Thursday, January 01 2026 | 04:09:21 AM
Breaking News

Tag Archives: Artificial Intelligence

ಐಐಎಸ್‌ಎಫ್ 2025ರಲ್ಲಿ, ಪ್ರಧಾನಮಂತ್ರಿ ಅವರ ಕೃತಕ ಬುದ್ಧಿಮತ್ತೆ (AI) ಚಾಲಿತ ‘ವಿಕಸಿತ ಭಾರತ’ದ ದೂರದೃಷ್ಟಿಗೆ ಉದ್ಯಮ ನಾಯಕರಿಂದ ಪ್ರಶಂಸೆ

ಡಿಸೆಂಬರ್ 6ರಂದು ಆರಂಭಗೊಂಡ 2025ರ ‘ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಹಬ್ಬ’ವು (IISF), ಈ ವರ್ಷದ ಅತ್ಯಂತ ಪ್ರಭಾವಶಾಲಿ ವಿಜ್ಞಾನ ಕಾರ್ಯಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ಯುವ ಮನಸ್ಸುಗಳಿಗೆ ಸ್ಫೂರ್ತಿ ತುಂಬುವ ಜೊತೆಗೆ, ‘ವಿಕಸಿತ ಭಾರತ @2047’ರ ಕನಸನ್ನು ನನಸಾಗಿಸುವ ಭಾರತದ ಪ್ರಯತ್ನಗಳಿಗೆ ಬಲ ತುಂಬುತ್ತಿದೆ. ಕಾರ್ಯಕ್ರಮದ ಮೂರನೇ ದಿನದಂದು, “AI ಮತ್ತು AGI: ಬೌದ್ಧಿಕತೆಯ ಭವಿಷ್ಯ” (AI & AGI: The Future of Intelligence) ಎಂಬ ವಿಷಯದ ಕುರಿತು ಉನ್ನತ ಮಟ್ಟದ ಸಂವಾದ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕೃತಕ ಬುದ್ಧಿಮತ್ತೆಯಿಂದ (AI) ಕೃತಕ ಸಾಮಾನ್ಯ ಬುದ್ಧಿಮತ್ತೆಯೆಡೆಗಿನ …

Read More »

ಎಐ (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಹೆಚ್ಚುತ್ತಿರುವ ತಪ್ಪು ಮಾಹಿತಿಯ ನಡುವೆ ಪತ್ರಿಕಾ ವಿಶ್ವಾಸಾರ್ಹತೆಯನ್ನು ಕಾಪಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ

ಪ್ರಜಾಸತ್ತಾತ್ಮಕ ದೇಶದ ನಾಗರಿಕರಿಗೆ ಪತ್ರಿಕಾ ಮಾಧ್ಯಮಗಳು ಕಣ್ಣು ಮತ್ತು ಕಿವಿಗಳು. ನಾವು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸುತ್ತಿರುವಾಗ, ಎಐ (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಹೆಚ್ಚುತ್ತಿರುವ ತಪ್ಪು ಮಾಹಿತಿಯ ಮಧ್ಯೆ, ನಾಗರಿಕರನ್ನು ಸಬಲೀಕರಣಗೊಳಿಸಲು ಪತ್ರಿಕಾ ವಿಶ್ವಾಸಾರ್ಹತೆಯನ್ನು ಕಾಪಾಡುವುದು ನಿರ್ಣಾಯಕವಾಗಿದೆ. ಇಂದು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿಭಾಗವಹಿಸಿದವರು ಈ ಭಾವನೆಯನ್ನು ಹಂಚಿಕೊಂಡರು. ‘‘ಹೆಚ್ಚುತ್ತಿರುವ ತಪ್ಪು ಮಾಹಿತಿಯ ನಡುವೆ ಪತ್ರಿಕಾ ವಿಶ್ವಾಸಾರ್ಹತೆಯನ್ನು ರಕ್ಷಿಸುವುದು’’ ಎಂಬ ಈ ವರ್ಷದ ಧ್ಯೇಯವಾಕ್ಯದೊಂದಿಗೆ ಈ ಕಾರ್ಯಕ್ರಮಕ್ಕೆ …

Read More »

ಸಾಂಪ್ರದಾಯಿಕ ಔಷಧದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ.) ಕುರಿತಾದ ʻವಿಶ್ವ ಆರೋಗ್ಯ ಸಂಸ್ಥೆʼಯ ಮಹತ್ವದ ಸಂಕ್ಷಿಪ್ತ ವರದಿಯಲ್ಲಿ ಭಾರತದ ʻಆಯುಷ್ʼ ಆವಿಷ್ಕಾರಗಳು ಪ್ರಸ್ತಾವಗೊಂಡಿವೆ

