೇಟಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 6 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನ ಮಂತ್ರಿಗಳು ಬೆಳಿಗ್ಗೆ 11 ಗಂಟೆಗೆ ಚೆನಾಬ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ಸೇತುವೆಯ ಡೆಕ್‌ಗೆ ಭೇಟಿ ನೀಡಲಿದ್ದಾರೆ. ನಂತರ, ಅವರು ಅಂಜಿ ಸೇತುವೆಗೆ ಭೇಟಿ ನೀಡಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅವರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ, ಅವರು ಕತ್ರಾದಲ್ಲಿ 46,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಚೆನಾಬ್ ಮತ್ತು ಅಂಜಿ ರೈಲು ಸೇತುವೆಗಳು ನದಿಯಿಂದ 359 ಮೀಟರ್ ಎತ್ತರದಲ್ಲಿರುವ ವಾಸ್ತುಶಿಲ್ಪದ ಅದ್ಭುತ ಚೆನಾಬ್ ರೈಲು ಸೇತುವೆ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಇದು ಭೂಕಂಪ ಮತ್ತು ಭಾರೀ ಗಾಳಿ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯಾಗಿದೆ. ಈ ಸೇತುವೆಯ ಮುಖ್ಯ ಪ್ರಯೋಜನ ಎಂದರೆ ಅದು ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಸೇತುವೆಯ ಮೇಲೆ ಚಲಿಸುವ ವಂದೇ ಭಾರತ್ ರೈಲು ಮೂಲಕ, ಕತ್ರಾ ಮತ್ತು ಶ್ರೀನಗರ ನಡುವೆ ಪ್ರಯಾಣಿಸಲು ಕೇವಲ 3 ಗಂಟೆ ಸಾಕಾಗುತ್ತದೆ, ಇದು ಚಾಲ್ತಿಯಲ್ಲಿರುವ ಪ್ರಯಾಣದ ಸಮಯವನ್ನು 2-3 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಅಂಜಿ ಸೇತುವೆ ಭಾರತದ ಮೊದಲ ಕೇಬಲ್-ಸ್ಟೇಡ್ (ಗೋಪುರಗಳಿಗೆ ಕೇಬಲ್ ಗಳಿಂದ ಬಿಗಿದು ಕಟ್ಟಿದ)  ರೈಲು ಸೇತುವೆಯಾಗಿದ್ದು, ಇದು ಸವಾಲಿನ ಭೂಪ್ರದೇಶದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲಿದೆ. ಸಂಪರ್ಕ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಉಪಕ್ರಮಗಳು ಪ್ರಧಾನಮಂತ್ರಿಯವರು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯು.ಎಸ್.ಬಿ.ಆರ್.ಎಲ್.-USBRL) …

Read More »

ದೆಹಲಿ ಸರ್ಕಾರದ ಸುಸ್ಥಿರ ಸಾರಿಗೆ ಉಪಕ್ರಮದ ಅಡಿಯಲ್ಲಿ 200 ಎಲೆಕ್ಟ್ರಿಕ್ ಬಸ್ ಗಳಿಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಮಂತ್ರಿ

ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜೂನ್ 5 ರಂದು ಬೆಳಗ್ಗೆ 10:15ಕ್ಕೆ ನವದೆಹಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ವಿಶೇಷ ಮರ ನೆಡುವ ಉಪಕ್ರಮದ ನೇತೃತ್ವ ವಹಿಸಲಿದ್ದು, ಪರಿಸರ ನಿರ್ವಹಣೆ ಮತ್ತು ಹಸಿರು ಚಲನಶೀಲತೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮದ ಅಡಿಯಲ್ಲಿ ಆಲದ ಸಸಿಯನ್ನು ನೆಡಲಿದ್ದಾರೆ. ಇದು 700 ಕಿ.ಮೀ ಅರಾವಳಿ …

Read More »

ಸೋನಿಯ ವಾಯಿದೆ 3,573 ರೂ. ಮತ್ತು ಬೆಳ್ಳಿಯ ವಾಯಿದೆ 3,928 ರೂ. ಕುಸಿತ: ಕಚ್ಚಾ ತೈಲ ವಾಯಿದೆ 408 ರೂ. ಇಳಿಕೆ

