Tuesday, December 09 2025 | 03:13:06 AM
Breaking News

Tag Archives: Dharmendra Pradhan

ಗೌರವಾನ್ವಿತ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಎನ್.ಇ.ಪಿ 2020ರ 5 ವರ್ಷಗಳ ಸ್ಮರಣಾರ್ಥ ನಾಳೆ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ 2025 ಅನ್ನು ಉದ್ಘಾಟಿಸಲಿದ್ದಾರೆ

ಎನ್.ಇ.ಪಿ 2020 ರ 5ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಿಕ್ಷಣ ಸಚಿವಾಲಯವು 2025 ರ ಜುಲೈ 29ರಂದು ಅಖಿಲ ಭಾರತೀಯ ಶಿಕ್ಷಾ ಸಮಾಗಮ್, 2025 ಅನ್ನು ಭಾರತ್ ಮಂಟಪಂ ಆವರಣದಲ್ಲಿ ಆಯೋಜಿಸುತ್ತಿದೆ. ದಿನವಿಡೀ ನಡೆಯುವ ಚರ್ಚೆಗಳನ್ನು ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) 2020 ರ ಐದನೇ ವಾರ್ಷಿಕೋತ್ಸವವನ್ನು ಗುರುತಿಸುವ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ (ಎ.ಬಿ.ಎಸ್.ಎಸ್) 2025, ಎ.ಬಿ.ಎಸ್.ಎಸ್ 2025 ಶಿಕ್ಷಣ ತಜ್ಞರು, …

Read More »

ಸಂಬಲ್ ಪುರದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಶ್ರೀ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಬೆಳಿಗ್ಗೆ ಒಡಿಶಾದ ಸಂಬಲ್ಪುರದ ಮಾ ಸಮಲೇಶ್ವರಿ ದೇವಾಲಯ ಸಂಕೀರ್ಣದ ನದಿ ದಂಡೆಯ ಬಳಿ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಯೋಗ ಅಧಿವೇಶನದಲ್ಲಿ ಭಾಗವಹಿಸಿದರು. ಅಧಿಕಾರಿಗಳು, ಗಣ್ಯರು ಮತ್ತು ಸಂಬಲ್ಪುರದ ನಿವಾಸಿಗಳು ಅವರೊಂದಿಗೆ ಅಧಿವೇಶನದಲ್ಲಿ ಭಾಗವಹಿಸಿದರು. ಯೋಗವು ಕಾಲಾತೀತ ಮತ್ತು ಸಮಗ್ರ ವಿಧಾನವಾಗಿದ್ದು, ಯೋಗವು ಜಗತ್ತಿಗೆ ಭಾರತದ ಕೊಡುಗೆಯಾಗಿದೆ ಎಂದು ಶ್ರೀ ಧರ್ಮೇಂದ್ರ ಪ್ರಧಾನ್ ತಮ್ಮ ಸಂದೇಶದಲ್ಲಿ ತಿಳಿಸಿದರು. ಯೋಗವನ್ನು ಜಾಗತಿಕ ಸಾಮೂಹಿಕ ಆಂದೋಲನ ಮತ್ತು ಜಾಗತಿಕ ಸಾಮರಸ್ಯ ಮತ್ತು ಶಾಂತಿಯ ಸಾಧನವನ್ನಾಗಿ ಮಾಡುವ ನಿಟ್ಟಿನಲ್ಲಿ  ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಎಲ್ಲರೂ, ವಿಶೇಷವಾಗಿ ಯುವ ಪೀಳಿಗೆ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಶ್ರೀ ಪ್ರಧಾನ್ ಒತ್ತಾಯಿಸಿದರು. ಶಿಕ್ಷಣ ಸಚಿವಾಲಯವು ದಿಲ್ಲಿ ವಿಶ್ವವಿದ್ಯಾಲಯದ ಸಮಾವೇಶ ಕೇಂದ್ರ ಮತ್ತು ಇತರ ಮೂರು ಪ್ರತಿಷ್ಠಿತ ಸ್ಥಳಗಳಾದ ಬಿಹಾರದ ಬೋಧ್ ಗಯಾದ ಮಹಾಬೋಧಿ ದೇವಾಲಯ; ಕರ್ನಾಟಕದ ಮೈಸೂರು ಅರಮನೆ; ಮತ್ತು ಕರ್ನಾಟಕದ ಸೋಮನಾಥಪುರದ ಸೋಮನಾಥಪುರ ದೇವಾಲಯ ಆವರಣದಲ್ಲಿ ಸಾಮೂಹಿಕ ಯೋಗ ಸತ್ರ/ಅಧಿವೇಶನಗಳನ್ನು ಆಯೋಜಿಸಿತ್ತು. ದಿಲ್ಲಿ ವಿಶ್ವವಿದ್ಯಾಲಯದಲ್ಲಿ, ಶಿಕ್ಷಣ ಸಚಿವಾಲಯದ (ಡಿ.ಒ.ಎಚ್.ಇ.-DoHE) ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ವಿನೀತ್ ಜೋಶಿ; ಡಿ.ಒ.ಎಚ್.ಇ.ಯ ಸಹಾಯಕ ಕಾರ್ಯದರ್ಶಿ ಶ್ರೀ ಸುನಿಲ್ ಕುಮಾರ್ ಬರ್ನ್ವಾಲ್, ದಿಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಯೋಗೇಶ್ ಸಿಂಗ್; ಅಧ್ಯಾಪಕರು, ಸಿಬ್ಬಂದಿ, ಸಚಿವಾಲಯದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಯೋಗ ಅಧಿವೇಶನದಲ್ಲಿ ಭಾಗವಹಿಸಿದ್ದರು. ಬೋಧ್ ಗಯಾದಲ್ಲಿ, ಈ ಕಾರ್ಯಕ್ರಮವನ್ನು ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯ, ಐಐಎಂ ಬೋಧ್ ಗಯಾ ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಆಯೋಜಿಸಿದ್ದವು. ಮೈಸೂರಿನಲ್ಲಿ, ಇದನ್ನು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ, ಮೈಸೂರು ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಆಯೋಜಿಸಿದ್ದವು ಮತ್ತು ಸೋಮನಾಥಪುರದಲ್ಲಿ, ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮತ್ತು ರಾಜ್ಯ/ಜಿಲ್ಲಾ ಆಡಳಿತ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಈ ಸ್ಥಳಗಳಲ್ಲಿ, ಸಚಿವಾಲಯ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಜನಸಾಮಾನ್ಯರು ಯೋಗ ಅಧಿವೇಶನಗಳಲ್ಲಿ ಭಾಗವಹಿಸಿದರು.

Read More »