ʻವಿಶ್ವ ಆರೋಗ್ಯ ಸಂಸ್ಥೆʼಯು(ಡಬ್ಲ್ಯು.ಎಚ್.ಒ) “ಸಾಂಪ್ರದಾಯಿಕ ಔಷಧದಲ್ಲಿ ಕೃತಕ ಬುದ್ಧಿಮತ್ತೆಯ ಅನ್ವಯವನ್ನು ಗುರುತಿಸುವುದು” ಎಂಬ ತಾಂತ್ರಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಕೃತಕ ಬುದ್ಧಿಮತ್ತೆಯನ್ನು (ಎ.ಐ.) ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳೊಂದಿಗೆ, ವಿಶೇಷವಾಗಿ ʻಆಯುಷ್ʼ ವ್ಯವಸ್ಥೆಗಳೊಂದಿಗೆ ಸಂಯೋಜಿಸುವಲ್ಲಿ ಭಾರತದ ಪ್ರವರ್ತಕ ಪ್ರಯತ್ನಗಳನ್ನು ಗುರುತಿಸಿದೆ. ಇದು ಜಾಗತಿಕ ಆರೋಗ್ಯ ಆವಿಷ್ಕಾರದ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿದೆ. ಈ ವಿಷಯದ ಬಗ್ಗೆ ಭಾರತದ ಪ್ರಸ್ತಾಪವನ್ನು ʻಡಬ್ಲ್ಯೂ.ಎಚ್.ಒʼ ಅನುಸರಿಸಿದ್ದು, ಇದು ಸಾಂಪ್ರದಾಯಿಕ ಔಷಧದಲ್ಲಿ ಕೃತಕ ಬುದ್ಧಿಮತ್ತೆ ಅನ್ವಯಿಕೆ ಕುರಿತಾದ …

Read More »

ಕೃತಕ ಬುದ್ಧಿಮತ್ತೆಯಲ್ಲಿ ನಾಯಕತ್ವ ವಹಿಸಲು ಭಾರತ ಬದ್ಧವಾಗಿದೆ: ಪ್ರಧಾನಮಂತ್ರಿ

ಭಾರತೀಯ ಉದ್ಯಮಿ ಶ್ರೀ ವಿಶಾಲ್ ಸಿಕ್ಕಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಶ್ರೀ ಮೋದಿಯವರು ಈ ಭೇಟಿಯನ್ನು ಉಪಯುಕ್ತ ಸಂವಾದ ಎಂದು ಬಣ್ಣಿಸಿದರು. ನಾವೀನ್ಯತೆ ಮತ್ತು ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸಿ ಎಐನಲ್ಲಿ ಮುನ್ನಡೆ ಸಾಧಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದರು. ಅವರಿಬ್ಬರೂ ಕೃತಕ ಬುದ್ಧಿಮತ್ತೆ ಹಾಗೂ ಭಾರತದ ಮೇಲೆ ಅದರ ಪರಿಣಾಮ ಮತ್ತು ಮುಂಬರುವ ದಿನಗಳಲ್ಲಿನ ಹಲವಾರು ವಿಧಿರೂಪ ಬಗ್ಗೆ ವಿವರವಾದ …

Read More »

