Saturday, February 21 2026 | 10:05:25 AM
Breaking News

Tag Archives: development

ಕಾರ್ಯತಂತ್ರದ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಸಂಶೋಧನೆ ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ಮಹತ್ವದ ಕ್ರಮವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ₹1 ಲಕ್ಷ ಕೋಟಿಗಳ ಬೃಹತ್ ನಿಧಿಯೊಂದಿಗೆ ‘ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI)’ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ನಾವೀನ್ಯತೆಯನ್ನು ಮುನ್ನಡೆಸುವಲ್ಲಿ ಮತ್ತು ಸಂಶೋಧನೆಗಳಿಗೆ ವಾಣಿಜ್ಯ ಸ್ವರೂಪ ನೀಡುವಲ್ಲಿ ಖಾಸಗಿ ವಲಯದ ಮಹತ್ವದ ಪಾತ್ರವನ್ನು ಮನಗಂಡು ಈ ಯೋಜನೆಯನ್ನು ರೂಪಿಸಲಾಗಿದೆ. …

Read More »

ಪ್ರಧಾನಮಂತ್ರಿ ಅವರು ಭಾರತದ ಯುವಜನತೆಯ ಅಭಿವೃದ್ದಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರವನ್ನು ಸುಧಾರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ

ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯವು ಬಹಿರಂಗ ಪಡಿಸಿದ 2026ರ ಶ್ರೇಯಾಂಕಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಸ್ವಾಗತಿಸಿದರು. ಇದು ಜಾಗತಿಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಯುವಜನತೆಯ ಅಭಿವೃದ್ದಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ X ಕುರಿತಾದ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ …

Read More »

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಮತ್ತು ಅವುಗಳ ಅಭಿವೃದ್ಧಿ ಮತ್ತು ಕಲ್ಯಾಣ ವೆಚ್ಚಗಳಿಗೆ ಹಣಕಾಸು ಒದಗಿಸಲು ₹1,73,030 ಕೋಟಿಗಳ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ

ಕೇಂದ್ರ ಸರ್ಕಾರ ಇಂದು ರಾಜ್ಯ ಸರ್ಕಾರಗಳಿಗೆ ₹1,73,030 ಕೋಟಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದ್ದು, ಡಿಸೆಂಬರ್ 2024 ರಲ್ಲಿ ಬಿಡುಗಡೆ ಮಾಡಬೇಕಿದ್ದ ₹89,086 ಕೋಟಿ ಹಂಚಿಕೆಗೆ ಬದಲಾಗಿ ಹೆಚ್ಚಿನ ಹಂಚಿಕೆಯನ್ನು ಮಾಡಲಾಗಿದೆ. ರಾಜ್ಯಗಳು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಮತ್ತು ಅವುಗಳ ಅಭಿವೃದ್ಧಿ ಮತ್ತು ಕಲ್ಯಾಣ ವೆಚ್ಚಗಳಿಗೆ ಹಣಕಾಸು ಒದಗಿಸಲು ಈ ತಿಂಗಳು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಮೊತ್ತದ ರಾಜ್ಯವಾರು ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ: ಕ್ರ.ಸಂ. ರಾಜ್ಯದ ಹೆಸರು …

Read More »

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕಾರ್ಯದರ್ಶಿಗಳು ವಿವಿಧ ಕಡಲ ರಾಜ್ಯಗಳಲ್ಲಿ ಚತುರ ಮತ್ತು ಸಮಗ್ರ ಮೀನುಗಾರಿಕಾ ಬಂದರು (ಸ್ಮಾರ್ಟ್ ಅಂಡ್ ಇಂಟಿಗ್ರೇಟೆಡ್ ಫಿಶಿಂಗ್ ಹಾರ್ಬರ್‌)ಗಳ ಅಭಿವೃದ್ಧಿಯ ಪ್ರಗತಿ ಹಾಗೂ ಬೆಂಗಳೂರಿನಲ್ಲಿರುವ ಮೀನುಗಾರಿಕೆಯ ಕರಾವಳಿ ಎಂಜಿನಿಯರಿಂಗ್ ಕೇಂದ್ರೀಯ ಸಂಸ್ಥೆಯ ಚಟುವಟಿಕೆಗಳ ಪರಿಶೀಲನೆ ನಡೆಸಿದರು

ಗುಜರಾತ್ ರಾಜ್ಯದ ಜಾಖೌ, ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಕರೈಕಲ್ ಮತ್ತು ಕೇಂದ್ರಾಡಳಿತ ಪ್ರದೇಶ  ದಾದ್ರಾ ಮತ್ತು ನಗರ್ ಹವೇಲಿ, ದಿಯು ದಮನ್ ನ ವಾಣಕ್ಬಾರಾ ಗಳಲ್ಲಿನ ಚತುರ ಮೀನುಗಾರಿಕಾ ಬಂದರು  (ಸ್ಮಾರ್ಟ್ ಫಿಶಿಂಗ್ ಹಾರ್ಬರ್) ಘಟಕಗಳ ಪ್ರಗತಿ ಪರಿಶೀಲಿಸಲು ಮತ್ತು ಸಂಸ್ಥೆಯ ಚಟುವಟಿಕೆಗಳನ್ನು ಪರಾಂಬರಿಸಲು ಕೇಂದ್ರೀಯ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ಬೆಂಗಳೂರಿನಲ್ಲಿರುವ ಮೀನುಗಾರಿಕೆಗಾಗಿನ ಕರಾವಳಿ ಎಂಜಿನಿಯರಿಂಗ್ (CICEF) ನಲ್ಲಿ 2024ರ ಡಿಸೆಂಬರ್ 27 ರಂದು ನಡೆದ ಸಭೆಯ …

Read More »