Monday, January 19 2026 | 01:32:17 PM
Breaking News

Tag Archives: Dr. P.K. Mishra

ತೀವ್ರ ಶಾಖದ ಅಪಾಯಗಳನ್ನು ಪರಿಹರಿಸಲು ಗಡಿಯಾಚೆಗಿನ ಸಹಕಾರಕ್ಕೆ ಡಾ. ಪಿ.ಕೆ. ಮಿಶ್ರಾ ಕರೆ

ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು, ತೀವ್ರ ಶಾಖವನ್ನು ಜಾಗತಿಕ ಬಿಕ್ಕಟ್ಟಾಗಿ ಎದುರಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿದ್ದಾರೆ, ಇದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕರೆಯನ್ನು ಪ್ರತಿಧ್ವನಿಸಿದೆ. ಜಿನೀವಾದಲ್ಲಿ ನಿನ್ನೆ (2025ರ ಜೂನ್ 06) ನಡೆದ ತೀವ್ರ ಶಾಖ ಅಪಾಯ ಆಡಳಿತ ಕುರಿತ ವಿಶೇಷ ಅಧಿವೇಶನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹೆಚ್ಚುತ್ತಿರುವ ತಾಪಮಾನವು ಸಾರ್ವಜನಿಕ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಪರಿಸರ ಸ್ಥಿತಿಸ್ಥಾಪಕತ್ವಕ್ಕೆ ವ್ಯವಸ್ಥಿತ ಅಪಾಯವನ್ನುಂಟುಮಾಡುತ್ತದೆ …

Read More »

ಬಲವಾದ ಮತ್ತು ಸ್ಪಂದನಶೀಲ ʻಡಿಆರ್‌ಆರ್‌ʼ ಹಣಕಾಸು ವ್ಯವಸ್ಥೆಯು ಸದೃಢತೆಯ ಮೂಲಾಧಾರವೆಂದು ಭಾರತ ನಂಬಿದೆ: ಡಾ. ಪಿ.ಕೆ.ಮಿಶ್ರಾ

