ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು 2025ರ ಜನವರಿ 24 ರಂದು ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ಗೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಅವರು, ಬಿ ಎಲ್ ಡಬ್ಲ್ಯು ನ ನಾವಿನ್ಯತೆಗಳು, ರೈಲ್ವೆ ಎಂಜಿನ್ (ಚಲನಶೀಲ) ಉತ್ಪಾದನಾ ಸಾಮರ್ಥ್ಯಗಳು ಹಾಗೂ ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಅದರ ಮಹತ್ವದ ಜಾಗತಿಕ ಕೊಡುಗೆಗಳನ್ನು ಶ್ಲಾಘಿಸಿದರು. ಬಿ ಎಲ್ ಡಬ್ಲ್ಯು ಗೆ ಭೇಟಿ …
Read More »2025ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎಂ.ಎನ್.ಆರ್.ಇ. ‘ಹೊಸ ಭಾರತದ ಸೂರ್ಯೋದಯ’ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದೆ
ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್.ಆರ್.ಇ.) ಆಕರ್ಷಕ ಸ್ತಬ್ಧಚಿತ್ರವನ್ನು ಅನಾವರಣಗೊಳಿಸಲಿದೆ. ಈ ವೈವಿದ್ಯಮಯ ಪ್ರದರ್ಶನವು ಭಾರತದ ವಿಕಸನಗೊಳ್ಳುತ್ತಿರುವ ಇಂಧನ ಕ್ಷೇತ್ರದ ಒಂದು ನೋಟವನ್ನು ನೀಡುತ್ತದೆ. ರಾಷ್ಟ್ರದ ಆಳವಾದ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವಾಗ ನವೀಕರಿಸಬಹುದಾದ ಇಂಧನದಲ್ಲಿ ಅದರ ಅದ್ಭುತ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ವಿಶ್ವದ ಅತಿದೊಡ್ಡ ವಸತಿ ಮೇಲ್ಛಾವಣಿ ಸೌರ ಉಪಕ್ರಮವು ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ, …
Read More »ಭಾರತ ರತ್ನ ಕರ್ಪುರಿ ಠಾಕೂರ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬಿಹಾರದ ಮಾಜಿ ಮುಖ್ಯಮಂತ್ರಿಯವರಾದ, ಭಾರತ ರತ್ನ ಕರ್ಪುರಿ ಠಾಕೂರ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಶ್ರೀ ಮೋದಿಯವರು Xನಲ್ಲಿ ಪೋಸ್ಟ್ ಮಾಡಿ: “ಬಿಹಾರದ ಮಾಜಿ ಮುಖ್ಯಮಂತ್ರಿ ಭಾರತ ರತ್ನ ಕರ್ಪೂರಿ ಠಾಕೂರ್ ಅವರಿಗೆ ಜನ್ಮ ದಿನಾಚರಣೆಯಂದು ಗೌರವ ನಮನಗಳು. ಜನನಾಯಕರಾದ ಅವರು ತಮ್ಮ ಇಡೀ ಜೀವನವನ್ನು ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟು, ಆ ನಿಟ್ಟಿನಲ್ಲಿ ಅನೇಕ ಕಾರ್ಯಗಳನ್ನು ಮಾಡಿದ ಧೀಮಂತರು. ಅವರ ಜೀವನ …
Read More »ಸಂಸ್ಥಾಪನಾ ದಿನದಂದು ಉತ್ತರ ಪ್ರದೇಶದ ಜನತೆಗೆ ಪ್ರಧಾನಮಂತ್ರಿಯವರು ಶುಭ ಕೋರಿದ್ದಾರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶದ ಜನತೆಗೆ ಸಂಸ್ಥಾಪನಾ ದಿನದಂದು ಶುಭ ಕೋರಿದ್ದಾರೆ. Xನಲ್ಲಿ ಪೋಸ್ಟ್ ಮಾಡಿ: “ಉತ್ತರ ಪ್ರದೇಶದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಸಂಸ್ಥಾಪನಾ ದಿನದಂದು ಶುಭಾಶಯಗಳು. ಭಾರತೀಯ ಸಂಸ್ಕೃತಿಯ ಅಸಂಖ್ಯಾತ ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿರುವ ಈ ಪವಿತ್ರ ಭೂಮಿ ಕಳೆದ ಎಂಟು ವರ್ಷಗಳಿಂದ ಅಭಿವೃದ್ಧಿಯ ಹೊಸ ಅಧ್ಯಾಯಗಳನ್ನು ರಚಿಸುವ ನಿಟ್ಟಿನಲ್ಲಿ ಸಾಗಿದೆ. ಜನರ ಕಲ್ಯಾಣಕ್ಕಾಗಿ ಸಮರ್ಪಿತವಾದ ಸರ್ಕಾರ ಮತ್ತು ಈ …
