Wednesday, December 10 2025 | 11:37:10 PM
Breaking News

Tag Archives: Department of Consumer Affairs

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಭಾರತದಾದ್ಯಂತ ಸಮಯವನ್ನು ಸಮನ್ವಯ (ಸಿಂಕ್ರೊನೈಸ್) ಮಾಡಲು ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2025ರ ಕರಡನ್ನು ಅಧಿಸೂಚಿಸಿದೆ

‘ಒಂದು ರಾಷ್ಟ್ರ, ಒಂದು ಸಮಯ’ ಮತ್ತು ಭಾರತೀಯ ಪ್ರಮಾಣಿತ ಸಮಯ (ಐ ಎಸ್ ಟಿ) ಯಲ್ಲಿ ನಿಖರತೆಯನ್ನು ಸಾಧಿಸುವ ಗುರಿಯೊಂದಿಗೆ, ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಭೌತಿಕ ಪ್ರಯೋಗಾಲಯ (ಎನ್ ಪಿ ಎಲ್) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದೊಂದಿಗೆ ಐ ಎಸ್ ಟಿಯನ್ನು ಮಿಲಿಸೆಕೆಂಡ್ನಿಂದ ಮೈಕ್ರೋಸೆಕೆಂಡ್ ನಿಖರತೆಯೊಂದಿಗೆ ಪ್ರಸಾರ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯು ಭಾರತದಾದ್ಯಂತ ಐದು ಕಾನೂನು ಮಾಪನಶಾಸ್ತ್ರ ಪ್ರಯೋಗಾಲಯಗಳಿಂದ ಐಎಸ್ ಟಿಯನ್ನು ಪ್ರಸಾರ ಮಾಡಲು ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುವ  ಗುರಿಯನ್ನು ಹೊಂದಿದೆ. ನ್ಯಾವಿಗೇಷನ್, ದೂರಸಂಪರ್ಕ, ಪವರ್ ಗ್ರಿಡ್ ಸಿಂಕ್ರೊನೈಸೇಶನ್, ಬ್ಯಾಂಕಿಂಗ್, ಡಿಜಿಟಲ್ ಆಡಳಿತ ಮತ್ತು ಆಳವಾದ ಬಾಹ್ಯಾಕಾಶ ಸಂಚರಣೆ ಮತ್ತು ಗುರುತ್ವಾಕರ್ಷಣೆ ತರಂಗ ಪತ್ತೆ ಸೇರಿದಂತೆ ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಿಗೆ ಈ ನಿಖರತೆ ಅತ್ಯಗತ್ಯ. ಆದಾಗ್ಯೂ ಈ  ಪ್ರಾಮುಖ್ಯತೆಯ ಹೊರತಾಗಿಯೂ, ಐಎಸ್ಟಿಯನ್ನು ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು (ಟಿ ಎಸ್ ಪಿಗಳು) ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು (ಐ ಎಸ್ ಪಿಗಳು) ಕಡ್ಡಾಯವಾಗಿ ಅಳವಡಿಸಿಕೊಳ್ಳುವುದಿಲ್ಲ, ಅವರಲ್ಲಿ ಅನೇಕರು ಜಿಪಿಎಸ್ನಂತಹ ವಿದೇಶಿ ಸಮಯದ ಮೂಲಗಳನ್ನು ಅವಲಂಬಿಸಿದ್ದಾರೆ. ರಾಷ್ಟ್ರೀಯ ಭದ್ರತೆ, ನೈಜ-ಸಮಯದ ಅನ್ವಯಿಕೆಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳ ಸುಗಮ ಕಾರ್ಯಾಚರಣೆಗೆ ಎಲ್ಲಾ ನೆಟ್ವರ್ಕ್ಗಳು ಮತ್ತು ವ್ಯವಸ್ಥೆಗಳನ್ನು ಐಎಸ್ಟಿಗೆ ಸಿಂಕ್ರೊನೈಸ್ ಮಾಡುವುದು ಅತ್ಯಗತ್ಯ. ಈ ಸವಾಲುಗಳನ್ನು ನಿಭಾಯಿಸಲು, ಕಾನೂನು ಮಾಪನಶಾಸ್ತ್ರ ಕಾಯ್ದೆ, 2009 ರ ಅಡಿಯಲ್ಲಿ ಐಎಸ್ಟಿ ಅಳವಡಿಸಿಕೊಳ್ಳಲು ನೀತಿ ಚೌಕಟ್ಟು, ನಿಯಂತ್ರಣ ಮತ್ತು ಶಾಸನವನ್ನು ಅಭಿವೃದ್ಧಿಪಡಿಸಲು ಉನ್ನತ ಅಧಿಕಾರದ ಅಂತರ ಸಚಿವಾಲಯ ಸಮಿತಿಯನ್ನು ರಚಿಸಲಾಗಿತ್ತು. ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಯು ಎನ್ಪಿಎಲ್, ಇಸ್ರೋ, ಐಐಟಿ ಕಾನ್ಪುರ, ಎನ್ಐಸಿ, ಸಿಇಆರ್ಟಿ-ಇನ್, ಸೆಬಿ ಮತ್ತು ರೈಲ್ವೆ, ಟೆಲಿಕಾಂ ಮತ್ತು ಹಣಕಾಸು ಸೇವೆಗಳಂತಹ ಪ್ರಮುಖ ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಐಎಸ್ಟಿ ಅಳವಡಿಕೆಯನ್ನು ಕಡ್ಡಾಯಗೊಳಿಸಲು ನಿಯಮಗಳನ್ನು ರೂಪಿಸಲು, ನೆಟ್ವರ್ಕ್ ಗಳಿಗೆ ಸಿಂಕ್ರೊನೈಸೇಶನ್ ಮಾರ್ಗಸೂಚಿಗಳನ್ನು ರೂಪಿಸಲು, ಸಮಯ-ಸ್ಟಾಂಪಿಂಗ್ ಮತ್ತು ಸೈಬರ್ ಭದ್ರತೆಗಾಗಿ ನಿಯಂತ್ರಕ ಚೌಕಟ್ಟುಗಳನ್ನು ಸಿದ್ಧಪಡಿಸಲು ಮತ್ತು ಸುಧಾರಿತ ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯಗಳ ಮೂಲಕ ಐಎಸ್ಟಿ ಪ್ರಸರಣ ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯ ವಿವಿಧ ಸಭೆಗಳನ್ನು ನಡೆಸಲಾಯಿತು. …

Read More »