Saturday, April 04 2026 | 01:00:59 PM
Breaking News

ಮುಂಚೂಣಿ ಯುದ್ಧ ನೌಕೆಗಳಾದ ಐ ಎನ್ ಎಸ್ ಸೂರತ್, ಐ ಎನ್ ಎಸ್ ನೀಲಗಿರಿ ಮತ್ತು ಐ ಎನ್ ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈಯ ನೌಕಾ ಹಡಗುಕಟ್ಟೆಯಲ್ಲಿ ಮೂರು ಮುಂಚೂಣಿ ನೌಕಾ ಯುದ್ಧ ನೌಕೆಗಳಾದ ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಜನವರಿ 15 ಅನ್ನು ಸೇನಾ ದಿನವಾಗಿ ಆಚರಿಸಲಾಗುತ್ತದೆ ಮತ್ತು ರಾಷ್ಟ್ರದ ಸುರಕ್ಷತೆ ಹಾಗು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಪ್ರತಿಯೊಬ್ಬ ಧೈರ್ಯಶಾಲಿ ಯೋಧನಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಎಲ್ಲ ವೀರ ಯೋಧರನ್ನು ಅಭಿನಂದಿಸಿದರು. ಇಂದು ಭಾರತದ ಕಡಲ ಪರಂಪರೆ, ನೌಕಾಪಡೆಯ ಭವ್ಯ ಇತಿಹಾಸ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ದೊಡ್ಡ ದಿನವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಛತ್ರಪತಿ ಶಿವಾಜಿ ಮಹಾರಾಜ್ ಅವರು ಭಾರತದ ನೌಕಾಪಡೆಗೆ ಹೊಸ ಶಕ್ತಿ ಮತ್ತು ದೂರದೃಷ್ಟಿಯನ್ನು ನೀಡಿದರು ಎಂದರು. ಶಿವಾಜಿ ಮಹಾರಾಜರ ಭೂಮಿಯಲ್ಲಿ 21ನೇ ಶತಮಾನದ ಭಾರತದ ನೌಕಾಪಡೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇಂದು ಪ್ರಮುಖ ಹೆಜ್ಜೆ ಇಟ್ಟಿದೆ ಎಂದರು. “ಇದೇ ಮೊದಲ ಬಾರಿಗೆ ವಿಧ್ವಂಸಕ ನೌಕೆ, ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಯ ತ್ರಿ-ಕಾರ್ಯಾರಂಭ ಮಾಡಲಾಗುತ್ತಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು. ಎಲ್ಲಾ ಮೂರು ಮುಂಚೂಣಿ ನೌಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಸಾಧನೆಗಾಗಿ ಅವರು ಭಾರತೀಯ ನೌಕಾಪಡೆ, ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರು ಮತ್ತು ಭಾರತದ ನಾಗರಿಕರನ್ನು ಅಭಿನಂದಿಸಿದರು. “ಇಂದಿನ ಕಾರ್ಯಕ್ರಮವು ನಮ್ಮ ಭವ್ಯ ಪರಂಪರೆಯನ್ನು ನಮ್ಮ ಭವಿಷ್ಯದ ಆಕಾಂಕ್ಷೆಗಳೊಂದಿಗೆ ಸಂಪರ್ಕಿಸುತ್ತದೆ” ಎಂದು ಶ್ರೀ ಮೋದಿ ಉದ್ಗರಿಸಿದರು. ಭಾರತವು ದೀರ್ಘ ಸಮುದ್ರಯಾನ, ವಾಣಿಜ್ಯ, ನೌಕಾ ರಕ್ಷಣೆ ಮತ್ತು ಹಡಗು ಉದ್ಯಮಕ್ಕೆ ಸಂಬಂಧಿಸಿದ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದು ಅವರು ಹೇಳಿದರು. ಈ ಶ್ರೀಮಂತ ಇತಿಹಾಸವನ್ನು ಉಲ್ಲೇಖಿಸಿದ  ಅವರು, ಇಂದಿನ ಭಾರತವು ವಿಶ್ವದ ಪ್ರಮುಖ ಕಡಲ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು. ಇಂದು ಕಾರ್ಯಾರಂಭ ಮಾಡಲಾದ ನೌಕೆಗಳು ಅದರ ಒಂದು ನೋಟವನ್ನು ಪ್ರದರ್ಶಿಸಿವೆ ಎಂದೂ ಅವರು ಹೇಳಿದರು. ಚೋಳ ರಾಜವಂಶದ ಕಡಲ ಪರಾಕ್ರಮಕ್ಕೆ ಸಮರ್ಪಿತವಾದ ಐಎನ್ ಎಸ್ ನೀಲಗಿರಿ ಮತ್ತು ಸೂರತ್ ಯುದ್ಧನೌಕೆ ಸೇರಿದಂತೆ ಹೊಸ ನೌಕೆಗಳ ಆರಂಭವನ್ನು ಪ್ರಧಾನಿ ಉಲ್ಲೇಖಿಸಿದರು, ಇದು ಗುಜರಾತ್ ನ ಬಂದರುಗಳು ಭಾರತವನ್ನು ಪಶ್ಚಿಮ ಏಷ್ಯಾದೊಂದಿಗೆ ಸಂಪರ್ಕಿಸಿದ ಯುಗವನ್ನು ನೆನಪಿಸುತ್ತದೆ. ಕೆಲವು ವರ್ಷಗಳ ಹಿಂದೆ ಮೊದಲ ಜಲಾಂತರ್ಗಾಮಿ ನೌಕೆ ಕಲ್ವರಿಯನ್ನು ನಿಯೋಜಿಸಿದ ನಂತರ ಪಿ 75 ವರ್ಗದಲ್ಲಿ ಆರನೇ ವಗ್ಶೀರ್ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸಿದ್ದನ್ನು ಅವರು ಉಲ್ಲೇಖಿಸಿದರು. ಈ ಹೊಸ ಗಡಿನಾಡಿನ ರಕ್ಷಣಾ ವೇದಿಕೆಗಳು ಭಾರತದ ಭದ್ರತೆ ಮತ್ತು ಪ್ರಗತಿ ಎರಡನ್ನೂ ಹೆಚ್ಚಿಸುತ್ತವೆ ಎಂದು ಪ್ರಧಾನಿ ವಿವರಿಸಿದರು. “ಭಾರತವು ಇಂದು ಜಾಗತಿಕವಾಗಿ, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಟ್ಟಿದೆ” ಎಂದು ಪ್ರಧಾನಿ ಉದ್ಗರಿಸಿದರು. ಭಾರತವು ಅಭಿವೃದ್ಧಿಯ ಮನೋಭಾವದಿಂದ ಕಾರ್ಯನಿರ್ವಹಿಸುತ್ತದೆಯೇ ಹೊರತು ವಿಸ್ತರಣಾವಾದದಿಂದಲ್ಲ ಎಂದು ಅವರು ಒತ್ತಿ ಹೇಳಿದರು. ಮುಕ್ತ, ಸುರಕ್ಷಿತ, ಅಂತರ್ಗತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ಕರಾವಳಿ ರಾಷ್ಟ್ರಗಳ ಅಭಿವೃದ್ಧಿಯ ವಿಷಯಕ್ಕೆ ಬಂದಾಗ, ಭಾರತವು ಸಾಗರ್ (ಈ ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಮಂತ್ರವನ್ನು ಪರಿಚಯಿಸಿತು ಮತ್ತು ಈ ದೃಷ್ಟಿಕೋನದೊಂದಿಗೆ ಮುಂದುವರಿಯಿತು ಎಂಬುದರತ್ತ  ಅವರು ಬೆಟ್ಟು ಮಾಡಿದರು. “ಒಂದು ಭೂಮಿ, …