Read More »ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವ್ಯಾಪಕವಾದ ಅವಕಾಶಗಳನ್ನು ನೀಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವಿಸ್ತೃತ ಶ್ರೇಣಿಯ ಅವಕಾಶಗಳನ್ನು ನೀಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. Xನ ಒಂದು ಥ್ರೆಡ್ ಪೋಸ್ಟ್ ನಲ್ಲಿ ಶ್ರೀ ಮೋದಿಯವರು: “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು, ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ, ಆಕೆಗೆ ವ್ಯಾಪಕವಾದ ಅವಕಾಶಗಳನ್ನು ನೀಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಸಾಧನೆಗಳ ಬಗ್ಗೆ ಭಾರತ …
Read More »ಐರ್ಲೆಂಡ್ ಪ್ರಧಾನಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀ ಮೈಕೆಲ್ ಮಾರ್ಟಿನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐರ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀ ಮೈಕೆಲ್ ಮಾರ್ಟಿನ್ ಅವರನ್ನು ಅಭಿನಂದಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ. “ಐರ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ @MichealMartinTD ಅವರಿಗೆ ಅಭಿನಂದನೆಗಳು. ಹಂಚಿಕೆಯ ಮೌಲ್ಯಗಳ ಭದ್ರ ಬುನಾದಿ ಮತ್ತು ಜನರ ನಡುವಿನ ಆಳವಾದ ಸಂಪರ್ಕವನ್ನು ಆಧರಿಸಿದ ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಒಗ್ಗೂಡಿ ಕೆಲಸ …
Read More »ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಕ್ರೀಡಾಕೂಟ ಮೂಲಕ ಕ್ರೀಡಾ ಶ್ರೇಷ್ಠತೆಯನ್ನು ಹೊಸ ಮಟ್ಟಕ್ಕೆ ಏರಿಸಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025 ಕ್ರೀಡಾಕೂಟ ಇಂದು ಲಡಾಖ್ ನ ಲೇಹ್ ನಲ್ಲಿರುವ ಪ್ರಸಿದ್ಧ ಎನ್‌ಡಿಎಸ್ ಸ್ಟೇಡಿಯಂನಲ್ಲಿ ಬಹಳ ಉತ್ಸಾಹದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಮೊದಲ ಹಂತವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶವು ಆಯೋಜಿಸುತ್ತಿದೆ ಮತ್ತು ಇದು ಜನವರಿ 27, 2025 ರವರೆಗೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಫೆಬ್ರವರಿ 22 ರಿಂದ 25 ರವರೆಗೆ ಹಿಮದ ಹಿನ್ನೆಲೆಯ ಆಟಗಳನ್ನು ಆಯೋಜಿಸುತ್ತದೆ. 5000 ಸಾಮರ್ಥ್ಯದ ಎನ್‌ಡಿಎಸ್ ಕ್ರೀಡಾಂಗಣವು ಉದ್ಘಾಟನಾ ದಿನದಂದು …
