ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ಉಮೀದ್ ಕೇಂದ್ರೀಯ ಜಾಲತಾಣವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು ಜೂನ್ 6, 2025 ರಂದು ಚಾಲನೆಗೊಳಿಸಿದರು, ಹಾಗೂ ಡಿಸೆಂಬರ್ 6, 2025 ರಂದು (ಶನಿವಾರ) ಅಧಿಕೃತವಾಗಿ ಅಪ್ ಲೋಡ್ ಗಳಿಗೆ ಅವಕಾಶ ಕೊನೆಗೊಳಿಸಿ ಅಂತಿಮವಾಗಿ ಮುಚ್ಚಲಾಯಿತು. ಉಮೀದ್ ಕಾಯ್ದೆ, 1995 ಮತ್ತು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನಗಳ ಪ್ರಕಾರ ಅದರ 6 ತಿಂಗಳ ಅವಧಿಯನ್ನು ಪೂರ್ಣಗೊಳಿಸಿತು. …
Read More »ಮಹಾಪರಿನಿರ್ವಾಣ ದಿನದಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಇಂದು ಮಹಾಪರಿನಿರ್ವಾಣ ದಿವಸದ ಅಂಗವಾಗಿ ಪ್ರಧಾನಮಂತ್ರಿ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು. ನ್ಯಾಯ, ಸಮಾನತೆ ಮತ್ತು ಸಾಂವಿಧಾನಿಕತೆಗೆ ಡಾ. ಅಂಬೇಡ್ಕರ್ ಅವರ ಅಚಲ ಬದ್ಧತೆ ಭಾರತದ ರಾಷ್ಟ್ರೀಯ ಪಯಣಕ್ಕೆ ಮಾರ್ಗದರ್ಶನ ನೀಡುತ್ತಲೇ ಇದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮಾನವ ಘನತೆಯನ್ನು ಉಲ್ಲೇಖಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ಡಾ. ಅಂಬೇಡ್ಕರ್ ಅವರ ಸಮರ್ಪಣೆಯಿಂದ ತಲೆಮಾರುಗಳು ಸ್ಫೂರ್ತಿ ಪಡೆದಿವೆ ಎಂದು ಅವರು ಹೇಳಿದರು. …
Read More »ಗುಜರಾತಿನ ವಾವ್-ಥರಾಡ್ ಜಿಲ್ಲೆಯಲ್ಲಿ ಬನಾಸ್ ಡೈರಿಯು ಹೊಸದಾಗಿ ನಿರ್ಮಿಸಿರುವ ಬಯೋ-ಸಿ ಎನ್ ಜಿ ಮತ್ತು ರಸಗೊಬ್ಬರ ಘಟಕವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಉದ್ಘಾಟಿಸಿದರು ಮತ್ತು 150 ಟನ್ ಹಾಲಿನ ಪುಡಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತಿನ ವಾವ್-ಥರಾಡ್ ಜಿಲ್ಲೆಯಲ್ಲಿ ಬನಾಸ್ ಡೈರಿ ಹೊಸದಾಗಿ ನಿರ್ಮಿಸಿರುವ ಬಯೋ-ಸಿ ಎನ್ ಜಿ ಮತ್ತು ರಸಗೊಬ್ಬರ ಘಟಕವನ್ನು ಉದ್ಘಾಟಿಸಿದರು ಮತ್ತು 150 ಟನ್ ಹಾಲಿನ ಪುಡಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ, ಗುಜರಾತ್ ವಿಧಾನಸಭಾಧ್ಯಕ್ಷ ಶ್ರೀ ಶಂಕರ್ ಚೌಧರಿ, ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮತ್ತು ಶ್ರೀ ಮುರಳೀಧರ್ …
Read More »ಪರೀಕ್ಷಾ ಪೇ ಚರ್ಚಾ (ಪಿಪಿಸಿ 2026) ಇದರ 9ನೇ ಆವೃತ್ತಿಯು ಜನವರಿ 2026ರಲ್ಲಿ ನಡೆಯಲಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮವಾದ ಪರೀಕ್ಷಾ ಪೇ ಚರ್ಚಾ (ಪಿಪಿಸಿ), ಇದರ 9ನೇ ಆವೃತ್ತಿಯು ಮುಂಬರುವ ಜನವರಿ 2026ರಲ್ಲಿ ನಡೆಯಲಿದೆ. ಇದರಲ್ಲಿ ಭಾರತ ಮತ್ತು ವಿದೇಶಗಳ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಅವರೊಂದಿಗೆ ಪರೀಕ್ಷಾ ಸಿದ್ದತೆ ಪರೀಕ್ಷಾ ಒತ್ತಡವನ್ನು ಚರ್ಚಿಸಲು ಮತ್ತು ಪರೀಕ್ಷೆಗಳನ್ನು ಉತ್ಸವ ರೀತಿಯಲ್ಲಿ ಕಾಣಲು ಮತ್ತು ಜೀವನದ ಅವಿಭಾಜ್ಯ ಅಂಗವಾಗಿ ಆಚರಿಸಲು ತೊಡಗಿಸಿಕೊಳ್ಳುಲು ಪೂರಕ ವಿಧಿವಿಧಾನ ಚರ್ಚಿಸಲಾಗುವುದು. ಭಾಗವಹಿಸುವವರ ಆಯ್ಕೆಗಾಗಿ, 1 …
Read More »ಭಾರತವು ಜಾಗತಿಕ ನವೀಕರಿಸಬಹುದಾದ ಇಂಧನ ಬೆಳವಣಿಗೆಯ ಪ್ರಮುಖ ಚಾಲಕನಾಗಿದೆ; 2025-26 ರ ಆರ್ಥಿಕ ವರ್ಷದಲ್ಲಿ ಇದುವರೆಗಿನ ಅತ್ಯಧಿಕ 31.25 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸೇರ್ಪಡೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು ತನ್ನ ಅತ್ಯಧಿಕ ಪಳೆಯುಳಿಕೆಯೇತರ ಸಾಮರ್ಥ್ಯಕ್ಕೆ 31.25 ಗಿಗಾವ್ಯಾಟ್ ಸೇರಿಸಿದೆ, ಇದರಲ್ಲಿ 24.28 ಗಿಗಾವ್ಯಾಟ್ ಸೌರಶಕ್ತಿಯೂ ಸೇರಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಒಡಿಶಾದ ಪುರಿಯಲ್ಲಿ ನಡೆದ ಜಾಗತಿಕ ಇಂಧನ ನಾಯಕರ ಶೃಂಗಸಭೆ 2025 ರಲ್ಲಿ ಮಾತನಾಡಿದ ಸಚಿವರು, ಒಡಿಶಾದ 7-8 ಲಕ್ಷ ಜನರಿಗೆ ಪ್ರಯೋಜನ ಮತ್ತು ಸಬಲೀಕರಣಕ್ಕಾಗಿ ವಿನ್ಯಾಸಗೊಳಿಸಲಾದ 1.5 ಲಕ್ಷ ಮೇಲ್ಛಾವಣಿ ಯು …
Read More »ಇಂದಿನಿಂದ ಆರಂಭಗೊಂಡು ಮುಂದಿನ 3 ದಿನಗಳ ಕಾಲ, ವಿವಿಧ ವಲಯಗಳಲ್ಲಿ ಭಾರತೀಯ ರೈಲ್ವೆಯು 89 ವಿಶೇಷ ರೈಲು ಸೇವೆಗಳನ್ನು (ಒಟ್ಟು 100ಕ್ಕೂ ಹೆಚ್ಚು ಟ್ರಿಪ್ ಗಳು) ನಡೆಸಲಿದೆ
ವ್ಯಾಪಕವಾದ ವಿಮಾನ ರದ್ದತಿ ಮತ್ತು ಚಳಿಗಾಲದ ದಟ್ಟಣೆಯ ಹಿನ್ನೆಲೆಯಲ್ಲಿ, ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ರೈಲ್ವೆಯು ಸುಗಮ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದೆ. ಇಂದಿನಿಂದ ಪ್ರಾರಂಭವಾಗಿ ಮುಂದಿನ ಮೂರು ದಿನಗಳ ಕಾಲ ವಿವಿಧ ವಲಯಗಳಲ್ಲಿ 89 ವಿಶೇಷ ರೈಲು ಸೇವೆಗಳು (100ಕ್ಕೂ ಹೆಚ್ಚು ಟ್ರಿಪ್‌ಗಳು) ಸಂಚರಿಸಲಿವೆ. ರೈಲು ಪ್ರಯಾಣಕ್ಕೆ ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಪ್ರಯಾಣಿಕರಿಗೆ ಸಮರ್ಪಕ ಸಂಪರ್ಕ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಲು ಇದು ಸಹಕಾರಿಯಾಗಲಿದೆ. ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು …
Read More »ಫಲಿತಾಂಶಗಳ ಪಟ್ಟಿ: ರಷ್ಯಾ ಒಕ್ಕೂಟದ ಅಧ್ಯಕ್ಷರ ಅಧಿಕೃತ ಭಾರತ ಭೇಟಿ
ತಿಳುವಳಿಕಾ ಒಡಂಬಡಿಕೆಗಳು ಮತ್ತು ಒಪ್ಪಂದಗಳು. ವಲಸೆ ಮತ್ತು ಚಲನಶೀಲತೆ: ಒಂದು ದೇಶದ ನಾಗರಿಕರು ಇನ್ನೊಂದು ದೇಶದ ಭೂಭಾಗದಲ್ಲಿ ಕೈಗೊಳ್ಳುವ ತಾತ್ಕಾಲಿಕ ಕಾರ್ಮಿಕ ಚಟುವಟಿಕೆಯ ಕುರಿತು ಭಾರತ ಗಣರಾಜ್ಯ ಸರ್ಕಾರ ಮತ್ತು ರಷ್ಯನ್ ಒಕ್ಕೂಟ ಸರ್ಕಾರದ ನಡುವೆ ಒಪ್ಪಂದ ಅಕ್ರಮ ವಲಸೆಯನ್ನು ಎದುರಿಸುವಲ್ಲಿ/ತಡೆಯುವಲ್ಲಿ ಸಹಕಾರದ ಕುರಿತು ಭಾರತ ಗಣರಾಜ್ಯ ಸರ್ಕಾರ ಮತ್ತು ರಷ್ಯನ್ ಒಕ್ಕೂಟ ಸರ್ಕಾರದ ನಡುವೆ ಒಪ್ಪಂದ. ಆರೋಗ್ಯ ಮತ್ತು ಆಹಾರ ಸುರಕ್ಷತೆ: ಆರೋಗ್ಯ ರಕ್ಷಣೆ, ವೈದ್ಯಕೀಯ ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಗಣರಾಜ್ಯದ ಆರೋಗ್ಯ ಮತ್ತು ಕುಟುಂಬ …