Read More »

ಕರ್ನಾಟಕಕ್ಕೆ 2025ರ ಜನವರಿ 16 ರಂದು ಉಪರಾಷ್ಟ್ರಪತಿ ಭೇಟಿ

ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು 2025ರ ಜನವರಿ 16 ರಂದು ಕರ್ನಾಟಕಕ್ಕೆ ಒಂದು ದಿನದ ಭೇಟಿ ನೀಡಲಿದ್ದಾರೆ. ಭೇಟಿಯ ವೇಳೆ ಉಪರಾಷ್ಟ್ರಪತಿ ಅವರು ಕರ್ನಾಟಕದ ಧಾರವಾಡದಲ್ಲಿರುವ ಕೃಷಿ ಕಾಲೇಜಿನ ಅಮೃತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಪರಾಷ್ಟ್ರಪತಿಗಳು ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಹುಬ್ಬಳ್ಳಿಯ ವರೂರಿನಲ್ಲಿರುವ ಶ್ರೀ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸುಮೇರು ಪರ್ವತವನ್ನು ಉದ್ಘಾಟಿಸಲಿದ್ದಾರೆ.   भारत : 1885 …

Read More »

ಪಿಎಂ-ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ವಿವಿಧ ಘಟಕಗಳ ಅನುಷ್ಠಾನಕ್ಕಾಗಿ ಕಾರ್ಯಾಚರಣಾ ಮಾರ್ಗಸೂಚಿ – ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಬಿಡುಗಡೆ

ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ನವೀಕರಿಸಬಹುದಾದ ಇಂಧನ ಸೇವಾದಾತ ಕಂಪೆನಿ (RESCO) ಮಾದರಿಗಳು/ ಬಳಕೆ ಆಧಾರಿತ ಒಟ್ಟುಗೂಡಿಸುವಿಕೆ ಮಾದರಿ (ಯುಎಲ್‌ಎ) ಮಾದರಿಗಳಿಗಾಗಿ ‘ಪಾವತಿ ಭದ್ರತಾ ಕಾರ್ಯವಿಧಾನ’ ಮತ್ತು ‘ಕೇಂದ್ರ ಹಣಕಾಸು ನೆರವು’ ಘಟಕದ ಅನುಷ್ಠಾನಕ್ಕಾಗಿ ಯೋಜನಾ ಮಾರ್ಗಸೂಚಿಗಳನ್ನು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಕಟಿಸಿದೆ. ಈ ಯೋಜನೆಯು ಗ್ರಾಹಕರಿಗೆ ಮೇಲ್ಛಾವಣಿ ಸೌರ ಸ್ಥಾವರಗಳನ್ನು ಅಳವಡಿಸಿಕೊಳ್ಳಲು ಎರಡು ಪರ್ಯಾಯ ಅನುಷ್ಠಾನ ಮಾದರಿಗಳನ್ನು ನೀಡುತ್ತದೆ: ಮೊದಲನೆಯದು, ರೆಸ್ಕೋ …

Read More »

ಮಕರ ಸಂಕ್ರಾಂತಿ, ಉತ್ತರಾಯಣ ಮತ್ತು ಮಾಘ ಬಿಹು ಪ್ರಯುಕ್ತ ಸರ್ವರಿಗೂ ಪ್ರಧಾನಮಂತ್ರಿ ಶುಭಾಶಯ

ಮಕರ ಸಂಕ್ರಾಂತಿ, ಉತ್ತರಾಯಣ ಮತ್ತು ಮಾಘ ಬಿಹು ಹಬ್ಬದ ಪ್ರಯುಕ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಎಕ್ಸ್‌ ನಲ್ಲಿ ಪ್ರತ್ಯೇಕ ಪೋಸ್ಟ್‌ ಗಳಲ್ಲಿ ಅವರು ಹೀಗೆ ಬರೆದಿದ್ದಾರೆ: “ಮಕರ ಸಂಕ್ರಾಂತಿ ಅಂಗವಾಗಿ ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳು. ಸೂರ್ಯನಿಗೆ ಸಮರ್ಪಿತವಾದ ಈ ಪವಿತ್ರ ಉತ್ತರಾಯಣ ಕಾಲವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಹೊಸ ಉತ್ಸಾಹವನ್ನು ತುಂಬಲಿ. ” “ಈ ಪವಿತ್ರ ಮಕರ ಸಂಕ್ರಾಂತಿ …