Read More »ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಮಹಾಕುಂಭದ ವ್ಯವಸ್ಥೆಗಳು ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು, ಇದು ರಾಷ್ಟ್ರ ಮತ್ತು ರೈಲ್ವೆ ಎರಡಕ್ಕೂ ಐತಿಹಾಸಿಕ ಘಟನೆಯಾಗಿದೆ
ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ತಮ್ಮ ಎರಡು ದಿನಗಳ ಪ್ರಯಾಗರಾಜ್ ಭೇಟಿ ಸಂದರ್ಭದಲ್ಲಿ, ಮಹಾಕುಂಭ 2025ರ ಸಂದರ್ಭದಲ್ಲಿ ಸಂಗಮ ಪ್ರದೇಶದಲ್ಲಿರುವ ಮೇಳ ಶಿಬಿರಗಳನ್ನು ಪರಿಶೀಲಿಸಿದರು. ಪ್ರಯಾಗರಾಜ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಹಿಮಾಂಶು ಬಡೋನಿ ಹಾಗೂ ಇತರೆ ಅಧಿಕಾರಿಗಳು ಪರಿಶೀಲನೆಯ ಸಮಯದಲ್ಲಿ ಹಾಜರಿದ್ದರು. ಮಹಾಕುಂಭ 2025ಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಸಂಗಮ ಪ್ರದೇಶದಲ್ಲಿ ಸ್ಥಾಪಿಸಲಾದ ಮೇಳ ಶಿಬಿರವನ್ನು ಕೇಂದ್ರ ಸಚಿವರು …
Read More »2025ರ ಗಣರಾಜ್ಯೋತ್ಸವ ಪರೇಡ್‌ಗೆ ಸಾಕ್ಷಿಯಾಗಲು 800 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಿದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ(ಎಂ ಎನ್ ಆರ್ ಇ)ವು ನವದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನ(ಪರೇಡ್) ವೀಕ್ಷಿಸಲು ದೇಶಾದ್ಯಂತ 800 ವಿಶೇಷ ಅತಿಥಿಗಳಿಗೆ ಆತಿಥ್ಯ ವಹಿಸಲಿದೆ. ಎಂ ಎನ್ ಆರ್ ಇ ಸಚಿವಾಲಯದ ಪ್ರಮುಖ ನವೀಕರಿಸಬಹುದಾದ ಇಂಧನ ಯೋಜನೆಗಳೊಂದಿಗೆ ಸಂಬಂಧ ಹೊಂದಿರುವ ಗಣ್ಯರು ಮತ್ತು ಗುಂಪುಗಳ ಸಾಧನೆಗಳನ್ನು ಮತ್ತು ಭಾರತದ ಸುಸ್ಥಿರ ಇಂಧನ ಪರಿವರ್ತನೆಗೆ ಅವರ ಕೊಡುಗೆಗಳನ್ನು ಆಚರಿಸಲು ಈ ಉಪಕ್ರಮ ಕೈಗೊಳ್ಳಲಾಗಿದೆ. ಆಹ್ವಾನಿತರಲ್ಲಿ ಪ್ರಧಾನ …
Read More »ಮಹಾಕುಂಭ 2025: ಗಂಗಾ ಸಂರಕ್ಷಣೆ ಮತ್ತು ಜಾಗೃತಿ ಕೇಂದ್ರವಾಗಿ ನಮಾಮಿ ಗಂಗೆ ಪೆವಿಲಿಯನ್
ಪ್ರಯಾಗ್ ರಾಜ್ ನಲ್ಲಿ ನಮಾಮಿ ಗಂಗೆ ಮಿಷನ್ ಸ್ಥಾಪಿಸಿದ ನಮಾಮಿ ಗಂಗೆ ಪೆವಿಲಿಯನ್, ಮಹಾಕುಂಭ -2025 ರಲ್ಲಿ ಪ್ರತಿದಿನ ಗಮನಾರ್ಹ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಗಂಗಾ ನದಿಗಾಗಿ ಸರ್ಕಾರ ಕೈಗೊಂಡ ಸ್ವಚ್ಛತೆ ಮತ್ತು ಸಂರಕ್ಷಣಾ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸಲು ಈ ಪೆವಿಲಿಯನ್ ಒಂದು ನವೀನ ಮಾಧ್ಯಮವಾಗಿದೆ. ಪೆವಿಲಿಯನ್ ಸಂವಾದಾತ್ಮಕ ಜೀವವೈವಿಧ್ಯ ಸುರಂಗದೊಂದಿಗೆ ಪ್ರಾರಂಭವಾಗುತ್ತದೆ, ಇದು ಸಂದರ್ಶಕರಿಗೆ ಗಂಗಾನದಿಯ ಜೀವವೈವಿಧ್ಯತೆ ಮತ್ತು ನೈಸರ್ಗಿಕ ಸೌಂದರ್ಯದ ಅನುಭವವನ್ನು ನೀಡುತ್ತದೆ. ಆಧುನಿಕ ಪ್ರೊಜೆಕ್ಷನ್ …
Read More »
Matribhumi Samachar Kannad