ನೈಸರ್ಗಿಕ ಅನಿಲ ವಾಯಿದೆಯಲ್ಲಿ 27.10 ರೂ. ಏರಿಕೆ: ಹತ್ತಿ-ಕ್ಯಾಂಡಿ ವಾಯಿದೆಯಲ್ಲಿ 1,760 ರೂ. ಕುಸಿತ: ಮೆಂಥಾ ತೈಲದಲ್ಲಿ 6.50 ರೂ. ಮೃದುತೆ: ಲೋಹಗಳ ವಾಯಿದೆಗಳಲ್ಲಿ ಎಲ್ಲೆಡೆ ಕುಸಿತ: ಸರಕು ವಾಯಿದೆಗಳಲ್ಲಿ 188,600 ಕೋಟಿ ರೂ. ಮತ್ತು ಸರಕು ಆಯ್ಕೆಗಳಲ್ಲಿ 1,402,398 ಕೋಟಿ ರೂ. ವಹಿವಾಟು ದಾಖಲು: ಸೋನ-ಬೆಳ್ಳಿಯ ವಾಯಿದೆಗಳಲ್ಲಿ 147,636 ಕೋಟಿ ರೂ. ವ್ಯಾಪಾರ: ಬುಲಿಯನ್ ಸೂಚ್ಯಂಕ ಬುಲ್ಡೆಕ್ಸ್ ಫ್ಯೂಚರ್ಸ್ 21,323 ಅಂಕಗಳ ಮಟ್ಟದಲ್ಲಿ ಮುಂಬೈ: ದೇಶದ ಪ್ರಮುಖ ಸರಕು …

Read More »

ಮಹಾರಾಷ್ಟ್ರದ ಜೆ ಎನ್‌ ಪಿ ಎ ಬಂದರು (ಪಗೋಟೆ) ನಿಂದ ಚೌಕ್‌ ವರೆಗೆ (29.219 ಕಿ.ಮೀ) ಬಿಒಟಿ (ಟೋಲ್) ಮಾದರಿಯಲ್ಲಿ 6 ಪಥದ ಪ್ರವೇಶ ನಿಯಂತ್ರಿತ ಗ್ರೀನ್‌ ಫೀಲ್ಡ್ ಹೆದ್ದಾರಿ ನಿರ್ಮಾಣಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಮಹಾರಾಷ್ಟ್ರದ ಜೆ ಎನ್‌ ಪಿ ಎ ಬಂದರಿನಿಂದ (ಪಗೋಟೆ) ದಿಂದ ಚೌಕ್‌ ವರೆಗೆ (29.219 ಕಿ.ಮೀ) 6 ಪಥದ ಪ್ರವೇಶ ನಿಯಂತ್ರಿತ ಗ್ರೀನ್‌ ಫೀಲ್ಡ್ ಹೈ ಸ್ಪೀಡ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ (ಬಿಒಟಿ) ಮಾದರಿಯಲ್ಲಿ ಒಟ್ಟು 4500.62 ಕೋಟಿ ರೂ. ಬಂಡವಾಳ ವೆಚ್ಚದಲ್ಲಿ …

Read More »

ಕಡಿಮೆ ಮೌಲ್ಯದ ಭೀಮ್‌-ಯುಪಿಐ ವಹಿವಾಟುಗಳನ್ನು (ಪಿ2ಎಂ) ಉತ್ತೇಜಿಸಲು ಪ್ರೋತ್ಸಾಹಕ ಯೋಜನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2024-25ನೇ ಹಣಕಾಸು ವರ್ಷಕ್ಕೆ ‘ವ್ಯಕ್ತಿಯಿಂದ ವ್ಯಾಪಾರಿಗೆ (ಪಿ2ಎಂ) ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು ಪ್ರೋತ್ಸಾಹಕ ಯೋಜನೆ’ಯನ್ನು ಈ ಕೆಳಗಿನ ರೀತಿಯಲ್ಲಿ ಅನುಮೋದಿಸಿದೆ:        ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು (ಪಿ2ಎಂ) ಉತ್ತೇಜಿಸಲು ಪ್ರೋತ್ಸಾಹಕ ಯೋಜನೆಯನ್ನು 01.04.2024 ರಿಂದ 31.03.2025 ರವರೆಗೆ ಅಂದಾಜು 1,500 ಕೋಟಿ ವೆಚ್ಚದಲ್ಲಿ ಜಾರಿಗೆ ತರಲಾಗುವುದು.   ಸಣ್ಣ ವ್ಯಾಪಾರಿಗಳಿಗೆ …

Read More »