Read More »

ನಮ್ಮ ನಿವೃತ್ತ ಯೋಧರು ದೇಶಭಕ್ತಿಯ ಶಾಶ್ವತ ಸಂಕೇತವಾಗಿದ್ದಾರೆ: ಪ್ರಧಾನಮಂತ್ರಿ

ನಮ್ಮ ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಧೈರ್ಯಶಾಲಿ ಮಹಿಳೆಯರು ಮತ್ತು ಪುರುಷರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಇಂದು ಸಶಸ್ತ್ರ ಪಡೆಗಳ ವೆಟರನ್ಸ್ ದಿನದ ಸಂದರ್ಭದಲ್ಲಿ, ನಮ್ಮ ವೆಟರನ್ ವೀರರು ದೇಶಭಕ್ತಿಯ ಶಾಶ್ವತ ಸಂಕೇತವಾಗಿದ್ದಾರೆ ಎಂದು ಹೇಳಿದ್ದಾರೆ. Xನ ಪೋಸ್ಟ್ ನಲ್ಲಿ, ಅವರು: “ಸಶಸ್ತ್ರ ಪಡೆಗಳ ವೆಟರನ್ಸ್ ದಿನದಂದು, ನಮ್ಮ ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಧೈರ್ಯಶಾಲಿ ಮಹಿಳೆಯರು ಮತ್ತು ಪುರುಷರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಅವರ ತ್ಯಾಗ, …

Read More »

ಮಕರ ಸಂಕ್ರಾಂತಿಯ ಮಹಾ ಹಬ್ಬದಂದು ಮಹಾಕುಂಭದಲ್ಲಿ ನಡೆದ ಮೊದಲ ಅಮೃತ ಸ್ನಾನದಲ್ಲಿ ಪಾಲ್ಗೊಂಡ ಭಕ್ತರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಕರ ಸಂಕ್ರಾಂತಿಯ ಮಹಾ ಹಬ್ಬದಂದು ಮಹಾಕುಂಭದಲ್ಲಿ ನಡೆದ ಮೊದಲ ಅಮೃತ ಸ್ನಾನದಲ್ಲಿ ಭಾಗವಹಿಸಿದ ಭಕ್ತರನ್ನು ಅಭಿನಂದಿಸಿದ್ದಾರೆ. ಮಹಾಕುಂಭ ಮೇಳದ ಮುನ್ನೋಟಗಳನ್ನು ಹಂಚಿಕೊಂಡ ಶ್ರೀ ಮೋದಿಯವರು: “ಮಹಾಕುಂಭದಲ್ಲಿ ಆದ ಭಕ್ತಿ ಮತ್ತು ಆಧ್ಯಾತ್ಮಿಕತೆಯ ಅದ್ಭುತ ಸಂಗಮ! ಮಕರ ಸಂಕ್ರಾಂತಿಯ ಹಬ್ಬದ ಸಂದರ್ಭದಲ್ಲಿ ಮಹಾಕುಂಭದ ಮೊದಲ ಅಮೃತ ಸ್ನಾನದಲ್ಲಿ ಭಾಗಿಯಾಗಿರುವ ಎಲ್ಲಾ ಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳು. ಮಹಾ ಕುಂಭದ ಕೆಲವು ಚಿತ್ರಗಳು…” ಎಂದು ಬರೆದಿದ್ದಾರೆ.   …

Read More »