ಎಲ್ಲರನ್ನು ಒಳಗೊಳ್ಳುವ ಸಮಗ್ರ ಅಭಿವೃದ್ಧಿಗಾಗಿ ಭಾರತ ಎಐ ಮಿಷನ್ (ಕೃತಕ ಬುದ್ಧಿಮತ್ತೆ)ನ ಏಳು ಆಧಾರ ಸ್ತಂಭಗಳ ಮಹತ್ವವನ್ನು ಪ್ರಸ್ತಾಪಿಸಿದ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ವಾರ್ತಾ ಹಾಗು ಪ್ರಸಾರ  ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಎಐ ಆಡಳಿತ ಮತ್ತು ಅಭಿವೃದ್ಧಿ ಕುರಿತ ಸಂಸತ್ತಿನ ಪ್ರಶ್ನೆಗೆ ಉತ್ತರಿಸಿ, ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸುವ ಮೂಲಕ ಕೃತಕ ಬುದ್ಧಿಮತ್ತೆ (ಎಐ) ಗಾಗಿ ಇರುವ ಭಾರತ ಸರ್ಕಾರದ ದೃಷ್ಟಿಕೋನವನ್ನು ವಿವರಿಸಿದರು. ಏಳು ಉತ್ತಮವಾಗಿ ವ್ಯಾಖ್ಯಾನಿಸಲಾದ ಆಧಾರ ಸ್ತಂಭಗಳ ಮೇಲೆ ರೂಪಿಸಲಾಗಿರುವ ಇಂಡಿಯಾ ಎಐ ಮಿಷನ್ ನ ಪರಿವರ್ತಕ ಪರಿಣಾಮವನ್ನು ಕೇಂದ್ರ ಸಚಿವರು ಒತ್ತಿಹೇಳಿದರು, ರಾಷ್ಟ್ರೀಯ ಅಭಿವೃದ್ಧಿಗೆ ಎಐ ಅನ್ನು ಬಳಸಿಕೊಳ್ಳುವಲ್ಲಿ ಎಲ್ಲರ ಒಳಗೊಳ್ಳುವಿಕೆ ಮತ್ತು ನಾವೀನ್ಯತೆಯನ್ನು ಇದು ಖಚಿತಪಡಿಸುತ್ತದೆ ಎಂದರು. ಭವಿಷ್ಯದ ಕೌಶಲ್ಯಗಳಲ್ಲಿ ನೊಂದಾಯಿಸಿಕೊಂಡಿರುವ  ಜನರ ಸಂಖ್ಯೆಯ ಬಗ್ಗೆ ಸಂಸತ್ತಿನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ಇತ್ತೀಚಿನ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿ ನೀಡಲು ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಫ್ಯೂಚರ್ ಸ್ಕಿಲ್ಸ್ ಪ್ಲಾಟ್ಫಾರ್ಮ್ನಲ್ಲಿ ಈಗಾಗಲೇ 8.6 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸುವುದು (ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು) ವಿಶೇಷವಾಗಿ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳನ್ನು ಸಬಲೀಕರಣಗೊಳಿಸುವ ಮೂಲಕ ತಾಂತ್ರಿಕ ಸೌಲಭ್ಯಗಳನ್ನು ವಿಕೇಂದ್ರೀಕರಿಸುವ ಸರ್ಕಾರದ ಗಮನವನ್ನು ಶ್ರೀ ವೈಷ್ಣವ್ ಪ್ರಮುಖವಾಗಿ ಪ್ರಸ್ತಾಪಿಸಿದರು. ಗೋರಖ್ಪುರ, ಲಕ್ನೋ, ಶಿಮ್ಲಾ, ಔರಂಗಾಬಾದ್, ಪಾಟ್ನಾ, ಬಕ್ಸಾರ್ ಮತ್ತು ಮುಜಾಫರ್ಪುರದಂತಹ ನಗರಗಳಲ್ಲಿ ಎಐ ಡೇಟಾ ಪ್ರಯೋಗಾಲಯಗಳನ್ನು (ಲ್ಯಾಬ್ ಗಳನ್ನು) ಸ್ಥಾಪಿಸಲಾಗುತ್ತಿದೆ ಎಂದವರುತಿಳಿಸಿದರು. ತಾಂತ್ರಿಕ ಅಭಿವೃದ್ಧಿಯು ಕೆಲವೇ ಪ್ರದೇಶಗಳಲ್ಲಿ ಕೇಂದ್ರೀಕೃತವಾಗದೆ ದೇಶಾದ್ಯಂತ ಹರಡುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ನವೋದ್ಯಮಗಳು, ಎಐ ಪ್ರಯೋಗಾಲಯಗಳು, 5 ಜಿ ಪ್ರಯೋಗಾಲಯಗಳು ಮತ್ತು ಅರೆವಾಹಕ ತರಬೇತಿ ಸೌಲಭ್ಯಗಳು ಸುಲಭ ಲಭ್ಯವಾಗುವ  ಪರಿಸರ ವ್ಯವಸ್ಥೆಯನ್ನು ಬೆಳೆಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಸಾಮಾಜಿಕ ಪರಿಣಾಮಕ್ಕಾಗಿ ಎಐ ಬಳಕೆ ಕೃಷಿ, ಶಿಕ್ಷಣ, ಆರೋಗ್ಯ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಎಐ ಸಾಮರ್ಥ್ಯವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು ಮತ್ತು ಜವಾಬ್ದಾರಿಯುತ ಎಐ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕತ್ವಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. “ಜನರ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ಎಐನ ಅತ್ಯಂತ ಮಹತ್ವದ ಅಪ್ಲಿಕೇಶನ್ಗಳು ಇರುತ್ತವೆ. ಕೃಷಿ, …

Read More »