ಅಸ್ಸಾಂನ ನಮ್ರೂಪ್‌ ನ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಬಿವಿಎಫ್‌ಸಿಎಲ್‌) ನ ಹಾಲಿ ಆವರಣದಲ್ಲಿಹೊಸ ಬ್ರೌನ್‌ ಫೀಲ್ಡ್‌ ಅಮೋನಿಯಾ-ಯೂರಿಯಾ ಕಾಂಪ್ಲೆಕ್ಸ್‌ ನಮ್ರೂಪ್‌ 4 ರಸಗೊಬ್ಬರ ಘಟಕ ಸ್ಥಾಪನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಸ್ಸಾಂನ ನಮ್ರೂಪ್‌ನ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಬಿವಿಎಫ್‌ಸಿಎಲ್‌) ನ ಹಾಲಿ ಆವರಣದಲ್ಲಿ ಯೂರಿಯಾ ಉತ್ಪಾದನೆಯ ವಾರ್ಷಿಕ 12.7 ಲಕ್ಷ ಮೆಟ್ರಿಕ್‌ ಟನ್‌ (ಎಲ್‌ಎಂಟಿ) ಸಾಮರ್ಥ್ಯ‌ದ ಹೊಸ ಬ್ರೌನ್‌ ಫೀಲ್ಡ್‌ ಅಮೋನಿಯಾ-ಯೂರಿಯಾ ಸಂಕೀರ್ಣವನ್ನು ಅಂದಾಜು ಒಟ್ಟು ಯೋಜನಾ ವೆಚ್ಚ 10,601.40 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಜಂಟಿ …

Read More »

2024-25 ಮತ್ತು 2025-26 ಸಾಲಿಗೆ ಹೆಚ್ಚಿನ ಹಂಚಿಕೆಯೊಂದಿಗೆ ಪರಿಷ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ ಅನುಷ್ಠಾನಕ್ಕೆ ಸಂಪುಟದ ಅನುಮೋದನೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಾನುವಾರು ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ಪರಿಷ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ (RGM) ಗೆ ಇಂದು ಅನುಮೋದನೆ ನೀಡಿದೆ. ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯ ಕೇಂದ್ರ ವಲಯದ ಅಂಶವಾಗಿ ಪರಿಷ್ಕೃತ RGM ಅನುಷ್ಠಾನಕ್ಕೆ 1000 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ನೀಡಲಾಗುತ್ತಿದೆ, ಇದು 2021-22 ರಿಂದ 2025-26 ರವರೆಗಿನ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಟ್ಟು …

Read More »

ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ(ಎನ್‌ಪಿಡಿಡಿ)ಕ್ಕೆ ಕೇಂದ್ರ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ  (ಎನ್‌ಪಿಡಿಡಿ)ಕ್ಕೆ ಅನುಮೋದನೆ ನೀಡಿದೆ. ಕೇಂದ್ರ ಸ್ವಾಮ್ಯದ ಯೋಜನೆಯಾದ ಪರಿಷ್ಕೃತ ಎನ್‌ಪಿಡಿಡಿಗೆ ಹೆಚ್ಚುವರಿಯಾಗಿ 1000 ಕೋಟಿ ರೂ. ಒದಗಿಸಲಾಗಿದೆ. ಇದರೊಂದಿಗೆ, 15ನೇ ಹಣಕಾಸು ಆಯೋಗದ ಅವಧಿ(2021-22ರಿಂದ 2025-26ರ ವರೆಗೆ)ಯಲ್ಲಿ ಒಟ್ಟು ಬಜೆಟ್ ಗಾತ್ರವನ್ನು 2,790 ಕೋಟಿ ರೂ.ಗೆ ಹೆಚ್ಚಿಸಿದಂತಾಗಿದೆ. ಈ ಉಪಕ್ರಮವು ಡೇರಿ ಮೂಲಸೌಕರ್ಯ ಆಧುನೀಕರಣ ಮತ್ತು ವಿಸ್ತರಣೆ ಮೇಲೆ …

Read More »

ಕ್ರ್ಯೂ-9 (Crew-9) ಗಗನಯಾತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸೇರಿದಂತೆ ಕ್ರ್ಯೂ-9 ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಕ್ಕಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕ್ರ್ಯೂ-9 ಗಗನಯಾತ್ರಿಗಳ ಧೈರ್ಯ, ದೃಢಸಂಕಲ್ಪ ಮತ್ತು ಬಾಹ್ಯಾಕಾಶ ಅನ್ವೇಷಣೆಗೆ ನೀಡಿದ ಕೊಡುಗೆಯನ್ನು ಶ್ರೀ ನರೇಂದ್ರ ಮೋದಿ ಅವರು  ಶ್ಲಾಘಿಸಿದ್ದಾರೆ. ಅಂತರಿಕ್ಷ ಅನ್ವೇಷಣೆಯು ಮಾನವ ಸಾಮರ್ಥ್ಯದ ಮಿತಿಗಳನ್ನು ಮೀರಿ, ಕನಸು ಕಾಣುವ ಧೈರ್ಯ ಮತ್ತು ಆ ಕನಸುಗಳನ್ನು ಸಾಕಾರಗೊಳಿಸುವ ಧೈರ್ಯವನ್ನು ಹೊಂದಿದೆ ಎಂದು …

Read More »