ಜಾಗತಿಕ ಇಂಧನ ಸಂವಾದವನ್ನು ಮರು ವ್ಯಾಖ್ಯಾನಿಸಲಿರುವ ಭಾರತ ಇಂಧನ ಸಪ್ತಾಹ 2025

ಹಿಂದಿನ ಎರಡು ಆವೃತ್ತಿಗಳ ಗಮನಾರ್ಹ ಯಶಸ್ಸನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹಾಗೂ ಎತ್ತರಕ್ಕೆ ನಿರ್ಮಿಸುವ ಸಲುವಾಗಿ, ಭಾರತ ಸರ್ಕಾರದ ಪ್ರಮುಖ ಇಂಧನ ಕಾರ್ಯಕ್ರಮವಾದ ಭಾರತ ಇಂಧನ ಸಪ್ತಾಹ 2025 (ಇಂಡಿಯಾ ಎನರ್ಜಿ ವೀಕ್  – ಐ.ಇ.ಡಬ್ಲ್ಯ.’25) ಅನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ, ಫೆಬ್ರವರಿ 11 ರಿಂದ 14, 2025 ರವರೆಗೆ ನವದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ. ಇಂಧನ ವರ್ಷದ ಮೊದಲ ಪ್ರಮುಖ ಜಾಗತಿಕ …

Read More »

ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ವರ್ಷದಿಂದ ವರ್ಷಕ್ಕೆ 15.84% ಬೆಳವಣಿಗೆಯನ್ನು ದಾಖಲಿಸಿದೆ

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂ.ಎನ್.ಆರ್.ಇ.) ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಗಮನಾರ್ಹ ಪ್ರಗತಿಯನ್ನು ವರದಿ ಮಾಡಿದೆ. ಇದು ಡಿಸೆಂಬರ್ 2023 ಮತ್ತು ಡಿಸೆಂಬರ್ 2024ರ ನಡುವಿನ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸುತ್ತದೆ. ಈ ಬೆಳವಣಿಗೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ ‘ಪಂಚಾಮೃತ’ ಯೋಜನೆಯ ಗುರಿಗಳ ದೃಷ್ಟಿಕೋನದ ಅಡಿಯಲ್ಲಿ ತನ್ನ ಶುದ್ಧ ಇಂಧನ ಗುರಿಗಳನ್ನು ಸಾಧಿಸುವ ಭಾರತದ ದೃಢ ಬದ್ಧತೆ ಮತ್ತು ಅದರ ವಿಶಾಲ …

Read More »

ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಮಹಾ ಕುಂಭ ಮೇಳವು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯವನ್ನು ಆಚರಿಸುತ್ತದೆ: ಪ್ರಧಾನಮಂತ್ರಿ

ಪ್ರಯಾಗ್ ರಾಜ್ ನಲ್ಲಿ 2025ರ ಮಹಾಕುಂಭ ಮೇಳ ಆರಂಭವಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ. “ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟ್ಯಂತರ ಜನರಿಗೆ ಇದು ಬಹಳ ವಿಶೇಷವಾದ ದಿನವಾಗಿದೆ. ಮತ್ತು, ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಮಹಾ ಕುಂಭಮೇಳವು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯವನ್ನು ಆಚರಿಸುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದರು. ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ತಾಣದ ಸಂದೇಶದಲ್ಲಿ …

Read More »

ಜನವರಿ 14ರಂದು ಭಾರತೀಯ ಹವಾಮಾನ ಇಲಾಖೆಯ 150ನೇ ಸಂಸ್ಥಾಪನಾ ದಿನಾಚರಣೆಯ ಆಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನವರಿ 14ರಂದು ಬೆಳಿಗ್ಗೆ 10:30ಕ್ಕೆ ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತೀಯ ಹವಾಮಾನ ಇಲಾಖೆಯ 150ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣವನ್ನು ಕೂಡಾ ಮಾಡಲಿದ್ದಾರೆ. ನಮ್ಮ ದೇಶವನ್ನು ‘ಹವಾಮಾನ ಸಿದ್ಧ ಮತ್ತು ಹವಾಮಾನ ಸ್ಮಾರ್ಟ್’ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಪ್ರಧಾನಿಯವರು ‘ಮಿಷನ್ ಮೌಸಮ್’ ಗೆ ಚಾಲನೆ ನೀಡಲಿದ್ದಾರೆ. ಅತ್ಯಾಧುನಿಕ ಹವಾಮಾನ ಕಣ್ಗಾವಲು ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಹೆಚ್ಚಿನ …

Read More »