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು 2025ರ ಜೂನ್ 4ರಂದು ಜಿನೀವಾದಲ್ಲಿ ನಡೆದ ʻವಿಪತ್ತು ಅಪಾಯ ತಗ್ಗಿಸಲು (ಡಿಆರ್‌ಆರ್) ಹಣಕಾಸು ನೆರವು ಕುರಿತ ಸಚಿವರ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ನಿರ್ಣಾಯಕ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಅವರು ʻವಿಪತ್ತು ಅಪಾಯ ತಗ್ಗಿಸುವ ಕುರಿತಾದ ವಿಶ್ವಸಂಸ್ಥೆಯ ಕಚೇರಿʼ(ಯುಎನ್‌ಡಿಆರ್‌ಆರ್) ಮತ್ತು ಅದರ ಪಾಲುದಾರರನ್ನು ಶ್ಲಾಘಿಸಿದರು. ಜಿ20 ಅಧ್ಯಕ್ಷತೆ ಮೂಲಕ ಜಾಗತಿಕ ಸಂವಾದವನ್ನು ಮುಂದುವರಿಸುವಲ್ಲಿ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಕೊಡುಗೆಗಳನ್ನು ಸಹ ಭಾರತ ಗುರುತಿಸಿತು. ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ಎಂಬುದು ಬಾಹ್ಯ ವಿಷಯವಲ್ಲ. ಬದಲಿಗೆ, ಅದು ರಾಷ್ಟ್ರೀಯ ವಿಪತ್ತು ನಿರ್ವಹಣಾ ವ್ಯವಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯಾಗಿದೆ.  ಜೊತೆಗೆ ಹೆಚ್ಚುತ್ತಿರುವ ಹವಾಮಾನ ಮತ್ತು ವಿಪತ್ತು ಅಪಾಯಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಲಾಭಗಳನ್ನು ರಕ್ಷಿಸಲು ಇದು ಅತ್ಯಂತ ಮುಖ್ಯವಾಗಿದೆ ಎಂದು ಡಾ. ಮಿಶ್ರಾ ಒತ್ತಿಹೇಳಿದರು. ಬಲವಾದ ಮತ್ತು ಸ್ಪಂದನಶೀಲವಾದ ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ವ್ಯವಸ್ಥೆಯು ದೇಶವೊಂದರ ಸದೃಢತೆಗೆ ಮೂಲಾಧಾರವಾಗಿದೆ ಎಂಬ ಭಾರತದ ನಂಬಿಕೆಯನ್ನು ಅವರು ಪುನರುಚ್ಚರಿಸಿದರು. ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಕ್ಷೇತ್ರದಲ್ಲಿ ಭಾರತದ ಪ್ರಯಾಣವನ್ನು ಎತ್ತಿ ತೋರಿದ ಅವರು, ಈ ಮೊದಲಿನ ಹಣಕಾಸು ಆಯೋಗಗಳು ಈ ನಿಟ್ಟಿನಲ್ಲಿ 60 ದಶಲಕ್ಷ ರೂಪಾಯಿಗಳ (ಸುಮಾರು 0.7 ದಶಲಕ್ಷ ಅಮೆರಿಕನ್‌ ಡಾಲರ್‌) ಆರಂಭಿಕ ನಿಧಿ ಹಂಚಿಕೆ ಮಾಡಿವೆ ಎಂದು ಮಾಹಿತಿ ನೀಡಿದರು. ಇಂದು, 15ನೇ ಹಣಕಾಸು ಆಯೋಗದ ಅಡಿಯಲ್ಲಿ ಈ ನಿಟ್ಟಿನಲ್ಲಿ ಒಟ್ಟು ವೆಚ್ಚವು 2.32 ಲಕ್ಷ ಕೋಟಿ ರೂಪಾಯಿಗಳನ್ನು (ಸುಮಾರು 28 ಶತಕೋಟಿ ಅಮೆರಿಕನ್‌ ಡಾಲರ್‌) ಮೀರಿದೆ ಎಂದು ಹೇಳಿದರು. ʻವಿಪತ್ತು ನಿರ್ವಹಣಾ ಕಾಯ್ದೆ-2005ʼರ ಬೆಂಬಲದೊಂದಿಗೆ ರಾಷ್ಟ್ರೀಯ ಮಟ್ಟದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಿಗೆ ಪೂರ್ವನಿರ್ಧರಿತ, ನಿಯಮ ಆಧಾರಿತ ಹಂಚಿಕೆಗಳ ಮಹತ್ವವನ್ನು ಮಿಶ್ರಾ ಅವರು ಒತ್ತಿ ಹೇಳಿದರು. ಈ ರೂಪಾಂತರವು ವಿಪತ್ತು ಹಣಕಾಸು ಪ್ರತಿಕ್ರಿಯಾತ್ಮಕವಾಗಿರುವುದರ ಬದಲು, ರಚನಾತ್ಮಕ ಮತ್ತು ನಿರೀಕ್ಷಿತವಾಗಿರುವಂತೆ ಖಾತ್ರಿಪಡಿಸಿದೆ ಎಂದು ಅವರು ಹೇಳಿದರು. ನಾಲ್ಕು ಪ್ರಮುಖ ತತ್ವಗಳ ಮೇಲೆ ನಿರ್ಮಿಸಲಾದ ಭಾರತದ ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಕಾರ್ಯವಿಧಾನವನ್ನು ಅವರು ಶ್ರೀ ಮಿಶ್ರಾ ವಿವರಿಸಿದರು. ಮೊದಲನೆಯ ತತ್ವವೆಂದರೆ ಸನ್ನದ್ಧತೆ, ಅಪಾಯ ತಗ್ಗಿಸುವಿಕೆ, …

Read More »