Read More »ರಷ್ಯಾ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
ಗೌರವಾನ್ವಿತ, ನನ್ನ ಸ್ನೇಹಿತ, ಅಧ್ಯಕ್ಷ ಪುಟಿನ್, ಎರಡೂ ದೇಶಗಳ ಪ್ರತಿನಿಧಿಗಳೇ ಮಾಧ್ಯಮದ ಸ್ನೇಹಿತರೇ, ನಮಸ್ಕಾರ! ಡೋಬ್ರಿ ಡೆನ್! (ರಶ್ಯನ್ ಭಾಷೆಯಲ್ಲಿ ಶುಭ ಮಧ್ಯಾಹ್ನ) ಇಂದು 23 ನೇ ಭಾರತ-ರಷ್ಯಾ ಶೃಂಗಸಭೆಗೆ ಅಧ್ಯಕ್ಷ ಪುಟಿನ್ ಅವರನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧವು ಹಲವಾರು ಐತಿಹಾಸಿಕ ಮೈಲಿಗಲ್ಲುಗಳ ಮೂಲಕ ಸಾಗುತ್ತಿರುವ ಸಮಯದಲ್ಲಿ ಅವರ ಭೇಟಿ ಬಂದಿದೆ. ನಿಖರವಾಗಿ 25 ವರ್ಷಗಳ ಹಿಂದೆ, ಅಧ್ಯಕ್ಷ ಪುಟಿನ್ ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಅಡಿಪಾಯ ಹಾಕಿದರು. ಹದಿನೈದು ವರ್ಷಗಳ ಹಿಂದೆ, 2010 ರಲ್ಲಿ, …
Read More »ಕೃಷಿ ಕ್ಷೇತ್ರದಲ್ಲಿ ಭಾರತ-ರಷ್ಯಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಕೃಷಿ ಸಚಿವರು ರಷ್ಯಾದ ತಮ್ಮ ಸಹವರ್ತಿಯೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ರಷ್ಯಾ ಒಕ್ಕೂಟದ ಕೃಷಿ ಸಚಿವರಾದ ಗೌರವಾನ್ವಿತ ಶ್ರೀಮತಿ ಒಕ್ಸಾನಾ ಲುಟ್ ಅವರೊಂದಿಗೆ 2025ರ ಡಿಸೆಂಬರ್ 4 ರಂದು ಕೃಷಿ ಭವನದಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಭೆಯಲ್ಲಿ ಉಭಯ ನಾಯಕರು ಪ್ರಸ್ತುತ ನಡೆಯುತ್ತಿರುವ ಸಹಕಾರದ ಕುರಿತು ಚರ್ಚಿಸಿದರು ಮತ್ತು ಭವಿಷ್ಯದ ಸಹಯೋಗದ ಕ್ಷೇತ್ರಗಳನ್ನು ಗುರುತಿಸಿದರು. ಭಾರತ ಮತ್ತು ರಷ್ಯಾ ಸಂಬಂಧಗಳು ವಿಶ್ವಾಸ, ಸ್ನೇಹ ಮತ್ತು …
Read More »ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಗುಜರಾತ್ ನಲ್ಲಿ ‘ಅರ್ಥ್ ಶೃಂಗಸಭೆ – 2025’ ಉದ್ಘಾಟಿಸಿದರು
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಅರ್ಥ್ ಶೃಂಗಸಭೆ 2025 ಅನ್ನು ಉದ್ಘಾಟಿಸಿದರು. ಶ್ರೀ ಅಮಿತ್ ಶಾ ಅವರು ‘ಸಹಕಾರ ಸಾರಥಿ’ ಅಡಿಯಲ್ಲಿ 13ಕ್ಕೂ ಹೆಚ್ಚು ಹೊಸ ಸೇವೆಗಳು ಮತ್ತು ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಇವುಗಳಲ್ಲಿ ಡಿಜಿ ಕೆಸಿಸಿ, ಅಭಿಯಾನ ಸಾರಥಿ, ವೆಬ್‌ಸೈಟ್ ಸಾರಥಿ, ಸಹಕಾರಿ ಆಡಳಿತ ಸೂಚ್ಯಂಕ, ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣಾ ಅಪ್ಲಿಕೇಶನ್ …
Read More »
Matribhumi Samachar Kannad